ಹೆಬ್ಬಾರ್ ಅಯ್ಯಂಗಾರ್

ಹೆಬ್ಬಾರ್ ಅಯ್ಯಂಗಾರರು ಶ್ರೀ ರಾಮಾನುಜಾಚಾರ್ಯವಿಶಿಷ್ಟಾದ್ವೈತ ಸಂಪ್ರದಾಯದ ಅನುಯಾಯಿಗಳು. ಮುಖ್ಯವಾಗಿ ಅವರು ಕರ್ನಾಟಕದ ಮೈಸೂರು, ಬೆಂಗಳೂರು, ಹಾಸನ, ಮಂಡ್ಯ, ತುಮಕೂರು ಮತ್ತು ಹಳೆಯ ಮೈಸೂರು ಪ್ರಾಂತ್ಯದ ಸುತ್ತಮುತ್ತಲಿನ ಪ್ರದೇಶದವರು. ಹೆಬ್ಬಾರ್ ಎಂಬ ಪದ ಕನ್ನಡದ ಹಿರಿಯ ಹಾರುವ (ಉನ್ನತ ಬ್ರಾಹ್ಮಣ) ಪದಗಳಿಂದ ಬಂದುದು[೧].

ಹೆಬ್ಬಾರ್ ಅಯ್ಯಂಗಾರ್ಯರ ಮನೆಮಾತು ಮತ್ತು ಅವರ ವೃತ್ತಿ ಬದಲಾಯಿಸಿ

ಅವರ ತಾಯ್ನುಡಿ ಕನ್ನಡ, ತಮಿಳು ಮತ್ತು ಸಂಸ್ಕೃತದ ಮಿಶ್ರಣ. ಆದರೆ ಸಾಮಾನ್ಯ ವ್ಯವಹಾರಗಳಿಗೆ ಕನ್ನಡವನ್ನೇ ಬಳಸುವರು.

ಪರಂಪರೆ ಬದಲಾಯಿಸಿ

ಹೆಬ್ಬಾರ್ ಅಯ್ಯಂಗಾರ್ ಸಮುದಾಯದವರು ಮೂಲತಃ ಶಾಂತಿಗ್ರಾಮ, ಬೇಲೂರು, ನುಗ್ಗೇಹಳ್ಳಿ, ನೊಣವಿನಕೆರೆ ಮತ್ತು ಬಿಂಡಿಗನವಿಲೆ ಎಂಬ ಐದು ಗ್ರಾಮಗಳಿಗೆ ಸೇರಿದವರು. ಅದಲ್ಲದೆ ಕಡಬ, ಮೇಲುಕೋಟೆ, ಅಂಬುಗ, ಸಂಪಿಗೆ, ಹಿರೇಮಗಳೂರು, ರೆರಗು, ಶಂಕು, ಹೆಬ್ಬಲಾಳು, ಗೊರೂರು, ಮಾವಿನಕೆರೆ, ಚಿಕ್ಕಮೇನಹಳ್ಳೀ, ಮಳೂರು ಮತ್ತು ಹಂಪಾಪುರ ಮುಂತಾದ ಹಳೆಯ ಮೈಸೂರು ಪ್ರಾಂತ್ಯದ ಗ್ರಾಮಗಳ ಮೂಲದವರೂ ಇದ್ದಾರೆ.

ಮೇಲುಕೋಟೆಯ ಬಗ್ಗೆ ಅವರು ಬಹಳ ಗೌರವ ತೋರಿಸುತ್ತಾರೆ ಬದಲಾಯಿಸಿ

ಈ ಜನಾಂಗದ ಬಗ್ಗೆ ಚಾರಿತ್ರಿಕ ಉಲ್ಲೇಖಗಳು ಇಲ್ಲದಿರುವುದರಿಂದ ಇವರ ಮೂಲ ಮತ್ತು ಪರಂಪರೆಯ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದು. ಕೆಲವರ ಪ್ರಕಾರ ಇವರು ಕ್ರಿ.ಶ. ೧೧೮೦ರ ಸುಮಾರಿನಲ್ಲಿ ಮೇಲುಕೋಟೆಯಲ್ಲಿ ಬೀಡುಬಿಟ್ಟಿದ್ದ ಶ್ರೀ ರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೆ ಸಿದ್ಧಾಂತಕ್ಕೆ ತಮ್ಮ ಹೊಯ್ಸಳ ಮಹಾರಾಜ ಬಿಟ್ಟಿದೇವನೊಂದಿಗೆ ಮಾರ್ಪಟ್ಟ ಕರ್ನಾಟಕದಲ್ಲಿ ನೆಲೆಸಿದ್ದ ಜೈನರು. ಕೆಲವರು ಶ್ರೀರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೆ ಪರಿಚಯಿಸಲ್ಪಟ್ಟ ಕನ್ನಡಿಗರೆಂದೂ, ಮತ್ತೆ ಕೆಲವರು ಶ್ರೀರಾಮಾನುಜಾಚಾರ್ಯರೊಂದಿಗೆ ಮೇಲುಕೋಟೆಗೆ ತಮಿಳುನಾಡಿನಿಂದ ಬಂದ ಅವರ ಅನುಯಾಯಿಗಳ ಮೂಲದವರೆಂದೂ ಹೇಳುತ್ತಾರೆ.

ದೊರೆತ ಕೆಲವು ಐತಿಹಾಸಿಕ ಪುರಾವೆಗಳು ಬದಲಾಯಿಸಿ

ಈ ಜನಾಂಗದ ಒಂದು ಗುಂಪಾದ ಶಾಂತಿಗ್ರಾಮದ ಮೂಲದ ಮಟ್ಟಿಗೆ ಐತಿಹ್ಯ ದೊರಕಿದೆ. ಈ ಗ್ರಾಮ ಮತ್ತು ಇದರ ಕೆರೆಯನ್ನು ಹೊಯ್ಸಳ ವೀರ ಬಲ್ಲಾಳನ ಮಂತ್ರಿಯಾಗಿದ್ದ ಒಬ್ಬ ಕಾಶಿ ಬ್ರಾಹ್ಮಣನು ನಿರ್ಮಿಸಿದನು. ಇದು ಇಲ್ಲಿನ ಯೋಗಾನರಸಿಂಹಸ್ವಾಮಿ ಯ ದೇವಾಲಯದ ಕಲ್ಲಿನಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈ ಗ್ರಾಮದ ಹೆಸರು ಹೊಯ್ಸಳ ರಾಣಿ ಶಾಂತಲಾ ದೇವಿಯ ನೆನಪಿಗಾಗಿ.

ಕೊಡುಗೆ ಬದಲಾಯಿಸಿ

ಈ ಜನಾಂಗವು ಸಾಹಿತ್ಯ, ಕರ್ನಾಟಕ ಸಂಗೀತ, ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ ಗಳಲ್ಲಿ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದೆ.

ಇವರಲ್ಲಿ ಪ್ರಮುಖವಾದ ಗಣ್ಯರು:

  • ದಿ. ಎಚ್ ವಿ ಆರ್ ಅಯ್ಯಂಗಾರ್ ICS, Home Secretary, RBI Governor, Secretary to the Constituent Assembly, Chairman of the State Bank of India, EID Parry ಆಗಿದ್ದುದಲ್ಲದೆ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರ ಸರಕಾರಿ ಹಾಗೂ ಖಾಸಗಿ ಕ್ಷೇತ್ರ ಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದರು.
  • ಕಲ್ಯಾಣ್ ಕುಮಾರ್ - ಕನ್ನಡ ಚಲನಚಿತ್ರ ನಟ.
  • ಆಶಾ ಗೋಪಾಲ್ ಮತ್ತು ರೇವತಿ ಸತ್ಯು - ಖ್ಯಾತ ನರ್ತಕಿಯರು. ಅಮೆರಿಕದಲ್ಲಿ ನರ್ತನಶಾಲೆಯನ್ನು ಸ್ಥಾಪಿಸಿದವರು. ಶ್ರೀಮತಿ ಆಶಾಗೋಪಾಲ್ ಅವರಿಗೆ ಭರತನಾಟ್ಯದಲ್ಲಿ ಅವರ ಸೇವೆಯನ್ನು ಗುರುತಿಸಿ ಪದ್ಮಶ್ರೀ ಬಿರುದನ್ನು ಕೊಟ್ಟು ಗೌರವಿಸಲಾಯಿತು.

ಉಲ್ಲೇಖಗಳು ಬದಲಾಯಿಸಿ

  1. http://ejje.weblio.jp/content/Hebbar+Iyengar