ಹಸೀನ
ಹಸೀನ, ಗಿರೀಶ್ ಕಾಸರವಳ್ಳಿಯವರು ೨೦೦೪ರಲ್ಲಿ ನಿರ್ದೇಶಿಸಿದ ಚಲನಚಿತ್ರ. ತಾರಾರವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ ಪಾತ್ರಕ್ಕೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ದೊರೆಯಿತು. ಈ ಚಿತ್ರಕಥೆಯು ಗಂಡನಿದ ದೂರವಾದ ಹಸೀನ ಎಂಬ ಹೆಣ್ಣು ಮಗಳ ಬಗ್ಗೆಯಾಗಿದೆ.
ಕಥಾಹಂದರ
ಬದಲಾಯಿಸಿಈ ಚಲನಚಿತ್ರದ ಕಥೆಯು ಬಾನು ಮುಸ್ತಕ್ ಅವರ ಕರಿ ನಗರಗಳು ಎಂಬ ಕಥೆಯದ್ದಾಗಿದೆ. ಹಸೀನ(ತಾರಾ) ತನ್ನ ತಾಯಿಯ ವಿರೋಧದ ನಡುವೆಯೂ ಯಾಕುಬ್ ಎಂಬ ಒಬ್ಬ ಆಟೋ ಚಾಲಕನನ್ನು ಮದುವೆಯಾಗುತ್ತಾಳೆ. ದಂಪತಿಗಳಿಗೆ ಮೂರು ಹೆಣ್ಣು ಮಕ್ಕಳು ಮುನ್ನಿ, ಶುಬ್ಬಿ ಹಾಗೂ ಹಬೀಬ್ ಜನಿಸುತ್ತಾರೆ. ತನ್ನ ನಾಲ್ಕನೆ ಮಗುವಿಗೆ ಗರ್ಭಿಣಿಯಾದ ಸಂದರ್ಭದಲ್ಲಿ ಹಸೀನ ಲಿಂಗಪತ್ತೆ ಪರೀಕ್ಷೆ ಮಾಡಿಸುತ್ತಾಳೆ. ಪರೀಕ್ಷೆಯಿಂದ ತನ್ನ ಹುಟ್ಟಲಿರುವ ಮಗು ಹೆಣ್ಣೆಂದು ತಿಳಿದ ಹಸೀನಾಳ ಗಂಡ, ಮುಂದೆ ತನ್ನ ಹೆಂಡತಿಯ ಮೇಲೆ ದೌರ್ಜನ್ಯವೆಸಗಲು ಶುರುಮಾಡುತ್ತಾನೆ. ಮುಂದೆ ಒಂದು ದಿನ ತನ್ನ ಸಂಸಾರವನ್ನು ಬಿಟ್ಟು ಹೊಗುತ್ತಾನೆ.
ಪಾತ್ರ
ಬದಲಾಯಿಸಿಹಸೀನಳಾಗಿ ತಾರಾ.
ಪ್ರಶಸ್ತಿಗಳು
ಬದಲಾಯಿಸಿಈ ಚಲನಚಿತ್ರವು ಬಿಡುಗಡೆಯಾದ ನಂತರದಿಂದ ಈ ಕೆಳಗಿನ ಪ್ರಶಸ್ತಿಗಳನ್ನು ಪಡೆದಿದೆ.
೨೦೦೪ ರಾಷ್ಟ್ರ ಚಲನಚಿತ್ರ ಪ್ರಶಸ್ತಿ (ಭಾರತ)
ಉಲ್ಲೇಖ
ಬದಲಾಯಿಸಿ- ↑ ೧.೦ ೧.೧ ೧.೨ Awards for Hasina. IMDb.
ಬಾಹ್ಯಕೊಂಡಿಗಳು
ಬದಲಾಯಿಸಿ- ಹಸೀನ ಐ ಎಮ್ ಡಿ ಬಿ ಯಲ್ಲಿ.
This article about a Kannada film of the 2000s is a stub. You can help Wikipedia by expanding it. |