ಸ್ವಾಮಿ ಹರ್ಷಾನಂದ ಬೆಂಗಳೂರಿನ ಬಸವನಗುಡಿರಾಮಕೃಷ್ಣ ಆಶ್ರಮದ ಹಿರಿಯ ಸನ್ಯಾಸಿ ಹಾಗೂ ಅಧ್ಯಕ್ಷರಾಗಿ ಸೇವಿಸಲ್ಲಿಸಿದವರಾಗಿದ್ದಾರೆ. ಚಿಕ್ಕಂದಿನಿಂದಲೂ 'ಸ್ವಾಮಿ ವಿವೇಕಾನಂದ'ರ ವಿಚಾರಧಾರೆಗಳ ಪ್ರಭಾವಕ್ಕೆ ಒಳಗಾದವರು. 'ರಾಮಕೃಷ್ಣಾಶ್ರಮ'ದ ಸಂಪರ್ಕಕ್ಕೆ ೧೯೪೮ ನೆ ಇಸವಿಯಲ್ಲಿ ಬಂದಾಗ ಅವರ ವಯಸ್ಸು, ೧೫ ವರ್ಷ. ಪ್ರಾರಂಭಿಕದಿನಗಳಲ್ಲಿ ಧರ್ಮದ ಬಗ್ಗೆ ಸಾಕಷ್ಟು ಗೊಂದಲ ಅವರಮನಸ್ಸಿನಲ್ಲಿತ್ತು. ಧರ್ಮದ ಎಲ್ಲಾ ಮಜಲುಗಳಬಗ್ಗೆ ತಿಳಿಯುವ ಕುತೂಹಲಕಾಡಿತ್ತು. 'ಸತ್ಸಂಗ'ಗಳಲ್ಲಿ ಭಾಗವಹಿಸಿ ಮಾಹಿತಿಗಳನ್ನು ಸಂಗ್ರಹಿಸುತ್ತಾ ಬಂದರು. ಹಿಂದೂ ಧರ್ಮದ ಬಗ್ಗೆ ಒಟ್ಟಾರೆಯಾಗಿ ಸವಿಸ್ತಾರವಾಗಿ ಮಾಹಿತಿ ಸಂಗ್ರಹಿಸುವ ಆಶಯದಿಂದ ಒಂದು ಪುಸ್ತಕವನ್ನು ಸಂಪಾದಿಸುವ ಆಶೆಯಂತೆ ತಯಾರಾದ,ಅವರ 'ದೀರ್ಘಕಾಲೀನ ಕನಸು' ನನಸಾಯಿತು. 'ಹಿಂದೂ ಧರ್ಮದ ಬಗ್ಗೆ ವಿವರಣಾತ್ಮಕ ವಿಶ್ವಕೋಶ',(ಮೂರು ಸಂಪುಟಗಳಲ್ಲಿ), “A Concise Encyclopaedia of Hinduism', ಬೆಂಗಳೂರಿನ 'ಬುಲ್ ಟೆಂಪಲ್ ರಸ್ತೆ'ಯಲ್ಲಿರುವ, 'ರಾಮಕೃಷ್ಣ ಮಠ'ದ, 'ರಾಮಕೃಷ್ಣ ಮುಕ್ತಸಭಾಂಗಣ'ದಲ್ಲಿ, ೨೦೦೮, ರ, ಮೇ ತಿಂಗಳ, ಶನಿವಾರ,೩೧, ರಂದು, 'ಭಾರತದ ಮಾಜಿ ರಾಷ್ಟ್ರಪತಿ', 'ಭಾರತರತ್ನ, ಡಾ.ಎ.ಪಿ.ಜೆ.ಅಬ್ದುಲ್ ಕಲಾಮ್,' ರವರ ಹಸ್ತದಿಂದ ಸಾರ್ವಜನಿಕರಿಗೆ 'ವಿಶ್ವಾರ್ಪಣೆ'ಯಾಯಿತು.

ಚಿತ್ರ:Harshanandaji-1.png
'ಭಾರತದ ಮಾಜಿ ರಾಷ್ಟ್ರಪತಿ,' 'ಭಾರತರತ್ನ, ಡಾ.ಎ.ಪಿ.ಜೆ.ಅಬ್ದುಲ್ ಕಲಾಮ್,' ರವರು 'ಸ್ವಾಮಿ ಹರ್ಷಾನಂದ' ರನ್ನು ಅಭಿನಂದಿಸುತ್ತಿದ್ದಾರೆ

'ಹರ್ಷಾನಂದ'ರು 'ರಾಮಕೃಷ್ಣಾಶ್ರಮ'ಕ್ಕೆ ಸೇರಿದ್ದು, ೧೯೫೪ ರಲ್ಲಿ. 'ಜೀವನವನ್ನೆಲ್ಲಾ ಸಮಾಜದ ಸೇವೆಗೆ ಮುಡಿಪಿಟ್ಟು' ೧೯೬೨ ರಲ್ಲಿ 'ಸನ್ಯಾಸದೀಕ್ಷೆ'ಯನ್ನು ಸ್ವೀಕರಿಸಿದರು. ನಂತರ ಕೆಳಗೆ ಕಂಡ ಅನೇಕ ಕೇಂದ್ರಗಳಲ್ಲಿ ಸೇವೆಸಲ್ಲಿಸಿದ್ದಾರೆ. ಉದಾಹರಣೆಗೆ :

  • ಮಂಗಳೂರು, ರಾಮಕೃಷ್ಣಾಶ್ರಮ.
  • ಮೈಸೂರು, ರಾಮಕೃಷ್ಣಾಶ್ರಮ.
  • ಅಲಹಾಬಾದ್, ರಾಮಕೃಷ್ಣಾಶ್ರಮ.

ಮೊದಲು, 'ಕಲ್ಕತ್ತಾದ ಬೇಲೂರ್ ಮಠ'ದಲ್ಲಿ ತರಪೇತಿಗೆಂದು ಸೇರಿ, ಅಲ್ಲಿ ಅಧ್ಯಾಪಕರಾಗಿ ದುಡಿದ ಅನುಭವಿಗಳು. 'ಚಂಡಮಾರುತ' ಬಂದಾಗ ಆಂಧ್ರಪ್ರದೇಶದಲ್ಲಿ ಪರಿಹಾರ ಕೇಂದ್ರದಲ್ಲೂ ದುಡಿದಿದ್ದಾರೆ. ೧೯೮೯ ರಿಂದ ಬೆಂಗಳೂರಿನ ಕೇಂದ್ರದಲ್ಲಿದ್ದಾರೆ. ಇಂಗ್ಲೀಷ್, ಕನ್ನಡ, ಸಂಸ್ಕೃತಗಳಲ್ಲಿ ಅಪಾರ ಜ್ಞಾನವಿದೆ. ಅವರು ರಚಿಸಿದ ಹಲವಾರು ಪುಸ್ತಕಗಳನ್ನು ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದೆ. ಅವರು ಪ್ರಸಕ್ತದಲ್ಲಿ ಹಿಂದೂಧರ್ಮದ ವಿಶ್ವಕೋಶವೊಂದರ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹರ್ಷಾನಂದರ ಹಲವು ವಿಸ್ತಾರವಾದ ಪ್ರಬಂಧಗಳೆಲ್ಲಾ ಕಿರುಹೊತ್ತಿಗೆಗಳ ರೂಪುಗೊಂಡು ದೇಶವಿದೇಶಗಳ ಭಕ್ತಾದಿಗಳಿಗೆ ಹಲವಾರು ಭಾಷೆಗಳಲ್ಲಿ ಲಭ್ಯವಿವೆ. ಭಜನೆಗಳನ್ನು ಹಾಡುವುದೆಂದರೆ ಅವರಿಗೆ ಬಲು ಖುಷಿ. ಕರ್ನಾಟಕ ಹಾಗೂ ಹಿಂದೂಸ್ಥಾನಿ ಶೈಲಿಗಳಲ್ಲಿಸುಶ್ರಾವ್ಯವಾಗಿ ಹಾಡುತ್ತಾರೆ. ಅವುಗಳೆಲ್ಲಾ ಕ್ಯಾಸೆಟ್ ಹಾಗೂ ಸಿ.ಡಿ ಗಳ ರೂಪದಲ್ಲಿ ಹೊರಬಂದಿವೆ. 'Dictionary of Hinduism', 'Dictionary of Indian Culture books,' ಇವೆ. 'ವಿಸ್ತೃತ ಮಾಹಿತಿ' ಇಲ್ಲವೆನ್ನುವುದು ಸ್ವಾಮೀಜಿಯವರ ಅನ್ನಿಸಿಕೆ. ಪದಾನುಕ್ರಮದ ಆಧಾರದ ಮೇಲೆ ರಚಿಸುವ ಆಸೆ ಇತ್ತು.

ಹಿಂದೂ ಧರ್ಮದ ವಿಶೇಷತೆ:

ಬದಲಾಯಿಸಿ

ಅನೇಕತೆಯಲ್ಲಿ ಏಕತೆ. ಪರಧರ್ಮಗಳಲ್ಲಿ ಒಬ್ಬ ಪ್ರವಾದಿ, ಒಂದು ಗ್ರಂಥವನ್ನು ಅನುಮೋದಿಸುತ್ತಾನೆ. ಧಾರ್ಮಿಕ ವಿಧಿ-ವ್ಯಾಖ್ಯಾನಗಳಿವೆ. ಕೆಲವು ನಿರ್ದಿಷ್ಟ ವಿಚಾರಗಳಲ್ಲಿ ಹಿಂದೂ ಧರ್ಮದಲ್ಲೂ ಹಲವು ಗೊಂದಲಗಳಿವೆ. ಅವುಗಳನ್ನು ನಿವಾರಿಸುವ ಪ್ರಯತ್ನ, ಅವರು ಸಂಗ್ರಹಿಸಿ ಬರೆದ ವಿಶ್ವಕೋಶದಲ್ಲಿದೆ. ವಿಭಿನ್ನ ಮತಗಳ ಶ್ರೇಷ್ಠತೆಯನ್ನು ಎತ್ತಿ ಸಾರುವ ಗ್ರಂಥಗಳಿಂದ ಸಮಗ್ರ ಹಿಂದೂ ಧರ್ಮದ ಬೀಸು ಅರ್ಥಗುವುದಿಲ್ಲ. ಅವರು ರಚಿಸಿದ ವಿಶ್ವಕೋಶದಲ್ಲಿ ಹಿಂದೂ ಧರ್ಮದ ಏಕತೆಯನ್ನು ಎತ್ತಿ ಹಿಡಿಯುವ ಪರಿಕಲ್ಪನೆಯನ್ನು ಗುರುತಿಸಬಹುದು.

ಧರ್ಮವೆಂದರೆ

ಬದಲಾಯಿಸಿ

ಒಂದು ಜೀವನ ಪದ್ಧತಿಯ ಪ್ರತೀಕ. ಸತತ ಗತಿಶೀಲ ಹಾಗೂ ವಿಕಾಸವನ್ನೇ ಪ್ರಮುಖ ಗುಣವಾಗುಳ್ಳ ಜೀವನಪದ್ಧತಿ ಬದಲಾದಂತೆ ಧಾರ್ಮಿಕ ಕಟ್ಟುನಿಟ್ಟಿನ ವಿಚಾರಗಳು ಬದಲಾಗುತ್ತವೆ. ಉದಾಹರಣೆಗೆ ಮನುಸ್ಮೃತಿಯನ್ನು ನಾವು ಪ್ರಮಾಣವಾಗಿ ಒಪ್ಪಲು ಸಾಧ್ಯವಿಲ್ಲ. ಇದರ ಜಾಗದಲ್ಲಿ ಪರಾಶರ ಸಂಸೃತಿಯನ್ನು ಗೌರವಿಸುತ್ತೇವೆ.

ಹಿಂದೂ ಧರ್ಮದ ವ್ಯಾಖ್ಯಾನ

ಬದಲಾಯಿಸಿ

ಸ್ವಾಮಿ ಹರ್ಷಾನಂದರು, ಕೊಡುವ 'ಹಿಂದೂ ಧರ್ಮದ ವ್ಯಾಖ್ಯಾನ' ಒಟ್ಟಾರೆ, ಹೀಗಿರಬಹುದು : ಕಾಲಾನುಕ್ರಮದಲ್ಲಿ ಧರ್ಮದ ಪ್ರಮುಖವಾಹಿನಿಗೆ ಸೇರಿಕೊಂಡ, ಹಾಗೂ ಇಂಗಿಹೋದ ಆದರ್ಶಗಳಲ್ಲಿ ಇಂದಿಗೂ ಉಳಿದು ಬಂದಿರುವುದನ್ನು ನಾವು ಆಧುನಿಕ ಹಿಂದೂ ಧರ್ಮವೆನ್ನುತ್ತೇವೆ. ನಾವು ಪ್ರತಿಪಾದಿಸುತ್ತಿರುವ ಅಧ್ಯಾತ್ಮದ ಅಂಶಗಳೆಲ್ಲಾ ವೇದೋಕ್ತಜೀವನಾದರ್ಶಗಳೆ. ಧರ್ಮಗಳೆಲ್ಲದರ ಮೂಲಾದರ್ಶಗಳು ಸಚ್ಚಿದಾನಂದವನ್ನು ಹೊಂದಲು. ಶರಣರು, ದಾಸರು, ಅನುಭಾವಿಗಳು ರಚಿಸಿರುವ ಜನಪದ-ಆಶಯಗಳ ಕೃತಿಗಳನ್ನು ಸ್ವಾಗತಿಸುತ್ತದೆ. 'ದೈವಾರಾಧನ ಪದ್ಧತಿ'ಯನ್ನೂ ಗೌರವಿಸುತ್ತದೆ. ಇದನ್ನೇ ರಾಮಕೃಶ್ಣಾಶ್ರಮವೂ ಪ್ರತಿಪಾದಿಸುವುದು.

ವಿವರಣಾತ್ಮಕ ಹಿಂದೂ ವಿಶ್ವಕೋಶ

ಬದಲಾಯಿಸಿ

ಸ್ವಾಮೀಜಿಯವರ ಅವಿರತ ಪರಿಶ್ರಮದ ನಂತರ, ಮೂರು ಸಂಪುಟಗಳ "ವಿವರಣಾತ್ಮಕ ಹಿಂದೂ ವಿಶ್ವಕೋಶ", ಹೊರಬಂದಿದೆ. ಹಿಂದೂಧರ್ಮದ ಎಲ್ಲಾ ವಿಚಾರಗಳನ್ನು ಒಳಗೊಂಡಿದೆ. ಪ್ರತಿ ಸಂಪುಟವೂ ೭೦೦ ಪುಟಗಳಷ್ಟಿರುತ್ತದೆ. ಸಾಗರವನ್ನು ನಿಖರವಾಗಿ ಪರಿಚಯಿಸುವ ಕಾರ್ಯವನ್ನು ಮಾಡಿದ್ದಾರೆ. ಸಮಗ್ರ ಮಾಹಿತಿಗಳು ಇದರಲ್ಲಿ ದೊರೆಯುತ್ತವೆ. ಬಿಡುಗಡೆಗೆ ಮುನ್ನವೇ ಸುಮಾರು ೨,೫೦೦ ಪ್ರತಿಗಳಿಗೆ ಬೇಡಿಕೆಗಳು ಬಂದಿವೆ. ನಿರ್ದಿಷ್ಟಜಾತಿ, ಮೂಲಭೂತವಾದಿ ಧೋರಣೆ, ಪಂಥಗಳನ್ನು ಎತ್ತಿಹಿಡಿಯುವ ಮಿತಿಗಳಿಂದ ಬಹಳ ದೂರವಿದೆ.

ಈ ಕೃತಿಯ ವಿವರಗಳು

ಬದಲಾಯಿಸಿ
  1. ಹಿಂದೂ ಧರ್ಮದ ಸನಾತನ ಪರಂಪರೆ, ವೈಚಾರಿಕ ಅಗಾಧತೆ, ಧರ್ಮಕ್ಕೆಂದು ಬದುಕನ್ನು ಮುಡಿಪಾಗಿಟ್ಟು ಪ್ರತಿದಿನಗಳನ್ನು ಪಾವನಗೊಳಿಸುವ ಸಾಧಕರು, ಹೀಗೆ ಯಾವದೇ ದೃಷ್ಟಿಯಿಂದ ನೋಡಿದರೂ ಅದರ ಆಳ-ವಿಸ್ತಾರ ಹಿರಿದಾಗುತ್ತಲೇ ಹೋಗುತ್ತದೆ.
  2. ಧಾರ್ಮಿಕ ಶ್ರದ್ಧಾಳುಗಳ ಕೋರಿಕೆಯಂತೆ, ಧರ್ಮ, ತತ್ವ ಸಂಪ್ರದಾಯ, ಅಧ್ಯಾತ್ಮಿಕತೆ, ಉತ್ಸವ, ಯಾತ್ರಾಕ್ಷೇತ್ರಗಳ ವಿವರಣೆ, ಜ್ಯೋತಿಷ, ಸಂತರ ಆತ್ಮಕಥೆಗಳು, ಸಂಸ್ಕೃತಭಾಷೆ, ಸಾಹಿತ್ಯ, ಧಾರ್ಮಿಕ ಸಂಸ್ಥೆಗಳು, ೪ ವೇದಗಳ ಸಾರ, ಯಜ್ಞಯಾಗಾದಿಗಳು, ಸಮಗ್ರಮಾಹಿತಿಗಳ ಕಣಜವಾಗಿದೆ. ಪ್ರಮುಖ ಉಪನಿಷತ್ತುಗಳು, ಮಹಾಪುರಾಣ, ಕಿರು ಉಪನಿಷತ್, ಉಪಪುರಾಣಗಳು, ರಾಮಾಯಣ ಮಹಾಭಾರತಗಳನ್ನು ಸಂಕ್ಷಿಪ್ತವಾಗಿ ಅರ್ಥಪೂರ್ಣವಾಗಿ ಹೇಳಿದ್ದಾರೆ. ಬುದ್ಧ, ಜೈನ, ಹಾಗೂ ಸಿಖ್ ಧರ್ಮದ ಸ್ಥಾಪಕರ ಆತ್ಮಕಥೆಗಳನ್ನೂ ಒಳಗೊಂಡಿದ್ದು ಸುಮಾರು ೨೦೦ ರೇಖಾಚಿತ್ರಗಳಿವೆ. ನೂರಾರು ಛಾಯಾಚಿತ್ರಗಳಿವೆ. ವಿವರಗಳೆಲ್ಲಾ ಇಂಗ್ಲೀಷ್ ಭಾಷೆಯ ಅಕ್ಷರದ ಶ್ರೇಣಿಯಲ್ಲಿವೆ. ಬಹುತೇಕ ಶೀರ್ಷಿಕೆಗಳು ಸಂಸ್ಕೃತದಲ್ಲಿವೆ. ಅಂತರ ರಾಷ್ಟ್ರೀಯ ಮಾನ್ಯತೆ ಪಡೆದ ಶಬ್ದ ಸೂಚಕ ಸಂಕೇತಗಳಿಂದ ಸಂಸ್ಕೃತ ಶಬ್ದಗಳ ಉಚ್ಚಾರಣೆಯನ್ನೂ ಸೂಚಿಸಿರುವುದು ಸರ್ವ ಗ್ರಾಹ್ಯವನ್ನಾಗಿಸಿದೆ.

೧೨ ಜನವರಿ ೨೦೨೧ ರಂದು ವಿವೇಕಾನಂದ ಜಯಂತಿಯಂದು ಅವರು ಬೆಂಗಳೂರಲ್ಲಿ ನಿಧನರಾದರು. ಅವರಿಗೆ ೯೧ ವರ್ಷ ವಯಸ್ಸಾಗಿತ್ತು.[]

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2021-01-12. Retrieved 2021-01-15. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)

ಬಾಹ್ಯ ಸಂಪರ್ಕ

ಬದಲಾಯಿಸಿ