ಹಮಾಮ ಶಿವಪುರ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮ. ದೊಡ್ಡಬಳ್ಳಾಪುರ ನಗರ ಬೆಂಗಳೂರು ರಾಜ್ಯ ರಾಜಧಾನಿಯಿಂದ ಸುಮಾರು 42 ಕಿ ಮಿ ದೂರದಲ್ಲಿದೆ. ಹಮಾಮ-ಶಿವಪುರದಿ೦ದ ಸುಮಾರು ೧೨ ಕಿ. ಮೀ ದೂರದಲ್ಲಿ ವಿಶ್ವ ವಿಖ್ಯಾತ ನಂದಿ ಬೆಟ್ಟವಿದೆ.

ಹಮಾಮ ಶಿವಪುರ
ಗ್ರಾಮ
Country ಭಾರತ
Stateಕರ್ನಾಟಕ
Districtಬೆಂಗಳೂರು ಗ್ರಾಮಾಂತರ
Population
 (2011)
 • Total೨,೫೦೦
Languages
 • Officialಕನ್ನಡ
Time zoneUTC+5:30 (IST)
PIN
561 203
Telephone code08119
Vehicle registrationKA-43

ಜಾತ್ರೆ-ಉತ್ಸವ

ಬದಲಾಯಿಸಿ

ಹಮಾಮ-ಶಿವಪುರ ಗ್ರಾಮಗಳಲ್ಲಿ ಪ್ರಮುಖ ಜಾತ್ರೆಯಂದರೆ ಅರ್ಕಾವತಿ ನದಿಯ ದಡದಲ್ಲಿರುವ ಅರ್ಕಾವತಿ ಕ್ಷೇತ್ರದ ಜಾತ್ರೆಯು ತುಂಬಾ ಪ್ರಸಿದ್ಧವಾದ ಜಾತ್ರೆಯಾಗಿದೆ. ಹನುಮ ಜಯಂತಿ ಇಲ್ಲಿನ ಪ್ರಮುಖ ಉತ್ಸವವಾಗಿದೆ ಶಿವಪುರದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ಬಸವೇಶ್ವರ ದೇವಾಲಯಗಳು ಪ್ರಮುಖವಾಗಿವೆ.

ಜಲಾನಯನ ಪ್ರದೇಶ

ಬದಲಾಯಿಸಿ

ಹಮಾಮ ಶಿವಪುರ ಗ್ರಾಮಗಳು ಅರ್ಕಾವತಿ ನದಿಪಾತ್ರ ಗ್ರಾಮಗಳಾಗಿದ್ದು ಶಿವಪುರ ಗ್ರಾಮದಲ್ಲಿ ಕೆರೆ ಇದೆ.

ಪೌರಾಣಿಕ ನಾಟಕ

ಬದಲಾಯಿಸಿ

ಹಮಾಮ-ಶಿವಪುರ ಗ್ರಾಮಗಳು ದೊಡ್ಡಬಳ್ಳಾಪುರ ನಗರಕ್ಕೆ ಹೊಂದಿಕೊಂಡಿದ್ದರು ಇಲ್ಲಿನ ಗ್ರಾಮಸ್ಥರ ಪ್ರಮುಖ ಕಸುಬು ವ್ಯವಸಾಯವಾಗಿರುವುದರಿಂದ ಇಲ್ಲಿನ ಮಣ್ಣಿನ ಮಕ್ಕಳು ವರ್ಷಪೂರ್ತಿ ಹೊಲದಲ್ಲಿ ದುಡಿದು ವರ್ಷಾಂತ್ಯದಲ್ಲಿ ಬೇಸಿಗೆ ಬಿಡುವಿನಲ್ಲಿ ಬಣ್ಣಹಚ್ಚುವುದು ರೂಡಿ. ಇಲ್ಲಿನ ಪ್ರದರ್ಶನಗೊಳ್ಳುವ ಪ್ರಮುಖ ನಾಟಕಗಳೆಂದರೆ

  • ಶ್ರೀಕೃಷ್ಣ ಸಂಧಾನ / ಕುರುಕ್ಷೇತ್ರ
  • ಭೀಮ ವಿಜಯ
  • ಮೂರುವರೆ ವಜ್ರ
  • ರಾಮಾಂಜನೇಯ ಯುದ್ಧ
  • ರಾಮಾಯಣ

ಇವು ಪ್ರಮುಖವಾಗಿ ಪ್ರದರ್ಶನಗೊಳ್ಳುವ ನಾಟಕಗಳು.

ಶಿಕ್ಷಣ

ಬದಲಾಯಿಸಿ

ಹಮಾಮ-ಶಿವಪುರ ಗ್ರಾಮಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಳೆಗಳಿವೆ ಅವುಗಳೆಂದರೆ

  • ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ-ಹಮಾಮ್
  • ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ-ಶಿವಪುರ
  • ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ-ಶಿವಪುರ
  • ನವೋದಯ ಶಾಲೆ-ಶಿವಪುರ

ಅಂಚೆ ಕಛೇರಿ

ಬದಲಾಯಿಸಿ

ಭಾರತೀಯ ಅಂಚೆ ಮತ್ತು ತಂತಿ ಇಲಾಖೆಯ ದೊಡ್ಡಬಳ್ಳಾಪುರ ಉಪವಿಭಾಗದ ವ್ಯಾಪ್ತಿಗೆ ಶಿವಪುರ ಶಾಖೆ ಅಂಚೆ ಕಛೇರಿ ಬರುತ್ತದೆ. ಅಂಚೆ ಪೆಟ್ಟಿಗೆ ಸಂಖ್ಯೆ-561203.

ಕಂದಾಯ ಇಲಾಖೆ

ಬದಲಾಯಿಸಿ

ಕರ್ನಾಟಕ ಕಂದಾಯ ಇಲಾಖೆಯ ಗ್ರಾಮ ಲೇಕ್ಕಿಗರ ವೃತ್ತ ಕಛೇರಿಯು ಶೀವಪುರ ಗ್ರಾಮದಲ್ಲಿ ಇದ್ದು ಇಲ್ಲಿ ಗ್ರಾಮ ಲೇಕ್ಕಾಧಿಕಾರಿ ಹಾಗೂ ಜನನ-ಮರಣ ನೊಂದಣಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ.