ಹೆಂಡವು ತಾಡವೃಕ್ಷ, ಖರ್ಜೂರದ ಮರ, ತೆಂಗಿನಕಾಯಿ ಮರದಂತಹ ತಾಳೆಮರದ ವಿವಿಧ ಪ್ರಜಾತಿಗಳ ಸಸ್ಯರಸದಿಂದ ಸೃಷ್ಟಿಯಾದ ಒಂದು ಮದ್ಯಸಾರಯುಕ್ತ ಪಾನೀಯ. ಇದು ವಿಭಿನ್ನ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಪರಿಚಿತವಾಗಿದೆ ಮತ್ತು ಏಷ್ಯಾ, ಆಫ಼್ರಿಕಾ, ಕೆರಿಬಿಯನ್ ಮತ್ತು ದಕ್ಷಿಣ ಅಮೇರಿಕಾದ ವಿವಿಧ ಭಾಗಗಳಲ್ಲಿ ಸಾಮಾನ್ಯವಾಗಿದೆ.[೧] ಸಣ್ಣ ಹಿಡುವಳಿದಾರರು ಮತ್ತು ಪ್ರತ್ಯೇಕ ರೈತರಿಂದ ಹೆಂಡದ ಉತ್ಪಾದನೆಯು ಸಂರಕ್ಷಣೆಯನ್ನು ಉತ್ತೇಜಿಸಬಹುದು ಮತ್ತು ತಾಳೆಮರಗಳು ನಿಯಮಿತ ಮನೆ ಆದಾಯದ ಮೂಲವಾಗಬಹುದು. ಹೆಂಡದ ಉತ್ಪಾದನೆಯು ಮಾರಾಟಮಾಡಲಾದ ಮರಮುಟ್ಟಿನ ಮೌಲ್ಯಕ್ಕಿಂತ ಆರ್ಥಿಕವಾಗಿ ಹೆಚ್ಚು ಬೆಲೆ ತರಬಹುದು.

ರಸ ತೆಗೆಯುವವನು ಸಸ್ಯರಸವನ್ನು ಹೊರತೆಗೆದು ಶೇಖರಿಸುತ್ತಾನೆ. ಸಾಮಾನ್ಯವಾಗಿ ಸಸ್ಯರಸವನ್ನು ತಾಳೆಮರದ ಕತ್ತರಿಸಿದ ಹೂವಿನಿಂದ ಶೇಖರಿಸಲಾಗುತ್ತದೆ. ಸಸ್ಯರಸವನ್ನು ಸಂಗ್ರಹಿಸಲು ಒಂದು ಪಾತ್ರೆಯನ್ನು ಹೂವಿನ ಮೋಟಿಗೆ ಕಟ್ಟಲಾಗುತ್ತದೆ. ಆರಂಭದಲ್ಲಿ ಶೇಖರಣೆಯಾದ ಬಿಳಿ ದ್ರವವು ಹುಳಿ ಬರಿಸುವ ಮುನ್ನ ಬಹಳ ಸಿಹಿ ಮತ್ತು ಮದ್ಯಸಾರರಹಿತವಾಗಿ ಇರುತ್ತದೆ. ಒಂದು ಪರ್ಯಾಯ ವಿಧಾನವೆಂದರೆ ಸಂಪೂರ್ಣ ಮರವನ್ನು ಬೀಳಿಸುವುದು. ಎಲ್ಲಿ ಇದನ್ನು ಅಭ್ಯಾಸ ಮಾಡಲಾಗುತ್ತದೆಯೊ, ಅಲ್ಲಿ ಕತ್ತರಿಸಿದ ಕೊನೆಯಲ್ಲಿ ಸಸ್ಯರಸದ ಶೇಖರಣೆಯನ್ನು ಸರಾಗಗೊಳಿಸಲು ಕೆಲವೊಮ್ಮೆ ಬೆಂಕಿಯನ್ನು ಹಚ್ಚಲಾಗುತ್ತದೆ.

ತಾಳೆಯ ಸಸ್ಯರಸವು ಶೇಖರಣೆಯಾದ ನಂತರ ಗಾಳಿಯಲ್ಲಿನ ನೈಸರ್ಗಿಕ ಮಂಡಗಳ (ಹಲವುವೇಳೆ ಶೇಖರಣೆಗೊಳ್ಳುವ ಪಾತ್ರೆಯಲ್ಲಿ ಬಿಡಲಾದ ಉಳಿದಿರುವ ಮಂಡದಿಂದ ವೇಗಗೊಳಿಸಲಾಗುತ್ತದೆ) ಕಾರಣದಿಂದ ತಕ್ಷಣ ಹುಳಿಬರಲು ಆರಂಭಗೊಳ್ಳುತ್ತದೆ. ಎರಡು ಗಂಟೆಗಳೊಳಗೆ, ಹುಳಿಯುವಿಕೆಯು ಶೇಕಡ ೪ರಷ್ಟು ಮದ್ಯಸಾರ ಪ್ರಮಾಣವರೆಗಿನ ಪರಿಮಳಯುಕ್ತ ವೈನನ್ನು ನೀಡುತ್ತದೆ. ಇದು ಸೌಮ್ಯವಾಗಿ ಅಮಲೇರಿಸುತ್ತದೆ ಮತ್ತು ಸಿಹಿಯಾಗಿರುತ್ತದೆ. ವೈನನ್ನು ಹೆಚ್ಚು ಹೊತ್ತು ಹುಳಿ ಬರಲು, ಒಂದು ದಿನದವರೆಗೆ ಬಿಡಬಹುದು. ಇದು ಕೆಲವು ಜನರು ಇಷ್ಟಪಡುವ ಹೆಚ್ಚು ಕಟುವಾದ, ಹೆಚ್ಚು ಹುಳಿಯಾದ ಮತ್ತು ಹೆಚ್ಚು ಆಮ್ಲೀಯವಾದ ರುಚಿಯ ವೈನನ್ನು ನೀಡುತ್ತದೆ. ಹೆಚ್ಚು ದೀರ್ಘ ಹುಳಿಯುವಿಕೆಯು ಹೆಚ್ಚು ತೀಕ್ಷ್ಣ ವೈನಿನ ಬದಲಾಗಿ ವಿನಗರ್ ಅನ್ನು ಉತ್ಪನ್ನ ಮಾಡುತ್ತದೆ. ಹೆಚ್ಚು ತೀಕ್ಷ್ಣವಾದ ಪೇಯವನ್ನು ಸೃಷ್ಟಿಸಲು ಹೆಂಡವನ್ನು ಬಟ್ಟಿ ಇಳಿಸಬಹುದು. ಇದನ್ನು ಪ್ರದೇಶವನ್ನು ಅವಲಂಬಿಸಿ, ಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ (ಉದಾ. ಸಾರಾಯಿ).

ಉಲ್ಲೇಖಗಳು ಬದಲಾಯಿಸಿ

  1. Rundel, Philip W. The Chilean Wine Palm Archived 2006-01-04 ವೇಬ್ಯಾಕ್ ಮೆಷಿನ್ ನಲ್ಲಿ. in the Mildred E. Mathias Botanical Garden Newsletter, Fall 2002, Volume 5(4). Retrieved 2008-08-31
"https://kn.wikipedia.org/w/index.php?title=ಹೆಂಡ&oldid=994337" ಇಂದ ಪಡೆಯಲ್ಪಟ್ಟಿದೆ