ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್
'Jacinto Benavente Y Martinez'
ಬದಲಾಯಿಸಿ(೧೮೬೬-೧೯೫೪)
ಈ ಸ್ಪಾನಿಷ್ ದೇಶದ ನಾಟಕಕಾರ, ೧೯೨೨ ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್,' ರವರ ತಂದೆ ಕಾನೂನಿನಲ್ಲಿ ಶಿಕ್ಷಣಪಡೆದು ಅಭ್ಯಾಸಮಾಡುತ್ತಿದ್ದರು. ತಂದೆ ಆಪಾರ ಶ್ರೀಮಂತರು. ಅವರು ಮೃತರಾದಾಗ 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ರ ಬಳಿ ಅಪಾರ ಆಸ್ತಿಯನ್ನು ಬಿಟ್ಟುಹೋಗಿದ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾದೇಶಗಳಲ್ಲಿ ದೀರ್ಘಕಾಲ ಪ್ರವಾಸಮಾಡಿ, ಲೋಕಾನುಭವವನ್ನು ಸಂಪಾದಿಸಿದರು.
ಮಾತೃ-ಭೂಮಿಗೆ ಮರಳಿದರು
ಬದಲಾಯಿಸಿ'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ರವರು ಪುನಃ ತಮ್ಮ ಮಾತೃ-ಭೂಮಿ, ಸ್ಪೇನ್ ದೇಶಕ್ಕೆ ಬಂದಾಗ, ಅಲ್ಲಿನ ಸ್ಥಳೀಯ ನಿಯತಕಾಲಿಕಗಳಲ್ಲಿ ಅಂಕಣಗಳನ್ನು ಬರೆಯಲು ಪ್ರಾರಂಭಿಸಿದರು. ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದದ್ದು, ’ಹೆಂಗಸರ ಪತ್ರಗಳು,’ ಎಂಬ ಬರಗಳು. ಇವು ಆ ಪತ್ರಿಕೆಗಳಿಗೆ ’ವಾಚಕರವಾಣಿ’ ಯೆಂದು ಹೆಂಗೆಳೆಯರು ಬರೆದ ಪತ್ರಗಳಿಗೆ ತಮ್ಮ ವಿಚಾರಪೂರ್ಣ ಉತ್ತರಗಳನ್ನು ಬರೆದು ಅವರ ಸಮಸ್ಯೆಗಳಿಗೆ ಸಮಾಧಾನ ದೊರಕಿಸಿಕೊಡುತ್ತಿದ್ದರು. ಇದಾದ ಬಳಿಕ ಅವರ ಗಮನ ನಾಟಕ ರಚನೆಯಕಡೆಗೆ ತಿರುಗಿತು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್,' ರಚಿಸಿದ ೧೭೨ ನಾಟಕಗಳಲ್ಲಿ ಪ್ರಮುಖವಾದವುಗಳು.
- 'Another's Nest' (1854)
- 'High Society' (1896)
- 'Los intereses creados' (1907), comedy involving situations similar to those found in the Commedia dell Arte; it is Benavente's most famous and often performed work. It has been translated as The Bonds of Interest.
- 'Rosas de otoño' (1905), sentimental comedy.
- 'Señora ama' (1908), penetrante estudio psicológico de una mujer asediada por los celos.
- 'La malquerida' (1913), drama.
- 'La ciudad alegre y confiada' (1916), continuation from Los intereses creados.
- 'Campo de armiño' (1916)
- 'Lecciones de buen amor' (1924)
- 'La mariposa que voló sobre el mar' (1926)
- 'Pepa Doncel' (1928)
- 'Vidas cruzadas' (1929)
- 'Aves y pájaros' (1940)
- 'La honradez de la cerradura' (1942)
- 'La infanzona' (1945)
- 'Titania' (1946)
- 'La infanzona' (1947)
- 'Abdicación' (1948)
- 'Ha llegado Don Juan' (1952)
- 'El alfiler en la boca' (1954)
- 'Governer's Wife' ಮುಂತಾದ ನಾಟಕಗಳು.
ಹಾಥಿಂಟಾ ರವರ ಸ್ಪಾನಿಷ್-ಭಾಷಾಪ್ರೇಮ ಅಪಾರವಾಗಿತ್ತು
ಬದಲಾಯಿಸಿ'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್', ಸ್ಪಾನಿಷ್ ಭಾಷೆ, ಸಾಹಿತ್ಯಕ್ಕೆ, ಹಾಗೂ ಸ್ಪಾನಿಷ್ ಭಾಷೆಯ ರಂಗಭೂಮಿಯ ಬೆಳವಣಿಗೆಗೆ ಮಾಡಿದ ಸೇವೆ, ಅನನ್ಯವೆಂದು ಪರಿಗಣಿಸಲ್ಪಟ್ಟಿದೆ. ಅವರ ನಾಟಕ ಕೃತಿಗಳಲ್ಲಿ ಹಾಸ್ಯವಲ್ಲದೆ ಅದ್ಭುತ, ರಮ್ಯ-ಸನ್ನಿವೇಶಗಳನ್ನು ಹೆಣೆಯುವ ತಂತ್ರದಲ್ಲಿ ಅವರು ಸಿದ್ಧಿಪಡೆದಿದ್ದರು. ಅಂದಿನ ಸಮಾಜದ ಕುಂದು-ಕೊರತೆಗಳನ್ನು ಎತ್ತಿ ತೋರಿಸಿ ಕ್ಷ-ಕಿರಣಬೀರುತ್ತಿದ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ಕೊನೆಯವರೆಗೂ ಅವಿವಾಹಿತರಾಗೇ ಉಳಿದಿದ್ದರು. ಸ್ಪಾನಿಷ್ ಭಾಷೆಯ ನಾಟಕಗಳಲ್ಲಿ ವಾಸ್ತವಿಕ ಅಂಶಗಳಿಗೆ ಒತ್ತುಕೊಡುವುದಲ್ಲದೆ, ಅತಿರಂಜಿತ ನಾಟಕೀಯ ಸಂಭಾಷಣೆಗಳನ್ನು ರಂಗಮಂಚದ ಮೇಲೆ, ತಂದಿದ್ದಲ್ಲದೆ, ಸಹಜಮಾತಿನ ಎಳೆಗಳಲ್ಲಿ ತಿಳುವಳಿಕೆಯ ಸಂದೇಶಗಳನ್ನೂ ಜೊತೆ-ಜೊತೆಯಾಗಿ ತರುತ್ತಿದ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' 'ಮೆಲೋಡ್ರಾಮ' ದ ಜೊತೆಗೆ ಹಾಸ್ಯದ ಲೇಪವನ್ನೂ ಸೇರಿಸಿ, ಸಿದ್ಧ ಚೌಕಟ್ಟಿನ ಮಾದರಿಗಳನ್ನು ಮುಕ್ತ-ಪರಿಶೀಲನೆಗೆ ಒರೆಹಚ್ಚುವ ಕಡೆಗೆ ತಮ್ಮ ಒಳನೋಟವನ್ನು ತೋರಿಸುತ್ತಿದ್ದರು. ಅಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದ ಕೆಲವು ಒರಟು-ರಂಗಕ್ರಿಯೆಗಳನ್ನು ಸೂಕ್ಷ್ಮ ಬೌಧ್ದಿಕ ವಿವೇಚನೆಗಳಿಗೆ ಒಡ್ಡಿ, ಸ್ಪಾನಿಷ್ ಭಾಷೆಯ ರಂಗಭೂಮಿಯ ಸ್ಥರವನ್ನು ಉಚ್ಚಮಟ್ಟಕ್ಕೆ ಕೊಂಡೊಯ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ಎತ್ತರದ ಸ್ಥರದ ರಾಜಕೀಯ ಚಿಂತಕರೂ ಹೌದು.
ಮರಣ
ಬದಲಾಯಿಸಿ'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್', ತಮ್ಮ ೮೭ ನೆಯ ವಯಸ್ಸಿನಲ್ಲಿ ಕಾಲವಶರಾದರು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Works by Jacinto Benavente at Project Gutenberg
- Works by or about ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್ at Internet Archive
- Works by Jacinto Benavente Archived 2015-04-17 ವೇಬ್ಯಾಕ್ ಮೆಷಿನ್ ನಲ್ಲಿ.
- ಟೆಂಪ್ಲೇಟು:Books and Writers
- Biography at the Nobel Prize official website
- Biography and bibliography at Noble-Winners.com (unofficial) website
- Brief article in the Columbia Encyclopedia Online Archived 2008-10-15 ವೇಬ್ಯಾಕ್ ಮೆಷಿನ್ ನಲ್ಲಿ.
- Encyclopedia of World Biography article, reproduced at BookRags.com