ಹರ್ಷವರ್ಧನ್' ಜಿ. ಕುಲಕರ್ಣಿ

ಹರ್ಷವರ್ಧನ್ ಒಬ್ಬ ಯುವ ಚಲನಚಿತ್ರ ನಿರ್ದೇಶಕ, ಟೆಲಿವಿಶನ್ ಧಾರಾವಾಹಿ ನಿರ್ದೇಶಕ, ಚಿತ್ರಕಥಾ ಲೇಖಕ, ಮತ್ತು ಯಶಸ್ವಿ ಚಿತ್ರನಿರ್ಮಾಪಕರೆಂದು ಮುಂಬಯಿನ ಜನತೆಗೆ ಪರಿಚಿತರಾಗಿರುವ [] ಮುಂಬಯಿ ಕನ್ನಡಿಗರಲ್ಲೊಬ್ಬರು. ಈಗ ಅವರು, ತಾವು ಮಾಡುವ ಕೃಷಿಯಲ್ಲಿ, ಅಂತಾರಾಷ್ಟ್ರೀಯ ಖ್ಯಾತಿಯನ್ನೂ ಗಳಿಸಿದ್ದಾರೆ.

ಚಿತ್ರ:27-harshavardhana-kulkarni1.jpg
ನಾಟಕ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಹರ್ಷವರ್ಧನ್

ಬಾಲ್ಯ, ವಿದ್ಯಾಭ್ಯಾಸ ಮತ್ತು ವೃತ್ತಿಜೀವನ

ಬದಲಾಯಿಸಿ

'ಹರ್ಷವರ್ಧನ್', ೧೯೭೩ ರಲ್ಲಿ ಆಗಿನ ಮುಂಬಯಿ(ಮುಂಬಯಿ)ನಲ್ಲಿ ಜನಿಸಿದರು. ಮನೆಯಲ್ಲಿ ಕನ್ನಡ-ಸಾಹಿತ್ಯ-ಸಂಸ್ಕೃತಿಯ ವಾತಾವರಣವಿತ್ತು. ಎಂ.ವಿ.ಕಾಲೇಜ್ ನಲ್ಲಿ ವಿಜ್ಞಾನಶಾಖೆಯಲ್ಲಿ ಪದವಿಪಡೆದರು. ಶ್ರೇಷ್ಠ ವಿದ್ಯಾರ್ಥಿ ಬಹುಮಾನ, ೧೯೯೫ ರಲ್ಲಿ, MIT (ಮಹಾರಾಷ್ಟ್ರ ಇನ್ ಸ್ಟಿಟ್ಯೂಟ್ ಆಫ್ ಟೆಕ್ನೊಲಜಿ)ಗೆ ಸೇರಿ, ಪೆಟ್ರೋಕೆಮಿಕಲ್ಸ್ ನಲ್ಲಿ, 'ಪುಣೆ ವಿಶ್ವವಿದ್ಯಾಲಯ,' ದಿಂದ ಬಿ. ಇ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದರು. ಮುಂಬಯಿ ನಲ್ಲಿ ವಿದ್ಯಾರ್ಥಿಯಾಗಿದ್ದಾಗ, ಕಾರ್ನಾಡ್, ಕಂಬಾರ್, ಶ್ರೀರಂಗರ ನಾಟಕಗಳನ್ನು ಮೆಚ್ಚಿದ್ದರು. ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ನಾಟಕಗಳಿಂದಲೂ ಪ್ರಭಾವಿತರಾಗಿದ್ದರು. 'ಜಬ್ಬಾರ್ ಪಟೇಲ್ ನಾಟಕ ಗುಂಪಿನೊಂದಿಗೆ,' ಸೇರಿ, ಮರಾಠಿ, ಹಿಂದಿ ಇಂಗ್ಲೀಷ್ ನಾಟಕಗಳಲ್ಲಿ ಭಾಗವಹಿಸಿ, 'ಅಂತರ್ ಕಾಲೇಜ್ ಮಟ್ಟದ ಪಾರಿತೋಷಕಗಳನ್ನೂ ೪ ವರ್ಷಗಳಲ್ಲೂ ಗಳಿಸಿದರು,

' ಕೊನೆಯ ವರ್ಷದ 'ಬಿ. ಇ,' ಹಂತದಲ್ಲಿದ್ದಾಗ, ೩ ಭಾಷೆಯ ನಾಟಕಗಳನ್ನು ನಿರ್ದೇಶಿಸಿದ್ದರು. ಅವುಗಳಿಗೆ ’ಅಂತರ ಕಾಲೇಜ್ ಮಟ್ಟ’ ದಲ್ಲಿ ಪ್ರಶಸ್ತಿ ದೊರೆತಾಗ ಒಂದು ’ಹ್ಯಾಟ್-ಟ್ರಿಕ್,’ ಸಾಧಿಸಿದ್ದರು. ಬಿ. ಇ ಪದವಿಪಡೆದ ನಂತರ, ನೌಕರಿಗಾಗಿ ಹುಡುಕಾಡದೆ,’ ಆಹಟ್,’ ಎಂಬ ಟಿ.ವಿ ಧಾರಾವಾಹಿಯಲ್ಲಿ ಉಪ-ನಿರ್ದೇಶಕರಾಗಿ ಕೆಲಸಮಾಡಿದರು.

ಮುಂದೆ ೧೯೯೨ ರಲ್ಲಿ, ಪುಣೆಯ ಫಿಲ್ಮ್ ಇನ್ ಸ್ಟಿ ಟ್ಯೂಟ್ ಗೆ ಸೇರಿ, ಪಿ.ಜಿ.ಡಿಪ್ಲೊಮಾ (ಎಡಿಟಿಂಗ್) ಪಡೆದರು. ಉತ್ತಮ ಸಂಪಾದಕರೆಂಬ ವಿಶೇಷ ಬಹುಮಾನವೂ ದೊರೆಯಿತು. ಮುಂಬಯಿನಲ್ಲಿ, ’'Tailor made Films' ’ ಎಂಬ ಸಂಸ್ಥೆಯನ್ನು ಗೆಳೆಯರ ಸಹಕಾರದಿಂದ ಸ್ಥಾಪಿಸಿ, ಹಲವಾರು ಆಯ್ಡ್/ಕಾರ್ಪೊರೇಟ್ ಚಿತ್ರಗಳನ್ನು ನಿರ್ಮಿಸಿದರು.

ಚಿತ್ರ:Harsh (m).jpg
'ಹರ್ಷವರ್ಧನ್ ಜಿ.ಕುಲಕರ್ಣಿ' ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು'

ಲಾಸ್ಟ್ ಅಂಡ್ ಫೌಂಡ್,’ ಕಿರು-ಚಿತ್ರದ ದಿಗ್ದರ್ಶನ

ಬದಲಾಯಿಸಿ

ಹರ್ಷವರ್ಧನ್ ಬರೆದು ದಿಗ್ದರ್ಶಿಸಿ, ನಿರ್ಮಿಸಿದ ಕಿರುಚಿತ್ರ, 'ಲಾಸ್ಟ್ ಅಂಡ್ ಫೌಂಡ್,[] ’ಮಹಾರಾಷ್ಟ್ರದ ಸಮುದ್ರದ ಬಳಿಯ ಸುಂದರ ಬೀಚ್ ಗಳಲ್ಲಿ ಚಿತ್ರಣಗೊಂಡಿದೆ. ಚಿತ್ರಕಥೆಯನ್ನು ಸ್ವಲ್ಪ ವಿವರಿಸುವುದಾದರೆ, ೧೦೦ ವರ್ಷ ಹಳೆಯ ಬಾಟಲ್ ವೊಂದರ ಸುತ್ತ ಹೆಣೆದ ಒಂದು ಚಿತ್ರಕಥೆ. ೪ ಕಾಲ್ಪನಿಕ ಕಥಾನಕಗಳನ್ನೊಳಗೊಂಡ ನೂರುವರ್ಷದ ಹಳೆಯ ಬಾಟಲ್ ಕಥೆ. ಜೀವನದ ಹಲವಾರು ದೃಶ್ಯಗಳಿಂದ ಬಾಟಲಿಯ ಪ್ರಯಾಣ ಸಾಗುತ್ತಾ ಕೊನೆಗೆ ಅದು ಸಮುದ್ರಕ್ಕೆ ಎಸೆಯಲ್ಪಡುತ್ತದೆ. ಜನರ ಪ್ರೀತಿ, ತಿರಸ್ಕಾರ, ಆಸೆಆಮಿಶಗಳಲ್ಲಿ ಅರ್ಥ ಹುಡುಕುತ್ತಾ ಜೀವನ ಚಕ್ರದ ಒಂದು ವರ್ತುಲವನ್ನು ತೋರುತ್ತಾ, ಜೀವನ ಯಾತ್ರೆಯ ಪ್ರತೀಕವೆಂತೆ, ನಿಸರ್ಗದ ಸಮೀಪದ ಒಂದು ’ಕೊಲೇಜ್,’ ನಂತೆ ಕಾಣಿಸುವ ಚಿತ್ರಗಳ ಮೂಲಕ ಬರೆದ ದೃಶ್ಯಕಾವ್ಯದಂತೆ, ಅಪೂರ್ವ ಅನುಭವಗಳ ಸುಂದರ ಲೋಕವನ್ನು ಮುಂದೆ ಬಿಚ್ಚಿಡುತ್ತಾ ಚಿತ್ರ ಸಾಗುತ್ತದೆ. ಇಲ್ಲಿ ನಮ್ಮನ್ನು ಸಂಧಿಸುವ ಮಕ್ಕಳು, ಮೀನುಗಾರರು, ಮತ್ತಿತರ ಸಾಮಾನ್ಯ ಜನರು, ಯಾವುದೇ ಅಭಿನಯದ ತರಬೇತಿಯನ್ನು ಹೊಂದಿದವರಲ್ಲ. ಮೇಕಪ್ ಕೂಡ ಇಲ್ಲದ ಸಹಜ ಅಭಿನಯದ ಇವರ, ನಟನಾಭಿನಯ ಮೆಚ್ಚುವಂತಹದು. ’ನವನೀತ ಮಿಸ್ಸರ್,’ ಚಿತ್ರದ ಛಾಯಾಗ್ರಾಹಕರು, ಹಿನ್ನೆಲೆ ಸಂಗೀತ ’ಬಿಕ್ರಂ ಘೋಷ್’, ಮತ್ತು ದಿಗ್ದರ್ಶಕ, ಹರ್ಷವರ್ಧನ್. ಈ ಕಿರುಚಿತ್ರ ಪ್ರಾರಂಭವಾಗುವಾಗ ಬರುವ ಮೆಲುದನಿಯ ಗೀತೆಯನ್ನು ಬರೆದವರು, 'ಶ್ರೀ ರಾಘವೇಂದ್ರ' ; ಹರ್ಷವರ್ಧನರ ಸಹೋದರ ; ಅಮೆರಿಕೆಯಲ್ಲಿ ’ಸಾಫ್ಟ್ವೇರ್ ಇಂಜಿನಿಯರ್,’ ಆಗಿದ್ದಾರೆ. ಹಲವಾರು ಚಿತ್ರೋತ್ಸವಗಳಲ್ಲಿ, ಮುಂಬಯಿ, ಗೋವಾ, ಕೊಲ್ಕೊತ್ತಾ, ನ್ಯೂಯಾರ್ಕ್, ಲಂಡನ್, ನಲ್ಲಿ ಪ್ರದರ್ಶಿತವಾಗಿ ಮೆಚ್ಚುಗೆಗಳಿಸಿದೆ. ’ಅಪ್ಸರಾ ಅವಾರ್ಡ್,’ ದೊರೆತಿದೆ.

ಮುಂಬಯಿ ನ ’ಐ.ಡಿ.ಪಿ.ಎ,’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ೪ ಸ್ವರ್ಣ ಹಾಗೂ ೧ ರಜತ ಪದಕದೊರೆತಿದೆ.

ಹರ್ಷವರ್ಧನ್, ಮುಂಬಯಿನಗರದ ಹಿರಿಯ ಲೇಖಕ, 'ಡಾ. ಜಿ. ವಿ. ಕುಲಕರ್ಣಿ' ಯವರ ಕಿರಿಯ ಮಗ. ’ಜೀವಿ,’ ಯವರು, ಮುಂಬಯಿನ ಹೆಸರಾಂತ ದೈನಿಕ, ’ಕರ್ನಾಟಕ ಮಲ್ಲ ದೈನಿಕ,’ ದಲ್ಲಿ ಅಂಕಣಕಾರರು. ಅಲ್ಲದೆ, ಅಮೆರಿಕದಿಂದ ಪ್ರಕಟವಾಗುತ್ತಿರುವ, ’ದಟ್ಸ್ ಕನ್ನಡ ಇ-ದೈನಿಕ ಪತ್ರಿಕೆ,’ ಯಲ್ಲಿ ತಮ್ಮ ಬರಹಗಳನ್ನು ಮಂಡಿಸುತ್ತಿದ್ದಾರೆ.

ಶ್ರೀಲಂಕದ, ’ಯೂತ್ ನ್ಯೂ ವೇವ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್,’ ನಲ್ಲಿ ಮೆಚ್ಚುಗೆ

ಬದಲಾಯಿಸಿ

೨೦೦೮ ರ ಡಿಸೆಂಬರ್, ತಿಂಗಳ ೨೬ ರಿಂದ ೩೦ ರವರೆಗೆ ನಡೆದ ಶ್ರೀಲಂಕದ, ’ಯೂತ್ ನ್ಯೂ ವೇವ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್,’ ನಲ್ಲಿ ಶ್ರೇಷ್ಠ ಚಿತ್ರವೆಂದು ಗುರುತಿಸಲ್ಪಟ್ಟಿತು. ಅತಿ ಹೆಚ್ಚು ಜನಮೆಚ್ಚುಗೆ ಗಳಿಸಿದ ಚಿತ್ರವೆಂಬ, ವಿಶೇಷ ಪುರಸ್ಕಾರವನ್ನೂ ಬುಟ್ಟಿಗೆ ಹಾಕಿಕೊಂಡಿತು.

ಶ್ರೀ ಗಿರೀಶ್ ಕಾಸರವಳ್ಳಿಯವರ, ಪ್ರತಿಕ್ರಿಯೆ

ಬದಲಾಯಿಸಿ

’ಸತ್ಯಜಿತ್ ರೇ,’ ತರುವಾಯ ಅತ್ಯಧಿಕ ಸ್ವರ್ಣ ಪದಕವಿಜೇತ, ಜನಪ್ರಿಯ ದಿಗ್ದರ್ಶಕ, ಶ್ರೀ. ಕಾಸರವಳ್ಳಿಯವರು ಮೆಚ್ಚಿ ಪತ್ರಬರೆದಿದ್ದರು. ಶ್ರೀ ಗಿರೀಶ್ ಕಾಸರವಳ್ಳಿಯವರು, ’ಲಾಸ್ಟ್ ಅಂಡ್ ಫೌಂಡ್,’ ಕಿರು-ಚಿತ್ರವನ್ನು ವೀಕ್ಷಿಸಿ ನುಡಿದ ಮೆಚ್ಚುಗೆಯ ಮಾತುಗಳು ಹೀಗಿವೆ. "ನಾನು ನೋಡಿದ ಈ ಚಲನಚಿತ್ರದ ಕಥೆ, ದಿಗ್ದರ್ಶನ, ಅಲ್ಲಿ ಬರುವ ಮಾತಿನ ಎಳೆಗಳು, ಅದಕ್ಕೆ ತಕ್ಕಂತೆ ಮೂಡಿಬರುವ ಸಂಗೀತದ ಅಲೆಗಳು ಹಾಗೂ ಅತ್ಯುತ್ತಮ ಕಥೆಯನ್ನು ಹೆಣೆದಿರುವ ಶೈಲಿ, ಮತ್ತು ಅಲ್ಲಿ ಬರುವ ಪ್ರಸಂಗಗಳೂ ಸುಂದರವಾಗಿವೆ. ಎಲ್ಲವೂ ಅವುಗಳ ಜೊತೆಸೇರಿ ಒಂದಕ್ಕೊಂದು ಪೂರಕವಾಗಿವೆ. ಉತ್ತಮ ಕಥೆಯ ನಿರೂಪಣೆಯ ಜೊತೆಗೆ, ತಕ್ಕ ಸಂಗೀತ, ಹಾಗೂ ಬೇಕಾಗಿರುವ ಸಮರ್ಥ ಚಿತ್ರೀಕರಣಗಳ ಆದ್ಯತೆಗಳ ಬಗ್ಗೆ ಒಳ್ಳೆಯ ಉದಾಹರಣೆಯನ್ನು ಕೊಡುತ್ತವೆ."

ಮಹತ್ವದ ಪ್ರಶಸ್ತಿಗಳು

ಬದಲಾಯಿಸಿ
  • ವಾರಣಾ,’ ಸಾಕ್ಷಿಚಿತ್ರಕ್ಕಾಗಿ,’ರಾಪಾ ಅವಾರ್ಡ್,’
  • ೨೦೦೩ ರಲ್ಲಿ, ’ಮಹಾರಾಷ್ಟ್ರ ಟೈಮ್ಸ್,’ ಟೀ. ವಿ. ಕಮರ್ಶಿಯಲ್ ಸ್ಕ್ರಿಪ್ಟ್ ಗಾಗಿ, ’ರಾಪಾ ಅವಾರ್ಡ್,’
  • ೨೦೦೫ ರಲ್ಲಿ, ’ದ ಚೋಸನ್ ವನ್’ ( 'The chosen One') ಟೆಲೆ ಚಿತ್ರಕ್ಕಾಗಿ ’ಹಿರೋ ಹೊಂಡಾ’ ’ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಅವಾರ್ಡ್’,
  • ದ ಚೋಸನ್ ವನ್,’ ಫಿಲ್ಮ್ ಗಾಗಿ, ೬ ರಲ್ಲಿ ೪ ಶ್ರೇಷ್ಟ ಅವಾರ್ಡ್ ಗಳು,
  • ೨೦೦೬ ರ ಶ್ರೇಷ್ಠ ಚಿತ್ರ, ಶ್ರೇಷ್ಠ ಚಿತ್ರಕಥೆ, ಶ್ರೇಷ್ಠ ದಿಗ್ದರ್ಶನ, ಶ್ರೇಷ್ಠ ಸಿನೆಮಾಟೋಗ್ರಫಿ, ಪ್ರಶಸ್ತಿಗಳು.
  • ೨೦೦೮ ರಲ್ಲಿ,'Lost And Found', ಕಿರು-ಚಿತ್ರಕ್ಕೆ, ಪ್ರಶಸ್ತಿ.[]
  • 'ಹಸಿ ತೊ ಫಸೆ',[] ಹಿಂದಿ ಚಲನಚಿತ್ರಕ್ಕೆ ಪಟ್ಕಥೆ ಬರೆದಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. ಜನವರಿ,೨೧, ೨೦೦೯,ಒನ್ ಇಂಡಿಯ ಇಪತ್ರಿಕೆಯಲ್ಲಿ,'ಎಲೆಮರೆಯ ಚಿತ್ರನಿರ್ದೇಶಕ ಹರ್ಷವರ್ಧನ್ ಕುಲಕರ್ಣಿ'
  2. 'ರಜತ ಕಮಲವನ್ನೂ ಬಾಚಿದ ಲಾಸ್ಟ್ ಅಂಡ್ ಫೌಂಡ್ ಚಲನ ಚಿತ್ರ'
  3. movies.dosthana, ಹರ್ಷವರ್ಧನ್ ಕುಲಕರ್ಣಿ ಪರಿಚಯ ಲೇಖನ
  4. 'ಹಸಿ ತೊ ಫಸೆ', ಹಿಂದಿ ಚಲನ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ವಿಕಿಪೀಡಿಯದಲ್ಲಿ ಉಲ್ಲೇಖಿತ