ಇದು ಡ್ರ್‍ಓಸೋಫಿಲ್ಲಾ ಮೆಲೆನೊಗಸ್ಟಾ ಪ್ರಭೇದಕ್ಕೆ ಸೇರಿರುವ ನೊಣ. ೨ ಮಿ.ಮೀ.ಯಷ್ಟು ಚಿಕ್ಕದಾಗಿ ಇರುವ ಈ ನೊಣಕ್ಕೆ 'ಗುಂಗಾಡಿ', 'ಗುಂಗುರು ನೊಣ' ಅಥವಾ 'ನುಸಿ' ಎನ್ನುವರು. ಹಣ್ಣು, ಕೊಳೆತ ಹಣ್ಣು-ತರಕಾರಿ, ಆಹಾರ ಪದಾರ್ಥಗಳ ಮೇಲೆ ಎರಗುತ್ತವೆ ಮತ್ತು ಮೊಟ್ಟೆ ಇಡುತ್ತವೆ. ಭಾರತದಲ್ಲಿ ಅವು ಹೆಚ್ಚಾಗಿ ಕಪ್ಪು ಬಣ್ಣದವು.[೧]

*ಹಣ್ಣಿನ ನೊಣ
ಲಾರ್ಡಿಫೋಸಾ ಆಂಡಲೂಸಿಯಕಾ ಎಂಬ ನೆದರ್‍ಲ್ಯಾಡಿನ ಕೆಂಪು ನುಸಿ- ದೊಡ್ಡದು ಮಾಡಿದೆ; ಅದು ಎರಡು ಮಿಮೀ.ಉದ್ದದ್ದು
 • ಲಾರ್ಡಿಫೋಸಾ ಆಂಡಲೂಸಿಯಕಾ
ವೈಜ್ಞಾನಿಕ ವರ್ಗೀಕರಣ
 • ವೈಜ್ಞಾನಿಕ ವರ್ಗೀಕರಣ- ಇ
 • ರಾಜ್ಯ: ಅನಿಮಲಿಯಾ
 • ಫೀಲಮ್: ಆರ್ತ್ರೋಪೋಡಾ
 • ವರ್ಗ: ಕೀಟ
 • ಆದೇಶ: ಡಿಪ್ಟೆರಾ
 • ಸೂಪರ್ ಫ್ಯಾಮಿಲಿ: ಎಫೈಡ್ರಾಯ್ಡಿಯಾ
 • ಕುಟುಂಬ: ಡ್ರೊಸೊಫಿಲಿಡೆ
 • ರೊಂಡಾನಿ, 1856
 • ಉಪಕುಟುಂಬ:-↓↓
 • ೧. ಡ್ರೊಸೊಫಿಲಿನೆ
 • ೨. ಸ್ಟೆಗನಿನೆ

ಮಾದರಿ ಜೀವಿಸಂಪಾದಿಸಿ

ನೊಣಗಳನ್ನು ಸಾಕುವುದು, ಬೆಳೆಸುವುದು ಬಲು ಸುಲಭ. ಅಲ್ಲದೇ ಇವು ಸಾಕಷ್ಟು ವೇಗವಾಗಿ ಮೊಟ್ಟೆಗಳನ್ನು ಇಡುತ್ತವೆ. ಅಲ್ಲದೇ ಅ ಮೊಟ್ಟೆಗಳು ಮರಿಗಳಾಗಿ ಬದಲಾಗಲು ಸಹ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಜೆನೆಟಿಕ್ಸ್, ಫಿಸಿಯೊಲಾಜಿ, ಮೈಕ್ರೋಬಯಾಲ್ ಪ್ಯಾಥೊಜೆನೆಸಿಸ್ ಮತ್ತು ಜೀವ ಇತಿಹಾಸದ ಸಂಶೋಧನೆಗಳಲ್ಲಿ ಈ ನೊಣಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದ್ದರಿಂದ ಹಣ್ಣಿನ ನೊಣಗಳನ್ನು ಮಾದರಿ ಜೀವಿಗಳೆಂದು ವಿಜ್ಙಾನಿಗಳು ಕರೆಯುತ್ತಾರೆ.[೨]

ದೈಹಿಕ ರಚನೆಸಂಪಾದಿಸಿ

ಹಣ್ಣಿನ ನೊಣಗಳು ಗಾಢ ಕೆಂಪು ಬಣ್ಣದ ಕಣ್ಣುಗಳನ್ನು, ಕಂದು ಹಳದಿ ಮಿಶ್ರಿತ ಮೈಬಣ್ಣವನ್ನು ಹೊಂದಿರುತ್ತವೆ. ಹ್ಹಣ್ಣಿನ ನೊಣಗಳು ಗಾತ್ರದಲ್ಲಿ ಗಂಡಿಗಿಂತ ಸ್ವಲ್ಪ ಮಟ್ಟಿಗೆ ದೊಡ್ಡದಾಗಿದ್ದು ೨.೫ ಮಿಲಿ ಮೀಟರ್ ಅಷ್ಟು ಉದ್ದ ಬೆಳೆಯುತ್ತವೆ. ಗಂಡು ನೊಣಗಳ ಬೆನ್ನಿನ ಮೇಲೆ ಕಪ್ಪು ಬಣ್ಣದ ಬಿಡಿ ಗೆರೆಗಳು ಇರುತ್ತವೆ. ಸಂತಾನಾಭಿವೃದ್ಧಿ ಪ್ರಕ್ರಿಯೆಯಲ್ಲಿ ಸಹಾಯಕವಾಗುವ ನಿಟ್ಟಿನಲ್ಲಿ ಗಂಡು ನೊಣದ ಜನನೇಂದ್ರಿಯದ ಸುತ್ತಾ ಮುಳ್ಳಿನಂತಹ ರಚನೆಯನ್ನು ಹೊಂದಿರುತ್ತವೆ.

ಜೀವನ ಚಕ್ರಸಂಪಾದಿಸಿ

ಹೆಣ್ಣು ನೊಣಗಳು ಕೊಳೆತ ಹಣ್ಣು ಇಲ್ಲವೆ ಅಣುಬೆ ಇವುಗಳ ಮೇಲೆ ಮೊಟ್ಟೆ ಇಡುತ್ತವೆ. ಇವು ಒಂದು ಬಾರಿಗೆ ೫ ಮೊಟ್ಟೆಗಳಂತೆ ೧ ಪ್ರಕ್ರಿಯೆಯಲ್ಲಿ ೫೦೦ ರವರೆಗೆ ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳು ಸಾಮಾನ್ಯವಾಗಿ ೮.೫ ದಿನಗಳಲ್ಲಿ ಮರಿಗಳಾಗಿ ಹೊರಬರುತ್ತವೆ. ಅವು ಬಾಹ್ಯ ತಾಪಮಾನಕ್ಕನುಗುಣವಾಗಿ ಕೆಲ ವಿಷಮ ಸನ್ನಿವೇಶಗಳಲ್ಲಿ ೭-೧೯ ದಿನಗಳವರೆಗೆ ಮರಿಗಳಾಗಲು ಸಮಯ ತೆಗೆದುಕೊಳ್ಳುತ್ತವೆ.

ವೈಶಿಷ್ಟ್ಯಸಂಪಾದಿಸಿ

ಹಣ್ಣಿನ ನೊಣಗಳು ಜಿರಳೆಗಳಿಗಿಂತ ಹೆಚ್ಚು ರೇಡಿಯೋ ಆಕ್ಟಿವ್ ಕಿರಣಗಳನ್ನು ತೆಗೆದುಕೊಳ್ಳಬಲ್ಲವು. ಆದರೆ ಇವುಗಳಿಗೆ ಪರಿಸರಕ್ಕೆ ಹೊಂದಾಣಿಕೆ ಶಕ್ತಿ (ಅಡಾಪ್ಟಿವ್ ನೇಚರ್) ತುಂಬ ಕಡಿಮೆ ಇದೆ.[೩]

ಫೈಲೋಜೆನಿ-ವರ್ಗೀಕರಣಸಂಪಾದಿಸಿ

 • ಈ ಕುಟುಂಬವು 75 ಜಾತಿಗಳ ಅಡಿಯಲ್ಲಿ ವರ್ಗೀಕರಿಸಲ್ಪಟ್ಟ 4,000 ಕ್ಕೂ ಹೆಚ್ಚು ಜಾತಿಗಳನ್ನು ಒಳಗೊಂಡಿದೆ. ಇತ್ತೀಚೆಗೆ, ಆಣ್ವಿಕ ಮತ್ತು ರೂಪವಿಜ್ಞಾನದ ಅಕ್ಷರಗಳ ಆಧಾರದ ಮೇಲೆ ಕುಲಗಳ ಸಮಗ್ರ ಫೈಲೋಜೆನೆಟಿಕ್ ವರ್ಗೀಕರಣವನ್ನು ಪ್ರಕಟಿಸಲಾಗಿದೆ.[೪]

ಚಿತ್ರಸಂಪುಟಸಂಪಾದಿಸಿ

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

 1. Pest Alerts - Zaprionus Indianus Gupta
 2. Spotted Wing Drosophila or Cherry Vinegar Fly
 3. Yassin, Amir (2013). "Phylogenetic classification of the Drosophilidae Rondani (Diptera): The role of morphology in the postgenomic era". Systematic Entomology. 38 (2): 349–364
 4. Yassin, Amir (2013). "Phylogenetic classification of the Drosophilidae Rondani (Diptera): The role of morphology in the postgenomic era". Systematic Entomology. 38 (2): 349–364