ಹಲಸಿನ ಹಣ್ಣಿನ ಬಗ್ಗೆ

ಬದಲಾಯಿಸಿ

ಒಂದು ಕಾಲದಲ್ಲಿ ಬಡವರ ಹಣ್ಣು ಎಂದೇ ಮೂಲೆ ಗುಂಪಾಗಿದ್ದ ಹಲಸು ಇಂದು ರಾಜನಂತೆ ತಲೆಯೆತ್ತಿ ನಿಂತಿದೆ. ಆರೋಗ್ಯಕ್ಕೆಆರೋಗ್ಯ ಪೂರಕವಾದ ಪೌಷ್ಠಿಕಾಂಶ ಹಲಸಿನಲ್ಲಿದೆ. ತುಳುನಾಡಿನಲ್ಲಿತುಳುನಾಡು ಆಚರಿಸುವ ಭೂತಾರಾಧನೆಯ ದಿನ ದೈವಗಳ ನೈವೇದ್ಯಕ್ಕೆ ಹಲಸು ಬಳಸಲಾಗುತ್ತಿತ್ತು.ಆದ್ದರಿಂದ ನಮ್ಮ ಸಂಸ್ಕೃತಿಯಲ್ಲಿಸಂಸ್ಕೃತಿ ಹಲಸಿಗೆ ಮಹತ್ವದ ಸ್ಥಾನವಿದೆ. ಸಾಮಾನ್ಯವಾಗಿ ಹಲಸಿನ ಹಣ್ಣಿನಿಂದ ಕಡುಬುಕಡುಬು, ಮುಳಕ,ಶೀರಾ, ಪಾಯಸಪಾಯಸ, ದೋಸೆದೋಸೆ, ಇಡ್ಲಿ,ಇಡ್ಲಿ ಹೋಳಿಗೆ, ಹಪ್ಪಳಹಪ್ಪಳ ಅಬ್ಬಬ್ಟಾ ಹೀಗೆ ಹೇಳುತ್ತಾ ಹೋದರೆ ಹಲಸಿನ ಹಣ್ಣಿನಿಂದ ಮಾಡಬಹುದಾದ ತಿನಿಸುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಬಹಳಷ್ಟು ಮಂದಿಗೆ ಹಲಸು ಬರಿ ಹಣ್ಣಾಗಿ ಗೊತ್ತೇ ಹೊರತು ಆದರಿಂದ ಮಾಡಬಹುದಾದ [] ತಿನಿಸುಗಳ ಬಗ್ಗೆ ಗೊತ್ತಿಲ್ಲ.

ಹಲಸಿನ ಹಣ್ಣಿನ ಮುಳ್ಕ ಬೇಕಾಗುವ ಸಾಮಾಗ್ರಿಗಳು

ಬದಲಾಯಿಸಿ
 
Jackfruit flesh

3 ಕಪ್‌ ಹಲಸಿನ ಹಣ್ಣು,1 ಕಪ್‌ ಬೆಳ್ತಿಗೆ ಅಕ್ಕಿ,3 ಚಮಚ ತೆಂಗಿನ ಕಾಯಿ ತುರಿ,2 ಚಮಚ ಎಳ್ಳು,1/2 ಲೋಟ ಬೆಲ್ಲಬೆಲ್ಲ,ಕಾಳು ಮೆಣಸಿನ ಪುಡಿ 1 ಚಮಚ,ಕರಿಯಲಿಕ್ಕೆ ಎಣ್ಣೆ,ಏಲಕ್ಕಿಏಲಕ್ಕಿ 4 ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ

ಬದಲಾಯಿಸಿ

ಮೊದಲು ಅಕ್ಕಿಯನ್ನು ಒಂದೆರಡು ಗಂಟೆಗಳ ವರೆಗೆ ನೀರಿನಲ್ಲಿ ನೆನೆಸಿಡಬೇಕು. ಬಳಿಕ ನೆನೆಸಿದ ಅಕ್ಕಿಯನ್ನು ಬಸಿದು ಹಲಸಿನ ಹಣ್ಣಿನ‌ ತೊಳೆಯ ಕೊಚ್ಚಲಿನೊಟ್ಟಿಗೆ ಅಕ್ಕಿ ಬೆರಸಿ ನೀರು ಮುಟ್ಟಿಸದೆ ನುಣ್ಣಗೆ ರುಬ್ಬಿ, ತೆಗೆಯುವ ವೇಳೆ ತೆಂಗಿನ ತುರಿತೆಂಗಿನಕಾಯಿ ಮರ, ಏಲಕ್ಕಿ ಹಾಕಿ 2 ಸುತ್ತು ರುಬ್ಬಿ. ಒರಳಿನಿಂದ ತೆಗೆದ ಹಿಟ್ಟಿಗೆ ಎಳ್ಳುಎಳ್ಳು ,ಕಾಳು ಮೆಣಸಿನ ಪುಡಿಕಾಳುಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪುಉಪ್ಪು (ಖಾದ್ಯ) ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಬಾಣಲೆಗೆ ಎಣ್ಣೆ ಹೊಯ್ದು ಒಲೆಯ ಮೇಲಿಟ್ಟು ಕಾದ ನಂತರ ಒದ್ದೆ ಕೈಯಿಂದ ಹಿಟ್ಟಿನ ಸಣ್ಣ-ಸಣ್ಣ ಉಂಡೆ ಮಾಡಿ ಎಣ್ಣೆಯಲ್ಲಿ ಬಿಡಿ ಒಂದು ಸಲಕ್ಕೆ 5ರಿಂದ 8 ಮುಳ್ಕ ಕರಿದು ತೆಗೆಯಿರಿ. ಬಿಸಿ ಬಿಸಿ ಹಲಸಿನ ಹಣ್ಣಿಹಲಸಿನ ಹಣ್ಣುನ ಮುಳ್ಕ ತಿನ್ನಲು ರೆಡಿ.

ಬಾಹ್ಯ ಸಂಪರ್ಕ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ