ಹಣಕಾಸಿನ ಮಾರುಕಟ್ಟೆ
ಅರ್ಥಶಾಸ್ತ್ರದಲ್ಲಿ, ಒಂದು ಹಣಕಾಸಿನ ಮಾರುಕಟ್ಟೆ (ಆಂಗ್ಲ:Financial market) ಎಂಬುದು ಒಂದು ಕಾರ್ಯವಿಧಾನವಾಗಿದ್ದು, ಕಡಿಮೆ ವ್ಯವಹಾರ ನಿರ್ವಹಣಾ ವೆಚ್ಚಗಳಲ್ಲಿ ಮತ್ತು ಪರಿಣಾಮಕಾರಿ-ಮಾರುಕಟ್ಟೆ ಊಹಾಸಿದ್ಧಾಂತವನ್ನು ಪ್ರತಿಬಿಂಬಿಸುವ ಬೆಲೆಗಳಲ್ಲಿ ಜನರು ಹಣಕಾಸಿನ ಭದ್ರತೆಗಳನ್ನು (ಸ್ಟಾಕುಗಳು ಮತ್ತು ಬಾಂಡುಗಳಂಥವು), ವ್ಯಾಪಾರಿ ಸರಕುಗಳನ್ನು (ಅಮೂಲ್ಯ ಲೋಹಗಳು ಅಥವಾ ಕೃಷಿಯ ಸರಕುಗಳಂಥವು), ಮತ್ತು ಇತರ ಮೌಲ್ಯಯುತ ತತ್ಸಮಾನ ವಸ್ತುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು (ವ್ಯಾಪಾರ ಮಾಡಲು) ಅದು ಅವಕಾಶ ಮಾಡಿಕೊಡುತ್ತದೆ.
ಸಾಮಾನ್ಯ ಮಾರುಕಟ್ಟೆಗಳು (ಇಲ್ಲಿ ಅನೇಕ ವ್ಯಾಪಾರಿ ಸರಕುಗಳು ವ್ಯಾಪಾರ ಮಾಡಲ್ಪಡುತ್ತವೆ) ಮತ್ತು ವಿಶೇಷೀಕರಿಸಲ್ಪಟ್ಟ ಮಾರುಕಟ್ಟೆಗಳೆರಡೂ (ಇಲ್ಲಿ ಕೇವಲ ಒಂದು ವ್ಯಾಪಾರಿ ಸರಕು ಮಾತ್ರವೇ ವ್ಯಾಪಾರ ಮಾಡಲ್ಪಡುತ್ತವೆ) ಅಸ್ತಿತ್ವದಲ್ಲಿವೆ. ಅನೇಕ ಆಸಕ್ತ ಖರೀದಿದಾರರು ಮತ್ತು ಮಾರಾಟಗಾರರನ್ನು ಒಂದು "ಸ್ಥಳದಲ್ಲಿ" ಇರಿಸುವ ಮೂಲಕ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತವೆ; ಹೀಗೆ ಮಾಡುವುದರಿಂದ ಎರಡೂ ವರ್ಗದವರು ಪರಸ್ಪರರನ್ನು ಕಂಡುಕೊಳ್ಳುವುದು ಅತ್ಯಂತ ಸುಲಭವಾಗಿ ಪರಿಣಮಿಸುತ್ತದೆ. ಸಂಪನ್ಮೂಲಗಳನ್ನು ಹಂಚುವ ದೃಷ್ಟಿಯಿಂದ, ಖರೀದಿದಾರರು ಮತ್ತು ಮಾರಾಟಗಾರರ ನಡುವಿನ ಪಾರಸ್ಪರಿಕ ಕ್ರಿಯೆಗಳ ಮೇಲೆ ಪ್ರಧಾನವಾಗಿ ವಿಶ್ವಾಸವನ್ನಿಡುವ ಒಂದು ಆರ್ಥಿಕತೆಯನ್ನು ಮಾರುಕಟ್ಟೆಯ ಆರ್ಥಿಕತೆ ಎಂದು ಕರೆಯಲಾಗುತ್ತದೆ; ಇದು ನಿಯಂತ್ರಕ ಆರ್ಥಿಕತೆ ಅಥವಾ ಒಂದು ಸಹಜ ಆರ್ಥಿಕತೆಯಂಥ ಮಾರುಕಟ್ಟೆಯದಲ್ಲದ ಆರ್ಥಿಕತೆಗೆ ಪ್ರತಿಯಾಗಿರುತ್ತದೆ.
ಆಯವ್ಯಯಶಾಸ್ತ್ರದಲ್ಲಿ, ಹಣಕಾಸಿನ ಮಾರುಕಟ್ಟೆಗಳು ಈ ಕೆಳಕಂಡ ಪ್ರಕ್ರಿಯೆಗಳನ್ನು ಸರಾಗಗೊಳಿಸುತ್ತವೆ:
- ಬಂಡವಾಳ ಸಂಗ್ರಹಿಸುವಿಕೆ (ಬಂಡವಾಳ ಮಾರುಕಟ್ಟೆಗಳಲ್ಲಿ)
- ಅಪಾಯದ ವರ್ಗಾವಣೆ (ಉತ್ಪನ್ನಗಳ ಮಾರುಕಟ್ಟೆಗಳಲ್ಲಿ)
- ಅಂತರರಾಷ್ಟ್ರೀಯ ವ್ಯಾಪಾರ (ಹಣ ಚಲಾವಣಾ ಮಾರುಕಟ್ಟೆಗಳಲ್ಲಿ)
– ಮತ್ತು ಬಂಡವಾಳವನ್ನು ಬಯಸು ವವರನ್ನು ಬಂಡವಾಳವನ್ನು ಹೊಂದಿರು ವವರಿಗೆ ಹೊಂದಿಸುವ ಕಾರ್ಯಕ್ಕೂ ಹಣಕಾಸಿನ ಮಾರುಕಟ್ಟೆಗಳು ಬಳಕೆಯಾಗುತ್ತವೆ.
ವಿಶಿಷ್ಟವೆಂಬಂತೆ, ತಾನು ಪಡೆದ ಬಂಡವಾಳವನ್ನು ಮರಳಿ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಭರವಸೆನೀಡುವ ಒಂದು ರಸೀದಿಯನ್ನು ಓರ್ವ ಸಾಲಗಾರನು ಸಾಲದಾತನಿಗೆ ನೀಡುತ್ತಾನೆ. ಈ ರಸೀದಿಗಳು ಭದ್ರತೆಗಳಾಗಿದ್ದು , ಇವನ್ನು ಮುಕ್ತವಾಗಿ ಖರೀದಿಸಬಹುದಾಗಿರುತ್ತದೆ ಅಥವಾ ಮಾರಾಟ ಮಾಡಬಹುದಾಗಿರುತ್ತದೆ. ಸಾಲಗಾರನಿಗೆ ಹಣದ ಸಾಲ ಕೊಡುವಿಕೆಗೆ ಪ್ರತಿಯಾಗಿ, ಸಾಲದಾತನು ಒಂದಷ್ಟು ಪರಿಹಾರವನ್ನು ಅಥವಾ ಸರಿದೂಗಿಸುವಿಕೆಯನ್ನು ನಿರೀಕ್ಷಿಸುತ್ತಾನೆ; ಇದು ಬಡ್ಡಿಯ ರೂಪದಲ್ಲಿರಬಹುದು ಅಥವಾ ಲಾಭಾಂಶಗಳ ರೂಪದಲ್ಲಿರಬಹುದು.
ಯಥಾರ್ಥವಾದ ಆಯವ್ಯಯಶಾಸ್ತ್ರದಲ್ಲಿ (ಅಥವಾ ಗಣಿತೀಯ ಆಯವ್ಯಯಶಾಸ್ತ್ರದಲ್ಲಿ), ಹಣಕಾಸಿನ ಮಾರುಕಟ್ಟೆಯೊಂದರ ಪರಿಕಲ್ಪನೆಯನ್ನು ಒಂದು ನಿರಂತರ-ಸಮಯದ ಬ್ರೌನಿಯನ್ ಚಲನೆಯ ಸಂಭವನೀಯ ಪ್ರಕ್ರಿಯೆಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸಲಾಗಿದೆ.
ವ್ಯಾಖ್ಯಾನ
ಬದಲಾಯಿಸಿವಿಶಿಷ್ಟವೆಂಬಂತೆ, ಅರ್ಥಶಾಸ್ತ್ರದಲ್ಲಿ ಮಾರುಕಟ್ಟೆ ಎಂಬ ಶಬ್ದವು ಒಳಗೊಂಡಿರುವ ವಿವರಣೆಯ ಪ್ರಕಾರ ಹೇಳುವುದಾದರೆ, ಇದು ಒಂದು ನಿರ್ದಿಷ್ಟ ಸರಕು ಅಥವಾ ಸೇವೆಯ ಸಂಭವನೀಯ ಖರೀದಿದಾರರು ಮತ್ತು ಮಾರಾಟಗಾರರ, ಹಾಗೂ ಅವರ ನಡುವಿನ ವ್ಯವಹಾರ ನಿರ್ವಹಣೆಗಳ ಒಂದು ಮೊತ್ತವಾಗಿದೆ.
ಹೆಚ್ಚು ಕಟ್ಟುನಿಟ್ಟಾಗಿ ವಿನಿಮಯ ಕೇಂದ್ರಗಳಾಗಿರುವ , ಹಣಕಾಸಿನ ಭದ್ರತೆಗಳಲ್ಲಿನ ವ್ಯಾಪಾರವನ್ನು ಸರಾಗಗೊಳಿಸುವ ಸಂಸ್ಥೆಗಳಿಗೆ, ಉದಾಹರಣೆಗೆ, ಒಂದು ಸ್ಟಾಕು ವಿನಿಮಯ ಕೇಂದ್ರ ಅಥವಾ ವ್ಯಾಪಾರಿ ಸರಕು ವಿನಿಮಯ ಕೇಂದ್ರಗಳಿಗೆ, "ಮಾರುಕಟ್ಟೆ" ಎಂಬ ಶಬ್ದವು ಕೆಲವೊಮ್ಮೆ ಬಳಸಲ್ಪಡುತ್ತದೆ. ಇದು (NYSE ರೀತಿಯಲ್ಲಿ) ಒಂದು ಭೌತಿಕ ತಾಣವಾಗಿರಬಹುದು ಅಥವಾ (NASDAQ ರೀತಿಯಲ್ಲಿ) ಒಂದು ವಿದ್ಯುನ್ಮಾನ ವ್ಯವಸ್ಥೆಯಾಗಿರಬಹುದು. ಸ್ಟಾಕುಗಳ ಬಹುಪಾಲು ಮಾರಾಟಕಾರ್ಯವು ಒಂದು ವಿನಿಮಯ ಕೇಂದ್ರದ ಮೂಲಕ ನಡೆಯುತ್ತದೆ; ಇಷ್ಟಾಗಿಯೂ, ಸಾಂಸ್ಥಿಕ ಕ್ರಮಗಳು (ವಿಲೀನ, ಉಪೋತ್ಪನ್ನ ಅಥವಾ ಅಂಗಸಂಸ್ಥೆಯ ರೂಪುಗೊಳ್ಳುವಿಕೆ) ಒಂದು ವಿನಿಮಯ ಕೇಂದ್ರದ ಆಚೆಗೆ ನಡೆಯುತ್ತವೆ. ಇಂಥ ವಿಶಿಷ್ಟ ಸಂದರ್ಭದಲ್ಲಿ ಯಾವುದೇ ಎರಡು ಕಂಪನಿಗಳು ಅಥವಾ ಇಬ್ಬರು ಜನರು, ಯಾವುದೇ ಕಾರಣಕ್ಕಾಗೇ ಆಗಲಿ, ಒಂದು ವಿನಿಮಯ ಕೇಂದ್ರದ ನೆರವನ್ನು ಪಡೆಯದೆಯೇ ಒಬ್ಬರಿಂದ ಇನ್ನೊಬ್ಬರಿಗೆ ಸ್ಟಾಕನ್ನು ಮಾರಾಟ ಮಾಡುವುದಕ್ಕೆ ಸಮ್ಮತಿಸಬಹುದು.
ಚಲಾವಣಾ ಹಣಗಳು ಮತ್ತು ಬಾಂಡುಗಳ ಮಾರಾಟವು ಬಹುಪಾಲು ಒಂದು ದ್ವಿಪಕ್ಷೀಯ ಆಧಾರದ ಮೇಲೆಯೇ ನಡೆಯುತ್ತದೆಯಾದರೂ, ಕೆಲವೊಂದು ಬಾಂಡುಗಳು ಒಂದು ಸ್ಟಾಕ್ ವಿನಿಮಯ ಕೇಂದ್ರದ ಮೂಲಕ ಮಾರಾಟಗೊಳ್ಳುತ್ತವೆ, ಮತ್ತು ಇದಕ್ಕೆ ಸಂಬಂಧಿಸಿದಂತೆಯೂ ಸ್ಟಾಕ್ ವಿನಿಮಯ ಕೇಂದ್ರಗಳನ್ನು ಹೋಲುವ ರೀತಿಯಲ್ಲಿಯೇ ವಿದ್ಯುನ್ಮಾನ ವ್ಯವಸ್ಥೆಗಳನ್ನು ಜನರು ನಿರ್ಮಿಸುತ್ತಿದ್ದಾರೆ.
ಹಣಕಾಸಿನ ಮಾರುಕಟ್ಟೆಗಳು ದೇಶೀಯ ವ್ಯಾಪ್ತಿಯನ್ನು ಹೊಂದಿರಬಹುದು ಅಥವಾ ಅವು ಅಂತರರಾಷ್ಟ್ರೀಯ ವ್ಯಾಪ್ತಿಯನ್ನು ಹೊಂದಿರಬಹುದು.
ಹಣಕಾಸಿನ ಮಾರುಕಟ್ಟೆಗಳ ಬಗೆಗಳು
ಬದಲಾಯಿಸಿಹಣಕಾಸಿನ ಮಾರುಕಟ್ಟೆಗಳನ್ನು ವಿಭಿನ್ನ ಉಪ-ಬಗೆಗಳಾಗಿ ವಿಂಗಡಿಸಬಹುದು:
- ಬಂಡವಾಳ ಮಾರುಕಟ್ಟೆಗಳು ಒಂದು ಉಪ-ಬಗೆಯಾಗಿದ್ದು, ಈ ಕೆಳಗಿನ ವಿಶಿಷ್ಟತೆಗಳನ್ನು ಇವು ಒಳಗೊಳ್ಳುತ್ತವೆ:
- ಸ್ಟಾಕು ಮಾರುಕಟ್ಟೆಗಳು: ಷೇರುಗಳು ಅಥವಾ ಸಾಮಾನ್ಯ ಸ್ಟಾಕಿನ ನೀಡಿಕೆಯ ಮೂಲಕ ಇವು ಧನಸಹಾಯ ಮಾಡುತ್ತವೆ, ಮತ್ತು ಅದರ ತರುವಾಯದ ಮಾರಾಟದಲ್ಲಿ ನೆರವಾಗುತ್ತವೆ.
- ಬಾಂಡು ಮಾರುಕಟ್ಟೆಗಳು: ಬಾಂಡುಗಳ ನೀಡಿಕೆಯ ಮೂಲಕ ಇವು ಧನಸಹಾಯ ಮಾಡುತ್ತವೆ, ಮತ್ತು ಅದರ ತರುವಾಯದ ಮಾರಾಟದಲ್ಲಿ ನೆರವಾಗುತ್ತವೆ.
- ವ್ಯಾಪಾರಿ ಸರಕು ಮಾರುಕಟ್ಟೆಗಳು: ಇವು ವ್ಯಾಪಾರಿ ಸರಕುಗಳ ಮಾರಾಟಕಾರ್ಯವನ್ನು ಸರಾಗಗೊಳಿಸುತ್ತವೆ.
- ಹಣ ಮಾರುಕಟ್ಟೆಗಳು: ಇವು ಅಲ್ಪಾವಧಿಯ ಸಾಲದ ಮೂಲಕ ಧನಸಹಾಯ ಮತ್ತು ಹೂಡಿಕೆಯನ್ನು ಒದಗಿಸುತ್ತವೆ.
- ಉತ್ಪನ್ನಗಳ ಮಾರುಕಟ್ಟೆಗಳು: ಇವು ಹಣಕಾಸಿನ ಅಪಾಯದ ನಿರ್ವಹಣೆಗೆ ಸಂಬಂಧಿಸಿದ ಸಾಧನಗಳನ್ನು ಒದಗಿಸುತ್ತವೆ.
- ಮುಮ್ಮಾರಿಕೆಯ ಒಪ್ಪಂದಗಳ ಮಾರುಕಟ್ಟೆಗಳು: ಒಂದು ಭವಿಷ್ಯದ ದಿನಾಂಕದಲ್ಲಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಪ್ರಮಾಣಕವಾಗಿಸಿದ ಮುಂಗಡದ ಒಪ್ಪಂದಗಳನ್ನು ಇವು ಒದಗಿಸುತ್ತವೆ; ಇದನ್ನೂ ನೋಡಿ: ಮುಂಗಡ ಮಾರುಕಟ್ಟೆ.
- ವಿಮಾ ಮಾರುಕಟ್ಟೆಗಳು: ಹಲವಾರು ಅಪಾಯಗಳ ಮರುವಿತರಣೆಯನ್ನು ಇವು ಸರಾಗಗೊಳಿಸುತ್ತವೆ.
- ವಿದೇಶಿ ವಿನಿಮಯ ಕೇಂದ್ರದ ಮಾರುಕಟ್ಟೆಗಳು: ವಿದೇಶಿ ವಿನಿಮಯ ಕೇಂದ್ರದಿಂದ ನಡೆಯುವ ಮಾರಾಟವನ್ನು ಇವು ಸರಾಗಗೊಳಿಸುತ್ತವೆ.
ಬಂಡವಾಳ ಮಾರುಕಟ್ಟೆಗಳು, ಪ್ರಾಥಮಿಕ ಮಾರುಕಟ್ಟೆಗಳು ಮತ್ತು ದ್ವಿತೀಯಕ ಮಾರುಕಟ್ಟೆಗಳನ್ನು ಒಳಗೊಂಡಿರುತ್ತವೆ. ಹೊಸದಾಗಿ ರೂಪುಗೊಂಡ (ನೀಡಿಕೆಯಾದ) ಭದ್ರತೆಗಳು, ಪ್ರಾಥಮಿಕ ಮಾರುಕಟ್ಟೆಗಳಲ್ಲಿ ಖರೀದಿಸಲ್ಪಡುತ್ತವೆ ಅಥವಾ ಮಾರಾಟಗೊಳ್ಳುತ್ತವೆ. ಹೂಡಿಕೆದಾರರು ತಾವು ಹೊಂದಿರುವ ಭದ್ರತೆಗಳನ್ನು ಮಾರಾಟ ಮಾಡಲು ಅಥವಾ ಅಸ್ತಿತ್ವದಲ್ಲಿರುವ ಭದ್ರತೆಗಳನ್ನು ಖರೀದಿಸಲು ದ್ವಿತೀಯಕ ಮಾರುಕಟ್ಟೆಗಳು ಅನುವುಮಾಡಿಕೊಡುತ್ತವೆ.
ಬಂಡವಾಳ ಸಂಗ್ರಹಿಸುವಿಕೆ
ಬದಲಾಯಿಸಿಹಣಕಾಸಿನ ಮಾರುಕಟ್ಟೆಗಳನ್ನು ಅರ್ಥೈಸಿಕೊಳ್ಳಲು, ಅವು ಯಾತಕ್ಕಾಗಿ ಬಳಸಲ್ಪಡುತ್ತಿವೆ, ಅಂದರೆ, ಅವುಗಳ ಉದ್ದೇಶವೇನು? ಎಂಬುದರ ಕಡೆಗೆ ನೋಡೋಣ.
ಹಣಕಾಸಿನ ಮಾರುಕಟ್ಟೆಗಳಿಲ್ಲದಿದ್ದರೆ, ಸಾಲಗಾರರು ಸ್ವತಃ ಸಾಲದಾತರನ್ನು ಕಂಡುಕೊಳ್ಳುವುದು ಕಷ್ಟಕರವಾಗಿ ಪರಿಣಮಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಬ್ಯಾಂಕುಗಳಂಥ ಮಧ್ಯಸ್ಥಗಾರ ಸಂಸ್ಥೆಗಳು ನೆರವಾಗುತ್ತವೆ. ಉಳಿತಾಯ ಮಾಡಲು ಹಣವನ್ನು ಹೊಂದಿರುವವರಿಂದ ಬ್ಯಾಂಕುಗಳು ಠೇವಣಿಗಳನ್ನು ಸಂಗ್ರಹಿಸುತ್ತವೆ. ನಂತರ, ಸಾಲಪಡೆಯಲು ಬಯಸುವವರಿಗೆ ಈ ಠೇವಣಿಯಿಟ್ಟ ಹಣದ ಸಂಚಯದಿಂದ ಹಣವನ್ನು ಸಾಲನೀಡುವುದು ಅವುಗಳಿಗೆ ಸಾಧ್ಯವಾಗುತ್ತದೆ. ಸಾಲಗಳು ಮತ್ತು ಅಡಮಾನಗಳ ಸ್ವರೂಪದಲ್ಲಿ, ಜನಪ್ರಿಯವಾದ ರೀತಿಯಲ್ಲಿ ಬ್ಯಾಂಕುಗಳು ಹಣವನ್ನು ಸಾಲನೀಡುತ್ತವೆ.
ಒಂದು ಸರಳವಾದ ಬ್ಯಾಂಕಿನ ಠೇವಣಿಗಿಂತ ಹೆಚ್ಚು ಸಂಕೀರ್ಣವಾಗಿರುವ ವ್ಯವಹಾರ ನಿರ್ವಹಣೆಗಳಿಗೆ ವಿಶಿಷ್ಟ ಮಾರುಕಟ್ಟೆಗಳ ಅಗತ್ಯವಿದ್ದು, ಈ ಮಾರುಕಟ್ಟೆಗಳಲ್ಲಿ ಸಾಲದಾತರು ಮತ್ತು ಅವರ ಮಧ್ಯವರ್ತಿಗಳು, ಸಾಲಗಾರರು ಮತ್ತು ಅವರ ಮಧ್ಯವರ್ತಿಗಳನ್ನು ಸಂಧಿಸುವುದು ಕಾರ್ಯಸಾಧ್ಯವಾಗಬೇಕಾಗುತ್ತದೆ; ಅಷ್ಟೇ ಅಲ್ಲ, ಅಸ್ತಿತ್ವದಲ್ಲಿರುವ ಸಾಲಪಡೆಯುವಿಕೆ ಅಥವಾ ಸಾಲ ಕೊಡುವಿಕೆಯ ಬದ್ಧತೆಗಳನ್ನು ಇತರ ಸಹಭಾಗಿಗಳಿಗೆ ಮಾರಾಟಮಾಡಲು ಇಲ್ಲಿ ಅವಕಾಶವಿರಬೇಕಾಗುತ್ತದೆ. ಒಂದು ಸ್ಟಾಕು ವಿನಿಮಯ ಕೇಂದ್ರವು ಹಣಕಾಸಿನ ಮಾರುಕಟ್ಟೆಯೊಂದರ ಒಂದು ಉತ್ತಮ ಉದಾಹರಣೆಯಾಗಿದೆ. ಕಂಪನಿಯೊಂದು ಹೂಡಿಕೆದಾರರಿಗೆ ಷೇರುಗಳನ್ನು ಮಾರಾಟ ಮಾಡುವ ಮೂಲಕ ಹಣವನ್ನು ಸಂಗ್ರಹಿಸಬಹುದಾಗಿದೆ ಮತ್ತು ಇದರ ಅಸ್ತಿತ್ವದಲ್ಲಿರುವ ಷೇರುಗಳನ್ನು ಖರೀದಿಸಬಹುದಾಗಿದೆ ಅಥವಾ ಮಾರಾಟ ಮಾಡಬಹುದಾಗಿದೆ.
ಸಾಲದಾತರು ಮತ್ತು ಸಾಲಗಾರರ ನಡುವಿನ ಸಂಬಂಧದಲ್ಲಿ ಹಣಕಾಸಿನ ಮಾರುಕಟ್ಟೆಗಳು ಎಲ್ಲಿ ಸೂಕ್ತವಾಗಿ ಹೊಂದಿಕೊಳ್ಳುತ್ತವೆ ಎಂಬುದನ್ನು ಈ ಕೆಳಕಂಡ ಕೋಷ್ಟಕವು ವಿಶದಗೊಳಿಸುತ್ತದೆ:
ಸಾಲದಾತರು ಮತ್ತು ಸಾಲಗಾರರ ನಡುವಿನ ಸಂಬಂಧ | |||
ಸಾಲದಾತರು | ಹಣಕಾಸಿನ ಮಧ್ಯಸ್ಥಗಾರರು | ಹಣಕಾಸಿನ ಮಾರುಕಟ್ಟೆಗಳು | ಸಾಲಗಾರರು |
ವ್ಯಕ್ತಿಗಳು ಕಂಪನಿಗಳು |
ಬ್ಯಾಂಕುಗಳು ವಿಮಾ ಕಂಪನಿಗಳು ನಿವೃತ್ತಿ ನಿಧಿಗಳು ಮ್ಯೂಚುಯಲ್ ನಿಧಿಗಳು |
ಅಂತರ ಬ್ಯಾಂಕು ಸ್ಟಾಕ್ ವಿನಿಮಯ ಕೇಂದ್ರ ವಿತ್ತಪೇಟೆ ಬಾಂಡು ಮಾರುಕಟ್ಟೆ ವಿದೇಶಿ ವಿನಿಮಯ |
ವ್ಯಕ್ತಿಗಳು ಕಂಪನಿಗಳು ಕೇಂದ್ರ ಸರ್ಕಾರ ಪೌರಸಂಸ್ಥೆಗಳು ಸಾರ್ವಜನಿಕ ಸಂಸ್ಥೆಗಳು |
ಸಾಲದಾತರು
ಬದಲಾಯಿಸಿವ್ಯಕ್ತಿಗಳು
ಬದಲಾಯಿಸಿಅನೇಕ ವ್ಯಕ್ತಿಗಳಿಗೆ ತಾವು ಸಾಲದಾತರೆಂಬ ಅಂಶವಿನ್ನೂ ಅರಿವಾದಂತಿಲ್ಲ, ಆದರೆ ಹೆಚ್ಚೂಕಮ್ಮಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ವಿಧಾನದಲ್ಲಿ ಹಣವನ್ನು ಸಾಲನೀಡುತ್ತಾರೆ. ಆತ ಅಥವಾ ಆಕೆ ಯಾರೇ ಆಗಿರಲಿ, ಈ ಕೆಳಕಂಡ ಹಣಕಾಸು ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಅಂಥ ಓರ್ವ ವ್ಯಕ್ತಿಯು ಹಣವನ್ನು ಸಾಲನೀಡಿದಂತಾಗುತ್ತದೆ:
- ಬ್ಯಾಂಕೊಂದರಲ್ಲಿನ ಒಂದು ಉಳಿತಾಯ ಖಾತೆಯಲ್ಲಿ ಹಣವನ್ನು ಇರಿಸಿದರೆ;
- ಒಂದು ನಿವೃತ್ತಿ ಯೋಜನೆಗೆ ಕೊಡುಗೆ ನೀಡಿದರೆ;
- ಒಂದು ವಿಮಾ ಕಂಪನಿಗೆ ಕಂತುಗಳನ್ನು ಪಾವತಿಸಿದರೆ;
- ಸರ್ಕಾರಿ ಬಾಂಡುಗಳಲ್ಲಿ ಹೂಡಿಕೆ ಮಾಡಿದರೆ; ಅಥವಾ
- ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಿದರೆ.
ಕಂಪನಿಗಳು
ಬದಲಾಯಿಸಿಕಂಪನಿಗಳು ಬಂಡವಾಳದ ಸಾಲಗಾರರಾಗಿರುವೆಡೆ ಒಲವು ತೋರಿಸುತ್ತವೆ. ಒಂದು ಅಲ್ಪಾವಧಿಯ ಕಾಲಕ್ಕೆ ಸಂಬಂಧಿಸಿದಂತೆ ಅಷ್ಟಾಗಿ ಅಗತ್ಯವಿರದ ಮಿಗುತಾಯದ ನಗದು ಅಥವಾ ಹೆಚ್ಚುವರಿ ನಗದನ್ನು ಕಂಪನಿಗಳು ಹೊಂದಿದ್ದಾಗ, ವಿತ್ತ ಪೇಟೆಗಳು ಎಂದು ಕರೆಯಲ್ಪಡುವ ಅಲ್ಪಾವಧಿ ಮಾರುಕಟ್ಟೆಗಳ ಮೂಲಕ ಸಾಲ ಕೊಡುವುದರಿಂದ, ತಮ್ಮ ನಗದು ಮಿಗುತಾಯದಿಂದ ಹಣಮಾಡಿಕೊಳ್ಳಲು ಅವು ಬಯಸಬಹುದು.
ಅತ್ಯಂತ ಸದೃಢವಾದ ನಗದು ಹರಿವುಗಳನ್ನು ಹೊಂದಿರುವ ಕೆಲವೇ ಕಂಪನಿಗಳು ಅಸ್ತಿತ್ವದಲ್ಲಿವೆ. ಈ ಕಂಪನಿಗಳು ಸಾಲಗಾರರಾಗಿರುವುದಕ್ಕಿಂತ ಹೆಚ್ಚಾಗಿ ಸಾಲದಾತರಾಗಿರುವ ಕಡೆಗೆ ಒಲವನ್ನು ಹೊಂದಿರುತ್ತವೆ. ಇಂಥ ಕಂಪನಿಗಳು, ಸಾಲದಾತರಿಗೆ ನಗದನ್ನು ಹಿಂದಿರುಗಿಸಲು ನಿರ್ಧರಿಸಬಹುದು (ಉದಾಹರಣೆಗೆ ಒಂದು ಷೇರು ಮರುಖರೀದಿಯ ಮೂಲಕ.) ಇದಕ್ಕೆ ಪರ್ಯಾಯವಾಗಿ, ತಮ್ಮ ನಗದು ಹಣದ ಮೇಲೆ ಹೆಚ್ಚು ಹಣವನ್ನು ಮಾಡಿಕೊಳ್ಳುವ ದೃಷ್ಟಿಯಿಂದ, ನಗದನ್ನು ಅವು ಸಾಲಕೊಡಲು ಬಯಸಬಹುದು (ಉದಾಹರಣೆಗೆ, ಬಾಂಡುಗಳು ಮತ್ತು ಸ್ಟಾಕುಗಳಲ್ಲಿ ಹೂಡಿಕೆ ಮಾಡುವಿಕೆ.)
ಸಾಲಗಾರರು
ಬದಲಾಯಿಸಿವ್ಯಕ್ತಿಗಳು ಅಲ್ಪಾವಧಿಯ ಅಗತ್ಯಗಳಿಗಾಗಿ ಬ್ಯಾಂಕರುಗಳ ಸಾಲಗಳ ಮೂಲಕ ಹಣವನ್ನು ಸಾಲಪಡೆಯುತ್ತಾರೆ ಅಥವಾ ಒಂದು ಮನೆ ಖರೀದಿಗೆ ಅಗತ್ಯವಿರುವ ಹಣವನ್ನು ಹೊಂದಿಸಲು ದೀರ್ಘಾವಧಿಯ ಅಡಮಾನಗಳಿಗೆ ಮೊರೆಹೋಗುತ್ತಾರೆ.
ಅಲ್ಪಾವಧಿಯ ಅಥವಾ ದೀರ್ಘಾವಧಿಯ ನಗದು ಹರಿವುಗಳಿಗೆ ನೆರವಾಗಲು ಕಂಪನಿಗಳು ಹಣವನ್ನು ಸಾಲಪಡೆಯುತ್ತವೆ. ನಿಧಿಯ ಆಧುನಿಕೀಕರಣ ಅಥವಾ ಭವಿಷ್ಯದ ವ್ಯವಹಾರ ವಿಸ್ತರಣೆಗೆ ಸಂಬಂಧಿಸಿದಂತೆಯೂ ಅವು ಸಾಲಪಡೆಯುತ್ತವೆ.
ಅನೇಕವೇಳೆ, ಸರ್ಕಾರಗಳ ತೆರಿಗೆಯ ಆದಾಯಗಳಿಗಿಂತ, ಅವಶ್ಯಕತೆಗಳ ಮೇಲೆ ಅವು ಮಾಡುವ ಖರ್ಚುಗಳೇ ಮಿತಿಮೀರಿರುತ್ತವೆ. ಈ ವ್ಯತ್ಯಾಸವನ್ನು ಸರಿದೂಗಿಸಲು ಅವು ಸಾಲ ಪಡೆಯುವುದು ಅಗತ್ಯವಾಗಿರುತ್ತದೆ. ರಾಷ್ಟ್ರೀಕರಣಗೊಂಡ ಉದ್ಯಮಗಳು, ಪೌರಸಂಸ್ಥೆಗಳು, ಸ್ಥಳೀಯ ಪ್ರಾಧಿಕಾರಗಳು ಹಾಗೂ ಸಾರ್ವಜನಿಕ ವಲಯದ ಇತರ ಆಡಳಿತ ಘಟಕಗಳ ಪರವಾಗಿಯೂ ಸಹ ಸರ್ಕಾರಗಳು ಸಾಲಪಡೆಯುತ್ತವೆ. UKಯಲ್ಲಿ, ಸಾಲಪಡೆಯುವಿಕೆಯ ಒಟ್ಟು ಅವಶ್ಯಕತೆಯನ್ನು ಸಾರ್ವಜನಿಕ ವಲಯದ ನಿವ್ವಳ ನಗದು ಅವಶ್ಯಕತೆ (ಪಬ್ಲಿಕ್ ಸೆಕ್ಟರ್ ನೆಟ್ ಕ್ಯಾಶ್ ರಿಕ್ವೈರ್‌ಮೆಂಟ್-PSNCR) ಎಂದು ಅನೇಕವೇಳೆ ಉಲ್ಲೇಖಿಸಲಾಗುತ್ತದೆ.
ಬಾಂಡುಗಳ ನೀಡಿಕೆಯನ್ನು ಕೈಗೊಳ್ಳುವ ಮೂಲಕ ಸರ್ಕಾರಗಳು ಸಾಲಪಡೆಯುತ್ತವೆ. UKಯಲ್ಲಿ, ಬ್ಯಾಂಕು ಖಾತೆಗಳು ಮತ್ತು ಅಧಿಕಮೌಲ್ಯದ ಬಾಂಡುಗಳನ್ನು ನೀಡುವ ಮೂಲಕ ಸರ್ಕಾರವು ವ್ಯಕ್ತಿಗಳಿಂದಲೂ ಸಾಲಪಡೆಯುತ್ತದೆ. ಸರ್ಕಾರದ ಸಾಲವು ಕಾಯಂ ಆಗಿರುವಂತೆ ತೋರುತ್ತದೆ. ಸದರಿ ಸಾಲವು ಪೂರ್ತಿಯಾಗಿ ತೀರಿಸಲ್ಪಟ್ಟ ಸ್ಥಿತಿಯಲ್ಲಿ ಇರುವುದಕ್ಕಿಂತ ಹೆಚ್ಚಾಗಿ ವಾಸ್ತವವಾಗಿ ಹೊರ-ತೋರಿಕೆಯಲ್ಲಿ ವಿಸ್ತರಿಸುತ್ತದೆ. ಋಣಭಾರದ ಮೌಲ್ಯ ವನ್ನು ತಗ್ಗಿಸಲು ಹಣದುಬ್ಬರ ದ ಮೇಲೆ ಪ್ರಭಾವಬೀರುವುದು ಸರ್ಕಾರಗಳಿಂದ ಅನುಸರಿಸಲ್ಪಡುವ ಒಂದು ಕಾರ್ಯತಂತ್ರವಾಗಿದೆ.
ಪೌರಸಂಸ್ಥೆಗಳು ಮತ್ತು ಸ್ಥಳೀಯ ಪ್ರಾಧಿಕಾರಗಳು ತಮ್ಮದೇ ಹೆಸರಿನಲ್ಲಿ ಸಾಲಪಡೆಯುವುದರ ಜೊತೆಗೆ, ರಾಷ್ಟ್ರೀಯ ಸರ್ಕಾರಗಳಿಂದ ಧನಸಹಾಯವನ್ನೂ ಸ್ವೀಕರಿಸಬಹುದು. UKಯಲ್ಲಿ, ಹ್ಯಾಂಪ್‌ಷೈರ್ ಜಿಲ್ಲಾ ಪರಿಷತ್ತಿನಂಥ ಒಂದು ಪ್ರಾಧಿಕಾರವು ಇದರ ವ್ಯಾಪ್ತಿಯಲ್ಲಿ ಬರುತ್ತದೆ.
ವಿಶಿಷ್ಟವೆಂಬಂತೆ, ಸಾರ್ವಜನಿಕ ಸಂಸ್ಥೆಗಳು ರಾಷ್ಟ್ರೀಕರಣಗೊಂಡ ಉದ್ಯಮಗಳನ್ನು ಒಳಗೊಳ್ಳುತ್ತವೆ. ಅಂಚೆಯ ಸೇವೆಗಳು, ರೈಲ್ವೆ ಕಂಪನಿಗಳು ಮತ್ತು ಸಾರ್ವಜನಿಕ ಪ್ರಯೋಜಕತೆಯ ಕಂಪನಿಗಳನ್ನು ಇವು ಒಳಗೊಳ್ಳಬಹುದು.
ಸ್ಥಳೀಯವಾಗಿ ಹಣವನ್ನು ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಅನೇಕ ಸಾಲಗಾರರು ತೊಡಕುಗಳನ್ನು ಹೊಂದಿರುತ್ತಾರೆ. ವಿದೇಶಿ ವಿನಿಮಯ ಕೇಂದ್ರದ ಮಾರುಕಟ್ಟೆಗಳ ನೆರವಿನೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಸಾಲಪಡೆಯಬೇಕಾಗಿ ಬರುತ್ತದೆ.
ಜನ್ಯ ಉತ್ಪನ್ನಗಳು
ಬದಲಾಯಿಸಿ1980ರ ದಶಕ ಮತ್ತು 1990ರ ದಶಕಗಳ ಅವಧಿಯಲ್ಲಿ, ಜನ್ಯ ಉತ್ಪನ್ನಗಳು , ಅಥವಾ ಸಂಕ್ಷಿಪ್ತವಾಗಿ ಉತ್ಪನ್ನಗಳು ಎಂದು ಕರೆಯಲ್ಪಡುವ ವಲಯದಲ್ಲಿನ ವ್ಯಾಪಾರವು, ಹಣಕಾಸಿನ ಮಾರುಕಟ್ಟೆಗಳಲ್ಲಿನ ಒಂದು ಪ್ರಮುಖ ಬೆಳವಣಿಗೆಯ ವಲಯವಾಗಿ ಪರಿಣಮಿಸಿತು.
ಹಣಕಾಸಿನ ಮಾರುಕಟ್ಟೆಗಳಲ್ಲಿ, ಸ್ಟಾಕಿನ ಬೆಲೆಗಳು, ಬಾಂಡಿನ ಬೆಲೆಗಳು, ಹಣ ಚಲಾವಣೆಯ ದರಗಳು, ಬಡ್ಡಿ ದರಗಳು ಮತ್ತು ಲಾಭಾಂಶಗಳು ಆಗಿಂದಾಗ್ಗೆ ಏರಿಳಿಯುತ್ತಾ ಅಪಾಯ ವನ್ನು ಸೃಷ್ಟಿಸುತ್ತಿರುತ್ತವೆ. ಜನ್ಯ ಉತ್ಪನ್ನಗಳು ಹಣಕಾಸಿನ ಉತ್ಪನ್ನಗಳಾಗಿದ್ದು, ಅಪಾಯವನ್ನು ನಿಯಂತ್ರಣ ಮಾಡಲು ಅಥವಾ ವಿರೋಧಾಭಾಸವೆನಿಸುವಂತೆ ಅಪಾಯವನ್ನು ಕಾರ್ಯರೂಪಕ್ಕೆ ತರಲು ಇವು ಬಳಸಲ್ಪಡುತ್ತವೆ. ಇದನ್ನು ಹಣಕಾಸಿನ ಅರ್ಥಶಾಸ್ತ್ರ ಎಂದೂ ಕರೆಯಲಾಗುತ್ತದೆ.
ಹಣ ಚಲಾವಣಾ ಮಾರುಕಟ್ಟೆಗಳು
ಬದಲಾಯಿಸಿಹಣ ಚಲಾವಣೆಯ ಅತ್ಯಂತ ಸುಸ್ಪಷ್ಟ ಖರೀದಿದಾರರು ಮತ್ತು ಮಾರಾಟಗಾರರು, ಹೊರ ತೋರಿಕೆಯಲ್ಲಿ, ಸರಕುಗಳ ಆಮದುದಾರರು ಮತ್ತು ರಫ್ತುದಾರರಾಗಿರುತ್ತಾರೆ. ಹಣ ಚಲಾವಣಾ ಮಾರುಕಟ್ಟೆಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ವ್ಯಾಪಾರವು ಬೇಡಿಕೆಯನ್ನು ಸೃಷ್ಟಿಸಿದಾಗಿನ ಸಾಕಷ್ಟು ಹಿಂದಿನ ಕಾಲದಲ್ಲಿ[ಯಾವಾಗ?] ಇದು ನಿಜವಾಗಿರಬಹುದಾದರೂ, ಅಂತರರಾಷ್ಟ್ರೀಯ ಫೈಸಲಾತಿಗಳಿಗಾಗಿರುವ ಬ್ಯಾಂಕಿನ ಅನುಸಾರ, ಆಮದುದಾರರು ಮತ್ತು ರಫ್ತುದಾರರು ವಿದೇಶಿ ವಿನಿಮಯ ಕೇಂದ್ರದ ವ್ಯವಹಾರ ನಿರ್ವಹಣೆಯ ಕೇವಲ 1/32ನಷ್ಟು ಪಾಲನ್ನು ಮಾತ್ರವೇ ಈಗ ಪ್ರತಿನಿಧಿಸುತ್ತಾರೆ.[೧]
ವಿದೇಶಿ ಹಣ ಚಲಾವಣಾ ವ್ಯವಹಾರದ ಚಿತ್ರಣವು ಇಂದು ಈ ಕೆಳಗಿನ ಅಂಶಗಳನ್ನು ತೋರಿಸುತ್ತದೆ:
- ಬ್ಯಾಂಕುಗಳು/ಸಂಸ್ಥೆಗಳು
- ಸಟ್ಟಾ ವ್ಯಾಪಾರಿಗಳು
- ಸರ್ಕಾರದ ಖರ್ಚುವೆಚ್ಚ (ಉದಾಹರಣೆಗೆ, ಹೊರದೇಶದಲ್ಲಿನ ಸೇನಾ ನೆಲೆಗಳು)
- ಆಮದುದಾರರು/ರಫ್ತುದಾರರು
- ಪ್ರವಾಸಿಗಳು
ಹಣಕಾಸಿನ ಮಾರುಕಟ್ಟೆಗಳ ವಿಶ್ಲೇಷಣೆ
ಬದಲಾಯಿಸಿಹಣಕಾಸಿನ ಮಾರುಕಟ್ಟೆಗಳ ಕುರಿತಾದ ಮತ್ತು ಕಾಲಾನುಸಾರ ಬೆಲೆಗಳು ಹೇಗೆ ಬದಲಾಗುತ್ತವೆ ಎಂಬುದಕ್ಕೆ ಸಂಬಂಧಿಸಿದ ಅಧ್ಯಯನವನ್ನು ಕೈಗೊಳ್ಳಲು ಸಾಕಷ್ಟು ಪ್ರಯತ್ನವು ನಡೆದಿದೆ. ಡೋವ್ ಜೋನ್ಸ್ & ಕಂಪನಿ ಮತ್ತು ಮತ್ತು ದಿ ವಾಲ್ ಸ್ಟ್ರೀಟ್ ಜರ್ನಲ್‌ನ ಸಂಸ್ಥಾಪಕರಲ್ಲಿ ಒಬ್ಬನಾದ ಚಾರ್ಲ್ಸ್ ಡೋವ್ ಎಂಬಾತ, ಈ ವಿಷಯಕ್ಕೆ ಸಂಬಂಧಿಸಿದಂತಿರುವ ಪರಿಕಲ್ಪನೆಗಳ ಒಂದು ಸಂಚಯವನ್ನು ಖಚಿತವಾಗಿ ನಿರೂಪಿಸಿದ್ದು, ಇವನ್ನು ಈಗ ಡೋವ್ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಭವಿಷ್ಯ ಬದಲಾವಣೆಗಳನ್ನು ಊಹಿಸಲು ಪ್ರಯತ್ನಿಸುವ, ತಾಂತ್ರಿಕ ವಿಶ್ಲೇಷಣೆ ಎಂದು ಕರೆಯಲ್ಪಡುವ ವಿಧಾನಕ್ಕೆ ಇದು ಆಧಾರವಾಗಿದೆ. "ತಾಂತ್ರಿಕ ವಿಶ್ಲೇಷಣೆ"ಯ ಸೂತ್ರಗಳ ಪೈಕಿ ಒಂದರ ಅನುಸಾರ, ಮಾರುಕಟ್ಟೆ ಪ್ರವೃತ್ತಿಗಳು ಭವಿಷ್ಯದ ಕುರಿತಾಗಿ, ಕಡೇಪಕ್ಷ ಅಲ್ಪಾವಧಿಯಲ್ಲಿ, ಒಂದು ಸೂಚನೆಯನ್ನು ನೀಡುತ್ತವೆ. ತಾಂತ್ರಿಕ ವಿಶ್ಲೇಷಕರು ನೀಡಿರುವ ಸಮರ್ಥನೆಗಳನ್ನು ಅನೇಕ ವಿದ್ವಾಂಸರು ಅಲ್ಲಗಳೆದಿದ್ದಾರೆ; ಈ ವಿದ್ವಾಂಸರು ಪ್ರತಿಪಾದಿಸುವ ಪ್ರಕಾರ, ಅಡ್ಡಾದಿಡ್ಡಿ ನಡೆಯ ಊಹಾಸಿದ್ಧಾಂತದ ಕಡೆಗೆ ಸಾಕ್ಷ್ಯವು ಬೆರಳುಮಾಡಿ ತೋರಿಸುತ್ತದೆ; ಮುಂದಿನ ಬದಲಾವಣೆಯು ಕೊನೆಯ ಬದಲಾವಣೆಯೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿರುವುದಿಲ್ಲ ಎಂಬುದಾಗಿ ಸದರಿ ಅಡ್ಡಾದಿಡ್ಡಿ ನಡೆಯ ಊಹಾಸಿದ್ಧಾಂತವು ಪ್ರತಿಪಾದಿಸುತ್ತದೆ.ಒಂದಷ್ಟು ಕಾಲಮಾನದ ಅವಧಿಯಲ್ಲಿ ಬೆಲೆಯಲ್ಲಿ ಆಗುವ ಬದಲಾವಣೆಗಳ ಪ್ರಮಾಣವನ್ನು ಚಂಚಲತೆ ಎಂದು ಕರೆಯಲಾಗುತ್ತದೆ.ಬೆನೋಯಿಟ್ ಮ್ಯಾಂಡೆಲ್‌ಬ್ರಾಟ್ ಎಂಬಾತ ಕಂಡುಕೊಂಡಿರುವ ಪ್ರಕಾರ, ಬೆಲೆಗಳಲ್ಲಿನ ಬದಲಾವಣೆಗಳು ಗೌಸ್‌ನ ವಿತರಣಾ ವಿಧಾನವೊಂದನ್ನು ಅನುಸರಿಸುವುದಿಲ್ಲ; ಆದರೆ ಅದಕ್ಕೆ ಬದಲಿಗೆ ಅವು ಲೆವಿ ಸ್ಥಿರ ವಿತರಣೆಗಳಿಂದ ಉತ್ತಮವಾಗಿ ರೂಪಿಸಲ್ಪಟ್ಟಿವೆ. ಬದಲಾವಣೆಯ ಪ್ರಮಾಣ, ಅಥವಾ ಚಂಚಲತೆಯು, 1/2ಕ್ಕಿಂತ ಸ್ವಲ್ಪವೇ ಹೆಚ್ಚಿರುವ ಒಂದು ಘಾತಕ್ಕಿರುವ ಕಾಲಮಾನದ ಉದ್ದದ ಮೇಲೆ ಅವಲಂಬಿತವಾಗಿದೆ. ಒಂದು ಅಂದಾಜಿಸಲಾದ ವಿಚಲನದೊಂದಿಗೆ ಗೌಸ್‌ನ ವಿತರಣಾ ವಿಧಾನವೊಂದನ್ನು ಬಳಸಿಕೊಂಡು ಓರ್ವರು ಲೆಕ್ಕಹಾಕಬಹುದಾದುದಕ್ಕಿಂತ, ಏರುತ್ತಿರುವ ಅಥವಾ ಇಳಿಯುತ್ತಿರುವ ದೊಡ್ಡ ಬದಲಾವಣೆಗಳು ಹೆಚ್ಚಾಗಿರುವ ಸಾಧ್ಯತೆಗಳಿರುತ್ತವೆ.ಅಂತರರಾಷ್ಟ್ರೀಯ ಮಾರುಕಟ್ಟೆಯ ಪರಿಣಾಮಗಳ ಸೂಕ್ತ ವಿಶ್ಲೇಷಣೆಯು, ಕಾಳಜಿಯ ಒಂದು ಹೊಸ ಕ್ಷೇತ್ರವಾಗಿದೆ. ಇಂದಿನ ಜಾಗತಿಕ ಹಣಕಾಸಿನ ಮಾರುಕಟ್ಟೆಗಳು ಸಂಬಂಧಿಸಲ್ಪಟ್ಟಿರುವ ರೀತಿಯಲ್ಲಿಯೇ, ಜಾಗತಿಕ ಹಣಕಾಸಿನ ಜಾಲದೊಂದಿಗೆ ಪ್ರಯೋಜನಗಳು ಮತ್ತು ಪರಿಣಾಮಗಳೆರಡೂ ಸಹ ಸಂಬಂಧವನ್ನು ಹೊಂದಿರುತ್ತವೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗಿರುತ್ತದೆ. ಸಮಗ್ರೀಕರಣದ ಕಾರಣದಿಂದಾಗಿ ಹೊಸ ಅವಕಾಶಗಳು ಕಾಣಿಸಿಕೊಳ್ಳುತ್ತಿದ್ದಂತೆ, ನೀತಿಚ್ಯುತಿಯ ಸಾಧ್ಯತೆಗಳೂ ಸಹ ಕಾಣಿಸಿಕೊಳ್ಳುತ್ತವೆ. ಸಂಬಂಧವನ್ನು ಹೊಂದಿರುವ ಸಮಗ್ರ ಜಾಗತಿಕ ಜಾಲದ ಮೂಲಕ ಸಮಸ್ಯೆಯೊಂದು ಅತ್ಯಂತ ಶೀಘ್ರವಾಗಿ ಕಂಪನವನ್ನು ಉಂಟುಮಾಡಬಲ್ಲುದಾದ್ದರಿಂದ, ಮಾರುಕಟ್ಟೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸುವಾಗ ಇದು ಅನನ್ಯ ವಿವಾದಾಂಶಗಳನ್ನು ಮುಂದೊಡ್ಡುತ್ತದೆ. ಉದಾಹರಣೆಗೆ, ದೇಶವೊಂದರಲ್ಲಿನ ಒಂದು ಬ್ಯಾಂಕಿನ ವೈಫಲ್ಯವು ಇತರ ದೇಶಗಳಿಗೆ ಶೀಘ್ರವಾಗಿ ಹಬ್ಬುತ್ತದೆ; ಇದರಿಂದಾಗಿ ಸೂಕ್ತ ವಿಶ್ಲೇಷಣೆಯು ಹೆಚ್ಚು ಕಷ್ಟಕರವಾಗಿ ಪರಿಣಮಿಸುತ್ತದೆ.ಹಣಕಾಸಿನ ಮಾರುಕಟ್ಟೆಗಳನ್ನು ವಿಭಿನ್ನ ಉಪ-ಬಗೆಗಳಾಗಿ ವಿಂಗಡಿಸಬಹುದು: ಬಂಡವಾಳ ಮಾರುಕಟ್ಟೆಗಳು ಒಂದು ಉಪ-ಬಗೆಯಾಗಿದ್ದು, ಈ ಕೆಳಗಿನ ವಿಶಿಷ್ಟತೆಗಳನ್ನು ಇವು ಒಳಗೊಳ್ಳುತ್ತವೆ: ಸ್ಟಾಕು ಮಾರುಕಟ್ಟೆಗಳು: ಷೇರುಗಳು ಅಥವಾ ಸಾಮಾನ್ಯ ಸ್ಟಾಕಿನ ನೀಡಿಕೆಯ ಮೂಲಕ ಇವು ಧನಸಹಾಯ ಮಾಡುತ್ತವೆ, ಮತ್ತು ಅದರ ತರುವಾಯದ ಮಾರಾಟದಲ್ಲಿ ನೆರವಾಗುತ್ತವೆ. ಬಾಂಡು ಮಾರುಕಟ್ಟೆಗಳು: ಬಾಂಡುಗಳ ನೀಡಿಕೆಯ ಮೂಲಕ ಇವು ಧನಸಹಾಯ ಮಾಡುತ್ತವೆ, ಮತ್ತು ಅದರ ತರುವಾಯದ ಮಾರಾಟದಲ್ಲಿ ನೆರವಾಗುತ್ತವೆ. ವ್ಯಾಪಾರಿ ಸರಕು ಮಾರುಕಟ್ಟೆಗಳು: ಇವು ವ್ಯಾಪಾರಿ ಸರಕುಗಳ ಮಾರಾಟಕಾರ್ಯವನ್ನು ಸರಾಗಗೊಳಿಸುತ್ತವೆ. ಹಣ ಮಾರುಕಟ್ಟೆಗಳು: ಇವು ಅಲ್ಪಾವಧಿಯ ಸಾಲದ ಮೂಲಕ ಧನಸಹಾಯ ಮತ್ತು ಹೂಡಿಕೆಯನ್ನು ಒದಗಿಸುತ್ತವೆ. ಉತ್ಪನ್ನಗಳ ಮಾರುಕಟ್ಟೆಗಳು: ಇವು ಹಣಕಾಸಿನ ಅಪಾಯದ ನಿರ್ವಹಣೆಗೆ ಸಂಬಂಧಿಸಿದ ಸಾಧನಗಳನ್ನು ಒದಗಿಸುತ್ತವೆ. ಮುಮ್ಮಾರಿಕೆಯ ಒಪ್ಪಂದಗಳ ಮಾರುಕಟ್ಟೆಗಳು: ಒಂದು ಭವಿಷ್ಯದ ದಿನಾಂಕದಲ್ಲಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಪ್ರಮಾಣಕವಾಗಿಸಿದ ಮುಂಗಡದ ಒಪ್ಪಂದಗಳನ್ನು ಇವು ಒದಗಿಸುತ್ತವೆ; ಇದನ್ನೂ ನೋಡಿ: ಮುಂಗಡ ಮಾರುಕಟ್ಟೆ. ವಿಮಾ ಮಾರುಕಟ್ಟೆಗಳು: ಹಲವಾರು ಅಪಾಯಗಳ ಮರುವಿತರಣೆಯನ್ನು ಇವು ಸರಾಗಗೊಳಿಸುತ್ತವೆ. ವಿದೇಶಿ ವಿನಿಮಯ ಕೇಂದ್ರದ ಮಾರುಕಟ್ಟೆಗಳು: ವಿದೇಶಿ ವಿನಿಮಯ ಕೇಂದ್ರದಿಂದ ನಡೆಯುವ ಮಾರಾಟವನ್ನು ಇವು ಸರಾಗಗೊಳಿಸುತ್ತವೆ. ಬಂಡವಾಳ ಮಾರುಕಟ್ಟೆಗಳು, ಪ್ರಾಥಮಿಕ ಮಾರುಕಟ್ಟೆಗಳು ಮತ್ತು ದ್ವಿತೀಯಕ ಮಾರುಕಟ್ಟೆಗಳನ್ನು ಒಳಗೊಂಡಿರುತ್ತವೆ. ಹೊಸದಾಗಿ ರೂಪುಗೊಂಡ (ನೀಡಿಕೆಯಾದ) ಭದ್ರತೆಗಳು, ಪ್ರಾಥಮಿಕ ಮಾರುಕಟ್ಟೆಗಳಲ್ಲಿ ಖರೀದಿಸಲ್ಪಡುತ್ತವೆ ಅಥವಾ ಮಾರಾಟಗೊಳ್ಳುತ್ತವೆ. ಹೂಡಿಕೆದಾರರು ತಾವು ಹೊಂದಿರುವ ಭದ್ರತೆಗಳನ್ನು ಮಾರಾಟ ಮಾಡಲು ಅಥವಾ ಅಸ್ತಿತ್ವದಲ್ಲಿರುವ ಭದ್ರತೆಗಳನ್ನು ಖರೀದಿಸಲು ದ್ವಿತೀಯಕ ಮಾರುಕಟ್ಟೆಗಳು ಅನುವುಮಾಡಿಕೊಡುತ್ತವೆ
ಉಲ್ಲೇಖಗಳು
ಬದಲಾಯಿಸಿ- ↑ ಸ್ಟೀವನ್ ವಾಲ್ಡೆಜ್, ಆನ್ ಇಂಟ್ರಡಕ್ಷನ್ ಟು ಗ್ಲೋಬಲ್ ಫೈನಾನ್ಷಿಯಲ್ ಮಾರ್ಕೆಟ್ಸ್