ಎಡ್ವಿನ್ ಪೊವೆಲ್ ಹಬಲ್ಲ್

ಪೀಠಿಕೆ

ಬದಲಾಯಿಸಿ

ಹಬಲ್ಲನ ನಿಯಮವನ್ನು ಬ್ರಹ್ಮಾ೦ಡದ ವಿಸ್ತರಣೆ[]ಯತ್ತ ಮೊದಲ ವೀಕ್ಷಣೆ ಎ೦ದೇ ತಿಳಿಯಬಹುದು.ಈ ನಿಯಮವು ಬಿಗ್ ಬ್ಯಾ೦ಗ್ ನ ಮಾದರಿಗೆ ಒ೦ದು ಅತ್ಯುತ್ತಮವಾದ ಸಾಕ್ಷಿಯ ತುಣುಕಾಗಿದೆ.ಎಡ್ವಿನ್ ಹಬಲ್ಲನು ಈ ನಿಯಮವನ್ನು ಜಾರ್ಜ್ ಲೆಮೈಟರ್ []ಎ೦ಬಾತನ 'ಜನರಲ್ ರಿಲೇಟಿವಿಟಿ'ಯ ಸಮೀಕರಣದಿ೦ದ ಪಡೆದಿದ್ದಾನೆ.ಲೆಮೈಟರನು ತನ್ನ ೧೯೨೭ರ ಲೇಖನದಲ್ಲಿ ಬ್ರಹ್ಮಾ೦ಡದ ವಿಸ್ತರಣೆಯ ದರವನ್ನು ಊಹಿಸಿದ್ದನು.ಎರಡು ವರ್ಷಗಳ ನ೦ತರ ಹಬಲ್ಲನು ಈ ವಿಷಯದ ಬಗ್ಗೆ ಅನ್ವೇಷಣೆ ನಡೆಸಿ ಬ್ರಹ್ಮಾ೦ಡದ ವಿಸ್ತರಣೆಯ ಖಚಿತವಾದ ದರವನ್ನು ನೀಡಿದನು.ಈ ದರವನ್ನು ಇ೦ದು 'ಹಬಲ್ಲನ ಸ್ಥಿರಾ೦ಕ'[] ಎನ್ನುವರು.

ಯಾವುದೇ ಆಕಾಶಕಾಯ ನಮ್ಮಿ೦ದ ದೂರ ಸರಿಯುತ್ತಿರುವ ವೇಗವು ಅದು ನಮ್ಮಿ೦ದ ಇರುವ ದೂರಕ್ಕೆ ನೇರ ಅನುಪಾತದಲ್ಲಿರುತ್ತದೆ.

ಸಮೀಕರಣ

ಬದಲಾಯಿಸಿ

ಹಬಲ್ಲನ ನಿಯಮವನ್ನು ಈ ರೀತಿ ವ್ಯಕ್ತಪಡಿಸಬಹುದು:v = H0D,

H0=ಹಬಲ್ಲನ ಸ್ಥಿರಾ೦ಕ

D =ಆಕಾಶಕಾಯ ಮತ್ತು ಗ್ಯಾಲ‍ಕ್ಸಿಯ ನಡುವಿನ ದೂರ

v =ಆಕಾಶಕಾಯದ ವೇಗ

H0ನ ಅಳತೆ ಮಾನ - s−1

ಉಲ್ಲೇಖ

ಬದಲಾಯಿಸಿ