ಹೀರಾ ದೇವಿ ವೈಬಾ (೯ ಸೆಪ್ಟೆಂಬರ್ ೧೯೪೦ - ೧೯ ಜನವರಿ ೨೦೧೧) ಭಾರತೀಯ ಜಾನಪದ ಗಾಯಕಿಯಾಗಿದ್ದು, ನೇಪಾಳಿ ಭಾಷೆಯಲ್ಲಿ ತಮ್ಮ ಗಾಯನವನ್ನು ಮುಂದುವರೆಸಿದರು. ಇವರು ನೇಪಾಳಿ ಜಾನಪದ ಹಾಡುಗಳ ಪ್ರವರ್ತಕಿ ಎಂದು ಗುರುತಿಸಲ್ಪಟ್ಟಿದ್ದಾರೆ.

ಹಿರಾ ದೇವಿ ವೈಬಾ
ವೈಬಾ ಇನ ೨೦೧೦
Born(೧೯೪೦-೦೯-೦೯)೯ ಸೆಪ್ಟೆಂಬರ್ ೧೯೪೦
ಅಂಬುತಿಯಾ ಟೀ ಎಸ್ಟೇಟ, ಕರಸಿಂಗ, ವೆಸ್ಟ್ ಬೆಂಗಾಲ, ಡಾರಜಲಿಂಗ, ಇಂಡಿಯಾ
Died೧೯ ಜನವರಿ ೨೦೧೧
Other namesಕ್ವೀನ್ ಆಫ಼್ ನೇಪಾಲಿ ಫ಼ೋಕ್ ಸಾಂಗ್ಸ್
Spouseದಿವಂಗತ ರತಲ್ ಲಾಲ್ ಆದಿತ್ಯ

ಅವರ ಹಾಡು ಚುರಾ ತಾ ಹೋಯಿನಾ ಅಸ್ತುರಾ ಇದುವರೆಗೆ ರೆಕಾರ್ಡ್ ಮಾಡಿದ ಮೊದಲ ತಮಾಂಗ್ ಸೆಲೋ (ನೇಪಾಳಿ ಜಾನಪದ ಸಂಗೀತದ ಪ್ರಕಾರ) ಎಂದು ಹೇಳಲಾಗುತ್ತದೆ. ಹೆಚ್.ಎಮ್.ವಿ.ಯೊಂದಿಗೆ ಆಲ್ಬಮ್‌ಗಳನ್ನು ಮಾಡಿದ (೧೯೭೪ ಮತ್ತು ೧೯೭೮ ರಲ್ಲಿ) ಮೊದಲ ನೇಪಾಳಿ ಜಾನಪದ ಗಾಯಕಿ ಹಿರಾ ದೇವಿ ವೈಬಾ. [] ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಏಕೈಕ ಗ್ರೇಡ್ ಎ ನೇಪಾಳಿ ಜಾನಪದ ಗಾಯಕಿ ಆಗಿದ್ದರು. ಪ್ರಮುಖ ಸಂಗೀತ ಮನೆಯಾದ ಮ್ಯೂಸಿಕ್ ನೇಪಾಳವು ಧ್ವನಿಮುದ್ರಣ ಮಾಡಿದ ಮತ್ತು ಆಲ್ಬಂ ಅನ್ನು ಬಿಡುಗಡೆ ಮಾಡಿದ ಮೊದಲ ಸಂಗೀತ ಕಲಾವಿದೆ ಹೀರಾ ದೇವಿ. []

ಜೀವನ ಮತ್ತು ಸಂಗೀತ

ಬದಲಾಯಿಸಿ

ಹೀರಾ ದೇವಿ ವೈಬಾ, ಕುರ್ಸಿಯೊಂಗ್ ಬಳಿಯ ಅಂಬೂಟಿಯಾ ಟೀ ಎಸ್ಟೇಟ್‌ನಿಂದ ಸಂಗೀತಗಾರರ ಕುಟುಂಬದಿಂದ ಬಂದವರು ಮತ್ತು ನೇಪಾಳಿ ಜಾನಪದ ಗಾಯಕರು ಮತ್ತು ಸಂಗೀತಗಾರರ ದೀರ್ಘ ಪೀಳಿಗೆಯ ಸಾಲಿನಲ್ಲಿ ಇವರು ಒಬ್ಬರು. ಇವರ ತಂದೆ ಸಿಂಗ್ ಮಾನ್ ಸಿಂಗ್ ವೈಬಾ ಮತ್ತು ತಾಯಿ ತ್ಶೆರಿಂಗ್ ಡೊಲ್ಮಾ. ಅವರು ತಮ್ಮ ೪೦ ವರ್ಷಗಳ ಸಂಗೀತ ವೃತ್ತಿಜೀವನದಲ್ಲಿ ಸುಮಾರು ೩೦೦ ಜಾನಪದ ಹಾಡುಗಳನ್ನು ಹಾಡಿದ್ದಾರೆ. [] ೧೯೬೬ ರಲ್ಲಿ ರೇಡಿಯೊ ನೇಪಾಳಕ್ಕಾಗಿ ಕುರ್ಸಿಯಾಂಗ್‌ನಲ್ಲಿ ಮೂರು ಹಾಡುಗಳನ್ನು ರೆಕಾರ್ಡ್ ಮಾಡಿದಲ್ಲಿಂದ ಅವರ ಗಾಯನದ ವೃತ್ತಿಜೀವನ ಪ್ರಾರಂಭವಾಯಿತು. ಅವರು ೧೯೬೩ ರಿಂದ ೧೯೬೫ ರವರೆಗೆ [] ಆಲ್ ಇಂಡಿಯಾ ರೇಡಿಯೋ ಸ್ಟೇಷನ್‌ನಲ್ಲಿ ಅನೌನ್ಸರ್ ಆಗಿ ಕೆಲಸ ಮಾಡಿದ್ದಾರೆ.

ವೈಬಾ ಅವರ ಜನಪ್ರಿಯ ಹಾಡುಗಳಲ್ಲಿ ಫರಿಯಾ ಲಯೈದಿಯೆಚನ್, ಓರಾ ದೌಡಿ ಜಾಂದಾ ಮತ್ತು ರಾಮ್ರಿ ತಾಹ್ ರಾಮ್ರಿ ಸೇರಿವೆ. ತನ್ನ ತಂದೆಗೆ ಗೌರವಾರ್ಥವಾಗಿ, ವೈಬಾ ೨೦೦೮ ರಲ್ಲಿ ಸಿಲಿಗುರಿಯ ಬಳಿಯ ಕಡಮ್‌ತಲಾದಲ್ಲಿರುವ ತನ್ನ ಮನೆಯಲ್ಲಿ ಎಸ್‌ಎಂ ವೈಬಾ ಇಂಟರ್‌ನ್ಯಾಶನಲ್ ಮ್ಯೂಸಿಕ್ ಅಂಡ್ ಡ್ಯಾನ್ಸ್ ಅಕಾಡೆಮಿಯನ್ನು ತೆರೆದಿದರು.

ಹೀರಾ ವೈಬಾ ೧೯ ಜನವರಿ ೨೦೧೧ ರಂದು, ತನ್ನ ೭೧ ನೇ ವಯಸ್ಸಿನಲ್ಲಿ ತಮ್ಮ ಮನೆಯ ಬೆಂಕಿ ಅಪಘಾತದಲ್ಲಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದರು. [] ಅವರು ಸಂಗೀತಗಾರರಾದ ನವನೀತ್ ಆದಿತ್ಯ ವೈಬಾ ಮತ್ತು ಸತ್ಯ ಆದಿತ್ಯ ವೈಬಾ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. [] ಲೆಜೆಂಡ್ ಹೀರಾ ದೇವಿ ವೈಬಾ ಅವರಿಗೆ ಗೌರವವಾಗಿ, ಅವರ ಮಕ್ಕಳಾದ ಸತ್ಯ ವೈಬಾ ಮತ್ತು ನವನೀತ್ ಆದಿತ್ಯ ವೈಬಾ ಅವರು ೨೦೧೬-೨೦೧೭ ರಲ್ಲಿ ಅವರ ಕೆಲವು ಹಿಟ್ ಸಿಂಗಲ್ಸ್ ಅನ್ನು ಮರು-ರೆಕಾರ್ಡ್ ಮಾಡಿದರು ಮತ್ತು ಬಿಡುಗಡೆ ಮಾಡಿದರು. ನವನೀತ್ ಅವರು ಹಾಡಿದರು ಮತ್ತು ಸತ್ಯ ಅವರು ಅಮಾ ಲೈ ಶ್ರದ್ಧಾಂಜಲಿ - ತಾಯಿಗೆ ಗೌರವ ಯೋಜನೆಯನ್ನು ನಿರ್ಮಿಸಿ ನಿರ್ವಹಿಸಿದರು, ಮತ್ತು ಕುಟುಂಬದ ಪರಂಪರೆಯನ್ನು ಮುನ್ನಡೆಸಿದರು. [] []

ಪ್ರಶಸ್ತಿಗಳು

ಬದಲಾಯಿಸಿ

೧೯೮೬ರಲ್ಲಿ ಡಾರ್ಜಿಲಿಂಗ್‌ನ ನೇಪಾಳಿ ಅಕಾಡೆಮಿಯಿಂದ ಮಿತ್ರಸೇನ್ ಪುರಸ್ಕರ್, ೧೯೯೬ ರಲ್ಲಿ ಸಿಕ್ಕಿಂ ಸರ್ಕಾರದಿಂದ ಮಿತ್ರಸೇನ್ ಸ್ಮೃತಿ ಪುರಸ್ಕಾರ, ಭಾನು ಅಕಾಡೆಮಿ ಪುರಸ್ಕಾರ್, ೨೦೦೧ ರಲ್ಲಿ ಆಗಮ್ ಸಿಂಗ್ ಗಿರಿ ಪುರಸ್ಕಾರ್ ಮತ್ತು ಗೂರ್ಖಾ ಸಹೀದ್ ಸೇವಾ ಸಮಿತಿಯ ಪ್ರಶಸ್ತಿಗಳನ್ನು ಹೀರಾದೇವಿ ಅವರಿಗೆ ನೀಡಲಾಯಿತು. ನೇಪಾಳ ಸರ್ಕಾರವು ಅವರಿಗೆ ಗೂರ್ಖಾ ದಕ್ಷಿಣ ಬಹು (ನೇಪಾಳದ ನೈಟ್‌ಹುಡ್), ಸಾಧನಾ ಸಮ್ಮಾನ್ ಮತ್ತು ಮಧುರಿಮಾ ಫುಲ್ ಕುಮಾರಿ ಮಹತೋ ಪ್ರಶಸ್ತಿಯನ್ನು ನೀಡಿತು. []

  • ನವನೀತ್ ಆದಿತ್ಯ ವೈಬಾ
  • ಅಮ ಲೈ ಶ್ರದಾಂಜಲಿ
  • ನೇಪಾಳಿ ಸಂಗೀತ
  • ತಮಾಂಗ್ ಸೆಲೋ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "चुरा त होइन अस्तुरा - पहिलो तामाङ सेलो गीत ? - Tamang Online". Tamang Online (in ಅಮೆರಿಕನ್ ಇಂಗ್ಲಿಷ್). 2016-12-07. Archived from the original on 4 March 2018. Retrieved 2018-03-05.
  2. "Darjeeling's folk singer Hira Waiba dies of burn injuries". Archived from the original on 21 ಸೆಪ್ಟೆಂಬರ್ 2022. Retrieved 21 July 2012.
  3. "North Bengal & Sikkim | School for Nepali folk music". Calcutta (Kolkata). Archived from the original on 5 March 2018. Retrieved 2018-03-05.
  4. ೪.೦ ೪.೧ "Hira Devi dies of burn injuries". Archived from the original on 25 October 2012. Retrieved 21 July 2012.
  5. "Navneet Aditya Waiba, Satya Waiba". Archived from the original on 2 February 2017. Retrieved 26 January 2017.
  6. "Songs of Tribute, Ama Lai Shraddhanjali". Archived from the original on 12 December 2017. Retrieved 10 January 2017.
  7. "Ama Lai Shraddhanjali". Archived from the original on 15 February 2018.


ಬಾಹ್ಯ ಕೊಂಡಿಗಳು

ಬದಲಾಯಿಸಿ