ಹಾಸನಾಂಬೆ ದೇವಸ್ಥಾನವು ಹಾಸನ ಜಿಲ್ಲೆಯಲ್ಲಿದೆ. ಹಾಸನಾಂಬೆ ಎಂಬ ಮೂಲ ದೇವತೆಯಿಂದಲೇ ಹಾಸನಕ್ಕೆ ಆ‌ ಹೆಸರು ಬಂದಿದೆ. ತನ್ನ ಮಹಿಮೆಗೆ ಪಾತ್ರವಾಗಿರುವ ದೇವಳದ ಬಾಗಿಲು ತೆರೆಯಲ್ಪಡುವುದು ವರುಷದಲ್ಲಿ ಒಂದೇ ಬಾರಿ. ಮುಖ್ಯ ದೇವಾಲಯದಲ್ಲಿ ಹಚ್ಚಿಟ್ಟ ದೀಪವು ದೇವಿಯ ಮಹಿಮೆಯಿಂದ ವರುಷವಿಡೀ ಉರಿಯುತ್ತಿರುತ್ತದೆ ಎಂಬ ಪ್ರತೀತಿ ಇದೆ. ವರುಷಕ್ಕೊಮ್ಮೆ ದೇವಾಲಯವನ್ನು ದೀಪಾವಳಿಯ ಅವಧಿಯಲ್ಲಿ ತೆರೆದು, ಅದ್ಧೂರಿಯಾಗಿ ಜಾತ್ರಾ ಮಹೋತ್ಸವವನ್ನು ನಡೆಸಲಾಗುತ್ತದೆ. ಹಲವಾರು ಊರುಗಳಿಂದ ಜನರು ಈ ಸಮಯದಲ್ಲಿ ನೆರೆದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಡೀ ವರುಷದಲ್ಲಿ ದೇಗುಳವು ೯ ದಿನಗಳ ಕಾಲ ತೆರೆದಿದ್ದು, ಜನರಿಗೆ ಮುಕ್ತ ಪ್ರವೇಶಕ್ಕೆ ಅವಕಾಶವಿರುತ್ತದೆ. ದೇವಸ್ಥಾನದ ಪ್ರಾಂಗಣದಲ್ಲಿಯೇ ಸಿದ್ದೇಶ್ವರನ ಸಣ್ಣ ದೇವಾಲಯವೂ ಇದೆ.ಈ ದೇವಾಲಯವು ಪುರಾತನ ಕಥೆಯು ಇದೆ.