ಹಳೆ ಮಡಿವಾಳ ಸೋಮೇಶ್ವರ ದೇವಾಲಯ, ಬೆಂಗಳೂರು

ಹಳೆ ಮಡಿವಾಳ ಸೋಮೇಶ್ವರ ದೇವಾಲಯವು ಬೆಂಗಳೂರಿನ ಮಡಿವಾಳ ಪ್ರದೇಶದಲ್ಲಿರುವ ಒಂದು ದೇವಾಲಯ. ಇದು ಬೆಂಗಳೂರಿನ ಪುರಾತನ ದೇವಾಲಯಗಳಲ್ಲಿ ಒಂದಾಗಿದ್ದು ಚೋಳರ ಕಾಲಕ್ಕೆ ಸೇರಿದ್ದಾಗಿದೆ. [] ಇದರ ಕಾಲ ೧೨ನೇ ಶತಮಾನ (ಕ್ರಿ.ಶ.೧೨೪೭). ಗರ್ಭಗುಡಿಯಲ್ಲಿ ನೈಸರ್ಗಿಕವಾಗಿ ಉದ್ಭವವಾಗಿದೆಯೆಂದು ಹೇಳಲಾಗುವ ಕಲ್ಲಿನ  'ಸ್ವಯಂಭೂ' ಶಿವಲಿಂಗವಿದೆ.

ತಮಿಳು ಶಾಸನಗಳು

ಬದಲಾಯಿಸಿ

ಇದು ಚೋಳರ ಕಾಲದ ದೇವಾಲಯವಾಗಿರುವುದರಿಂದ ಇಲ್ಲಿ ತಮಿಳು ಮತ್ತು ಗ್ರಂಥಭಾಷೆಯಲ್ಲಿ ಬರೆದಿರುವ ಅನೇಕ ಕಲ್ಲಿನ ಶಾಸನಗಳನ್ನು ದೇವಾಲಯದ ಹೊರಗೋಡೆಗಳಲ್ಲಿ ಕಾಣಬಹುದು. ೧೨೪೭ಇಸವಿಯ ಕಾಲದ ಶಾಸನವೊಂದರಲ್ಲಿ ವೆಪ್ಪೂರು (ಈಗಿನ ಬೇಗೂರು) ನಿವಾಸಿಯೊಬ್ಬರ ಭೂದಾನದ ಬಗ್ಗೆ ಉಲ್ಲೇಖವಿದೆ.  ಇತರ ಕೆಲವು ಶಾಸನಗಳು ಮೂರನೆಯ ಬಲ್ಲಾಳ ಮತ್ತು ರಾಜೇಂದ್ರ ಚೋಳನ ಕಾಲದ ಭೂಕ್ರಯಗಳ ಬಗ್ಗೆ ಹೇಳುತ್ತವೆ. ೧೩೬೫ರ ಕಾಲದ ಶಾಸನವೊಂದರಲ್ಲಿ ಉಲ್ಲೇಖಿಸಿರುವ ತಾಮರೈಕ್ಕಿರೈ ಪ್ರದೇಶವೇ ಈಗಿನ ತಾವರೆಕೆರೆ ಪ್ರದೇಶ.

ಬೆಂಗಳೂರು (ಈಗಿನ ವೆಪ್ಪೂರು/ಬೇಗೂರು)

ಬದಲಾಯಿಸಿ

ಇಲ್ಲಿನ ಶಾಸನಗಳಲ್ಲಿ ಬೇಗೂರನ್ನು ವೆಂಗಳೂರು ಎಂದು ಉಲ್ಲೇಖಿಸಲಾಗಿದೆ. ಕನ್ನಡದಲ್ಲಿ 'ಬ' ಅಕ್ಷರದಿಂದ ಶುರುವಾಗುವ ಪದಗಳು ತಮಿಳಿನಲ್ಲಿ 'ವ' ಅಕ್ಷರದಿಂದ ಶುರುವಾಗುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 

ತಾವರೆಕೆರೆ 

ಬದಲಾಯಿಸಿ

೧೩೬೫ರ ಕಾಲದ ಶಾಸನದಲ್ಲಿ ಉಲ್ಲೇಖಿಸಿರುವ ಪ್ರಕಾರ ಈಗಿನ ತಾವರೆಕೆರೆ ಪ್ರದೇಶವನ್ನು ತಮಿಳು ಭಾಷೆಯಲ್ಲಿ ತಾಮರೈಕ್ಕಿರೈ ಎನ್ನಲಾಗುತ್ತಿತ್ತು.

ವಿಶೇಷ ದಿನಗಳು

ಬದಲಾಯಿಸಿ
  • ಮಹಾಶಿವರಾತ್ರಿ: ಪ್ರತಿವರ್ಷ ಮಾಘ ಅಥವಾ ಫಾಲ್ಗುಣ ಮಾಸದ ಕೃಷ್ಣಪಕ್ಷದಲ್ಲಿ (ಫೆಬ್ರವರಿ ತಿಂಗಳು) ಆಚರಿಸಲಾಗುತ್ತದೆ.
  • ಪ್ರದೋಷ: ಪ್ರತಿ ಹದಿನೈದು ದಿನಗಳಿಗೊಮ್ಮೆ ಅಮಾವಾಸ್ಯೆ ಅಥವಾ ಹುಣ್ಣಿಮೆಯ ಎರಡು ದಿನ ಮೊದಲು ಬರುತ್ತದೆ.
  • ಸೋಮವಾರ: ಪ್ರತಿ ಸೋಮವಾರ ಬೆಳಗ್ಗೆ ಏಳೂವರೆ ಗಂಟೆಗೆ ಅಭಿಷೇಕ ಮತ್ತು ಒಂಬತ್ತೂವರೆ ಗಂಟೆಗೆ ಮಹಾಮಂಗಳಾರತಿ.

ಗುಡಿಯಲ್ಲಿರುವ ಇತರ ದೇವರು

ಬದಲಾಯಿಸಿ

ಒಳಭಾಗದಲ್ಲಿ

ಬದಲಾಯಿಸಿ
  • ವಿನಾಯಕ
  • ಪ್ರಥಮ ಗಣಪತಿ
  • ದಕ್ಷಿಣಾಮೂರ್ತಿ
  • ಶ್ರೀನಿವಾಸ
  • ಸುಬ್ರಹ್ಮಣ್ಯೇಶ್ವರ
  • ಬ್ರಹ್ಮ
  • ಪಾರ್ವತಿದೇವಿ
  • ಅನ್ನಪೂರ್ಣೇಶ್ವರಿ
  • ಆಂಜನೇಯ
  • ಕಾಲಭೈರವ
  • ಸೂರ್ಯಭಗವಾನ್

ಹೊರಪ್ರಾಂಗಣದಲ್ಲಿ

ಬದಲಾಯಿಸಿ

ದೇವಾಲಯಕ್ಕೆ ಹೋಗುವ ದಾರಿ

ಬದಲಾಯಿಸಿ
  • ಕೆಂಪೇಗೌಡ ಸಿಟಿ ಬಸ್ ನಿಲ್ದಾಣ ಅಥವಾ ಕೃಷ್ಣರಾಜ ಮಾರುಕಟ್ಟೆಯಿಂದ ಮಡಿವಾಳ ಪ್ರದೇಶಕ್ಕೆ ಹೋಗುವ ಅಥವಾ ಮಡಿವಾಳದ ಮೂಲಕ ಹೋಗುವ ಬಸ್ಸುಗಳಲ್ಲಿ 'ಮಡಿವಾಳ' ಬಸ್ ನಿಲುಗಡೆಯಲ್ಲಿ ಇಳಿದು ಅಲ್ಲಿಂದ ನಡೆದುಕೊಂಡು ಹೋಗಬಹುದು ಅಥವಾ ರಿಕ್ಷಾದಲ್ಲಿ ಹೋಗಬಹುದು. ಬಸ್ ನಿಲುಗಡೆಯಿಂದ ೧ ಕಿ.ಮಿ.ಗಿಂತ ಕಡಿಮೆ ದೂರ ಆಗುತ್ತದೆ.
  • ವಾಹನಗಳಲ್ಲಿ ಮಡಿವಾಳ ಪ್ರದೇಶದ ಒಳಗೆ ದೇವಾಲಯದವರೆಗೂ ಹೋಗಬಹುದು.

ದೇವಾಲಯದ ಸಮಯ

ಬದಲಾಯಿಸಿ

ಬೆಳಗ್ಗೆ ೭ರಿಂದ ೧೧:೩೦

ಸಂಜೆ ೬ರಿಂದ ೮:೩೦

ಗೂಗಲ್ ನಕಾಶೆ : http://goo.gl/maps/KLYVJ

ಉಲ್ಲೇಖಗಳು

ಬದಲಾಯಿಸಿ
  1. "Chola Dynasty Temple". THE TIMES OF INDIA. Archived from the original on 2013-06-16. Retrieved 2015-04-06. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. Rice, Benjamin Lewis (1894). Epigraphia Carnatica: Volume IX: Inscriptions in the Bangalore District. Mysore State, British India: Mysore Department of Archaeology. Retrieved 5 August 2015.

ಹೊರಕೊಂಡಿಗಳು

ಬದಲಾಯಿಸಿ