ಮಹಾಸ್ಫೋಟ

(ಮಹಾ ಸ್ಪೋಟ ಇಂದ ಪುನರ್ನಿರ್ದೇಶಿತ)

ಮಹಾ ಸ್ಪೋಟ ಅಥವಾ ಬ್ರಹ್ಮಾಂಡ ವಿಕಾಸ

ಬದಲಾಯಿಸಿ

ಬ್ರಹ್ಮಾಂಡದ ಹುಟ್ಟು ಮತ್ತು ಅದರ ಈಗಿನ ಆಯುಷ್ಯ :

  • ಪ್ರಖ್ಯಾತ ವಿಜ್ಞಾನಿ ಎಡ್ವಿನ್ ಹಬಲ್ ಮೊಟ್ಟ ಮೊದಲಿಗೆ 1920 ರಲ್ಲಿ ಈ ಬ್ರಹ್ಮಾಂಡದ ಸೃಷ್ಟಿ ಸುಮಾರು 12 ರಿಂದ 20 ಬಿಲಿಯನ್ ಅಥವಾ 1200-2000ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ತರ್ಕಿಸಿದ್ದನು (ಹಬಲ್ಲನ ನಿಯಮ). ಆದರೆ ಇತ್ತೀಚಿನ ಸಂಶೋಧನೆಗಳು ನಮ್ಮ ಬ್ರಹ್ಮಾಂಡದ ವಿಕಾಸ ಸುಮಾರು 13.75 ಬಿಲಿಯನ್ ಅಥವಾ 1375 (ಶೇಕಡ 0.11 ರಷ್ಟು ಮಾತ್ರ ವ್ಯತ್ಯಾಸ ಇರಬಹುದು) ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ತರ್ಕಿಸಿದ್ದಾರೆ. ಬಹಳಷ್ಟು ವಿಜ್ಞಾನಿಗಳು ಇದಕ್ಕೆ ಹೆಚ್ಚಿನ ಸಹಮತ ಹೊಂದಿದ್ದಾರೆ. ಆದ್ದರಿಂದ ಮಹಾಸ್ಪೋಟದ ಸಮಯದಿಂದ ಲೆಕ್ಕ ಹಾಕಿದರೆ ನಮ್ಮ ವಿಶ್ವದ ವಯಸ್ಸು ಸುಮಾರು 1375 (±11%) ಕೋಟಿ ವರ್ಷ.(ಕಾಸ್ಮಾಲಜಿ ಕಾಲ ಮಾಪನದಲ್ಲಿ) ಎಂದು ಹೇಳಬಹುದು.

(ಇದಕ್ಕೆ ಸಂಬಂದ ಪಟ್ಟ - ನಕ್ಷೆ ವಿವರಗಳು:[೧])

ಇತಿಹಾಸ ಮತ್ತು ಹಿಗ್ಸ್ ಬೋಸನ್ ಕಣ 4-7-2012ರ ಪ್ರಯೋಗ

ಬದಲಾಯಿಸಿ

 
ಯೂರೋಪಿನ ಸಂಶೋಧನಾ ಕೇಂದ್ರದಲ್ಲಿ 4-7-2012 ಮತ್ತು ಮಾರ್ಚ್ 2013ರ ರಲ್ಲಿ ಸ್ವಿಟ್ಜರ್‌ಲೆಂಡ್ ಹಾಗೂ ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, 100 ಮೀಟರ್ ಆಳದಲ್ಲಿ, 27 ಕಿಮೀ ಉದ್ದದ ಸುರಂಗದಲ್ಲಿ ಮಾಡಿದ ಪ್ರಯೋಗ
  • ವಿಶ್ವ ಸೃಷ್ಟಿಗೆ ಕಾರಣವಾದ ಈ ಫೋಟಾನ್ ಕಣವನ್ನು ಹಿಗ್ಸ್ ಬೋಸಾನ್ ಕಣವೆಂದು ಕರೆದಿದ್ದಾರೆ. ಮೊಟ್ಟ ಮೊದಲಿಗೆ ಬಂಗಾಳದ ಭೌತ ವಿಜ್ಞಾನಿ ಸತ್ಯೇಂದ್ರನಾಥ ಬೋಸ್ ರವರು ಸಾಪೇಕ್ಷ ಸಿದ್ದಾಂತದ ಪ್ರತಿಪಾದಕರು ಈಫೋಟನ ಕಣದ ಬಗ್ಗೆ ಹೇಳಿದ್ದರು. , ವಿಜ್ಞಾನಿ ಐನಸ್ಟೀನರು ಇವರ ಕಣ ಭೌತ ಸಿದ್ದಾಂತವನ್ನು ತಮ್ಮ ಸಾಪೇಕ್ಷ ಸಿದ್ದಾಂತದಲ್ಲಿ (ಕ್ವಾಂಟಮ್ ಮೆಕ್ಯಾನಿಕ್ಸ್) ಅಳವಡಿಸಿಕೊಂಡಿದ್ದರು. ಅದು ಬೋಸ್-ಐನಸ್ಟೀನ್ ಸಿದ್ದಾಂತ ಎಂದು ಹೆಸರಾಗಿದೆ.
  • ಬೋಸರವರು ಈ ಫೋಟಾನ್ ಕಣದ ಬಗ್ಗೆ ಒಂದು ಲೇಖನವನ್ನು ಬರೆದಿದ್ದರು ಅದನ್ನು ಮುಂದುವರೆಸಿ ಪೀಟರ್ ಹಿಗ್ಗ್ಸ್ ರವರು ಸಂಶೋಧನೆಯನ್ನು ಮುಂದುವರೆಸಿದರು. ಆದ್ದರಿಂದ ಈ ವಿಶ್ವ ಸೃಷ್ಟಿಗೆ ಕಾರಣವಾದ ಈ ಕಣವನ್ನು ಹಿಗ್ಸ್-ಬೋಸಾನ್ ಕಣವೆಂದುಕರೆಯುತ್ತಾರೆ.
  • ಇದರ ಹೆಚ್ಚಿನ ಅಧ್ಯಯನಕ್ಕೆ ಯೂರೋಪ್ ಪರಮಾಣು ಸಂಶೋಧನಾ ಕೇಂದ್ರದಲ್ಲಿ (ಸಿಇಆರ್‌ಎನ್), ಸ್ವಿಟ್ಜರ್‌ಲೆಂಡ್ - ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, 100 ಮೀಟರ್ ಆಳದಲ್ಲಿ, 27 ಕಿಮೀ ಉದ್ದದ ಸುರಂಗದಲ್ಲಿ ಕೊಳವೆ ಹಾಕಿ ಮಹಾಸ್ಪೋಟದ ಸಮಯದಲ್ಲಿ ಆದ ಕ್ರಿಯೆಯ ಅಧ್ಯಯನಕ್ಕೆ ಅಣಿಮಾಡಿದ್ದರು. ವಿರುದ್ಧದಿಕ್ಕಿನಲ್ಲಿ ಎರಡು ಫ್ರೋಟಾನ್ ಕಣಗಳನ್ನು ವೇಗವಾಗಿ ಚಲಿಸುವಂತೆ ಮಾಡಿ -ಡಿಕ್ಕಿ ಹೊಡೆಸಿ ಪರಿಣಾಮವನ್ನು ನೋಡುವ ಪ್ರಯೋಗ 2010 ಮತ್ತು 2011 ರಲ್ಲಿ ನೆಡೆದಿತ್ತು. ಅದು ಸ್ವಲ್ಪದರಲ್ಲಿ ವಿಫಲವಾಯಿತು.
  • 4 ಜುಲೈ 2012ರಂದು ಪುನಃ ಪ್ರಯೋಗ ಮಾಡಿದರು[1]/ಪುನಹ ಮಾರ್ಚಿ 2013ಪ್ರಯೋಗ ಮಾಡಿದರು. ಅದು ಹಿಗ್ಸ್-ಬೋಸನ್ ಕಣ (ದೇವಕಣ)ದ ಅಸ್ತಿತ್ವ ಶೇಕಡ 99ರಷ್ಟು ಸಫಲವಾಗಿದೆ ಎಂದು ಪೀಟರ್ ಹಿಗ್ಸ್ ರವರು ಹೇಳಿದ್ದಾರೆ. ಈ ಪ್ರಯೋಗದ ಕಣ ಕಣಭೌತಶಾಸ್ತ್ರದ ಹಿಗ್ಸ-ಬೋಸಾನ್ ಕಣವನ್ನೇ ಹೋಲುತ್ತದೆ ಎಂದಿದ್ದಾರೆ. ಅದನ್ನು ಕೆಲವರು ದೇವ ಕಣ ವೆಂದು ಕರೆದಿದ್ದಾರೆ. ಈ ವಿಶ್ವ 12 ವಿಭಿನ್ನ ಕಣಗಳಿಂದ ಹಾಗೂ ನಾಲ್ಕು ಶಕ್ತಿಗಳಿಂದ ಸೃಷ್ಟಿಯಾಗಿದೆ ಎಂಬುದು ಸಿದ್ದಾಂತ.
 
According to the Big Bang model, the Universe expanded from an extremely dense and hot state and continues to expand today. A common analogy explains that space itself is expanding, carrying galaxies with it, like spots on an inflating balloon. The graphic scheme above is an artist's concept illustrating the expansion of a portion of a flat universe.

ಪ್ಲ್ಯಾಂಕ್ ಯುಗ

ಬದಲಾಯಿಸಿ

ಒಂದು ಸೆಕೆಂಡಿನ ಋಣ ಘಾತ -43ದಿಂದ (ಛೇದಾಂಶ) -38 ವರೆಗೆ (1ಸ್ಠೆ10-43 ರಿಂದ 1ಸ್ಠೆ10-38)


  • ಇಂದಿನಿಂದ ಸುಮಾರು 1375 ಕೋಟಿ ವರ್ಷದ ಹಿಂದಿನ ಮಹಾಸ್ಪೋಟದ ಆರಂಭಕ್ಕೂ ಹಿಂದಿನ ಅತ್ಯಂತ ಕನಿಷ್ಟ ಹಿಂದಿನ ಸಮಯದಲ್ಲಿ ಮಹಾಸ್ಪೋಟದ ಆರಂಭ. ಅದಕ್ಕೆ ಫ್ಲಾಂಕ್ ಸಮಯ ಎಂದು ಕರೆದಿದ್ದಾರೆ. ಅದು 1375 ಕೋಟಿ ವರ್ಷದ ಹಿಂದಿನ ಯವುದೋ ಒಂದು ದಿನದ ಹಿಂದಿನ ಒಂದು ಸೆಕೆಂಡಿನ ಅತ್ಯಂತ ಚಿಕ್ಕ ಛೇದಾಂಶದ ಎಂದರೆ 10ರ ಋಣ ಘಾತ-43 (10 ಕ್ಕೆ ಪೊವೆರ್ ಆಫ್ -43 = 10-43< ಸೆಕೆಂಡ್ ಕಾಲದಲ್ಲಿ ವಿಶ್ವ ವಿಕಾಸ ಆರಂಭ ವಾದುದು. ಆ ಸೆಕೆಂಡಿನ ಕನಿಷ್ಟ ಛೇದಾಂಶಕ್ಕೆ (10 ಛೇದಾಂಶ -40 =10-40) ಹಬಲ್‌ನ ಸ್ಥಿರ ಸಂಖ್ಯೆ ಎಂದು ಕರೆದಿದ್ದಾರೆ. ಅದಕ್ಕಿಂತ ಹಿಂದಿನ (ಎಂದರೆ ಒಂದು ಸೆಕೆಂಡಿನ ಇನ್ನೂ ಸಣ್ಣ ವಿಭಾಗವನ್ನು) ಕಾಲವನ್ನು ಗುರುತಿಸಲು ಸಾಧ್ಯವಿಲ್ಲ ಎಂಬುದು ವಿಜ್ಞಾನಿ ಹಬಲ್‌ನ ಲೆಕ್ಕ.
  • ಇಂದಿನ ಈ ವಿಶಾಲ ವಿಶ್ವ ಸೃಷ್ಟಿಗೆ ಮೊದಲು ಒಂದೇ ಒಂದು ಚಿಕ್ಕ ಕಣ ಕಾರಣವೆಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ, ಪರಮಾಣುವಿನಲ್ಲಿರುವ ಒಂದು ಪ್ರೋಟಾನಿನ, ಸುಮಾರು ಕೋಟಿ-ಕೋಟಿ ಭಾಗಕ್ಕಿಂತಲೂ ಚಿಕ್ಕದಾದ ಎಲ್ಲದಕ್ಕೂ ಮೂಲವಾದ ಫೋಟಾನ್(Photon) ಕಣದಿಂದ ಈ ವಿಶ್ವ ಸೃಷ್ಟಿಯಾಯಿತು ಎಂಬುದು ಈಗ ಬಹಳಷ್ಟು ವಿಜ್ಞಾನಿಗಳ ತೀರ್ಮಾನ.

ಪ್ರೋಟಾನ್ ಉಪ-ಅಣು

ಬದಲಾಯಿಸಿ
 
ಫ್ರೋಟಾನ್ ಉಪ-ಅಣುವಿನ ಒಳಗಿರುವ ಉಪಕಣಗಳು -ಅದರಲ್ಲಿ ಒಂದು ವಿಶ್ವ ಸೃಷ್ಟಿಗೆ ಕಾರಣವಾದ ಹಿಗ್ಸ್-ಬೋಸಾನ್ ಕಣ.
ಇದು ಒಂದು ಉಪ-ಅಣುವಿನ-ಪ್ರೋಟಾನ್ -ಒಳಗಿನ ಮೂರು ಉಪ-ಕಣಗಳು; ಕ್ವಾರ್ಕ್ಎಂದುಕರೆಯಲ್ಪಡುತ್ತವೆ. ಒಂದು ಉಪ ಕಣ ಫೋಟಾನ್ ಕಣ; ಅದರ ತೂಕ, ಅಳತೆ ಗುಣಗಳು ಮಾನವನ ಊಹೆಗೂಸಿಲುಕದ -ಕೇವಲ ಗಣಿತದ ಭಾಷೆ-ಲೆಕ್ಕಕೆ ಮಾತ್ರ ಸಿಗುವಂತದು ಇದರಲ್ಲಿರುವ ಪ್ರತಿಯೋದು ಪಾಸಿಟಿವ್ ಫೋರ್ಸಿನ ಧನ ಕಣಕ್ಕೆ ಋಣ ಫೋರ್ಸಿನ ಕಣವಿರುವುದಾಗಿ ಹೇಳಲಾಗಿದೆ, ಅದೇ ರೀತಿ ತೂಕದಲ್ಲೂ ಆರು ಧನ-ಕಣ ವಿರುದ್ಧವಾಗಿ ಆರು ಋಣ-ಕಣ ಇರುವುದು. ಈ ಜಗತ್ತಿನ ಎಲ್ಲಾ ವಸ್ತುಗಳೂ ಈ ಮೂಲ ಆರು ಉಪಕಣಗಳಿಂದ ಆಗಿದೆ ಎಂಬುದು ಕಣ ಭೌತಶಾಸ್ತ್ರದ ಸಿದ್ಧಾಂತ. ನೋಡಿ:- (https://en.wikipedia.org/wiki/Proton)
 
ಸ್ಟೀಫನ್‌ ಹಾಕಿಂಗ್:-(ಕ್ಲಿಕಿಸಿದರೆ ಫೋಟೋ ಬರತ್ತದೆ) ಸ್ಟೀಫನ್ ಹಾಕಿಂಗ್ ಹೆಸರಾಂತ ಖಗೋಲವಿಜ್ಞಾನಿ ಹಾಗೂ ಖಗೋಲ ಗಣಿತಜ್ಞನು (ದೇವ ಕಣದ ಮೇಲಿನ ಪ್ರಯೋಗ ಕುರಿತು) ದೇವಕಣವು ವಿಶ್ವನ್ನೇ ಕೊನೆಗಾಣಿಸುವ ಶಕ್ತಿಯುಳ್ಳದ್ದು ಎಂದಿದ್ದಾನೆ. ಹಿಗ್ಗ್ ಕಣದಲ್ಲಿ ನಾವು ಅರಿಯಲಾಗದ ಅಗಾಧಶಕ್ತಿಯಿದೆ. ಅದು ಈಗಲೇ ಆಗುವುದೆಂದು ಹೇಳಲಾಗದು. ಆದರೆ ಆ ಕಣದ ಅಗಾಧ ಶಕ್ತಿಯನ್ನು ಉಪೇಕ್ಷೆ ಮಾಡುವಂತಿಲ್ಲ ಎಂದಿದ್ದಾನೆ (ಲಂಡನ್dt.8-9-2014) (ಶಿರೋಲೇಖ-ಗೋಗಲ್: Stephen Hawking warns God particle has potential to 'end world' ANI, Sep 8, 2014);world/articleshow/42013982.cms
  • ಫೋಟಾನ್ ಕಣ: (ಒಂದು ಪ್ರೋಟಾನಿನ ಭಾರವು 1.6726x*10(ಋಣ ಘಾತ-27 =10<suಠಿ>-27) ಕಿ.ಗ್ರಾಂ (ಎಂದರೆ 1.6726ನ್ನು ಒಂದರ ಮುಂದೆ 27 ಸೊನ್ನೆಗಳಿರುವ ಸಂಖ್ಯೆಯಿಂದ ಭಾಗಿಸುವುದು)(ಆವರಣದಲ್ಲಿರುವ ಅಂಕೆಗಳನ್ನು ಪವರ್ ಆಫ್ ಎಂದು ಓದಿಕೊಳ್ಳಿ) .  ; ಅದರ ಅಣು-ಮಾನ ತೂಕ 5.489 x 10(ಋಣ ಘಾತ-4 =10<suಠಿ>-4) ; ಅದಕ್ಕಿಂತ ತೀರಾ ಚಿಕ್ಕದು ಫೋಟಾನ್ ಅದೊಂದು ಮೂಲ ಕಣ - ( ಫೋಟಾನಿನ ಅಣುಮಾನ ತೂಕ 1.0734258810(ಋಣ ಘಾತ-30) ಅದಕ್ಕೆ ತೂಕವೇ ಇಲ್ಲವೆಂದು ಹೇಳುತ್ತಾರೆ. ಅದು ನಿರ್ವಾತ ಪ್ರದೇಶದಲ್ಲಿ 10(ಋಣ ಘಾತ-43=10-43) ಸೆಕೆಂಡಿನಲ್ಲಿ ಕನಿಷ್ಟ-ದೂರ ( 73.2+3.1 ವಿಲ್ಕಿನ್ ಸನ್ ನಿಯಮ)) ಕ್ರಮಿಸುವ ಬೆಳಕಿನ ಕಿಡಿ. ಅದನ್ನು ಪ್ಲಾಂಕ್ ಸಮಯ (ಕನಿಷ್ಟ ಸಮಯ) ಎಂದು ಕರೆದಿದ್ದಾರೆ. ಆ ಕನಿಷ್ಟ ದೂರವನ್ನು 1.616252 ಘಿ 10(ಋಣ ಘಾತ-35=1.616252*10-35 ) ಎಂಬುದು ದೂರದ ಮೂಲಮಾನ ಆಗಿದೆ. ಭೌತ ಶಾಸ್ತ್ರದಲ್ಲಿ ಫೋಟಾನ್ ವಿದ್ಯತ್ ಕಾಂತೀಯ ರೇಡಿಯೇಶನ್ ಮತ್ತು ವಿದ್ಯತ್ ಕಾಂತೀಯ ಶಕ್ತಿಯಾಗಿದೆ.
  • ಆದರೆ ಅದು ಎಂದರೆ ಊಹೆಗೆ ನಿಲುಕದಷ್ಟು ಆ ಚಿಕ್ಕ ಕಣ ಅಥವಾ ಕಿಡಿ (ಫೋಟಾನ್ - ಕ್ವಾರ್ಕ್ ನ ಮೇಲಿನ ಎರಡು ಕಣಗಳಲ್ಲಿ ಒಂದು )ಒಳಗೇ ಶಾಖದಿಂದ ಉಬ್ಬಿ ತೂಕವನ್ನೂ ಗಳಿಸಿಕೊಳ್ಳುತ್ತಾ, ಒಂದು ಸೆಕೆಂಡಿನ 10(ಋಣ ಘಾತ-40) ದಿಂದ 40(ಋಣ ಘಾತ-38) ಕಾಲದಲ್ಲಿ ಸ್ವಲ್ಪ ಉಬ್ಬಿ ಆ ಛೇದಾಂಶ ಸೆಕೆಂಡಿನಲ್ಲಿ ಒಂದು ನೆಲ್ಲಿಕಾಯಿ ಅಥವಾ ಒಂದು ಲಿಂಬೆ ಹಣ್ಣಿನ ಗಾತ್ರದಷ್ಠು ದಪ್ಪವಾಯಿತು ಎಂಬುದು, ವಿಶ್ವ ವಿಕಾಸದ ಕೆಲವು ಗಣಿತಜ್ಞರ ಲೆಕ್ಕಾಚಾರ. ಆಗ ಅದರಿಂದ ಆಚೆ ಖಾಲಿ ಸ್ಥಳ ಆಥವಾ ಆಕಾಶ ಎಂಬುದು ಇರಲಿಲ್ಲ. ಸಮಯ ಎಂಬುದೂ ಇರಲಿಲ್ಲ. ಆಕಾಶ ಅಥವ ಸ್ಪೇಸ್ ಮತ್ತು ಸಮಯ ಅದರೊಳಗೇ ಇದ್ದು, ಅವೆರಡನ್ನೂ ಅದು ಉಂಟುಮಾಡಿಕೊಳ್ಳುತ್ತಿತ್ತು. ಆಗ ಅದು ಅಸಾಧಾರಣ ಊಹೆಗೂ ನಿಲುಕದ ತೂಕವನ್ನು ಹೊಂದಿ, 1000 ಬಿಲಿಯನ್ ಡಿಗ್ರಿ ಸೆಲ್ಸಿಯಸ್ ಗೂ ಹೆಚ್ಚಿನ ಶಾಖದಿಂದ ಒಳಗೇ ಕುದಿಯುತ್ತಿತ್ತು. ಆಗ ಯಾವ ಕಣವೂ ಈಗಿನ ಸಹಜ ಸ್ಥಿತಿಯಲ್ಲಿರದೆ ಪ್ಲಾಸ್ಮಾ ಸ್ಥಿ ತಿ ಯಲ್ಲಿತ್ತು. 10(ಋಣ ಘಾತ<suಠಿ>-40) ಸೆಕೆಂಡು ಎಂದರೆ, 1 ಸೆಕೆಂಡನ್ನು , 1 ರ ಮುಂದೆ 40 ಸೊನ್ನೆಗಳಿರುವ ಅಂಕೆಯಿಂದ ಭಾಗಿಸಿದರೆ ಬರುವ ಕಾಲ, ಹಾಗೆಯೇ ಉಳಿದ ಲೆಕ್ಕ. ಆದರೆ ಅದು ಊಹೆಗೆ ನಿಲುಕದ ಸಮಯ; ಕೇವಲ ಗಣಿತದ ಸಾಧಿತ ಸಂಖ್ಯೆ.

(ಇಂಗ್ಲಿಷ್ ಅಂಕೆಗಳಲ್ಲಿ: (ಒಂದು ಪ್ರೋಟಾನಿನ ಭಾರವು 1.6726x*10(ಋಣ ಘಾತ-27 =10-27) ಕಿ.ಗ್ರಾಂ (ಎಂದರೆ 1.6726ನ್ನು ಒಂದರ ಮುಂದೆ 27 ಸೊನ್ನೆಗಳಿರುವ ಸಂಖ್ಯೆಯಿಂದ ಭಾಗಿಸುವುದು)(ಆವರಣದಲ್ಲಿರುವ ಅಂಕೆಗಳನ್ನು ಪವರ್ ಆಫ್ ಎಂದು ಓದಿಕೊಳ್ಳಿ) .  ; ಅದರ ಅಣು-ಮಾನ ತೂಕ 5.489 x 10(ಋಣ ಘಾತ-4 =10-4) ; ಅದಕ್ಕಿಂತ ತೀರಾ ಚಿಕ್ಕದು ಫೋಟಾನ್ ಅದೊಂದು ಮೂಲ ಕಣ - ( ಫೋಟಾನಿನ ಅಣುಮಾನ ತೂಕ 1.0734258810(ಋಣ ಘಾತ-30) ಅದಕ್ಕೆ ತೂಕವೇ ಇಲ್ಲವೆಂದು ಹೇಳುತ್ತಾರೆ. ಅದು ನಿರ್ವಾತ ಪ್ರದೇಶದಲ್ಲಿ 10(ಋಣ ಘಾತ-43=10-43) ಸೆಕೆಂಡಿನಲ್ಲಿ ಕನಿಷ್ಟ-ದೂರ ( 73.2+3.1 ವಿಲ್ಕಿನ್ ಸನ್ ನಿಯಮ)) ಕ್ರಮಿಸುವ ಬೆಳಕಿನ ಕಿಡಿ. ಅದನ್ನು ಪ್ಲಾಂಕ್ ಸಮಯ (ಕನಿಷ್ಟ ಸಮಯ) ಎಂದು ಕರೆದಿದ್ದಾರೆ. ಆ ಕನಿಷ್ಟ ದೂರವನ್ನು 1.616252 X 10(ಋಣ ಘಾತ-35=1.616252*10-35 ) ಎಂಬುದು ದೂರದ ಮೂಲಮಾನ ಆಗಿದೆ. ಭೌತ ಶಾಸ್ತ್ರದಲ್ಲಿ ಫೋಟಾನ್ ವಿದ್ಯತ್ ಕಾಂತೀಯ ರೇಡಿಯೇಶನ್ ಮತ್ತು ವಿದ್ಯತ್ ಕಾಂತೀಯ ಶಕ್ತಿಯಾಗಿದೆ. ಆದರೆ ಅದು ಎಂದರೆ ಊಹೆಗೆ ನಿಲುಕದಷ್ಟು ಆ ಚಿಕ್ಕ ಕಣ ಅಥವಾ ಕಿಡಿ (ಫೋಟಾನ್ - ಕ್ವಾರ್ಕ್ ನ ಮೇಲಿನ ಎರಡು ಕಣಗಳಲ್ಲಿ ಒಂದು )ಒಳಗೇ ಶಾಖದಿಂದ ಉಬ್ಬಿ ತೂಕವನ್ನೂ ಗಳಿಸಿಕೊಳ್ಳುತ್ತಾ, ಒಂದು ಸೆಕೆಂಡಿನ 10ರ(ಋಣ ಘಾತ-40) ದಿಂದ 40(ಋಣ ಘಾತ-38) ಕಾಲದಲ್ಲಿ ಸ್ವಲ್ಪ ಉಬ್ಬಿ ಆ ಛೇದಾಂಶ ಸೆಕೆಂಡಿನಲ್ಲಿ ಒಂದು ನೆಲ್ಲಿಕಾಯಿ ಅಥವಾ ಒಂದು ಲಿಂಬೆ ಹಣ್ಣಿನ ಗಾತ್ರದಷ್ಠು ದಪ್ಪವಾಯಿತು ಎಂಬುದು, ವಿಶ್ವ ವಿಕಾಸದ ಕೆಲವು ಗಣಿತಜ್ಞರ ಲೆಕ್ಕಾಚಾರ. ಆಗ ಅದರಿಂದ ಆಚೆ ಖಾಲಿ ಸ್ಥಳ ಆಥವಾ ಆಕಾಶ ಎಂಬುದು ಇರಲಿಲ್ಲ. ಸಮಯ ಎಂಬುದೂ ಇರಲಿಲ್ಲ. ಆಕಾಶ ಅಥವ ಸ್ಪೇಸ್ ಮತ್ತು ಸಮಯ ಅದರೊಳಗೇ ಇದ್ದು, ಅವೆರಡನ್ನೂ ಅದು ಉಂಟುಮಾಡಿಕೊಳ್ಳುತ್ತಿತ್ತು. ಆಗ ಅದು ಅಸಾಧಾರಣ ಊಹೆಗೂ ನಿಲುಕದ ತೂಕವನ್ನು ಹೊಂದಿ, 1000 ಬಿಲಿಯನ್ ಡಿಗ್ರಿ ಸೆಲ್ಸಿಯಸ್ ಗೂ ಹೆಚ್ಚಿನ ಶಾಖದಿಂದ ಒಳಗೇ ಕುದಿಯುತ್ತಿತ್ತು. ಆಗ ಯಾವ ಕಣವೂ ಈಗಿನ ಸಹಜ ಸ್ಥಿತಿಯಲ್ಲಿರದೆ ಪ್ಲಾಸ್ಮಾ ಸ್ಥಿ ತಿ ಯಲ್ಲಿತ್ತು. 10(ಋಣ ಘಾತ-40) ಸೆಕೆಂಡು ಎಂದರೆ, 1 ಸೆಕೆಂಡನ್ನು , 1 ರ ಮುಂದೆ 40 ಸೊನ್ನೆಗಳಿರುವ ಅಂಕೆಯಿಂದ ಭಾಗಿಸಿದರೆ ಬರುವ ಕಾಲ, ಹಾಗೆಯೇ ಉಳಿದ ಲೆಕ್ಕ. ಆದರೆ ಅದು ಊಹೆಗೆ ನಿಲುಕದ ಸಮಯ; ಕೇವಲ ಗಣಿತದ ಸಾಧಿತ ಸಂಖ್ಯೆ.) ( ಗ್ರ್ಯಾಫಿಕಲ್ ಟೈಮ್ ಲೈನ್ ಆಫ್ ಬಿಗ್ ಬ್ಯಾಂಗ್ -ವಿಕಿಪೀಡಿಯಾ ನೋಡಿ)

ಉಬ್ಬರ ಸಮಯ

ಬದಲಾಯಿಸಿ
ಒಂದು ಸೆಕೆಂಡಿನ ಋಣ ಘಾತ -೩೬ ದಿಂದ (ಛೇದಾಂಶ)-೩೨ ವರೆಗೆ(೧ ಸೆ.ನ ೧೦-೩೬ರಿಂದ ೧೦-೩೨)
(ಒಂದು ಸೆಕೆಂಡಿನ ಋಣ ಘಾತ -36 ದಿಂದ (ಛೇದಾಂಶ)-32 ವರೆಗೆ(1 ಸೆ.ನ 10<suಠಿ>-36</suಠಿ>ರಿಂದ 10<suಠಿ>-32</suಠಿ>)

  • ಅಸಾಧಾರಣ ಶಾಖದಿಂದ ಒಳಗೇ ಕುದಿಯತ್ತಿದ್ದ ಅದು ಈ ಛೇದಾಂಶ ಕ್ಷಣದಲ್ಲಿ ಅಸಾಧಾರಣ ವೇಗದಲ್ಲಿ ಶಾಖವನ್ನು ಕಡಿಮೆ ಮಾಡಿಕೊಳ್ಳುತ್ತಾ, ಒಂದು ಸೆಕೆಂಡಿನ ಋಣ ಘಾತ(ಛೇದಾಂಶ) -36 ದಿಂದ -32ವರೆಗಿನ (10-36ರಿಂದ 10-32) ಸಮಯದಲ್ಲಿ ಸುಮಾರು ಹೆಚ್ಚು ಕಡಿಮೆ ಕೆಲವು ಬಿಲಿಯನ್ ಡಿಗ್ರಿ ಸೆಲ್ಸಿಯಸ್ ಶಾಖಕ್ಕೆ ಇಳಿದಿತ್ತು. ಸೃಷ್ಠಿಯ ಈ ಸಮಯ ವನ್ನು ಉಬ್ಬರ-ಸಮಯ (ಇನ್‌ಫ್ಲೇಶನ್) ವೆಂದು ಕರೆದಿದ್ದಾರೆ (ಸೂರ್ಯನ ಮೇಲ್ಮೈ ಶಾಖ 6000 ಡಿಗ್ರಿ ಸೆಲ್ಸಿಯಸ್.) ಈ ಉಬ್ಬರ ಸಮಯದಲ್ಲಿ ಅಣು, ಪರಮಾಣು, ಕಣಗಳು ಇರಲಿಲ್ಲ. ಆ ಅತಿ ಶಾಖಕ್ಕೆ ಕರಗಿ -ಶಕ್ತಿಯಾಗಿ -ಪುನಃ ಫೋಟೋನ್ ಆಗಿ, ಎಲ್ಲಾ ಕಡೆ ಒಂದೇ ಬಗೆಯ ಅಯಸ್ಕಾಂತೀಯ ಶಕ್ತಿ ಇತ್ತು. ಈ ಸಿದ್ಧಾಂತ ಈಗಾಗಲೇ ಇರುವ ಶಕ್ತಿ ಸಿದ್ಧಾಂತಕ್ಕೆ ಹೊಂದುವುದೆಂದು ವಿಜ್ಞಾನಿಗಳು ಒಪ್ಪಿದ್ದಾರೆ.
  • ಈ ಉಬ್ಬರಸಮಯದಲ್ಲಿ ಒಂದೇ ಆಗಿದ್ದ ಮೂಲ ಪ್ರಕೃತಿ ಶಕ್ತಿಯು, ಇಂದು ಕಾಣುವ ನಾಲ್ಕು ಮೂಲಭೂತ ಶಕ್ತಿ ಗಳಾಗಿ ವಿಭಜನೆಗೊಂಡಿತು. 1 ; ಆಯಸ್ಕಾಂತ ಶಕ್ತಿಮೂಲ(ಫೋರ್ಸ್) (ಕಾಂತ ತ್ವ) (ಗ್ರಾವಿಟೇಶನ್), 2: ವಿದ್ಯತ್ ಕಾಂತೀಯ ತರಂಗ (ಎಲೆಕ್ಟ್ರೋಮೆಗ್ನೇಟಿಸಮ್), 3,4, : ಕಣಭೌತಶಾಸ್ತ್ರದ ಪ್ರಬಲ ಮತ್ತು ದುರ್ಬಲ (ಫೋರ್ಸ್) ಶಕ್ತಿಮೂಲ. ಇದಲ್ಲದೆ ಸ್ವಾಭಾವಿಕವಾಗಿ, ಅಲ್ಪಾಯು-ವಿಕಾಂತತ್ವ ದ (ಆಂಟಿ ಗ್ರ್ಯಾವಿಟಿ) ಉಗಮ. ಇದಕ್ಕೆ ಮಹಾ ಮೂಲ ಸಂಯೋಜನ ಸಿದ್ಧಾಂತ ಎಂದು ಕರೆದಿದ್ದಾರೆ. (ದಿ ಗ್ರ್ಯಾಂಡ್ ಯೂನಿಫಿಕೇಶನ್ ಥಿಯರಿ;)) ವಿಶ್ವವು 10-12 ಸೆಕೆಂಡ್ ಪ್ರಾಯವಿದ್ದಾಗ ಇಲೆಕ್ಟ್ರೊದುರ್ಬಲ ಮೂಲಶಕ್ತಿ ಒಡೆದು ಇಬ್ಬಾಗವಾಗಿ (ಇಲೆಕ್ಟ್ರೊವೀಕ್ ಫೋರ್ಸ್) ರೇಡಿಯೋ ಆಕ್ಟಿವಿಟಿ ಮತ್ತು ಇಲೆಕ್ಟ್ರೋಮ್ಯಗ್ನಾಟಿಸಮ್ ಆಯಿತು; ಅವನ್ನು ಅವೇ ನಿಯಂತ್ರಿಸುತ್ತದೆ
  • ಅಸಾಧಾರಣ ಶಾಖದಿಂದ ಒಳಗೇ ಕುದಿಯತ್ತಿದ್ದ ಅದು ಈ ಛೇದಾಂಶ ಕ್ಷಣದಲ್ಲಿ ಅಸಾಧಾರಣ ವೇಗದಲ್ಲಿ ಶಾಖವನ್ನು ಕಡಿಮೆ ಮಾಡಿಕೊಳ್ಳುತ್ತಾ, ಒಂದು ಸೆಕೆಂಡಿನ ಋಣ ಘಾತ(ಛೇದಾಂಶ) -36 ದಿಂದ -32ವರೆಗಿನ (10-36ರಿಂದ 10-32) ಸಮಯದಲ್ಲಿ ಸುಮಾರು ಹೆಚ್ಚು ಕಡಿಮೆ ಕೆಲವು ಬಿಲಿಯನ್ ಡಿಗ್ರಿ ಸೆಲ್ಸಿಯಸ್ ಶಾಖಕ್ಕೆ ಇಳಿದಿತ್ತು. ಸೃಷ್ಠಿಯ ಈ ಸಮಯ ವನ್ನು ಉಬ್ಬರ-ಸಮಯ (ಇನ್‌ಫ್ಲೇಶನ್) ವೆಂದು ಕರೆದಿದ್ದಾರೆ (ಸೂರ್ಯನ ಮೇಲ್ಮೈ ಶಾಖ 6000 ಡಿಗ್ರಿ ಸೆಲ್ಸಿಯಸ್.) ಈ ಉಬ್ಬರ ಸಮಯದಲ್ಲಿ ಅಣು, ಪರಮಾಣು, ಕಣಗಳು ಇರಲಿಲ್ಲ. ಆ ಅತಿ ಶಾಖಕ್ಕೆ ಕರಗಿ -ಶಕ್ತಿಯಾಗಿ -ಪುನಃ ಫೋಟೋನ್ ಆಗಿ, ಎಲ್ಲಾ ಕಡೆ ಒಂದೇ ಬಗೆಯ ಅಯಸ್ಕಾಂತೀಯ ಶಕ್ತಿ ಇತ್ತು. ಈ ಸಿದ್ಧಾಂತ ಈಗಾಗಲೇ ಇರುವ ಶಕ್ತಿ ಸಿದ್ಧಾಂತಕ್ಕೆ ಹೊಂದುವುದೆಂದು ವಿಜ್ಞಾನಿಗಳು ಒಪ್ಪಿದ್ದಾರೆ.
  • ಈ ಉಬ್ಬರಸಮಯದಲ್ಲಿ ಒಂದೇ ಆಗಿದ್ದ ಮೂಲ ಪ್ರಕೃತಿ ಶಕ್ತಿಯು, ಇಂದು ಕಾಣುವ ನಾಲ್ಕು ಮೂಲಭೂತ ಶಕ್ತಿ ಗಳಾಗಿ ವಿಭಜನೆಗೊಂಡಿತು. 1 ; ಆಯಸ್ಕಾಂತ ಶಕ್ತಿಮೂಲ(ಫೋರ್ಸ್) (ಕಾಂತ ತ್ವ) (ಗ್ರಾವಿಟೇಶನ್), 2: ವಿದ್ಯತ್ ಕಾಂತೀಯ ತರಂಗ (ಎಲೆಕ್ಟ್ರೋಮೆಗ್ನೇಟಿಸಮ್), 3,4, : ಕಣಭೌತಶಾಸ್ತ್ರದ ಪ್ರಬಲ ಮತ್ತು ದುರ್ಬಲ (ಫೋರ್ಸ್) ಶಕ್ತಿಮೂಲ. ಇದಲ್ಲದೆ ಸ್ವಾಭಾವಿಕವಾಗಿ, ಅಲ್ಪಾಯು-ವಿಕಾಂತತ್ವ ದ (ಆಂಟಿ ಗ್ರ್ಯಾವಿಟಿ) ಉಗಮ. ಇದಕ್ಕೆ ಮಹಾ ಮೂಲ ಸಂಯೋಜನ ಸಿದ್ಧಾಂತ ಎಂದು ಕರೆದಿದ್ದಾರೆ. (ದಿ ಗ್ರ್ಯಾಂಡ್ ಯೂನಿಫಿಕೇಶನ್ ಥಿಯರಿ;)) ವಿಶ್ವವು 10-12 ಸೆಕೆಂಡ್ ಪ್ರಾಯವಿದ್ದಾಗ ಇಲೆಕ್ಟ್ರೊದುರ್ಬಲ ಮೂಲಶಕ್ತಿ ಒಡೆದು ಇಬ್ಬಾಗವಾಗಿ (ಇಲೆಕ್ಟ್ರೊವೀಕ್ ಫೋರ್ಸ್) ರೇಡಿಯೋ ಆಕ್ಟಿವಿಟಿ ಮತ್ತು ಇಲೆಕ್ಟ್ರೋಮ್ಯಗ್ನಾಟಿಸಮ್ ಆಯಿತು; ಅವನ್ನು ಅವೇ ನಿಯಂತ್ರಿಸುತ್ತದೆ

ಕ್ವಾರ್ಕ್-ಯುಗ

ಬದಲಾಯಿಸಿ

(ಒಂದು ಸೆಕೆಂಡಿನ ಋಣ ಘಾತ -32ರಿಂದ -12 ರಿಂದ -6 ) :


  • ವಿಶ್ವವು ಒಂದು ಸೆಕೆಂಡಿನ ಋಣ ಘಾತ -12 ಸೆಕೆಂಡ್ ಪ್ರಾಯವಿದ್ದಾಗ ಇಲೆಕ್ಟ್ರೊದುರ್ಬಲ ಮೂಲಶಕ್ತಿ ಒಡೆದು ಇಬ್ಬಾಗವಾಗಿ (ಇಲೆಕ್ಟ್ರೊವೀಕ್ ಫೋರ್ಸ್) ರೇಡಿಯೋ ಆಕ್ಟಿವಿಟಿ ಮತ್ತು ಇಲೆಕ್ಟ್ರೋಮ್ಯಗ್ನಾಟಿಸಮ್ ಆಯಿತು; ಅವನ್ನು ಅವೇ ನಿಯಂತ್ರಿಸುತ್ತದೆ ಇದೇ ವೇಗದ ಛೇದಾಂಶ ಕ್ಷಣದಲ್ಲಿ ,ಒಂದು ಸೆಕೆಂಡಿನ ಋಣ ಘಾತ -2 ಸಮಯಕ್ಕೆ ಬಂದಾಗ ಜಲಜನಕದ ಪರಮಾಣು ಬೀಜದ ಉತ್ಪತ್ತಿ ಆಯಿತು, ಸಾರಜನಕದ ಪರಮಣುಗಳು ಪರಸ್ಪರ ಘರ್ಷಣೆ ಹೊಂದಿ ನಾಶವಾಗುತ್ತಿದ್ದವು. ಒಂದು ಸೆಕೆಂಡಿನ ಋಣ ಘಾತ -0ಸೆಕೆಂಡಿನ ಸಮಯದ ನಂತರದ ಕ್ರಿಯೆ ಸಾರಜನಕದ ಪರಮಾಣುಗಳು ನಾಶವಾಗುವುದು ನಿಂತು ಸ್ಥಿರ ಪರಮಾಣುಗಳ ರಚನೆ ಯಾಗುವುದು ಆರಂಭವಾಯಿತು. ಇದಕ್ಕೆ ಹೇಡ್ರೋನ್ ಯುಗ ಎಂದು ಕರೆದಿದ್ದಾರೆ. (ಹೇಡ್ರೋನ ಪ್ರೋಟಾನ್ ಮತ್ತು ನೂಟ್ರಾನುಗಳ ಸಂಯುಕ್ತ ಕಣ) ಈಗ ವಿಶ್ವ ವಿಕಾಸ ಆರಂಭವಾಗಿ ಒಂದು ಸೆಕೆಂಡ್ ಕಳೆದಿದೆ.

ಲೆಪ್ಟೋನ ಯುಗ:

ಬದಲಾಯಿಸಿ

  • ಲೆಪ್ಟೋನ ಯುಗ: 1ರಿಂದ 10ಸೆಕೆಂಡಿನ ವರೆಗ
  • ಸೃಷ್ಠಿಯ ಆರಂಭ :
  • ಹೀಗೆ ಛೇದಾಂಶ ಕ್ಷಣದಲ್ಲಿ ಸ್ವಲ್ಪ ತಣ್ಣಗಾಗುತ್ತಾ 1 (10)ಸೆಕೆಂಡಿನ ಸಮಯಕ್ಕೆ ಬಂದಾಗ ಮತ್ತೂ ತಣಿದು ಕಣಗಳು-ಪ್ರೋಟಾನು ನ್ಯೂಟ್ರಾಣು, ಗಳು ಸ್ಥಿರ ಸ್ಥಿತಿಗೆ ತಲುಪಿದ್ದವು. ಆಗ ಶಾಖವು ಇನ್ನೂ ಅತಿಯಾಗಿದ್ದು ಎಲೆಕ್ಟ್ರಾನಗಳು, ನ್ಯೂಟ್ರಾನು, ಪ್ರೋಟಾನುಗಳ ಜೊತೆ ಸೇರಿ ಅವನ್ನು ಅದಲು ಬದಲು ಮಾಡುತಿದ್ದವು. ಲೆಪ್ಟೊನ್ ಮತ್ತು ಆಂಟಿ ಲೆಪ್ಟೋನ್ ಪರಸ್ಪರ ನಾಶ ಮಾಡುತ್ತಿದ್ದವು. ಅದುನಿಂತು ಅಣುಗಳಿಗೆ ಸ್ಥಿರತೆ ಬಂದಿತು. ಈಗ ಲೆಪ್ಟೋನ್ ಗಳ ಸಂಖ್ಯೆ ತೀರಾ ಕಡಿಮೆಯಾಗಿ ಫೋಟಾನ್ ಗಳು ಹೆಚ್ಚಿದವು. ಈಶಾಖ ಮತ್ತು ತಿಕ್ಕಾಟದಲ್ಲಿ ನಾಶವಾಗದೆ ಕೆಲವು ನ್ಯೂಟ್ರಾನ್ ಗಳು ಕೇಂದ್ರ ಬೀಜದಲ್ಲಿ ಉಳಿದು ಪರಮಾಣುಗಳಿಗೆ ಸ್ಥಿರತೆಯನ್ನು ಕೊಟ್ಟವು. ಹಾಗಾಗಿ ನಾವು ಈ ವಿಶ್ವವನ್ನು ಹೊಂದಲು ಸಾಧ್ಯವಾಗಿದೆ. ಮಹಾಸ್ಪೋಟದಲ್ಲಿ ಕೇಂದ್ರ ಬೀಜದಲ್ಲಿ ಸ್ಥಿರ ಕೇಂದ್ರಗಳಾಗಿ ಕೆಲವೇ ನ್ಯೂಟ್ರಾನುಗಳು ಉಳಿದಿದ್ದೇ ವಿಶೇಷ ಮತ್ತು ಸ್ಥಿರತೆಗೆ ಕಾರಣವಾಗಿದೆ.

ಫೋಟಾನ್ ಯುಗ ಪ್ರಾರಂಭವಾಯಿತು.

ಫೋಟಾನ್ ಯುಗ

ಬದಲಾಯಿಸಿ

  • 10ಸೆಕೆಂಡಿನಿಂದ 3,80,000ವರ್ಷದ ವರೆಗೆ
  • ಆರಂಭದಿಂದ 3 ರಿಂದ 20 ಸೆಕೆಂಡಿನ ನಂತರ ತಣ್ಣಗಾಗುತ್ತಾ ಹೀಲಿಯಮ್ ಅಣುಗಳರಚನೆ ಸಾಧ್ಯವಾಯಿತು. ತಲುಪಿತ್ತು. 10ಸೆಕೆಂಡಿನ ನಂತರ- ಈಗ ಸೂರ್ಯನ ಒಳಗಿನ ಕ್ರಿಯೆಯಂತೆ ಪರಮಾಣು ಸಂಯೋಜನ - ವಿದಳನ ಕ್ರಿಯೆ (ಫ್ಯೂಜನ್) ಆರಂಭವಾಗಿ ಪ್ರೋಟಾನು-ನ್ಯೂಟ್ರಾನು ಬೀಜವುಳ್ಳ (ಡಿಯಾಟರಿಯಮ್ -ಭಾರ ಜಲಜನಕ)ವಸ್ತು ಗಳ ರಚನೆ ಆರಂಭವಾಯಿತು. ಈಗ ವಿಶ್ವ , ಈಗಿನ ಸೂರ್ಯನ ಕೇಂದ್ರದ ಶಾಖಕ್ಕಿಂತ 50 ಕ್ಕಿಂತ ಹೆಚ್ಚು ಪಟ್ಟು ಹೆಚ್ಚು ಶಾಖ ಹೊಂದಿತ್ತು. ಆದರೆ ಸಾಂದ್ರತೆ ಈಗನ ನೀರಿನ ಸಾಂದ್ರತೆಗಿಂತ ಎರಡು ಮೂರು ಲಕ್ಷದಷ್ಟಿತ್ತು.

ವಸ್ತು ನಿರ್ಮಾಣ (70,000ವರ್ಷ)

ಬದಲಾಯಿಸಿ

  • ಸೃಷ್ಠಿಯಾಗಿ ೪ ನಿಮಿಷಗಳ ನಂತರ ಪರಮಾಣು ಪ್ರಕ್ರಿಯೆ ಆರಂಭವಾಗಿ, ಪ್ರೋಟಾನುಗಳು (ಜಲಜನಕದ ಬೀಜ) ಮತ್ತು ಡಿಯಾಟರಿಯಮ್ ಬೀಜಗಳು ಹೀಲಿಯಮ್ (೨ ಪ್ರೋಟಾನು ಮತ್ತು ೨ ನ್ಯೂಟ್ರಾನ್ ಗಳುಳ್ಳದ್ದು) ಗಳು ಬೆಳಕಿನ ಸೆಲೆಯೊಂದಿಗೆ (ನ್ಯೂಕ್ಲಿಯೊಸಿಂಥೆಸಿಸ್) ರಚನೆಯಾದವು. ಹೀಗೆ ಕೇವಲ ಸ್ವಲ್ಪ ಭಾಗ ಮಾತ್ರ ಹೀಲಿಯಮ್ ಆದವು, ಕಾರಣ ಸ್ಥಿರ ಪರಮಾಣು ರಚನೆಯಾಗಲು ಇನ್ನೂ ಅತಿಯಾದ ಶಾಖವಿತ್ತು. ನಂತರ ಶಾಖವು ಕಡಿಮೆಯಾದಂತೆ ಪರಮಾಣು ಕೇಂದ್ರ ಸಂಯೋಜನೆ (ನ್ಯೂಕ್ಲಿಯೋ ಸಿಂಥೆಸಿಸ್) ಆಗಿದ್ದರಿಂದ ನ್ಯೂಟ್ರಾನ್ ಗಳು ಹೀಲಿಯಂನ ಕೇಂದ್ರ ದಲ್ಲಿ ಸೇರಿ ಮೊದಲಿನಂತೆ ಫೂಶನ್ ಕ್ರಿಯೆ ನೆಡೆಯವುದು ನಿಂತಿತು.
  • ಜಲಜನಕ ಹೀಲಿಯಮ್ ಅಣುಗಳು ಜೊತೆ ಜೊತೆಯಾಗಿ ಇದ್ದವು. ಇಲೆಕ್ಟ್ರಾನುಗಳು ಋಣ ವಿದ್ಯುತ್ ಹೊಂದಿ ಸ್ವತಂತ್ರವಾಗಿ ಸಂಚರಿಸುತ್ತಿದ್ದವು. ಈಗ ವಸ್ತುವು ಪ್ಲಾಸ್ಮಾ ಸ್ಥಿತಿಯಲ್ಲಿತ್ತು ; ಇದು ಈಗ ಸೂರ್ಯನ ಗರ್ಭದಲ್ಲಿರವ ವಸ್ತುವಿನ ಸ್ಥಿತಿ.

ವಿಶ್ವದ ಪುನರ್ ಸಂಯೋಜನೆ

ಬದಲಾಯಿಸಿ

.♣.♣.ನಮ್ಮವಿಶ್ವದ ಫೋಟೋ♣.♣.: ಈ ಕೆಳಗಿನ ಕೋಳಿ ಮೊಟ್ಟೆ ಆಕಾರದ ವಿಶ್ವದ ಚಿತ್ರ ಕೇವಲ ಕಲ್ಪನೆ ಅಲ್ಲ. ಒಂದು 10 ಲಕ್ಷ ಮೀಟರಿಗೂ ಹೆಚ್ಚುದೂರ ಭೂಮಿಯಿಂದ ಕಳಿಸಿರುವ ಉಪಗ್ರಹದಿಂದ ಅತ್ಯಂತ ಪ್ರಬಲ ದೂರದರ್ಶಕ (ಟೆಲಿಸ್ಕೋಪ್‘) ದಿಂದ ತೆಗೆದ ಫೋಟೊ. ಆ ಟೆಲಿಸ್ಕೋಪು ಸುತ್ತಲೂ ತಿರುಗುತ್ತಾ ಆಕಾಶದ ಚಿತ್ರವನ್ನು ತೆಳವಾದ ಹಾಳೆ-ಹಾಳೆಯಾಗಿ(slice by slice- ತಾಳೆ ಹೊಡೆದಂತೆ) ತೆಗೆದುದು. ಯೂರೋಪಿನ ವಿಜ್ಞಾನಿಗಳು ಅದನ್ನು ಅದೇ ಕ್ರಮದಲ್ಲಿ --2010 ಜುಲೈ ಮೊದಲ ವಾರದಲ್ಲಿ ಜತನದಿಂದ ಜೋಡಿಸಿದ್ದಾರೆ . ಈ ವಿಶ್ವ ನಮ್ಮ ಮನಸ್ಸಿನ ಕಲ್ಪನೆಯ ಅಳತೆಗೆ ಮೀರಿದ್ದು. ಅದಕ್ಕೆ ಹೊರಗಡೆ-ಎಂಬುದಿಲ್ಲ. ಆಕಾಶವನ್ನೂ (ಸ್ಪೇಸ್‘), ಕಾಲವನ್ನೂ ಅದೇ ಉಂಟು ಮಾಡಿಕೊಳ್ಳವುದು. ಅಲ್ಲದೆ ಅದು ಹಿಗ್ಗುತ್ತಿದೆ.ಇದರಲ್ಲಿ ೧೦/10 ಬಿಲಿಯನ್ ಜ್ಯೋತಿರ್`ವರ್ಷ ದೂರದಲ್ಲಿರವ ಸೂರ್ಯಮಂಡಲವಿರುವ ನಮ್ಮ ಆಕಾಶಗಂಗೆಗೂ ದೊಡ್ಡ ನೀಹಾರಿಕೆ (ನಕ್ಷತ್ರ ಲೋಕ) ಇದೆ. ನಾವು ಅದರಲ್ಲಿ (ಈ ವಿಶ್ವದಲ್ಲಿ) ಗುರುತಿಲಾಗದಷ್ಟು ಚಿಕ್ಕ -ಸೂಕ್ಷ್ಮಾತಿ ಸೂಕ್ಷ್ಮ ದೂಳಿನ ಕಣ. !! 2010

", 18/07/2010 TOI

 
ಇದು ನಮ್ಮಪಾರದರ್ಶಕ ಪೂರ್ಣವಿಶ್ವ --ಪುನರ್ ಸಂಯೋಜನೆ (೩೭೯೦೦೦ವರ್ಷ):ವಿಶ್ವವು ವಿಸ್ತಾರವಾಗಿ ವಿಕಾಸವಾದಂತೆ ತಣ್ಣಗಾಗುತ್ತಾ ೬೦೦೦ ಡಿ. ಸೆ. ಈ ಶಾಖದಲ್ಲಿ ಅಣುರಚನೆಯಾಗಿ ಪರಮಾಣು ಬೀಜಗಳು ಇಲೆಕ್ಟ್ರಾನುಗಳನ್ನು ಹಿಡಿದಿಟ್ಟುಕೊಳ್ಳಬಲ್ಲವಾದವು ಜಲಜನಕ ಮತ್ತು ಹೀಲಿಯಮ್ ರಚನೆಯಾದಂತೆ ಶಾಖವು ಕಡಿಮೆ ಯಾದಂತೆ ತಟಸ್ತ ಅಣುಗಳ ರಚನೆ ಅಧಿಕವಾಗಿ ಫೋಟಾನುಗಳು ತಡೆಯಿಲ್ಲದೆ ಸಂಚರಿಸಬಹುದಾಯಿತು.ಇದರಿಂದ ಇಡೀ ವಿಶ್ವವು ಮೊಟ್ಟ ಮೊದಲ ಬಾರಿಗೆ ಪಾರದರ್ಶಕವಾಯಿತು. ಇದರಿಂದಲೇ ನಂತರ (ಈಗ) 'ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ ಗ್ರೌಂಡ್ ಚಿತ್ರ'ವನ್ನು (ಸಿಬಿಎಮ್) -ವಿಶ್ವದ ಚಿತ್ರವನ್ನು ತೆಗೆಯಲು ಸಾದ್ಯವಾಗಿದೆ.ಈ ಚಿತ್ರ ಅದೇ ರೀತಿ ತೆಗೆದದ್ದು. ದೊಡ್ಡ ಚಿತ್ರಕ್ಕೆ ಅದರ ಮೇಲೆ ಕ್ಲಿಕ್ ಮಾಡಿ
  • (379000ವರ್ಷ)
  • ವಿಶ್ವವು ವಿಸ್ತಾರವಾಗಿ ವಿಕಾಸವಾದಂತೆ ಈ ಪ್ರಕ್ರಿಯೆ ಮುಂದಿನ 3,00,000 ವರ್ಷ ನಡೆಯಿತು. ವಿಶ್ವ ಉಬ್ಬುತ್ತಾ ವಿಶಾಲವಾಗುತ್ತಾ ತಣ್ಣಗಾಗುತ್ತಾ ಇಂದಿನ ಸೂರ್ಯನ ಮೇಲಮೈ ಶಾಖಕ್ಕೆ ಎಂದರೆ 6000?ಛಿ ಈ ಶಾಖದಲ್ಲಿ ಅಣುರಚನೆ ಸಾಧ್ಯ ವಾಯಿತು. ಪರಮಾಣು ಬೀಜಗಳು ಇಲೆಕ್ಟ್ರಾನುಗಳನ್ನು ಹಿಡಿದಿಟ್ಟುಕೊಳ್ಳಬಲ್ಲವಾದವು ಜಲಜನಕ ಮತ್ತು ಹೀಲಿಯಮ್ ರಚನೆಯಾದಂತೆ ವಿಶ್ವದ ಸಾಂದ್ರತೆ ಮತ್ತು ಶಾಖ ಗಣನೀಯವಾಗಿ ಕಡಿಮೆಯಾಯಿತು. ಶಾಕವು ಕಡಿಮೆ ಯಾದಂತೆ ತಟಸ್ತ ಅಣುಗಳ ರಚನೆ ಅಧಿಕವಾಗಿ ಫೋಟನುಗಳು (ಫೋಟನ್‌ಗಳ ಸರಾಸರಿ ದೂರ ಕ್ರಮಿಸುವಿಕೆ -ಬೆಳಕಿನ ಕಿರಣಗಳು) ತಡೆಯಿಲ್ಲದೆ ಸಂಚರಿಸಬಹುದಾಯಿತು. ಇದರಿಂದ ಇಡೀ ವಿಶ್ವವು ಮೊಟ್ಟ ಮೊದಲ ಬಾರಿಗೆ ಪಾರದರ್ಶಕವಾಯಿತು. ಇದರಿಂದಲೇ ನಂತರ (ಈಗ) ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ ಗ್ರೌಂಡ್ ಚಿತ್ರವನ್ನು (ಸಿಬಿಎಮ್) -ವಿಶ್ವದ ಚಿತ್ರವನ್ನು ತೆಗೆಯಲು ಸಾದ್ಯವಾಗಿದೆ.

ರೇಡಿಯೇಶರ್ನ ನಿಂದ ವಿಶ್ವ ಮತ್ತಷ್ಟು ತಣ್ಣಗಾಗಿ, -270 ಸೆಂ.ವರೆಗೂ ಬಂದಿದೆ. ಇದನ್ನು ರೇಡಿಯೋ ಟೆಲಿಸ್ಕೋಪನಿಂದ ಪರಿಶೀಲಿಸಿ ನೋಡಿದೆ. ಈ ವಿಶ್ವದ ಹಿಗ್ಗುವಿಕೆ ಇನ್ನೂ ನಿಂತಿಲ್ಲ. ಅದು ಅಗಾಧ ವೇಗದಲ್ಲಿ ಹಿಗ್ಗುತ್ತಲೇ ಇದೆ.

ಕತ್ತಲೆ ವಸ್ತು : ಕೃಷ್ಣ ದ್ರವ್ಯ :

ಬದಲಾಯಿಸಿ

  • ಅಗೋಚರ ಶಕ್ತಿ, (ತಮೋಲೋಕ/ ತಮಸ್ಸು?) :
  • ಪರಮಾಣುಗಳು ಮತ್ತು ರೇಡಿಯೇಶನ್ ಅಲ್ಲದೆ ಈ ವಿಶ್ವದಲ್ಲಿ ನಕ್ಷತ್ರ ನೀಹಾರಿಕೆಗಳ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ ಮತ್ತೊಂದು ನಿಗೂಢ ವಸ್ತು ಮಹಾಸ್ಪೋಟ ಸಮಯದಲ್ಲಿ ಇದ್ದಿರಬೇಕೆಂದು ತರ್ಕಿಸಿದ್ದಾರೆ. ಕಾರಣ, ವಿಶ್ವದಲ್ಲಿರುವ ಅನೇಕ ನೀಹಾರಿಕೆ ನಕ್ಷತ್ರ ಪುಂಜಗಳ ರಚನೆಯಲ್ಲಿ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚಿನ ಶಕ್ತಿ-ವಸ್ತು -ದ್ರವ್ಯ ಅಡಗಿದೆ ಎಂದು ಖಗೋಳವಿಜ್ಞಾನಿಗಳು ತೀರ್ಮಾನಿಸಿದ್ದಾರೆ.
  • ಗ್ಯಾಲಾಕ್ಸಿ ಅಥವಾ ನೀಹಾರಿಕೆ, ನಕ್ಷತ್ರ ಪುಂಜ, ದೂರದ ಹಳೆಯ ನಕ್ಷತ್ರ ಗಳನ್ನು ಅವುಗಳ ಹೆಚ್ಚಿನ ದ್ರವ್ಯ-ರಾಶಿಯನ್ನು ಯಾವುದೋ ಅಯಸ್ಕಾಂತೀಯ ಶಕ್ತಿ ವಿಶ್ವ ಹಿಗ್ಗತ್ತಿರವುದನ್ನು ಜಗ್ಗಿ ಜಗ್ಗಿ ಹಿಡಿಯುತ್ತಿರುವುದನ್ನು ಗಮನಿಸಿದ್ದಾರೆ. ಗೊತ್ತಿಲ್ಲದ ಕಡೆಯಿಂದ ಅಯಸ್ಕಾಂತೀಯ ಕಿರಣಗಳು ಬರುತ್ತಿರುವುದನ್ನು ಗಮನಿಸಿದ್ದಾರೆ.
  • ಈ ದ್ರವ್ಯ ಹೊರಗೆ ನಮಗೆ ಕಾಣ ಸಿಗುತ್ತಿರುವ ವಸ್ತು -ರಾಶಿ, ಶಕ್ತಿಸಂಚಯಕ್ಕಿಂತ ಎಷ್ಟೋ ಪಾಲು ಹೆಚ್ಚಿನದೆಂದು ಅಂದಾಜು ಮಾಡಿದ್ದಾರೆ, ಅದು, ನಮಗೆ ಕಾಣುವ, ಲೆಕ್ಕಕ್ಕೆ ಸಿಗುವ ವಿಶ್ವದ ಒಟ್ಟು ದ್ರವ್ಯ-ರಾಶಿಗಿಂತ ಹೆಚ್ಚಿನ ದ್ರವ್ಯ-ರಾಶಿ ಹೊಂದಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ವಿಶ್ವದ ವಿಕಾಸದ ಪ್ರಾರಂಭದಲ್ಲಿ ೬೩% ಇದ್ದಿರಬೇಕೆಂದು ತೀರ್ಮಾನಿಸಿದ್ದಾರೆ. ಅದೇ ಕೃಷ್ಣ ದ್ರವ್ಯ ಈಗ ೯೫% ಇರಬೇಕೆಂದೂ ಅದರಲ್ಲಿ ೭೨% ಶಕ್ತಿ ರೂಪ ಮತ್ತು ೨೩% ವಸ್ತು ರೂಪ ವೆಂದು ತರ್ಕಿಸಿದ್ದಾರೆ. (ವಿಕಿಪೀಡಿಯಾ ಇಂಗ್ಲಿಷ್, ಡಾರ್ಕಮ್ಯಾಟರ್ ನೋಡಿ) ಅದೇ ಡಾರ್ಕ್ ಮ್ಯಾಟರ್ ಅಥವಾ ಎಕ್ಷೋಟಿಕ್ ಮ್ಯಾಟರ್ ;

ಕೃಷ್ಣ ದ್ರವ್ಯ.. ಈ ಕೃಷ್ಣ ದ್ರವ್ಯ ನಮಗೆ ಕಾಣತ್ತಿರುವ ವಸ್ತು ರೂಪದಲ್ಲಿಲ್ಲ ; ಆದರೆ ಅದರ ಕಾಂತೀಯ ಶಕ್ತಿ (ಗ್ರಾವಿಟೇಶನಲ್ ಫೋರ್ಸ್) ಮಾತ್ರ ಇರುವುದು ಕಾಣುತ್ತದೆ..ಯಾವುದೇ ವಿಕಿರಣ ಸೂಸುತ್ತಿಲ್ಲ.) ಅದನ್ನು ವಿ ಐ ಎಮ್‌ ಪಿ ಗಳೆಂದು ಕರೆಯುತ್ತಾರೆ.. ಈ ಕೃಷ್ಣ ದ್ರವ್ಯವನ್ನು

  • ೧) ಶೀತ ಕೃಷ್ಣ ದ್ರವ್ಯ ,
  • ೨) ಅಲ್ಪೋಷ್ಣ ಕೃಷ್ಣ ದ್ರವ್ಯ;
  • ೩) ಉಷ್ಣ ಕೃಷ್ಣ ದ್ರವ್ಯ
  • ಎಂದು ವಿಂಗಡಿಸಿದ್ದಾರೆ. ವಿಜ್ಞಾನಿಗಳಿಗೆ ಅದೊಂದು ನಿಗೂಢ ವಸ್ತು ಅಥವಾ ದ್ರವ್ಯ. ಹಿಗ್ಗುತ್ತಿರುವ ವಿಶ್ವದಲ್ಲಿ ಕಾಂತೀಯ ವ್ಯತ್ಯಾಸ, ನೀಹಾರಿಕೆಗಳು ಆಕಾಶದಲ್ಲಿ ಹರಡಿರುವ ಕ್ರಮ, ಆಕಾಶದಲ್ಲಿ ಹರಡಿರುವ ಹೊಗೆಯಂತಹ ವಸ್ತು, ಕಪ್ಪು ಗುಳ್ಳೆಗಳನ್ನು ಆವರಿಸಿರವ, ಅಥವಾ ಮುಚ್ಚಿರುವ ತೆಳುವಾದ ಕಪ್ಪು ವಿಶಾಲ ಹಾಳೆಗಳು, ಇವು ಕಪ್ಪು ದ್ರವ್ಯದ ಇರುವನ್ನು ಸಾರುತ್ತವೆ. ಈಗೀಗ ಅತ್ಯಂತ ಶಕ್ತಿಶಾಲಿ ಟೆಲಿಸ್ಕೋಪು ಸಹಾಯದಿಂದ ಈ ಕೃಷ್ಣ ದ್ರವ್ಯದ ಬಗೆಗೆ ಪರಿಶೀಲನೆ ಪ್ರಯೋಗಗಳನ್ನು ನೆಡೆಸಿದ್ದಾರೆ.[][][][]

'ಸರಸ್ವತಿ’ ನಕ್ಷತ್ರಪುಂಜಗಳ ಮಹಾಸಮೂಹ ಪತ್ತೆ

ಬದಲಾಯಿಸಿ
  • 14 Jul, 2017;
  • ಭಾರತದ ಖಭೌತ ವಿಜ್ಞಾನಿಗಳು ನಕ್ಷತ್ರಪುಂಜಗಳ (ಗೆಲಾಕ್ಸಿ) ಮಹಾ ಸಮೂಹವೊಂದನ್ನು ಪತ್ತೆ ಮಾಡಿದ್ದಾರೆ. ಇದು ಭೂಮಿಯಿಂದ 400 ಕೋಟಿ ಜ್ಯೋತಿರ್ವರ್ಷಗಳಷ್ಟು (1 ಜ್ಯೋತಿರ್ವರ್ಷ= ಒಂದು ವರ್ಷದಲ್ಲಿ ಬೆಳಕಿನ ಕಿರಣ ಸಾಗುವ ದೂರ) ದೂರದಲ್ಲಿದೆ. ತಾರಾಪುಂಜಗಳ ಈ ಮಹಾಸಮೂಹವನ್ನು ‘ಸರಸ್ವತಿ’ ಎಂದು ಹೆಸರಿಸಲಾಗಿದೆ. ಇದು ವಿಶ್ವದಲ್ಲಿರುವ ಅತ್ಯಂತ ಬೃಹತ್ತಾದ ಸಮೂಹಗಳಲ್ಲಿ ಒಂದು. ಇದು ಮೀನಾ ನಕ್ಷತ್ರಪುಂಜದ ದಿಕ್ಕಿನಲ್ಲಿ ಇದೆ. 
  • ಈ ಮಹಾ ಸಮೂಹದಲ್ಲಿ ಕನಿಷ್ಠ 40 ನಕ್ಷತ್ರಪುಂಜಗಳ ಗುಂಪುಗಳಿವೆ ಮತ್ತು 10 ಸಾವಿರಕ್ಕೂ ಹೆಚ್ಚು ನಕ್ಷತ್ರಪುಂಜಗಳಿವೆ. ಇಷ್ಟೊಂದು ದೊಡ್ಡ ಸಮೂಹ ಈ ವಿಶ್ವದಲ್ಲಿ ಇದೆ ಎಂಬ ಕಲ್ಪನೆಯೇ 10–15 ವರ್ಷಗಳ ಹಿಂದೆ ಇರಲಿಲ್ಲ ಎಂದು ಈ ಶೋಧ ನಡೆಸಿರುವ ಪುಣೆಯ ಇಂಟರ್‌ ಯೂನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರಾನಮಿಯ ತಂಡದ ಮುಖ್ಯಸ್ಥ ಪ್ರೊ. ಸೊಮಕ್‌ ರಾಯ್‌ಚೌಧರಿ ಹೇಳಿದ್ದಾರೆ.
  • ವಿಶ್ವ ಹೇಗೆ ಸೃಷ್ಟಿಯಾಯಿತು ಎಂಬ ಬಗೆಗಿನ ಜನಪ್ರಿಯ ಸಿದ್ಧಾಂತಗಳು ‘ಸರಸ್ವತಿ’ಯಂತಹ ಬೃಹತ್‌ ಸಮೂಹದ ಅಸ್ತಿತ್ವವನ್ನು ಕಲ್ಪಿಸಿಕೊಂಡಿರಲೇ ಇಲ್ಲ. ಹಾಗಾಗಿ ವಿಶ್ವದ ಸೃಷ್ಟಿಯ ಬಗೆಗಿನ ಹೊಸ ಸಿದ್ಧಾಂತಗಳ ಬಗ್ಗೆ ಚಿಂತನೆ ನಡೆಸಲು ಇದು ಅವಕಾಶ ಒದಗಿಸಿಕೊಡಲಿದೆ.[]

ಈ ನಮ್ಮ ಬ್ರಹ್ಹಾಂಡದಲ್ಲಿ ಸೂರ್ಯ ಆಕಾಶ ಗಂಗೆಯ ಸ್ವಲ್ಪ ಒಳಸುತ್ತಿನ ಪದರಿನಲ್ಲಿ ಒರಿಯನ್ ನಕ್ಷತ್ರ ಪುಂಜದ ಹತ್ತಿರ ನಮ್ಮ ಸೂರ್ಯಮಂಡಲವಿದೆ. ಅದು ನಮ್ಮ ಆಕಾಶ ಗಂಗೆಯ ಕೇಂದ್ರದಿಂದ ಸುಮಾರು 27,200 ಜ್ಯೋತಿರ್ ವರ್ಷದ (8.33+/- 0.35 ಕಿಲೋಪರ‍್ಸೆಕೆಂಡ್ಸ್) ದೂರದಲ್ಲಿದೆ. ಈ ನೀಹಾರಕದ (ಆಕಾಶಗಂಗೆ) ಕೇಂದ್ರ ಮೇಲ್ಮೈ ಸಮತಲದಿಂದ ಸುಮಾರು 16 ಜ್ಯೋತಿರ್ವರ್ಷ ದ ದೂರದಲ್ಲಿದೆ. ಸೂರ್ಯ ಮಂಡಲವು ವಾಸಯೋಗ್ಯವಾದ ಅನುಕೂಲ ಪ್ರದೇಶದಲ್ಲಿದೆ. ಆಕಾಶಗಂಗೆಯ ಕೇಂದ್ರವನ್ನು ಒಂದು ಸುತ್ತು ಸುತ್ತಿ ಬರಲು ಸೂರ್ಯನಿಗೆ 225ರಿಂದ 250 ದಶ ಲಕ್ಷ ವರ್ಷಬೇಕು. (ಇದು ಒಂದು ನೀಹಾರಿಕಾ ವರ್ಷ) ಸೂರ್ಯನು ತನ್ನ ಜನನದ ನಂತರ ಸುಮಾರು 18-20 ಸುತ್ತು ಸುತ್ತಿರಬೇಕು. ಮಾನವರು ಈ ಭೂಮಿಯ ಮೇಲೆ ಕಾಣಿಸಿಕೊಂಡ ನಂತರ ಒಟ್ಟು ಸುತ್ತಿ ಬರುವ ದೂರದಲ್ಲಿ ಇನ್ನೂ ಕೇವಲ 1250ರಲ್ಲಿ ಒಂದು ಬಾಗದಷ್ಟು ದೂರ ಮಾತ್ರಾ ಕ್ರಮಿಸಿದ್ದಾನೆ. ಸೂರ್ಯಮಂಡಲವು ಆಕಾಶಗಂಗೆಯ ಕೇಂದ್ರವನ್ನು ಸುತ್ತುವ ವೇಗ 1 ಸೆಕೆಂಡಿಗೆ 220ಕಿ.ಮೀ. ಈ ವೇಗದಲ್ಲಿ ಒಂದು ಜ್ಯೋತಿರ್ ವರ್ಷ ದೂರ ಕ್ರಮಿಸಲು ಸೂರ್ಯ ಮಂಡಲಕ್ಕೆ 1400ವರ್ಷಗಳು ಬೇಕು. 8.19 ನಿ/ 8.ನಿ. 31 ಸೆಕೆಂಡ್ ಗಳಲ್ಲಿ -(ಇಂಗ್ಲಿಷ್ -ಸನ್) ಸೂರ್ಯನು ಚಲಿಸುವ ದೂರವನ್ನು ಖಗೋಲ ಮಾನದ ಒಂದು ಮೂಲ ಮಾನ ಎಂದು ಪರಿಗಣಿಸಲಾಗಿದೆ . (ಭೂಮಿಯಿಂದ ಸರಾಸರಿ ದೂರ 149.6X106 ಕಿ.ಮೀ. (92.95×106 ಮೈಲಿ)149,597,870.7 ಕಿ..ಮೀ./149.6 ಮಿಲಿಯನ್ ಕಿ.ಮೀ./ 14 ಕೋಟಿ 96ಲಕ್ಷ ಕಿ.ಮೀ). ಇದು ಭೂಮಿಗೂ ಸೂರ್ಯನಿಗೂ ಇರವ ಸರಾಸರಿ ದೂರ.(ಬೆಳಕಿನ ವೇಗದಲ್ಲಿ ೮.೩೧/8.31 ನಿಮಿಷಗಳು)

  • ಬೆಳಕಿನ ವೇಗ: ಅತ್ಯಂತ ಕರಾರುವಾಕ್ಕಾಗಿ ನಿರ್ವಾತ ಪ್ರದೇಶದಲ್ಲಿ 299.792.458 ಮೀ / ಸೆಕೆಂಡ್ (186,282.397 ಮೈಲಿ / ಸೆಕೆಂಡ್) (ಒಂದು ಸೆಕಂಡಿಗೆ)ಎಂದು ಅಳೆಯಲಾಗಿದೆ. ಇದನ್ನು 3,00,000 (೩ಲಕ್ಷ)ಕಿ.ಮೀ(1,86,000 ಮೈಲಿ) ಎಂದು ಸಾಮಾನ್ಯವಾಗಿ ಹೇಳುವರು. ಬೆಳಕಿನ ಅಥವಾ ರೇಡಿಯೋ ತರಂಗಗಳು ಒಂದು ಸ್ಪಂಂದನದಲ್ಲಿ ತೆಗೆದುಕೊಳ್ಳುವ ಸಮಯ ಆಧರಿಸಿ ದೊಡ್ಡ ಅಂತರವನ್ನು ಮಾಪನ ಮಾಡಲು (ನಕ್ಷತ್ರಗಳ ದೂರ) ಬಳಸುವರು. ಈ ವೇಗದಲ್ಲಿ ಬೆಳಕು ಗುರಿಯನ್ನು ತಲುಪಲು ಮತ್ತು ಹಿಂತರುಗಿ ಬರುವ ಸಮಯವನ್ನು ಉಪಯೋಗಿಸಿ ದೂರದ ಕಾಯಗಳ ದೂರವನ್ನು ಲೆಖ್ಕಹಾಕಲಾಗುವುದು. ಬೆಳಕಿನ ವೇಗವನ್ನು ಮೊದಲು ಫ್ರೆಂಚ್ ಭೌತವಿಜ್ಞಾನಿ ಅರ್ಮಂಡ್ ಹಿಪ್ಪೋಲಯ್ಟೆ ಲೂಯಿಸ್ ಫಿಜಾವು ಪ್ರಯೋಗಾಲಯದಲ್ಲಿ ಅಳೆದನು.(&ಆಧಾರ:ಎನ್ಕಾರ್ಟ)
  • ಜ್ಯೋತಿರ್ವರ್ಷ : ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರ. ನಕ್ಷತ್ರಗಳ ದೂರವನ್ನು ಹೇಳಲು/ಅಳೆಯಲು ಈ ಜ್ಯೋತಿರ್ ವರ್ಷದ ಮಾನವನ್ನು ಉಪಯೋಗಿಸುವರು.

ಸೂರ್ಯ ಒಂದು ನಕ್ಷತ್ರ

ಬದಲಾಯಿಸಿ

  • ಸೂರ್ಯ ಒಂದು ಮದ್ಯಮ ಗಾತ್ರದ ತಾರೆ. ಅದು ಸೂರ್ಯ ಮಂಡಲದ ಕೇಂದ್ರದಲ್ಲಿದೆ. ಅದು ಪ್ಲಾಸ್ಮಾ ಸ್ಥಿತಿಯಲ್ಲಿದ್ದು ಕಾಂತಶಕ್ತಿಯ ಬಲೆಯಲ್ಲಿ ಗಟ್ಟಿಯಾಗಿ ಹೆಣೆದುಕೊಂಡಿದೆ. ಅದು ದುಂಡಾಗಿದ್ದು ಅದರ ವ್ಯಾಸ 13,92,000 ಕಿ.ಮೀ. ಅದು ಭೂಮಿಯ 109 ರಷ್ಟು ದೊಡ್ಡದು. ಅದರ ದ್ರವ್ಯರಾಶಿ (ತೂಕ) ಭೂಮಿಗಿಂತ 330,000 ದಷ್ಟು ( ಅದರ ತೂಕ 2ರ ಮುಂದೆ 30 ಸೊನ್ನೆಗಳನ್ನು ಹಾಕಿದರೆ ಆಗುವಷ್ಟು ಕಿಲೋ ಗ್ರಾಮ್). ಇದರಲ್ಲಿ ಇಡೀ ಸೂರ್ಯ ಮಂಡಲದ ಎಲ್ಲಾ ಗ್ರಹಗಳೂ ಸೇರಿ ಆಗುವ ತೂಕದ 99.86% ನಷ್ಟು ದ್ರವ್ಯ ರಾಶಿ ಇದೆ ! (ವಿಕಿಪೀಡಿಯಾ-ಸನ್). ಆದರೆ ಅದರಲ್ಲಿರುವ ವಸ್ತು ಮುಕ್ಕಾಲು ಭಾಗ ಜಲಜನಕ, ಕಾಲು ಭಾಗದ ಹತ್ತಿರದಷ್ಟು ಹೀಲಿಯಮ್; ಅಲ್ಲದೆ ಶೇಕಡ 1.69 ರಷ್ಟು ಇತರೆ ಧಾತುಗಳು. ಆ ಇತರೇ ಧಾತುಗಳು ಭೂಮಿಯ 6528 ರಷ್ಟು ತೂಕದ್ದು.
  • ಸೂರ್ಯನ ಮೇಲ್ಮೈ ಶಾಖ ಅಂದಾಜು 5505 ಡಿಗ್ರಿ ಸೆಂಟಿಗ್ರೇಟ್ (5778 ಕೆಲ್ವಿನ್). ಎಲ್ಲಾ ತಾರೆಗಳಂತೆ ಸೂರ್ಯನಲ್ಲಿ ಪರಮಾಣು ಪ್ರಕ್ರಿಯೆಯಿಂದ ಶಕ್ತಿ (ಬೆಳಕು , ಶಾಖ) ಉತ್ಪಾದನೆ ಆಗುತ್ತದೆ. ಈ ಪರಮಾಣು ಪ್ರಕ್ರಿಯೆಗೆ ಪ್ರತಿ ಸೆಕೆಂಡಿಗೆ 620 ಮಿಲಿಯನ್ (62ಕೋಟಿ) ಮೆಟ್ರಿಕ್ ಟನ್ ಜಲಜನಕ ಉಪಯೋಗಿಸಲ್ಪಡುತ್ತದೆ.
  • ಸೂರ್ಯನು ಭೂಮಿಯಿಂದ ಸರಾಸರಿ 149.6 ಮಿಲಿಯನ್(14.96 ಕೋಟಿ) ಕಿಲೋಮೀಟರ್ ದೂರದಲ್ಲಿದೆ. ಈ ದೂರವನ್ನು ಖಗೋಲಮಾನದ ದೂರದ ಅಳತೆಗೆ 1 (ಎಯು) ಖಗೋಲ ಮಾನವೆಂದು ಹೇಳುತ್ತಾರೆ. ಸೂರ್ಯನು ತನ್ನ ಅಕ್ಷದ ಮೇಲೆ ಸರಿ ಸುಮಾರು 28 ದಿನಗಳಲ್ಲಿ ತಿರುಗತ್ತಿದ್ದಾನೆ. ಸೂರ್ಯನ ಕೇಂದ್ರ ಅತಿಯಾದ ಸಾಂದ್ರತೆಹೊಂದಿದೆ-ನೀರಿನ ಸಾಂದ್ರತೆಯ 150ರಷ್ಟು ಎಂದರೆ ಅಲ್ಲಿಯ ನೀರಿನ (1ಗ್ರಾಂ) ಒಂದು ತೊಟ್ಟಿನಷ್ಟು ದ್ರವ್ಯ 150 ಗ್ರಾಮ್ ತೂಗುವುದು. ಅದರ ಕೇಂದ್ರದ ಶಾಖ ಸುಮಾರು 15.7 ಮಿಲಿಯನ್ (1ಕೋಟಿ 57ಲಕ್ಷ ) ಕೆಲ್ವಿನ್. ಹಿಂದೆ ಹೇಳಿದಂತೆ ಅದರ ಮೇಲ್ಮೈ ಶಾಖ ಸುಮಾರು 5800 ಕೆಲ್ವಿನ್.

ಸೂರ್ಯನ ಪರಿವಾರ

ಬದಲಾಯಿಸಿ

 
caption(ಚಿತ್ರ ಪ್ರಮಾಣ) = ಸೂರ್ಯ ಮತ್ತು ಗ್ರಹಗಳ ಗಾತ್ರ , ದೂರ ಸುಮಾರು ಪ್ರಮಾಣಕ್ಕೆ ತಕ್ಕಂತೆ ಇವೆ. ಆದರೆ ಅದರ ಕಾಂತಿಯಲ್ಲ.

| age (ಆಯು) = 4.568 billion years(೪೫೬.೮ ಕೋಟಿ ವರ್ಷ)

  • ಸೂರ್ಯನನ್ನು ಸುತ್ತುತ್ತಿರುವ ಆಕಾಶ ಕಾಯಗಳು ಅದರ (ಸೂರ್ಯನ) ಕಾಂತ ಶಕ್ತಿಯ ಬಲದಿಂದ ಸೂರ್ಯನನ್ನು ಸುತ್ತುತ್ತಿವೆ. ಅವು ಸಂಯುಕ್ತ ಪರಮಾಣುಗಳ ಮೇಘ ರಾಶಿಯಿಂದ ಸಂಕುಚಿತಗೊಂಡು ೪೬೦ ಕೋಟಿ ವರ್ಷಗಳಹಿಂದೆ ನಿರ್ಮಾಣವಾಗಿರಬೇಕೆಂದು ಊಹಿಸಿದ್ದಾರೆ. ಸೂರ್ಯನನ್ನು ಸುತ್ತುತ್ತಿರುವ ಆಕಾಶಕಾಯಗಳು ಅಥವಾ ಗ್ರಹಗಳು ತಕ್ಕಮಟ್ಟಿಗೆ ಸಮತಲದಲ್ಲಿ ಸ್ವಲ್ಪ ದೀರ್ಘ ವೃತ್ತಾಕಾರದಲ್ಲಿ ಸುತ್ತುತ್ತಿವೆ. ಒಳ ಸುತ್ತಿನ ನಾಲ್ಕು ಗ್ರಹಗಳಾದ ಬುಧ, ಶುಕ್ರ, ಭೂಮಿ, ಮಂಗಳ ಗ್ರಹಗಳು ಘನ ವಸ್ತುಗಳನ್ನು ಒಳಗೊಂಡಿದೆ. ಉಳದ ಹೊರ ಮೈ ಗ್ರಹಗಳಾದ ಗುರು (ಗ್ರಹ), ಶನಿ ಗ್ರಹಗಳು ಜಲಜನಕ ಮೊದಲಾದ ಅನಿಲಗಳಿಂದ ಆದ ಅನಿಲ ದೈತ್ಯ ಗ್ರಹಗಳು. ದೂರದ ಗ್ರಹಗಳಾದ ಯುರಾನಸ್, ನೆಪ್ಚೂನ್ ಗ್ರಹಗಳು ಹೆಚ್ಚಾಗಿ ಹಿಮ, ನೀರು ಇವಗಳಿಂದ ಆದವು; ಅವು ಹಿಮದೈತ್ಯ ಗ್ರಹಗಳೆನ್ನಬಹುದು. ಇವಲ್ಲದೆ ಚಿಕ್ಕ ಗ್ರಹಗಳಾದ ಪ್ಲುಟೋ, ಹವುಮಿಯಾ, ಮಕೆಮ್ಕೆ, ಈರಿಸ್ (ಐರಿಸ್) , ಸೈರಿಸ್ ಮತ್ತು ಕೆಲವು ಚಿಕ್ಕ ಆಕಾಶಕಾಯಗಳೂ, ಉಲ್ಕೆಗಳ ಸಮೂಹವೂ ಸೂರ್ಯನನ್ನು ಸುತ್ತುತ್ತಿವೆ. ಕೆಲವು ಗ್ರಹಗಳು ಮಾತ್ರಾ ಉಪಗ್ರಹಗಳನ್ನು ಹೊಂದಿವೆ. ಅವುಗಳಲ್ಲಿ ಭೂಮಿಯಲ್ಲಿ ಮಾತ್ರಾ ಜೀವಿಗಳಿವೆ. ಭೂಮಿ ಜೀವ ಸಂಕುಲ ವಿಕಾಸಹೊಂದಲು ಅನುಕೂಲ ವಾತವರಣ ಹೊಂದಿದೆ. ಭೂಮಿಯಲ್ಲಿ ಜೀವ ವಿಕಾಸವು ಸುಮಾರು ೩೫೦-೪೦೦ ಕೋಟಿವರ್ಷಗಳ ಹಿಂದೆ ಆಲ್ಗೀಯಿಂದ ಆರಂಭವಾಗಿರಬೇಕೆಂದು ಊಹಿಸಿದ್ದಾರೆ.

ಸೂರ್ಯನ ಅಂತ್ಯ

ಬದಲಾಯಿಸಿ

ಸೂರ್ಯನಲ್ಲಿ ಸೂಪರ್‌ನೋವಾ ಆಗಿ ಸಿಡಿದು ನಾಶವಾಗುವಷ್ಟು ದ್ರವ್ಯರಾಶಿ ಇಲ್ಲ. ಬದಲಾಗಿ ಅದು 5 ಬಿಲಿಯನ್ (500 ಕೋಟಿ) ವರ್ಷಗಳ ನಂತರ ಕೆಂಪು-ಕುಬ್ಜ ದೈತ್ಯ ನಕ್ಷತ್ರವಾಗುವ ಹಂತವನ್ನು ತಲುಪಬಹುದು. ಒಳಭಾಗದ ಜಲಜನಕವು ಉರಿದುಹೋದಂತೆ ಹೊರಭಾಗವು ಹಿಗ್ಗಿ ಕೇಂದ್ರವು ಸಂಕುಚಿಸಿ ಅದರ ಸಾಂದ್ರತೆ ಹೆಚ್ಚಾದಂತೆಲ್ಲಾ ಶಾಖವು ಹೆಚ್ಚಾಗಿ ಜಲಜನಕವು ಹೀಲಿಯಂ ಜೊತೆ ಸಮ್ಮಿಲನ ಹೊಂದಿ ಹೆಚ್ಚು ಹೆಚ್ಚು ಹೀಲಿಯಂ ಉತ್ಪಾದನೆಯಾದಂತೆ ಇನ್ನೂ ಹಿಗ್ಗಬಹುದು. ಸೂರ್ಯನ ಕೇಂದ್ರವು 100 ಮಿಲಿಯನ್ (10 ಕೋಟಿ) ಕೆಲ್ವಿನ್ ಶಾಖ ಪಡೆದಾಗ ಇಂಗಾಲವು ಉತ್ಪತ್ತಿಯಾಗಬಹುದು ಮತ್ತು (ಕೆಂಪು) ದೈತ್ಯ ತಾರೆಯ ಹಂತ ತಲುಪಬಹುದು. ಹೊರ ಕವಚದ ದ್ರವ್ಯ ರಾಶಿಯು ಸಿಡಿದು ಗ್ರಹ ಸಮೂಹ ಹೊಂದಿದ ನ್ಯಬೂಲಾ ಆಗಬಹುದು. ಅತಿ ಶಾಖದ ಕೇಂದ್ರ ಬೀಜ ಮಾತ್ರ ಉಳಿದು ಅದು ತಣ್ಣಗಾದಂತೆ ಅನೇಕ ಕೋಟಿ ವರ್ಷಗಳ ನಂತರ ಶ್ವೇತಕುಬ್ಜವಾಗಬಹುದೆಂದು ಊಹಿಸಿದ್ದಾರೆ. ಸಾಮಾನ್ಯವಾಗಿ ಮಧ್ಯಮವರ್ಗದ ತಾರೆಗಳು ಹೀಗೆ ಅಂತ್ಯದಲ್ಲಿ ಶ್ವೇತಕುಬ್ಜ ತಾರೆಗಳಾಗಿರುವುದು ಕಂಡುಬಂದಿದೆ.

ಮಾನವನು ಏಕಾಂಗಿಯೇ?

ಬದಲಾಯಿಸಿ

ಮಾನವನು ಈ ವಿಶಾಲ ವಿಶ್ವದಲ್ಲಿ ಏಕಾಂಗಿಯೇ? ಈ ಪ್ರಶ್ನೆ ವಿಜ್ಞಾನಿಗಳನ್ನು ಕಾಡುತ್ತಿದೆ. (ಚರ್ಚೆ)

  • ಬ್ರಿಟಿಷ್ ಭೌತಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್ ವಿಶೇಷವಾಗಿ ಮಾನವರಿಗಿಂತ ಹೆಚ್ಚು ತಾಂತ್ರಿಕವಾಗಿ ಮುಂದುವರಿದ ಆ, ಯಾವುದೇ ಪರಕೀಯ ನಾಗರಿಕತೆಯು ನಮ್ಮ ಉಪಸ್ಥಿತಿ ಘೋಷಿಸುವ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.(ನಮಗೆ ಅಪಾಯವಾಗುವ ಸಂಭವ ಇದೆ!)
  • ಮುಂದುವರಿದ ನಾಗರಿಕತೆಯಿಂದ ನಮ್ಮ ಮೊದಲ ಸಂಪರ್ಕ ಸ್ಥಳೀಯ ಅಮೆರಿಕನ್ನರು ಮೊದಲ ಕ್ರಿಸ್ಟೋಫರ್ ಕೊಲಂಬಸ್ ಮತ್ತು ವಿಷಯಗಳನ್ನು ಎದುರಿಸಿದಕ್ಕೆ ಸಮನಾಗಿರುತ್ತದೆ. ಆಗಿರಬಹುದು "ಅದು ಮೂಲ ನಿವಾಸಿಗಳಿಗೆ ಒಳ್ಳೆದಾಗಲಿಲ್ಲ!", ಹಾಕಿಂಗ್ ಹೊಸ ಆನ್ಲೈನ್ ಚಿತ್ರದಲ್ಲಿ ಹೇಳಿದರು.[]

ನಮ್ಮನ್ನು ಕ್ರಿಮಿಗಳಂತೆ ನೋಡಬಹುದು

ಬದಲಾಯಿಸಿ
  • ಅನ್ಯಲೋಕದ ನಾಗರಿಕತೆಗಳು ನಮಗಿಂತ ಹೆಚ್ಚು ತಾಂತ್ರಿಕವಾಗಿ ಮುಂದುವರಿದಿರಬಹುದು' ಎಂದು ಸ್ಟೀಫನ್ ಹಾಕಿಂಗ್ ಹೇಳಿದ್ದಾರೆ. 'ನಾವು ಬ್ಯಾಕ್ಟೀರಿಯಾಗಳಿಗಿಂತ ಹೆಚ್ಚಿನ ಬೆಲೆಬಾಳುವವರಲ್ಲವೆಂದು ಅವರು ನೋಡಬಹುದು',ಎಂದು ಅವರು ಹೇಳಿದರು. ಅವರು ಯಾವುದೇ ಪರಕೀಯ ನಾಗರಿಕತೆಯವರಿಗೆ ನಮ್ಮ ಉಪಸ್ಥಿತಿ ಘೋಷಿಸುವ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
  • ಒಂದು ದಿನ ನಾವು ಗ್ಲೀಸಿ (Gliese) ಬ್ಯಾಟಲ್ 832c ಗ್ರಹದ ಒಂದು ಸಿಗ್ನಲ್ ಸ್ವೀಕರಿಸಬಹುದು, ಆದರೆ ನಾವು ಮತ್ತೆ ಉತ್ತರಿಸುವ ಬಗೆಗೆ ಜಾಗರೂಕರಾಗಿರಬೇಕು," ಅವರು ಹೇಳಿದರು.
  • "ಅವರು ಅಪಾರವಾಗಿ ಹೆಚ್ಚು ಶಕ್ತಿಶಾಲಿಗಳು ಆಗಿರಬಹುದು ಎಂದು ಮತ್ತು ನಾವು ಬ್ಯಾಕ್ಟೀರಿಯಾ ಕ್ಕಿಂತ ಹೆಚ್ಚು ಬೆಲೆಬಾಳುವವರಲ್ಲ ಎಂದು ನಮ್ಮನ್ನು ನೋಡಬಹುದು 'ಎಂದು ಹಾಕಿಂಗ್ ಎಚ್ಚರಿಕೆ ನೀಡಿದ್ದಾರೆ.
  • "ನಾನು ವಯಸ್ಸಾದಂತೆ ನನಗೆ ಹೆಚ್ಚು ಮನವರಿಕೆಯಾಗಿದೆ, ಈ ವಿಶ್ವದಲ್ಲಿ ನಾವು ಮಾತ್ರ ಇರುವವರಲ್ಲ ಎಂದು; ಆಶ್ಚರ್ಯಪಡುತ್ತಾ, ನಾನು ಹೊಸ ಜಾಗತಿಕ ಸಾದ್ಯತೆಯನ್ನು ಕಂಡುಹಿಡಿಯಲು ಈ ಜೀವಮಾನದಲ್ಲಿ ಒಂದು ಸಹಾಯವನ್ನು ಮಾಡಲು ಇಷ್ಟಪಡುತ್ತೇನೆ." ಅವರು ಹೇಳಿದರೆಂದು ಗಾರ್ಡಿಯನ್ ವರದಿ ಮಾಡಿದೆ. ಹಾಕಿಂಗ್ ಪ್ರತಿಕೂಲ ವಿದೇಶಿಯರ ಬಗ್ಗೆ ನಿರೀಕ್ಷೆಯೊಂದಿಗೆ ಎಚ್ಚರಿಕೆ ನೀಡಿರುವುದು ಇದೇ ಮೊದಲ ಬಾರಿ ಅಲ್ಲ.[]

ಭೂಮಿಯಲ್ಲಿ ಜೀವಜಾಲ ಸೃಷ್ಟಿ

ಬದಲಾಯಿಸಿ
  • ಸೂರ್ಯನಿಗೆ 465,00,00,000 ಶೇ.±1(ಶೇ.±1 ವ್ಯತ್ಯಾಸಕ್ಕೆ ಅವಕಾಶವಿದೆ)(465 ಕೋಟಿ} ವರ್ಷಗಳಾಗಿವೆ ಎಂದು ಅಂದಾಜು ಮಾಡಲಾಗಿದೆ ಸೌರ ವ್ಯೂಹದ ಉದಯ ಕಾಲ -
  • ಭೂಮಿಯ ಪ್ರಾಯ 454 ಕೋಟಿ ವರ್ಷ (10/10% ವ್ಯತ್ಯಾಸಕ್ಕೆ ಅವಕಾಶ ವಿದೆ)
  • ಅತಿಉಷ್ಣ - 400,00,00,000 ವರ್ಷ:
  • ಮಧ್ಯ ಉಷ್ಣ ಯುಗ ಥಿಯಾ (ಊಹೆ) ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ತುಂಡು ಚಂದ್ರನಾಗಿ ಮಾರ್ಪಟ್ಟು ಭೂಮಿಯನ್ನು ಸುತ್ತಲು ಆರಂಭಿಸಿತು. ಅದರಿಂದ ಚಂದ್ರನ ಗುರುತ್ವಾಕರ್ಷಣೆ ಭೂಮಿಯ ತನ್ನ ಅಕ್ಷ ಭ್ರಮಣ ವನ್ನು ಒಂದು ಸ್ಥಿರತೆ ಗೆ ತಂದಿತು. ಈ ಅಕ್ಷ ಭ್ರಮಣವೂ ಭೂಮಿಯಲ್ಲಿ ಜೀವ ಧಾರಣೆಗೆ ಅನುಕೂಲ ವಾತಾವರಣವನ್ನು ಉಂಟುಮಾಡಿತು. (ಥಿಯಾ ಸೃಷ್ಟಿಯ ಆದಿ ಮಾತೆ ; ತಿತಾನೆಸ್-ಹೆಲೋಯಿಸ್,ಸೆಲೀನೆ ,ಇಯೋಸ್ ಆದಿ ಪುರುಷರು - ಥಿಯಾ ಇವರ ತಾಯಿ -ಗ್ರೀಕ್ ಪುರಾಣ)
  • 390-250 ಕೋಟಿ ವರ್ಷಗಳಹಿಂದೆ ಪ್ರೋಕೊ ರೀಅವಟ್ ಗಳೆಂಬ ಆದಿ ಜೀವಕೊಶಗಳು ಉಗಮವಾಗಿರಬೇಕು . ಇವು ಇಂಗಾಲಾಮ್ಲವನ್ನು ಉಪಯೋಸಿ ಆರ‍್ಗ್ಯಾನಿಕ್ ಅಲ್ಲದ ವಸ್ತುಗಳನ್ನು ಆಮ್ಲೀಕರಣ (ಆಕ್ಸಿಡೈಸ್ ) ಮಾಡಿ ಶಕ್ತಿಸಂಚಯ ಮಾಡಿರಬೇಕು. ನಂತರ ಪ್ರೋಕೊರೀಅವಟ್ ಗಳು ರಸಾಯನಿಕ ಕ್ರಿಯೆಯಿಂದ ಗ್ಲೂಕೋಸು ಸಂಯುಕ್ತ ಅಣುಗಳ ರಸಾಯನಿಕ ಬಂಧಗಳ ರಚನೆಮಾಡಿದ್ದು -ಅವು ಸಂಗ್ರಹಗೊಂಡಿರಬೇಕು. ಈ ಗ್ಲೂಕೊಸು ನಂತರದ ಎಲ್ಲಾ ಜೀವ ಕೋಶಗಳಿಗೆ -ಜೀವಿಗಳಿಗೆ ಜೀವಾಧಾರ ಮೂಲವಾಗಿ ಇಂದಿಗೂ ಉಳಿದಿದೆ.[]
  • ಬ್ರಹ್ಮಾಂಡ
  • ಭೂಮಿಯಲ್ಲಿ ಜೀವ ಕೋಟಿಗಳು- ಪ್ರಾಣಿಗಳು,ಪಕ್ಷಿಗಳು ಮಾನವರು ಸೃಷ್ಟಿಯಾದ ಬಗೆಗೆ ವೈಜ್ಞಾನಿಕ ಸಿದ್ಧಾಂತಕ್ಕೆ ನೋಡಿ-:
  • ಜೀವ ವಿಕಾಸವಾದ

[*[ಆರ್ಡಿಪಿಥೆಕಸ್]] | ವಿಜ್ಞಾನ ಮತ್ತು ಮಾನವನ ಪೂರ್ವ ಇತಿಹಾಸ

ಹೆಚ್ಚಿನ ಓದಿಗೆ

ಬದಲಾಯಿಸಿ

ಇಂಗ್ಲಿಷ್ ವಿಭಾಗ


ಉಲ್ಲೇಖ

ಬದಲಾಯಿಸಿ
  1. ೪.ಈ ಜಗತ್ತು :ಡಾ ಶಿವರಾಮ ಕಾರಂತ
  2. ಜಗತ್ತುಗಳ ಹುಟ್ಟು ಮತ್ತು ಸಾವು -ಆರ್.ಎಲ್. ನರಸಿಂಹಯ್ಯ ಸೆಂಟ್ರಲ್ ಕಾಲೇಜು ಮೈಸೂರು ಭೌತ ಶಾಸ್ತ್ರ ವಿಭಾಗ (೧೯೫೨)
  3. http://math.ucr.edu/home/baez/physics/Relativity/SpeedOfLight/measure_c.htm
  4. ಎನ್ಕಾರ್ಟಾ
  5. "'ಸರಸ್ವತಿ' ನಕ್ಷತ್ರಪುಂಜಗಳ ಮಹಾಸಮೂಹ ಪತ್ತೆ;ಪ್ರಜಾವಾಣಿ ವಾರ್ತೆ;14 Jul, 2017". Archived from the original on 15 ಜುಲೈ 2017. Retrieved 16 ಜುಲೈ 2017.
  6. Stephen Hawking warns against seeking out aliens
  7. Stephen Hawking warns against contacting aliens
  8. ಎನ್‍ಸೈಕ್ಲೊಪಿಡಿಯಾ ಬ್ರಿಟಾನಿಕಾ

;