ಹೆಚ್ ಎಲ್ ದತ್ತು ಭಾರತದ ಪೂರ್ವ ಮುಖ್ಯ ನ್ಯಾಯಮೂರ್ತಿ. ಹುಟ್ಟಿದ್ದು ೩ ಡಿಸೆಂಬರ್ ೧೯೫೦ ರಂದು. ಬಳ್ಳಾರಿ ಜಿಲ್ಲೆಯ ಹಂದ್ಯಾಲ ಗ್ರಾಮದಲ್ಲಿ ಜನನ. ದತ್ತು ಬೆಂಗಳೂರು ಬಾರ್ ಕೌನ್ಸಿಲ್ ನಲ್ಲಿ ಅಕ್ಟೋಬರ್ ೨೩,೧೯೭೫ ರಂದು ವಕೀಲರಾಗಿ ನೊಂದಾಯಿಸಿಕೊಂಡರು.

ನ್ಯಾಯಮೂರ್ತಿ
ಹಂದ್ಯಾಲ ಲಕ್ಷ್ಮಿನಾರಾಯಣ ದತ್ತು

ಅಧಿಕಾರ ಅವಧಿ
೨೮ ಸೆಪ್ಟೆಂಬರ್ ೨೦೧೪ – ೨ ಡಿಸೆಂಬರ್ ೨೦೧೫
Appointed by ಪ್ರಣಬ್ ಮುಖರ್ಜಿ
ಪೂರ್ವಾಧಿಕಾರಿ ರಾಜೇಂದ್ರಮಲ್ ಲೋಧಾ
ಉತ್ತರಾಧಿಕಾರಿ ಟಿ. ಎಸ್. ಠಾಕೂರ್

ನ್ಯಾಯಮೂರ್ತಿ, ಭಾರತದ ಸರ್ವೋಚ್ಛ ನ್ಯಾಯಾಲಯ
ಅಧಿಕಾರ ಅವಧಿ
೧೭ ಡಿಸೆಂಬರ್ ೨೦೦೮ – ೨೮ ಸೆಪ್ಟೆಂಬರ್ ೨೦೧೪

ಅಧಿಕಾರ ಅವಧಿ
೧೮ ಡಿಸೆಂಬರ್ ೧೯೯೫ – ೧೨ ಫೆಬ್ರುವರಿ ೨೦೦೭

ಛತ್ತೀಸ್‍ಗಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
ಅಧಿಕಾರ ಅವಧಿ
೧೨ ಫೆಬ್ರುವರಿ ೨೦೦೭ – ೧೮ ಮೇ ೨೦೦೭

ಕೇರಳ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
ಅಧಿಕಾರ ಅವಧಿ
೧೮ ಮೇ ೨೦೦೭ – ೧೭ ಡಿಸೆಂಬರ್ ೨೦೦೮
ವೈಯಕ್ತಿಕ ಮಾಹಿತಿ
ಜನನ (1950-12-03) ೩ ಡಿಸೆಂಬರ್ ೧೯೫೦ (ವಯಸ್ಸು ೭೪)
ಚಿಕ್ಕ ಪಟ್ಟಣಗೆರೆ, ಚಿಕ್ಕಮಗಳೂರು, ಮೈಸೂರು ರಾಜ್ಯ, ಭಾರತ

ಜನ್ಮಸ್ಥಳ

ಬದಲಾಯಿಸಿ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಪಟ್ಟಣಗೆರೆ ಎಂಬ ಒಂದು ಸಣ್ಣ ಹಳ್ಳಿಯಲ್ಲಿ ಜಸ್ಟೀಸ್ ದತ್ತು ಜನಿಸಿದರು. ಕಡೂರು, ತರೀಕೆರೆ, ಬೀರೂರುಗಳಲ್ಲಿ ತಮ್ಮ ಆರಂಭಿಕ ಶಿಕ್ಷಣ ಮಾಡಿದರು, ಉನ್ನತ ಶಿಕ್ಷಣಕ್ಕೆ ಬೆಂಗಳೂರು ಹೋದರು. ಅವರ ತಂದೆ ಎಚ್. ಎಲ್. .ನಾರಾಯಣಸ್ವಾಮಿ ಒಬ್ಬ ಇಂಗ್ಲೀಷ್ ಶಿಕ್ಷಕರಾಗಿದ್ದರು. ಅವರು ಬೆಂಗಳೂರಿನಲ್ಲಿ ತಮ್ಮ ಬಿಎಸ್‌ಸಿ- ಎಲ್‌ಎಲ್‌ಬಿಯನ್ನು ಪೂರ್ಣಗೊಳಿಸಿದರು 1975 ರಿಂದ ವಕೀಲಿ ವೃತ್ತಿ ಆರಂಭಿಸಿದರು -ಅವರು ನಾಗರಿಕ, ಕ್ರಿಮಿನಲ್, ತೆರಿಗೆ ಮತ್ತು ಸಾಂವಿಧಾನಿಕ ಪ್ರಕರಣಗಳು ಮತ್ತು ಎಲ್ಲಾ ರೀತಿಯ ವಿಷಯಗಳ ನಿರ್ವಹಣೆ ಮಾಡಿದರು []

ವಕೀಲರಾಗಿ

ಬದಲಾಯಿಸಿ
  • ೧೯೭೫-೮೩ ನಾಗರಿಕ ಕಾಯ್ದೆ, ಅಪರಾಧ, ಸಾಂವಿಧಾನಿಕ ಮತ್ತು ತೆರಿಗೆ ವಿಷಯಗಳಲ್ಲಿ ವಕೀಲಿ ವೃತ್ತಿ.
  • ೧೯೮೩-೯೦ ಕರ್ನಾಟಕ ರಾಜ್ಯ ಮಾರಾಟ ತೆರಿಗೆ ಇಲಾಖೆಯ ಕಾನೂನು ಸಲಹೆಗಾರ
  • ೧೯೯೦-೯೩ ಸರ್ಕಾರಿ ವಕೀಲ, ಕಾನೂನು ಇಲಾಖೆ
  • ೧೯೯೨-೯೩ ಕಾನೂನು ಸಲಹೆಗಾರ, ಆದಾಯ ತೆರಿಗೆ ಇಲಾಖೆ
  • ೧೯೯೩-೯೫ ಹಿರಿಯ ಕಾನೂನು ಸಲಹೆಗಾರ, ಆದಾಯ ತೆರಿಗೆ ಇಲಾಖೆ

ಮುಂದೆ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾದ ನ್ಯಾ.ಎಸ್. ರಾಜೇಂದ್ರ ಬಾಬುರನ್ನು ತಮ್ಮ ಗುರು ಎಂದು ಪರಿಗಣಿಸುತ್ತಾರೆ.

ನ್ಯಾಯಮೂರ್ತಿಯಾಗಿ

ಬದಲಾಯಿಸಿ
  • ೧೮ ಡಿಸೆಂಬರ್ ೧೯೯೫-೧೧ ಫ಼ೆಬ್ರವರಿ ೨೦೦೭ ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯ
  • ೧೨ ಫ಼ೆಬ್ರವರಿ ೨೦೦೭ - ೧೭ ಮೇ ೨೦೦೭ ಮುಖ್ಯ ನ್ಯಾಯಮೂರ್ತಿ, ಛತ್ತೀಸ್ ಗಢ ಉಚ್ಚ ನ್ಯಾಯಾಲಯ
  • ೧೮ ಮೇ ೨೦೦೭- ೧೬ ಡಿಸೆಂಬರ್ ೨೦೦೮ ಮುಖ್ಯ ನ್ಯಾಯಮೂರ್ತಿ, ಕೇರಳ ಉಚ್ಚ ನ್ಯಾಯಾಲಯ
  • ೧೭ ಡಿಸೆಂಬರ್ ೨೦೦೮ - ೨೭ ಸೆಪ್ಟಂಬರ್ ೨೦೧೪ ನ್ಯಾಯಮೂರ್ತಿ, ಭಾರತದ ಸರ್ವೋಚ್ಛ ನ್ಯಾಯಾಲಯ
  • ೨೮ ಸೆಪ್ಟಂಬರ್ ೨೦೧೪ - *(೨ ಡಿಸೆಂಬರ್ ೨೦೧೫) , ೪೨ನೇ ಮುಖ್ಯ ನ್ಯಾಯಮೂರ್ತಿ,ಭಾರತದ ಸರ್ವೋಚ್ಛ ನ್ಯಾಯಾಲಯ
    []

ಭಾರತದ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಯ ಸ್ಥಾನ ಬಲದಿಂದ ದತ್ತು ಅವರು, ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಜನರಲ್ ಕೌನ್ಸಿಲ್ ಆಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ದತ್ತು ೧೫ ತಿಂಗಳ ದೀರ್ಘಕಾಲ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿರುತ್ತಾರೆ.

ವ್ಯಕ್ತಿತ್ವ

ಬದಲಾಯಿಸಿ

ದತ್ತು ಬೆಂಗಳೂರು ರೋಟರಿ ಕ್ಲಬ್ ನ ಸದಸ್ಯರು. ಕರ್ನಾಟಕ ಸಂಗೀತ ಕೇಳುವುದು ಅವರ ಪ್ರಿಯ ಹವ್ಯಾಸ .[]

ಉಲ್ಲೇಖಗಳು

ಬದಲಾಯಿಸಿ
  1. http://indianexpress.com/article/india/india-others/next-chief-justice-a-court-employee-who-guards-his-personal-space/99/
  2. http://supremecourtofindia.nic.in/judges/sjud/hldattu.htm
  3. "ಆರ್ಕೈವ್ ನಕಲು". Archived from the original on 2014-09-30. Retrieved 2014-10-01.


ಬಾಹ್ಯ ಕೊಂಡಿಗಳು

ಬದಲಾಯಿಸಿ