ಸಂತ ಫಿಲೋಮಿನ

(ಸ೦ತ ಫಿಲೋಮಿನ ಇಂದ ಪುನರ್ನಿರ್ದೇಶಿತ)

೧೪ಂ೩ ರ ಮೇ ೨೫ ರಂದು ರೋಮಿನ ರಕ್ತಸಾಕ್ಷಿಗಳ ಸಮಾಧಿಗಳ ಉತ್ಕನನದ ವೇಳೆಯಲ್ಲಿ ಸಂತ ಫಿಲೋಮಿನರ ದೇಹವನ್ನು ಪತ್ತೆ ಹಚ್ಚಲಾಯಿತು. ಸಂತ ಪ್ರೆಸಿಲ್ಲಾರ ಗುಹೆ ಸಮಾಧಿಯ ಅಕ್ಕ ಪಕ್ಕದ ಗೋಡೆಗಳಲ್ಲಿ ಹಂತ ಹಂತವಾಗಿ ಹೂತಿರುವ ಹಲವು ಪುಣ್ಯ ಪುರುಷರ ಸಮಾಧಿಗಳಲ್ಲಿ ಫಿಲೋಮಿನರವರ ದೇಹವನ್ನು ಪತ್ತೆ ಮಾಡಲಾಯಿತು. ಸಂತ ಫಿಲೋಮಿನಾರ ಸಮಾಧಿಕಲ್ಲು ವಿಶಿಷ್ಟವಾಗಿದ್ದು, ಅದರ ಮೇಲೆ ಆಕೆಯ ಕನ್ಯತ್ವ ಮತ್ತು ರಕ್ತ ಸಾಕ್ಷಿಯಾಗಿ ಮಡಿದ ಸಂಕೇತವಾಗಿ ಕೆಲವು ಚಿತ್ರಗಳನ್ನು ಮತ್ತು ಲಿಪಿಯನ್ನು ಕೆತ್ತಲಾಗಿತ್ತು. ಆದರೆ ಕೆಲಸಗಾರರ ಒರಟುತನದಿಂದ ಕಲ್ಲಿನ ಮೇಲಿದ್ದ ಮೊದಲ ಮತ್ತು ಕೊನೆಯ ಪದಗಳು ಅಳಿಸಿ ಹೊಗಿದ್ದವು. ಈ ಅನಾಹುತಕ್ಕೆ ಕಾರಣ ಸಮಾಧಿಯ ಕಲ್ಲನ್ನು ಕೀಳುವಾಗ ನಾಶವಾಗಿರಲು ಸಾಧ್ಯವೆಂದು ಕೆಲವು ವಿದ್ವಾಂಸರ ಅಭಿಪ್ರಾಯವಾಗಿದೆ. ಕಲ್ಲನ್ನು ಪಕ್ಕಕ್ಕೆ ಸರಿಸಿ ಫಿಲೋಮಿನರವರ ಪಾರ್ಥೀವ ಶರೀರವನ್ನು ಹೊರ ತೆಗೆಯುವ ವೇಳೆಯಲ್ಲಿ ಒಂದು ಮಣ್ಣಿನ ಮಡಕೆಯು ಗೋಚರಿಸಿತ್ತು. ಮಡಕೆಯು ಅರ್ದ ಒಡೆದು ಚುರಾಗಿತ್ತು. ಮಡಕೆಯ ಅಂಚಿಗೆ ಒಣಗಿದ ರಕ್ತದ ಕಲೆಯ ಗುರುತುಗಳಿದ್ದವು. ಆದ್ದರಿಂದ ಕನ್ಯ ಫಿಲೋಮಿನ ಅಂತಹ ಸಾವನ್ನು ಹೊಂದಿರಬಹುದೆಂದು ನೈಜ ಸೂಚನೆ ಇದಾಗಿತ್ತು. ಅಂತೆಯೆ ಅದಿ ಧರ್ಮಸಭೆಯಲ್ಲಿ ಕ್ರಿಸ್ತನಿಗಾಗಿ ಪ್ರಾಣತೆತ್ತವರ ರಕ್ತವನ್ನು ಶೇಖರಿಸಿ ಸಮಾಧಿಯಲ್ಲಿಡುವ ಪುಣ್ಯ ಪದ್ದತಿ ರೂಢಿಯಲ್ಲಿತ್ತು ಎಂದು ನಮಗೆ ಅರಿವಾಗುತದೆ. ಕಾರಣಾಂತರಗಳಿಂದ ಇಂತಹ ಸುಕಾರ್ಯವನ್ನು ಕ್ರೈಸ್ತರು ಮಾಡಲು ಸಾಧ್ಯವಾಗದ್ದಿದಲ್ಲಿ ಅನ್ಯ ಮತಸ್ಥರ ಮೂಲಕ ಅಥವಾ ಕಟುಕರಿಂದಲೆ ರಕ್ತ ಸಾಕ್ಷಿಗಳ ರಕ್ತವನ್ನು ಶೇಖರಿಸಿ ಅವರವರ ಸಮಾಧಿಗಲಲ್ಲಿ ಭೂ ಸ್ಥಾಪನೆ ಮಾಡುವ ಪುಣ್ಯ ಕಾರ್ಯವು ರೂಢಿಯಲ್ಲಿತ್ತು. ಕಲಾಕಾರಾನೋರ್ವನು ದರ್ಶನದಲ್ಲಿ ಸಂತ ಫಿಲೋಮಿನರವನ್ನು ಕಂಡು ಅವರ ಜೀವನ ಕಥನವನ್ನು ಈ ರೀತಿ ಬಣ್ಣಿಸಿದ್ದಾನೆ."ನಾನು ದರ್ಶನದಲ್ಲಿ ಹತಾಶನಾದ ಕ್ರೂರ ಚಕ್ರವರ್ತಿ ಡಯಾಕ್ಲಿಷಿಯನನ್ನು ಕಂಡೆ, ಹೇಗಾದರೂ ಫಿಲೋಮಿನಾರನ್ನು ವಿವಾಹವಾಗಬೆಕೆಂದು ಅತನು ನಿರ್ಧರಿಸಿಧನು. ಆದ್ದರಿಂದ ತನ್ನ ವೀರಾವೆಶವನ್ನು ಪ್ರದರ್ಶಿಸುತ್ತ ರಾಜ್ಯಡಂಬರದಿಂದ ಮೆರೆಯುವುದರ ಮೂಲಕ ಫಿಲೊಮಿನ ತನ್ನ ಭಲೆಗೆ ಬಿಳಬಹುದೆಂದು ಭಾವಿಸಿದ್ದನು. ಆದರೆ ಫಿಲೋಮಿನರ ದೃಡ ಮನಸ್ಸನ್ನು ಮರಳುಗೊಲಿಸಲಾಗದೆ ಮೃಗದಂತೆ ಕ್ರೂರವಾಗಿ ವರ್ತಿಸತೊದಗಿದನು. ಕೊನೆಗೆ ಕ್ರೈಸ್ತ ವಿಶ್ವಾಸಿಗಳಿಗೆಕೊಡುವ ಎಲ್ಲಾ ಕಿರುಕುಳವನ್ನು ಕೊಟ್ಟು ಫಿಲೋಮಿನಾರ ಶಿರಚ್ಚೆಧನ ಮಾಡಿದನು. ಫಿಲೋಮಿನಳು ಸತ್ತ ಕೆಲವು ನಿಮಿಷಗಳಲ್ಲಿ ಮನಸ್ಸು ಭಾದಿಸತೊಡಗಿತು. "ಒ ಎಂತ ದುರದೃಷ್ಟ ನನ್ನ ಪ್ರಿಯತಮೆಯನ್ನು ಕೊಂದೆನ್ನಲ, ಫಿಲೋಮಿನ ಇನೆಂದಿಗೂ ನನಗೆ ದಕ್ಕುವುದಿಲ್ಲವಲ ಆದ್ದರಿಂದ ನಾನು ಬದುಕಿದ್ದರು ಪ್ರಯೊಜನವಿಲ್ಲವಲ?" ಎಂದು ಹೆಳುತ್ತ ತನ್ನ ಕುದಲನ್ನು ಕೆದರಿಕೊಂಡು ಮೈಯನ್ನೆಲ ಪರಚಿಕೊಂದು ನೆಲದಲ್ಲಿ ಬಿದ್ದು ವಿಲವಿಲನೆ ಒದ್ದಾದುತ್ತ ರೋಧಿಸಿದನು" ಎಂದು ತಿಳಿಸುತ್ತಾನೆ. ಸಂತ ಫಿಲೊಮಿನಾರ ಶ್ರೇಷ್ಠ ಭಕ್ತರಾದ ಒಂದನಿಯ ಸ್ವಾಮಿ ಡಾನ್ ಫ್ರಾನ್ಸಿಸ್ ರವರು ತಮ್ಮ ಪುಸ್ತಕದಲ್ಲಿ ದರ್ಶನದ ಬಗ್ಗೆ ರೀತಿ ಉಲ್ಲೇಖಿಸಿದ್ದರೆ "ಒಂದು ದಿನ ನಾನು ಅಜ್ನಾತ ಹಳ್ಳಿಯ ಹಾದಿಯಲ್ಲಿ ನದೆದು ಹೋಗುತ್ತಿರುವಾಗ ಅಪರಿಚಿತ ಸ್ತ್ರೀ ಒರ್ವಳು ನನ್ನತ್ತ ಬರುತ್ತಿರುವುದನ್ನು ಕಂಡೆನು. ಆಕೆ ನನ್ನನ್ನುದ್ದಿಶಿಸಿ, ನಿಮ್ಮ ದೇವಾಲಯದಲ್ಲಿ ಸಂತ ಫಿಲೋಮಿನಾರ ಚಿತ್ರಪಟವನ್ನು ಸ್ಥಾಪಿಸಿರುವದು ನಿಜವೇ? ಹ ಎಂದು ನಾನುತ್ತರಿಸಿದೆದೆ. ಆ ಸಂತಳ ಬಗ್ಗೆ ನಿನಗೇನು ತಿಳಿದಿದೆ? ಎಂದು ಮರು ಪ್ರಶ್ನೆ ಹಾಕಿದಳು. ನನಗೆ ಸ್ವಲ್ಪ ಮಾತ್ರವೇ ಗೊತ್ತಿದೆ. ಈ ವರೆಗೆ ಆಕೆ ಹೇಗೆ ರಕ್ತಸಾಕ್ಷಿಯದಳೆಂದು, ಸಮಾಧಿಯ ಕಲ್ಲಿನನಿಂದ ಮಾತ್ರ ತಿಳಿದಿದೆ ಎಂದೆನು. "ಇದಕ್ಕಿಂತ ಹೆಚ್ಚೀನಾದರು ಈ ಸಂತಳ ಬಗ್ಗೆ ಗೊತ್ತಾ? ಎಂದು ಆಕೆ ಕೇಳಿದಳು "ಇಲ್ಲ" ಎಂದೆನು. ಹಾಗಾದರೆ ಇನ್ನೂ ಈ ಸಂತಳ ಬಗ್ಗೆ ಹೆಚ್ಚು ತಿಳಿಯಲಿಕ್ಕಿದೆ. ಅವೆಲ್ಲವು ತಿಳಿದಾಗ, ಭಕ್ತರು ವಿಶ್ವಾಸದಲ್ಲಿ ವೃದ್ದಿಯಾಗುವರು ಎಂದಳು. ಹಾಗಾದರೆ ನನಗೆ ಸಂತ ಫಿಲೊಮಿನಾರ ಬಗ್ಗೆ ತಿಳಿಸಿಕೊಡಿ ಎಂದೆನು. ಆಗ ಆ ಸ್ತ್ರೀಯೂ ಹೇಗೆ ಡಯಾಕ್ಲೀಷಿಯನ್ನನ ಉಪಟಳಕ್ಕೆ ಫಿಲೋಮಿನಾ ಸಿಲುಕಿ ರಕ್ತ ಚೆಲ್ಲಿದ ಚರಿತ್ರೆಯನ್ನು ವಿವರವಾಗಿ ನನಗೆ ತಿಳಿಸಿದಳು. ಹೀಗೆ ಹೇಳುತ್ತಾ ಆಂತ್ಯದಲ್ಲಿ ಅದೃಶ್ಯಳಾದಳು. ಕನ್ಯಾಸ್ತ್ರೀ ಒರ್ವಳಿಗೆ ಸಂತ ಫಿಲೋಮಿನಾರವರಲ್ಲಿ ಅಚಲ ಭಕ್ತಿಯಿತ್ತು. ಆಕೆಯು ಅಪನಂಬಿಕೆ ಮತ್ತು ಅಶುದ್ಧತೆಯಿಂದ ಹೇಗೆ ಮುಕ್ತಗೊಂಡಳು ಎಂದು ಈ ರೀತಿ ತಿಳಿಸಲಾಗಿದೆ. ಕನ್ಯಾಸ್ತ್ರೀಯವರ ಹತ್ತಿರ ಸಂತ ಫಿಲೋಮಿನರ ಚಿಕ್ಕ ಸ್ವರೂಪವಿತ್ತು.ಅದೂಂದು ದಿನ, ಸಂತ ಫಿಲೋಮಿನಾರವರು ಹೇಗೆ ರಕ್ತ ಸಾಕ್ಷಿಯಾದರೆಂದು ಕನ್ಯಾಸ್ತ್ರೀಯು ಧ್ಯಾನಿಸುತ್ತಿರುವಗ ಆಕೆಯು ದರ್ಶನದಲ್ಲಿ " ನನ್ನ ಪ್ರೀತಿಯ ಸಹೋದರಿಯೆ, ಹತ್ತನೇ ಆಗಸ್ಟ್ ರಂದು ನಾನು ಜೀವಿಸಲಿಕ್ಕಾಗಿ ಸತ್ತೆನು. ಸ್ವರ್ಗಾ ನಂದವನ್ನು ಸವಿಯಲು ನನ್ನ ಧಣಿಯಾದ ಯೇಸುಸ್ವಾಮಿ ನನ್ನನು ನಿರಂತರ ಸಂತಸಕ್ಕೆ ಕೊಂಡೊಯ್ದರು."ಇದನ್ನು ಮನುಷ್ಯನ ಶಕ್ತಿ ಗ್ರಹಿಸಲು ಸಾಧ್ಯವಿಲ್ಲ. ಆದ್ದರಿಂದ ನನ್ನ ಪಾರ್ಥಿವ ಶರೀರವನ್ನು ರೋಮಿನಿಂದ ಮೂಗ್ ನಾನೊ ಎಂಬಲ್ಲಿಗೆ ಆಗಸ್ಟ್ ೧ ರಂದು ತಂದು, ನನ್ನ ಪಾರ್ಥೀವ ಶರೀರದ ಅವಶೇಷಗಳಿಗೆ ಸನ್ಮಾನಿಸಲಾಯಿತು". ಎಂದು ತಿಳಿಸಿದಳು.