ಹನ್ಸಾ ಮತ್ತು ಡಿಂಭಕ

 ಹನ್ಸಾ ಮತ್ತು ಡಿಂಭಕ ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ಉಲ್ಲೇಖಸಲಾದ ಇಬ್ಬರು ಯೋಧರು. ಅವರಿಬ್ಬರೂ ರಾಜ ಜರಾಸಂಧನ ಆಸ್ಥಾನದಲ್ಲಿ ಸೇವೆ ಸಲ್ಲಿಸಿದರು ಹಾಗೂ ಮಥುರಾವನ್ನು ಪುನಃ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಅವನಿಗೆ ಸಹಾಯ ಮಾಡಿದರು.[೧] ಸಭಾ ಪರ್ವದ ಸಮಯದಲ್ಲಿ, ಹನ್ಸಾ ಎಂಬ ಹೆಸರಿನ ರಾಜನೊಬ್ಬನನ್ನು ಬಲರಾಮ ಹದಿನೆಂಟನೇ ದಿನದ ಯುದ್ಧದ ನಂತರ ಕೊಂದನು. ಹನ್ಸಾನ ಸಾವಿನ ಸುದ್ದಿಯನ್ನು ಕೇಳಿದ ಡಿಂಭಕನು ತನ್ನೊಂದಿಗಿದ್ದ ಹನ್ಸಾನನ್ನೇ ಕೊಲ್ಲಲಾಗಿದೆ ಎಂದು ಭಾವಿಸಿದನು. ಆತ ಯಮುನಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡನು. ನಂತರ ನಿಜವಾದ ಹನ್ಸಾನು ಡಿಂಭಕನ ಆತ್ಮಹತ್ಯೆಯ ಬಗ್ಗೆ ಕೇಳಿ ಅದೇ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡನು.[೨]

ಉಲ್ಲೇಖಗಳು

ಬದಲಾಯಿಸಿ
  1. The Mahabharata. Vol. Sabha Prava. Translated by Protap Chandra Roy. Bharata Press. 1884. p. 47.
  2. John Dowson (1888). A Classical Dictionary of Hindu Mythology and Religion. Trubner and Co. p. 116.