ಸ್ವರ ಸಾಮರಸ್ಯ

ಸಂಗೀತದ ಅಂಶ

ಸಂಗೀತದಲ್ಲಿ ಸ್ವರ ಸಾಮರಸ್ಯ ಎಂದದರೆ ಸ್ಥಾಯಿಗಳು, ನಾದಗಳು, ಸ್ವರಗಳು ಅಥವಾ ವಾದ್ಯದ ಸ್ವರಮೇಳಗಳ ಸಮೀಕರಣ.[೧] ಸ್ವರ ಸಾಮರಸ್ಯದ ಅಧ್ಯಯನವೆಂದರೆ ಸ್ವರಮೇಳಗಳು, ಅವುಗಳ ರಚನೆ ಮತ್ತು ಸ್ವರಮೇಳ ಪ್ರಗತಿಗಳು ಮತ್ತು ಅವುಗಳನ್ನು ಆಳುವ ಮೂಲತತ್ವಗಳ ಸಂಪರ್ಕ.[೨] ಸ್ವರ ಸಾಮರಸ್ಯವು ಸಂಗೀತದ ಶೃಂಗೀಯ ರೂಪವನ್ನು ತಿಳಿಸುತ್ತದೆ, ಇದನ್ನು ಇಂಪಾದ ಸಂಗೀತದ ರೇಖೆಯಿಂದ ಅಥವಾ ಸಮತಲ ರೂಪದಿಂದ ಪ್ರತ್ಯೇಕಿಸುತ್ತದೆ.[೩] ಪ್ರತಿಸ್ಥಾಯಿ, ಎಂದರೆ ಇಂಪಾದ ಸಂಗೀತದ ಸಮ್ಮಿಶ್ರಣ ಮತ್ತು ಪಾಲಿಫೊನಿ, ಅಂದರೆ ಬೇರೆ ಬೇರೆ ಸ್ವತಂತ್ರ ಧ್ವನಿಗಳ ಜೊತೆಗಿನ ಸಂಬಂಧ, ಇವು ಕೆಲವೊಮ್ಮೆ ಸ್ವರ ಸಾಮರಸ್ಯದಿಂದ ಪ್ರತ್ಯೇಕಿಸುತ್ತದೆ.

ಸ್ವರ ಸಾಮರಸ್ಯದ ಪ್ರಮುಖ ಸಾಮಾನ್ಯವಾದ್ಯ ಸ್ವರಮೇಳಯನ್ನು ಮೂರು ಧ್ವನಿಗಳಿಂದ ರಚಿಸಲಾಗಿದೆ.ಅವುಗಳ ಆವರ್ತನ ನಿಷ್ಫತ್ತಿಯು ಅಂದಾಜು 6:5:4. ಆದಾಗ್ಯೂ ನೈಜ ಪ್ರದರ್ಶನಗಳಲ್ಲಿ ಮೂರನೆಯದು ಕೆಲವೊಮ್ಮೆ 5:4ಕ್ಕಿಂತ ದೊಡ್ಡದಾಗಿರುತ್ತದೆ. ನಿಷ್ಫತ್ತಿ 5:4ಯು 386 ಸೆಂಟ್‌ಗಳ ಸ್ಥಾಯಿಗಳಿಗೆ ಸರಿಹೊಂದುತ್ತದೆ, ಆದರೆ ಸಮನಾದ ಮೂರನೇಯ ತಾರಕ 400 ಸೆಂಟ್ಸ್ ಮತ್ತು ಪೈಥಗೊರಸ್‌ನ ಮೂರನೇಯ ನಿಷ್ಫತ್ತಿಯು 81:64, 408 ಸೆಂಟ್‌ಗಳಾಗಿರುತ್ತದೆ. ಪ್ರಮುಖ ಪ್ರದರ್ಶನಗಳಲ್ಲಿ ಆವರ್ತನಗಳನ್ನು ಅಳೆಯುವುದು ಈ ಶ್ರೇಣಿಯಲ್ಲಿ ಪ್ರಮುಖವಾದ ಮೂರನೇಯದರ ಗಾತ್ರವನ್ನು ದೃಡೀಕರಿಸುತ್ತದೆ ಮತ್ತು ಧ್ವನಿ ಹೊರಗಿದ್ದರೂ ಹೊಂದಿಕೊಂಡಂತೆ ಕಾಣುತ್ತದೆ. ಆದಾಗ್ಯೂ ಆವರ್ತನ ನಿಷ್ಪತ್ತಿಗಳು ಮತ್ತು ರಾಗಮಾಲಿಕೆಯ ಫಲನಗಳ ನಡುವೆ ಸರಳ ಸಂಬಂಧವಿಲ್ಲ.

ಅರ್ಥ ನಿರೂಪಣೆ, ಪದದ ಮೂಲ ಮತ್ತು ಬಳಕೆಯ ಇತಿಹಾಸ ಬದಲಾಯಿಸಿ

ಹಾರ್ಮನಿ ಪದವು ಗ್ರೀಕ್‌ನ ἁρμονία (ಹಾರ್ಮೋನಿಯ) ಪದದಿಂದ ಪಡೆಯಲಾಗಿದೆ, ಅರ್ಥ "ಜೋಡಣೆ,ಒಪ್ಪಿಗೆ, ಸ್ವರ ಸಾಮರಸ್ಯ",[೪] ಕ್ರಿಯಾಪದ ἁρμόζω (ಹಾರ್ಮೊಜೊ ) ಎಂದರೆ "ಜೊತೆಯಲ್ಲಿ ಸೇರಿಸು, ಜೋಡಿಸು"ಎಂದಾಗುತ್ತದೆ.[೫] ಈ ಪದವು ಸಾಮಾನ್ಯವಾಗಿ ಸಂಗೀತದ ಎಲ್ಲ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಇಲ್ಲಿ ಸಂಗೀತವನ್ನು ಸಾಮಾನ್ಯವಾಗಿ ಒಂದು ಕಲೆ ಎಂದು ಪರಿಗಣಿಸಲಾಗುವುದು.

ಪುರಾತನ ಗ್ರೀಸ್‌ನಲ್ಲಿ, ಇದು ಉಚ್ಚ ಮತ್ತು ನೀಚ ಸ್ವರಗಳ ವೈರುಧ್ಯದ ಸಂಯೋಗ ಪದವಾಗಿ ನಿರೂಪಣೆಗೊಂಡಿದೆ.[೬] ಏನೇ ಇರಲಿ, ಸಮಾನಾಂತರ ಶಬ್ದ ಹೊರಡಿಸುವ ಸ್ವರಗಳು ಪುರಾತನ ಗ್ರೀಸ್‌ನ ಸಂಗೀತ ಅಭ್ಯಾಸದ ಭಾಗವಾಗಿತ್ತೆ ಎನ್ನುವುದು ಸ್ಪಷ್ಟವಾಗುವುದಿಲ್ಲ."ಹಾರ್ಮೋನಿಯ" ಎಂದರೆ ಬೇರೆ ಬೇರೆ ಸ್ಥಾಯಿಗಳ ನಡುವಿನ ಸಂಬಂಧದ ವರ್ಗೀಕರಣವಷ್ಟೆ ಎನಿಸುತ್ತದೆ. ಮಧ್ಯ ಯುಗದಲ್ಲಿ ಎರಡು ಸ್ಥಾಯಿಗಳ ಸಂಯೋಗದೊಂದಿಗೆ ಶಬ್ಧವನ್ನು ವಿವರಿಸಲು ಈ ಪದವನ್ನು ಬಳಸಲಾಗುತ್ತಿತ್ತು ಮತ್ತು ಇದರ ಪುನರ್ ಬಳಕೆಯಲ್ಲಿ ಮೂರು ಸ್ಥಾಯಿಗಳನ್ನು ಒಟ್ಟಿಗೆ ಧ್ವನಿಸಲು ಬಳಸಲು ಈ ಯೋಜನೆಯನ್ನು ವಿಸ್ತರಿಸಲಾಯಿತು.[೬]

1722ರಲ್ಲಿ ರೇಮ್ಯೂ ಅವರಿಂದ 'Traité de l'harmonie' (ಟ್ರೀಟಸ್ ಆನ್ ಹಾರ್ಮೊನಿ) ಎಂಬ ಪುಸ್ತಕ ಪ್ರಕಟಗೊಂಡಿತು ಅಲ್ಲಿಯವರೆಗೂ ಯಾವುದೇ ಪಠ್ಯದಲ್ಲೂ ಸಂಗೀತದ ಅಭ್ಯಾಸದ ಕುರಿತಾಗಿ ಹಾರ್ಮೊನಿ ಎಂಬ ಶಬ್ದವನ್ನು ತಲೆಬರಹದಲ್ಲಿ ಬಳಸಿರಲಿಲ್ಲ. ಆದರೂ ಈ ವಿಷಯದ ಮೇಲೆ ನಡೆದ ಮೊದಲ ಸೈದ್ಧಾಂತಿಕ ಚರ್ಚೆ ಇದಲ್ಲ. ಮೊದಲೇ ಪ್ರಕಟಗೊಂಡ ಕೆಲವು ಸಂಯೋಜನೆ ತತ್ವಗಳನ್ನು ಅನುಸರಿಸಿ ಈ ಪಠ್ಯದ ತತ್ವಗಳ ಸ್ವರ ಸಾಮರಸ್ಯವು ಸಮರಸವನ್ನು ಅನುಮೋದಿಸುತ್ತವೆ (ಮುದಗೊಳಿಸುವ ಶಬ್ಧ).[೭]

ಈಗಿರುವ ನಿಘಂಟಿನ ವ್ಯಾಖ್ಯಾನಗಳು, ಸಂಕ್ಷಿಪ್ತವಾಗಿ ವಿವರಣೆ ನೀಡುವಾಗ, ಆಧುನಿಕ ಬಳಕೆಯಲ್ಲಿ ಕೆಲವೊಮ್ಮೆ ಸಂದಿಗ್ದಾರ್ಥತೆಯನ್ನು ತೋರಿಸುತ್ತವೆ.[೭] ಸೌಂದರ್ಯಶಾಸ್ತ್ರದ ಪರಿಗಣನೆಯಿಂದ (ಉದಾಹರಣೆಗೆ ಕೇವಲ "ಹಿತಕರ"ಹೊಂದಾಣಿಕೆಯು ಸುಸಂಗತಾಗಿರಬಹುದು) ಅಥವಾ ಸಂಗೀತದ ರಚನೆಯ ದೃಷ್ಟಿಯಿಂದ ( "ಸುಸಂಗತ"ದ ನಡುವಿನ ಭಿನ್ನತೆ (ಏಕಕಾಲದಲ್ಲಿ ಧ್ವನಿಯ ತೀವ್ರತೆ) ಮತ್ತು ಸ್ವರ ಸಂವಾದಿಯಿಂದ (ಅನುಕ್ರಮವಾಗಿ ಧ್ವನಿ ಹೊರಡಿಸುವ ನಾದ) ಸುಸಂಗತ ಉಂಟಾಗುತ್ತದೆ. ಆರ್ನಾಲ್ಡ್ ವೈಟಲ್ ಹೇಳಿಕೆ ಪ್ರಕಾರ:

While the entire history of music theory appears to depend on just such a distinction between harmony and counterpoint, it is no less evident that developments in the nature of musical composition down the centuries have presumed the interdependence—at times amounting to integration, at other times a source of sustained tension—between the vertical and horizontal dimensions of musical space.

— [೭]

ಪಾಶ್ಚಿಮಾತ್ಯ ಸಂಗೀತದಲ್ಲಿ ಆಧುನಿಕ ನಾದದ ಸ್ವರ ಸಾಮರಸ್ಯವು ಸುಮಾರು 1600 ವರ್ಷಗಳ ಸುಮಾರಿಗೆ ಸಂಗೀತ ಚಿಕಿತ್ಸೆಯಲ್ಲಿ ಸ್ಥಾನ ಪಡೆಯಿತು. ಸಮತಲ ಬರವಣಿಗೆಯಿಂದ ‘ಬದಲಾಗಿ‘ (ಸ್ವರಸಂವಾದಿ), ಸಂಯೋಜನೆಯಾದ ಸಂಗೀತದಲ್ಲಿ ಲಂಬವಾದ ಸ್ವರಭಾರಕ್ಕೆ ಒತ್ತು ನೀಡುವುದು ಪುನರುಜ್ಜೀವನ ಕಾಲದಲ್ಲಿ ಸಾಮಾನ್ಯವಾಗಿತ್ತು ಎಂದು ಹೇಳಲಾಗಿದೆ. ಆದರೂ, ಆಧುನಿಕ ಸಿದ್ಧಾಂತಿಗಳು ಇದು ಅತೃಪ್ತಿಕರ ಸಾರ್ವತ್ರಿಕರಣವಾಗಿ ನೋಡುತ್ತಾರೆ. ಕಾರ್ಲ್ ಡಾಲ್‌ಹೌಸ್ ಹೇಳಿದಂತೆ:

It was not that counterpoint was supplanted by harmony (Bach’s tonal counterpoint is surely no less polyphonic than Palestrina’s modal writing) but that an older type both of counterpoint and of vertical technique was succeeded by a newer type. And harmony comprises not only the (‘vertical’) structure of chords but also their (‘horizontal’) movement. Like music as a whole, harmony is a process.

ಸ್ವರ ಸಾಮರಸ್ಯ ಮತ್ತು ಸುಸಂಗತ ಅಭ್ಯಾಸದ ವಿವರಣೆ ಮತ್ತು ವ್ಯಾಖ್ಯಾನಿಸುವಾಗ ಯೂರೋಪಿಯನ್ (ಅಥವಾ ಪಾಶ್ಚಿಮಾತ್ಯ) ಸಂಗೀತ ಸಂಪ್ರದಾಯದ ಕಡೆಗೆ ಪೂರ್ವಗ್ರಹ ಹೊಂದಿರುವಂತೆ ಕಾಣಬಹುದು. ಉದಾಹರಣೆಗೆ ದಕ್ಷಿಣ ಏಷ್ಯಾದ ಸಂಗೀತದಲ್ಲಿ (ಹಿಂದೂಸ್ಥಾನಿ ಮತ್ತು ಕರ್ನಾಟಿಕ್ ಸಂಗೀತ) ಹೆಚ್ಚಾಗಿ ಮಧುರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದನ್ನು ಪಾಶ್ಚಾತ್ಯ ಸಂಗೀತದಲ್ಲಿ ಆಲಾಪ ಎಂದು ಪರಿಗಣಿಸಲಾಗುತ್ತದೆ. ಮಧುರತೆಯನ್ನು ಮೂಲವಾಗಿರಿಸಿಕೊಂಡ ದಕ್ಷಿಣ ಭಾರತದ ಸಂಗೀತವು ಏಕತಾನತೆಯ ಆಲಾಪವನ್ನು ಹೆಚ್ಚಿನ ಸಮಯ ಹೊಂದಿರುತ್ತದೆ. ಇಲ್ಲಿ ಐದನೇ ಮನೆಯಿಂದ ಪ್ರಾರಂಭವಾಗುವ ಸಂಗೀತದ ಸಂಯೋಜನೆಯು ಸಾಮಾನ್ಯವಾಗಿ ಕೊನೆಯವರೆಗೂ ಅದೇ ಮಟ್ಟದಲ್ಲಿ ಮುಂದುವರೆಯುತ್ತದೆ.[೧೦]

ನಿರ್ದಿಷ್ಟವಾದವುಗಳಲ್ಲಿ ಧ್ವನಿಯ ಮಟ್ಟವು ಏಕಕಾಲದಲ್ಲಿ ಉಂಟಾಗುವುದು ತುಂಬಾ ಅಪರೂಪವಾಗಿ ಪರಿಗಣಿಸಲಾಗಿದೆ. ಆದರೂ ಮಟ್ಟದ ಸಿದ್ಧಾಂತ ಮತ್ತು ರಚನೆಗಳು ಹಾಗೂ ಇತರೆ ಹಲವಾರು ಪರಿಗಣನೆಗಳು ಸಂಗೀತಕ್ಕೆ ಸೇರಿವೆ, ಉದಾಹರಣೆಗೆ ರಾಗಗಳ ಸಂಕೀರ್ಣ ವ್ಯವಸ್ಥೆ, ಇದರೊಳಗಡೆ ಸುಸ್ವರ ಮತ್ತು ಸ್ವರಾನುಕ್ರಮ ಇವೆರಡನ್ನು ಸಂಯೋಜಿಸಿ ಪರಿಗಣಿಸಿ ಕ್ರೋಢಿಕರಿಲಾಗುತ್ತದೆ.[೧೧] ಆದ್ದರಿಂದ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಮಟ್ಟಗಳ ಜಟಿಲ ಸಂಯೋಜನೆಗಳು ಏಕಕಾಲದಲ್ಲಿ ಧ್ವನಿಸುತ್ತಿದ್ದರೂ, ಟೆಲೆಯಾಲಾಜಿಕ್ ಸಂಗತ ಅಥವಾ ಸ್ವರಸಂವಾದಿ ಶ್ರೇಢಿಯಾಗಿ ಅಧ್ಯಯನ ನಡೆಸಿಲ್ಲ, ಈ ಬಗ್ಗೆ ಪಾಶ್ಚಿಮಾತ್ಯ ಸಂಗೀತದಲ್ಲಿ ಅಧ್ಯಯನ ನಡೆಸಲಾಗಿದೆ. ಈ ವ್ಯತಿರಿಕ್ತ ಸ್ವರಭಾರವು (ನಿರ್ದಿಷ್ಟವಾಗಿ ಭಾರತೀಯ ಸಂಗೀತಕ್ಕೆ ಎಂದು ಭಾವಿಸಲಾಗಿದೆ) ವಿಭಿನ್ನ ಕಾರ್ಯ ವಿಧಾನ ಅಳವಡಿಸಿಕೊಂಡಲ್ಲಿ ಒಂದು ಹಂತದವರೆಗೆ ತನ್ನಷ್ಟಕ್ಕೆ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ: ಭಾರತೀಯ ಸಂಗೀತದಲ್ಲಿ ಒಂದು ಗಾಯನದ[೧೨] ರಚನೆಯಲ್ಲಿ ಅಭಿವೃದ್ಧಿಪಡಿಸುವಿಕೆ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ.[೧೩] ಪಾಶ್ಚಿಮಾತ್ಯ ಸಂಗೀತದಲ್ಲಿ (ಅಥವಾ ಗತಕಾಲದಲ್ಲಿ) ಅಭಿವೃದ್ಧಿ ಪಡಿಸುವಿಕೆಯು ಮೊದಲೇ ಸಾಂಕೇತಿಸಿದ ಸಂಗೀತದಲ್ಲಿ ಸ್ವಾರಸ್ಯಗೊಳಿಸಬಹುದು. ಸ್ವರ ಪ್ರಸ್ತಾರಕ್ಕಿಂತ ಮೊದಲಿನ ಸಂಗೀತ ಅಥವಾ ಈ ಹಿಂದೆ ಸಂಯೋಜಿಸಲಾದ ಪ್ರತಿಕೃತಿಯಿಂದ ಸಂಯೋಜಿತ ಸಂಗೀತದ ಮಾದರಿಯನ್ನು ತೆಗೆದುಕೊಳ್ಳಲಾಗುವುದು. ಆದ್ದರಿಂದ ಜನಸಾಮಾನ್ಯವಾದ ಸ್ವರ ಸಾಮರಸ್ಯವನ್ನು ಬಳಸಿಕೊಳ್ಳಲಾಗುವುದು.[೧೪]

ಯುರೋಪಿಯನ್ ಶಾಸ್ತ್ರೀಯ ಸಂಗೀತದಲ್ಲಿ ಹೆಚ್ಚಾಗಿ ಈ ಮೊದಲೇ ಸಂಯೋಜಿತವಾಗಿದ್ದ ಸ್ವರಪ್ರಸ್ತಾರವನ್ನು ಬಳಸಲಾಗುತ್ತಿತ್ತು ಮತ್ತು ಇದು ಸಾಂಸ್ಕೃತಿಕ ಭಿನ್ನತೆಯನ್ನು ಹೊಂದಿತ್ತು ಎಂಬುದರಲ್ಲಿ ಸಂಶಯವಿಲ್ಲ. ಗ್ರೋವ್ ಡಿಕ್ಷನರಿ ಆಫ್ ಮ್ಯೂಜಿಕ್ ಆ‍ಯ್‌೦ಡ್ ಮ್ಯೂಜಿಶಿಯನ್ಸ್ (ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್) ಇದನ್ನು ಸ್ಪಷ್ಟವಾಗಿ ಗುರುತಿಸಿದೆ:

In Western culture the musics that are most dependent on improvisation, such as jazz, have traditionally been regarded as inferior to art music, in which pre-composition is considered paramount. The conception of musics that live in oral traditions as something composed with the use of improvisatory techniques separates them from the higher-standing works that use notation.

— [೧೫]

ಪಾಶ್ಚಿಮಾತ್ಯ ಸಂಗೀತದಲ್ಲಿ ಸುಸಂಗತ ಅಭ್ಯಾಸ ಮತ್ತು ಭಾಷೆಯು ತನ್ನಷ್ಟಕ್ಕೆ ವಿಕಸನ ಹೊಂದುತ್ತದೆ, ಮೊದಲೇ ಸಂಯೋಜಿತವಾದ ಈ ಕ್ರಿಯೆಯಿಂದ ಸುಲಭವಾಗಿರುತ್ತದೆ (ಸಿದ್ಧಾಂತವಾದಿಗಳು ಮತ್ತು ಸಂಯೋಜಕರಿಂದ ಮೊದಲೇ ರಚಿತವಾದ ಒಂದೇ ತೆರನಾದ ಕೆಲಸಗಳಿಂದ (ಒಂದು ಹಂತದವರೆಗೆ ಲಯ ಕೂಡ)ಪ್ರದರ್ಶನದ ಸ್ವರೂಪವನ್ನು ಬದಲಾಯಿಸದೆ ಹಾಗೆಯೇ ಮಟ್ಟವು ಉಳಿಯುತ್ತದೆ).

ಐತಿಹಾಸಿಕ ನಿಯಮಗಳು ಬದಲಾಯಿಸಿ

ಸಂಗೀತ ಪ್ರದರ್ಶನದ ಕೆಲವು ಸಂಪ್ರದಾಯಗಳಾದ ಸಂಯೋಜನೆ,ಮತ್ತು ಸಿದ್ಧಾಂತವು ಸ್ವರ ಸಾಮರಸ್ಯದ ನಿರ್ದಿಷ್ಟ ನಿಯಮಗಳನ್ನು ಹೊಂದಿದೆ. ಈ ನಿಯಮಗಳು ಸಹಜ ಲಕ್ಷಣಗಳ ಮೇಲೆ ಆಧಾರವಾಗಿರುತ್ತವೆ ಉದಾಹರಣೆಗೆ ಪೈಥಾಗೋರಿಯನ್ ರಾಗದ ನಿಯಮವನ್ನು ಉದಾಹರಿಸಬಹುದಾಗಿದೆ. ಈ ಪೈಥಾಗೋರಿಯನ್ ರಾಗ ನಿಯಮದ ಎಲ್ಲ ಅನುಪಾತಗಳು ("ಸುಸಂಗತತೆ"ಯು ಪ್ರಮಾಣದಲ್ಲಿ ಗ್ರಹಣ ಸಂಬಂಧಿಯಾಗಿ ಇಲ್ಲವೇ ತನ್ನಷ್ಟಕ್ಕೆ ಅಂತರ್ಗತ ವಾಗಿರುತ್ತದೆ) ಅಥವಾ ಸುಸಂಗತತೆ ಮತ್ತು ಅನುರಣನ ("ಸುಸಂಗತತೆ"ಯು ಧ್ವನಿಯ ಸಹಜಗುಣದಲ್ಲಿ ಅಂತರ್ಗತವಾಗಿರುತ್ತದೆ) ಸ್ವಾಭಾವಿಕವಾಗಿರುತ್ತದೆ, ಈ ಎಲ್ಲಾ ಲಕ್ಷಣಗಳಿಗೆ ಹತ್ತಿರದಲ್ಲಿದ್ದು ಮಟ್ಟಗಳು ಮತ್ತು ಸುಸಂಗತತೆ ಸುಮಧುರತೆ ಅಥವಾ ಸರಳತೆ ಹೆಚ್ಚಾಗುವಂತೆ ಮಾಡುತ್ತದೆ. ಪೈಥಾಗೋರಿಯನ್‌ನ ರೇಶಿಯೊ ಗ್ರಹಣಸಂಬಂಧಿ ಸುಸಂಗತತೆ ಕುರಿತು ಸ್ಥೂಲವಾದ ಅಭಿಪ್ರಾಯ ನೀಡಿದಾಗ ಅವರು ಸಾಂಸ್ಕೃತಿಕ ಅಂಶಗಳಿಗೆ ಮಹತ್ವ ನೀಡಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಪಾಶ್ಚಿಮಾತ್ಯ ಧಾರ್ಮಿಕ ಸಂಗೀತದಲ್ಲಿ ಮೊದಲಿಗೆ ಸಮಾನಾಂತರವಾದ ಸ್ಥಾಯಿ ನೀಡಲಾಗುತ್ತಿತ್ತು; ಈ ಸ್ಥಾಯಿಯು ಮೂಲವು ಸರಳ ಹಾಡಿನ (ಪ್ಲೇನ್‌ಸಾಂಗ್) ಸ್ಪಷ್ಟತೆಯನ್ನು ಕಾಯ್ದುಕೊಳ್ಳುತ್ತದೆ. ಈ ಕೃತಿಗಳು ಕ್ಯಾಥೆಡ್ರಾಲ್‌ನಲ್ಲಿ ರಚಿಸಿ ಪ್ರದರ್ಶನಗೊಳ್ಳುತ್ತಿತ್ತು, ಮತ್ತು ಅನುರಣಿಸುವ ತರಂಗಗಳನ್ನು ಬಳಸಿಕೊಂಡು ಗೌರವಯುತವಾದ ಕೆಥೆಡ್ರಾಲ್‌ನಲ್ಲಿ ಸುಸಂಗತತೆ ರಚಿಸಲಾಗುತ್ತಿತ್ತು. ಬಹುವಿಧ ನಾದ ಹೊರಡಿಸುವ ಸಂಗೀತ ವಾದ್ಯ ಅಭಿವೃದ್ಧಿಗೊಂಡಿತು, ಆದರೂ, ಇಂಗ್ಲೀಶ್ ಶೈಲಿ ಸ್ವರಪ್ರಾಸವು ಮೂರನೇಯ ಮತ್ತು ನಾಲ್ಕನೇಯ ಮನೆಗಳ ಬಳಕೆ ಹೆಚ್ಚಾಗಿ ಸಮಾನಾಂತರ ಸ್ಥಾಯಿಯು ನಿಧಾನವಾಗಿ ಬದಲಾವಣೆ ಹೊಂದಿತು. ಇಂಗ್ಲೀಷ್ ಶೈಲಿಯು ತುಂಬಾ ಮಧುರವಾದ ಸ್ವರವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಮತ್ತು ಇದು ಉತ್ತಮವಾಗಿ ಬಹುವಿಧ ಸ್ವರಪ್ರಸ್ತಾರಕ್ಕೆ ಹೊಂದಿಕೊಳ್ಳುತ್ತದೆ. ಮತ್ತು ಬರವಣಿಗೆಯಲ್ಲಿಯೂ ಕೂಡ ಇದು ಒಂದು ಮಟ್ಟದ ಸರಳರೇಖಾ ತತ್ವಕ್ಕೆ ಅಷ್ಟು ಬದ್ಧವಾಗಿಲ್ಲದ್ದನ್ನು ಕಾಣಬಹುದಾಗಿದೆ. ಮೊದಲಿನ ಸಂಗೀತವು ಮೂರುಸ್ವರದ ಬಳಕೆಯನ್ನು ನಿಷೇಧಿಸಿತ್ತು, ಏಕೆಂದರೆ ಇದರ ಅಪಶ್ರುತಿಯು ದೆವ್ವದ ಜೊತೆ ಹೊಂದಿಕೊಂಡಿದೆ ಎಂದು, ಮತ್ತು ಸಂಯೋಜಕರು ಮ್ಯೂಜಿಕ್ ಫಿಕ್ಟಾ ಮೂಲಕ ಪರಿಗಣಿಸಬಹುದಾದ ಸಮಯದಲ್ಲಿ ಇದರ ಬಳಕೆಯನ್ನು ಹೊರಗಿಡುತ್ತಿದ್ದರು. ಹೊಸದಾದ ಮೂರು ಭಾಗದ ಸುಸಂಗತ ವ್ಯವಸ್ಥೆಯಲ್ಲಿ, ಕಾರ್ಯನಿರ್ವಹಣೆಯ ಅಪಶ್ರುತಿಯು ಪ್ರಮುಖವಾದ ಸ್ವರಮೇಳಯಲ್ಲಿ ಇದರ ಬಳಕೆ ಸಾಮಾನ್ಯವಾಗಿ ಅಗತ್ಯವಾಗಿರುವಂತೆ ಮಾಡಿ ಮೂರು ನಾದವನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ.

ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸ್ವರಗಳುವು ಏಕಕಾಲದಲ್ಲಿ ಹೊರಡುವಂತೆ ಮಾಡಿದ್ದರ ಪರಿಣಾಮವಾಗಿ ಹೆಚ್ಚಿನ ಸ್ವರ ಸಾಮರಸ್ಯವು ಬಂದಿದೆ, ಇದರಿಂದಾಗಿ ಆರ್ಪೆಜಸ್ ಅಥವಾ ಹಾಕೆಟ್‌ ಬಳಕೆಯ ಮೂಲಕ ಒಂದೇ ಒಂದು ಮಧುರ ಸಾಲನ್ನು ತಂಬಾ ಉತ್ತಮವಾಗಿ ಧ್ವನಿಸುವಂತೆ ಮಾಡಲು ಸಾಧ್ಯವಾಗುತ್ತದೆ. ವಿಲಕ್ಷಣ ಸಂಗೀತದ ಅವಧಿಯ ಹಲವಾರು ಸಂಗೀತಗಳು ಏಕ ಸ್ವರಮೇಳಗಳದ್ದಾಗಿದೆ. ಉದಾಹರಣೆಗೆ ಸೋಲೊ ವಯಲಿನ್‌ಗಾಗಿ ಬಾಷ್‌ನ ಸೊನಾಟಾಸ್ ಮತ್ತು ಪ್ಯಾಟ್ರಿಯಾಸ್ ಎಂದು ಹೇಳಬಹುದು. ಸೂಕ್ಷ್ಮವಾದ ಸ್ವರ ಸಾಮರಸ್ಯವು ತುಂಬಾ ಸ್ವರಮೇಳ ಹೊಂದಿರುವ ಉಪಕರಣಗಳಿಗಿಂತ ಹೆಚ್ಚಿನದಾಗಿ ಏಕ ಸ್ವರಮೇಳಗಳಲ್ಲಿ ಉತ್ತಮವಾಗಿರುತ್ತದೆ; ಕೆಳಗೆ ನೋಡಿ:

 
ಸ್ವರ ಸಾಮರಸ್ಯವನ್ನು ಸೂಚಿಸಿದ ಉದಾಹರಣೆಯಲ್ಲಿ ಜೆ.ಎಸ್. ಬಾಶ್ಸ್‌ ಸೆಲ್ಲೊ ಸ್ಯೂಟ್ ಸಂಖ್ಯೆ ಜಿಯಲ್ಲಿ 1, ಬಿಎಮ್‌ಡಬ್ಲು‌ನಲ್ಲಿ 1007, ಬಾರ್‌ನಲ್ಲಿ 1.

ವಿಧಗಳು ಬದಲಾಯಿಸಿ

ಕಾರ್ಲ್ ಡಾಲ್‌ಹೌಸ್ (1990) ಸಹ (ಕೋಆರ್ಡಿನೇಟ್) ಮತ್ತು ಆಧೀನ ಸ್ವರ ಸಾಮರಸ್ಯ ದ ನಡುವೆ ಭಿನ್ನತೆಯನ್ನು ತೋರಿಸುತ್ತಾನೆ. ಸ್ವರ ಸಾಮರಸ್ಯವು ಶ್ರೇಣೀಕೃತ ಸ್ವರ ಪ್ರಸ್ತಾರವೊಂದರ ಸ್ವರಗಳ ಪರಸ್ಪರ ಸಂಬಂಧ ಅಥವಾ ನಾದದ ಸ್ವರ ಸಾಮರಸ್ಯಕ್ಕೆ ಸಂಬಂಧಿಸಿದಾಗಿದೆ ಎಂದು ಇತ್ತೀಚಿನ ದಿನಗಳಲ್ಲಿ ಕಂಡುಬಂದಿದೆ. ಹಾಗೆಯೇ ಸ್ವರ ಸಾಮರಸ್ಯವು ಪ್ರಾಚೀನ ಮಧ್ಯಯುಗದ ಮತ್ತು ನವೋದಯ ಕಾಲದ tonalité ancienne ಎಂಬ ನುಡಿಗಟ್ಟಿಗೆ ಸಂಬಂಧಿಸಿದ್ದಾಗಿದೆ. " ಈ ನುಡಿಗಟ್ಟಿನ ಅರ್ಥವು ಧ್ವನಿಯಲ್ಲಿಯ ಏರಿಳಿತವು ಒಂದರ ನಂತರ ಒಂದರಂತೆ ಭಾವನೆಗೆ ಔನತ್ಯವನ್ನು ನೀಡದೆ ಗುರಿ ಸಾಧನೆಯ ಕಡೆಗೆ ಮುಖಮಾಡಿದ ಬೆಳವಣಿಗೆಯನ್ನು ಸೂಚಿಸುತ್ತದೆ" ಮೊದಲನೇಯ ಸ್ವರಮೇಳಯು ಎರಡನೇಯ ಸ್ವರಮೇಳಯ ಸ್ವರದೊಂದಿಗೆ ಹೊಂದಿಕೊಳ್ಳುವ ಶ್ರೇಣಿಯನ್ನು ನಿರ್ಮಾಣ ಮಾಡುತ್ತದೆ, ಎರಡನೇ ಸ್ವರಮೇಳಯು ಮೂರನೇಯ ಸ್ವರಮೇಳಯ ಜೊತೆ ಹೊಂದಿಕೊಳ್ಳುವ ಸ್ವರ ಶ್ರೇಣೀಯನ್ನು ಹೊಂದಿರುತ್ತದೆ. ಆದರೆ ಮೊದಲಿನ ಸ್ವರಮೇಳಯಲ್ಲಿಯ ಸ್ವರವು ಎರಡನೇ ಸ್ವರಮೇಳಯಲ್ಲಿಯ ಸ್ವರಕ್ಕಿಂತ ಭಿನ್ನವಾಗಿರುತ್ತದೆ ಹಾಗೂ ಉಳಿದವೂ ಕೂಡ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಸಹಸ್ವರ ಸಾಮರಸ್ಯವು, ಅಧೀನ ಸ್ವರ ಸಾಮರಸ್ಯದೊಂದಿದೆ ನೇರವಾದ ಸಂಬಂಧ ಹೊಂದಿರುವುದಕ್ಕಿಂತ ಹೆಚ್ಚಾಗಿ ಪರೋಕ್ಷ ಸಂಬಂಧ ಹೊಂದಿರುತ್ತದೆ. ಸ್ಥಾಯಿ ಆವರ್ತನವು ಅನರೂಪವಾದ ಸ್ವರ ಸಾಮರಸ್ಯವನ್ನು ಸೃಷ್ಟಿಸುತ್ತದೆ. ಈ ರೀತಿಯ ಸ್ಥಾಯಿ ಆವರ್ತನವನ್ನು ಅಲ್ಬನ್ ಬೆರ್ಗ್, ಜಾರ್ಜ್ ಪರ್ಲ್, ಆರ್ನಾಲ್ಡ್ ಶಾನ್‌ಬರ್ಗ್, ಬೇಲಾ ಬಾರ್ಟೋಕ್, ಇದನ್ನು ತುಂಬ ಬಳಕೆ ಮಾಡಿದರು ಮತ್ತು ಎಡ್ವರ್ಡ್ ವೆರ್ಸಸ್ ತನ್ನ ಡೆನ್ಸಿಟಿ 21.5 ಯಲ್ಲಿ ಕೂಡ ಬಳಸಿದ.

ಇತರೆ ವಿಧದ ಸ್ವರ ಸಾಮರಸ್ಯವು ಸ್ಥಾಯಿಯ ಮೇಲೆ ಆಧಾರ ಹೂಂದಿದ್ದು ಸ್ವರಮೇಳ ರಚನೆಯಲ್ಲಿ ಈ ಸ್ವರ ಸಾಮರಸ್ಯವನ್ನು ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಂಗೀತದಲ್ಲಿ ಬಳಸಲಾಗುವ ಸ್ವರಮೇಳಗಳು ಹೆಚ್ಚಾಗಿ "ಟರ್ಷಿಯನ್‌" ಸ್ವರ ಸಾಮರಸ್ಯವನ್ನು ಆಧಾರವಾಗಿಟ್ಟುಕೊಂಡಿವೆ. ಅಥವಾ ಸ್ವರಮೇಳ ವಾಧ್ಯಗಳು ಮೂರನೇಯ ಸ್ಥಾಯಿಯನ್ನು ಹೊಂದಿದಂತವುಗಳಾಗಿವೆ. ಸ್ವರಮೇಳ C ಯನ್ನು ತಾರಕ 7, C-E ಮೂರನೇಯು ತಾರಕ; E-G ಮೂರನೇಯ ಮಂದ್ರ; ಮತ್ತು G ಯಿಂದ B ವರೆಗೆ ಮೂರನೇಯ ತಾರಕವಾಗಿರುತ್ತದೆ. ಇತರೆ ವಿಧದ ಸ್ವರ ಸಾಮರಸ್ಯವು ಕ್ವಾರ್ಟಲ್ ಸ್ವರ ಸಾಮರಸ್ಯ ಮತ್ತು ಕ್ವಿಂಟಲ್ ಸ್ವರ ಸಾಮರಸ್ಯ ಒಳಗೊಂಡಿದೆ.

ಸ್ಥಾಯಿ ಭೇದಗಳು ಬದಲಾಯಿಸಿ

ಸ್ಥಾಯಿ ಭೇದವು ಎರಡು ಬೇರೆ ಬೇರೆ ಸಂಗೀತ ಶ್ರುತಿ ಅಥವಾ ಸ್ಥಾಯಿ ಮಟ್ಟಗಳ ನಡುವಿನ ಸಂಬಂಧವನ್ನು ಹೊಂದಿರುತ್ತದೆ. ಉದಾಹರಣೆಗೆ, ಇಂಪಾದ ಸಂಗೀತವಾದ ‘ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್’, ಮೊದಲ ಎರಡು ಸಾಲುಗಳು ಅಥವಾ ಸ್ವರಚಿಹ್ನೆ (ಮೊದಲ ಟ್ವಿಂಕಲ್ ಪದ) ಮತ್ತು ಎರಡನೇ ಸಾಲು (ಎರಡನೇ ಟ್ವಿಂಕಲ್) ಒಂದನೇ ಐದರ ಮಧ್ಯದ ಸ್ಥಾಯಿಮಟ್ಟವಾಗಿದೆ. ಇದರ ಅರ್ಥವೇನೆಂದರೆ ಮೊದಲ ಎರಡು ಸಾಲಿನ ಸ್ಥಾಯಿ ಅಥವಾ ಶ್ರುತಿ ಮಟ್ಟವು ‘ಸಿ’ ಆಗಿದ್ದರೆ, ಎರಡನೇ ಸಾಲುಗಳು ‘ಜಿ’ ಸ್ಥಾಯಿಮಟ್ಟವನ್ನು ಹೊಂದಿರುತ್ತದೆ. ನಾಲ್ಕು ಸ್ವರಶ್ರೇಣಿ ಸಾಲುಗಳು ಅಥವಾ ಏಳು ವಿಶ್ರೇಣಿ ಸ್ವರದ (ಒಂದು ಸ್ವರಾಷ್ಟಕಕ್ಕೆ ಸೇರಿರದ ಸ್ವರಗಳುಳ್ಳ) ಸಾಲುಗಳು (ನಿಖರವಾಗಿ ಐದನೆಯ), ಅದಕ್ಕಿಂತ ಹೆಚ್ಚು ಹೊಂದಿರುತ್ತದೆ.

ಈ ಕೆಳಗಿನವು ಸಾಮಾನ್ಯ ಸ್ಥಾಯಿಭೇದಗಳು:

ಮೂಲ ಮೂರನೇ ತಾರಕ ಮೂರನೇ ಮಂದ್ರ ಐದನೇಯದು
ಸಿ ಇ♭ ಜಿ. (
ಡಿ♭ ಎಫ್ ಎಫ್♭ ಎ♭
ಡಿ ಎಫ್♯ ಎಫ್
ಇ♭ ಜಿ. ( ಜಿ♭ ಬಿ♭
ಜಿ♯ ಜಿ. ( ಬಿ
ಎಫ್ ಎ♭ ಸಿ
ಎಫ್♯ ಎ♯ ಸಿ♯
ಜಿ. ( ಬಿ ಬಿ♭ ಡಿ
ಎ♭ ಸಿ ಸಿ♭ ಇ♭
ಸಿ♯ ಸಿ
ಬಿ♭ ಡಿ ಡಿ♭ ಎಫ್
ಬಿ ಡಿ♯ ಡಿ ಎಫ್♯

ಆದ್ದರಿಂದ ನಿರ್ದಿಷ್ಟ ಸ್ಥಾಯಿಭೇದಗಳ ಜತೆ ಸಂಯೋಜಿತ ಸಾಲುಗಳನ್ನು ಸೇರಿಸಿದಾಗ ಉಂಟಾಗುವ ಸ್ವರಮೇಳವು ಇಂಪಾದ ಸ್ವರವನ್ನು ಸೃಷ್ಠಿ ಮಾಡುತ್ತದೆ. ಉದಾಹರಣೆಗೆ, ಸಿ ಸ್ವರಮೇಳದಲ್ಲಿ ಮೂರು ಸ್ವರಚಿಹ್ನೆಗಳಿದ್ದು, ಸಿ. ಇ ಮತ್ತು ಜಿ ಗಳಾಗಿವೆ. ಸಿ ಎಂಬುದು ಸ್ವರಮೇಳದ ಮೂಲ ನಾದ ಅಥವಾ ಸ್ವರ, ಇದು ಇ ಮತ್ತು ಜಿ ಗಳ ಜತೆ ಸೇರಿ ಇಂಪಾದ ಸ್ವರವನ್ನು ರಚಿಸಲು ಸಹಾಯಮಾಡುತ್ತದೆ. ಮತ್ತು ಜಿ7ರ (ಜಿ ಸ್ವರಶ್ರೇಣಿಯಲ್ಲಿನ ಪಂಚಮ ಸ್ವರದ 7ನೇ ಮಟ್ಟ) ಸ್ವರ ಮೇಳವು, ಜಿ ಮೂಲಸ್ವರದ ಜತೆಗೆ ಮುಂದಿನ ಸಮನಾದ ಸ್ವರಮೇಳದಲ್ಲಿ (ಈ ಸಂದರ್ಭದಲ್ಲಿ ಬಿ,ಡಿ ಮತ್ತು ಎಫ್ ಸ್ಥಾಯಿಮಟ್ಟದ ಸಹಾಯದಿಂದ) ಇಂಪಾದ ಸ್ವರವನ್ನು ರಚಿಸಲಾಗುತ್ತದೆ.

ಸಂಗೀತ ಸ್ವರಶ್ರೇಣಿಯಲ್ಲಿ, 12 ಶ್ರುತಿಗಳು ಅಥವಾ ಸ್ಥಾಯಿಗಳು ಇರುತ್ತವೆ. ಎಲ್ಲ ಸ್ಥಾಯಿಗಳು ಸಹ ಸ್ವರಶ್ರೇಣಿಯ ಸ್ವರಾಷ್ಟಕದ ಒಂದು ಸ್ವರ ಅಥವಾ ಹಂತವಾಗಿ ಅಭ್ಯಸಿಸಲ್ಪಡುತ್ತದೆ. ಇದರಲ್ಲಿ ಹೆಸರಿಸುವ ಎ, ಬಿ, ಸಿ, ಡಿ, ಇ, ಎಫ್ ಮತ್ತು ಜಿ ಎಲ್ಲವೂ ಮುಖ್ಯ. ಸ್ಥಾಯಿಭೇದಗಳು ಮುಖ್ಯವಲ್ಲ. ಇಲ್ಲಿ ಒಂದು ಉದಾಹರಣೆಯಿದೆ:

ಸಿ ಡಿ ಎಫ್ ಜಿ. ( ಬಿ ಸಿ
ಡಿ ಎಫ್♯ ಜಿ. ( ಬಿ ಸಿ♯ ಡಿ

ಕೆಲವೊಮ್ಮೆ ನೋಡಿದಂತೆ ಸ್ವರಚಿಹ್ನೆ ಇಲ್ಲದಿದ್ದರೂ ಸಹ ಸ್ವರಾಷ್ಟಕದ ಒಂದು ಸ್ವರದಲ್ಲಿ ಯಾವಾಗಲೂ ಹೊಂದಾಣಿಕೆಯಾಗುತ್ತದೆ. ಮೂಲಸ್ವರ ಅಥವಾ ಮೊದಲ ಸ್ವರಾಷ್ಟಕದ ಸ್ವರಚಿಹ್ನೆಯು ಸ್ವರಶ್ರೇಣಿಯ ಯಾವುದೇ 12 ಸ್ವರಗಳ ಸ್ವರಗಳಿಂದ ರಚಿತವಾಗಿರುತ್ತದೆ. ಉಳಿದ ಎಲ್ಲ ಸ್ವರಗಳು ಕೆಳಸ್ಥಾನಕ್ಕೆ ತಳ್ಳಲ್ಪಡುತ್ತದೆ. ಆದ್ದರಿಂದ ಸಿ ಸ್ಥಾಯಿಯು ಸ್ವರಚಿಹ್ನೆಯು ಮೂಲಸ್ವರವಾದಾಗ ನಾಲ್ಕನೇ ಸ್ವರಾಷ್ಟಕದ ಒಂದು ಸ್ವರ ಎಫ್ ಆಗಿರುತ್ತದೆ. ಆದರೆ ಡಿ ಮೂಲಸ್ವರವಾದಾಗ ನಾಲ್ಕನೇ ಸ್ವರಾಷ್ಟಕದ ಒಂದು ಸ್ವರ ಜಿ ಆಗಿರುತ್ತದೆ. ಆದ್ದರಿಂದ ಸ್ವರಚಿಹ್ನೆಯ ಹೆಸರುಗಳನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, ನಾಲ್ಕನೆಯ (ನಾಲ್ಕು-ಹಂತದ ಸ್ಥಾಯಿಭೇದ) ಸ್ವರಸ್ಥಾಯಿಯು ನಾಲ್ಕನೆಯದಾಗಿಯೇ ಇರುತ್ತದೆ. ಮೂಲಸ್ವರದಲ್ಲಿ ಏನಿತ್ತೋ ಅದೇ ಉಳಿಯುತ್ತದೆ. ಅದರಲ್ಲಿ ಯಾವುದೇ ಪ್ರತ್ಯೇಕತೆ ಇಲ್ಲ. ಈ ಸಂಗತಿಯಿಂದ ಹೆಚ್ಚಿನ ಶಕ್ತಿ ಲಭಿಸಿದ್ದು, ಇದರಲ್ಲಿ ಯಾವುದೇ ಹಾಡನ್ನು ನುಡಿಸಬಹುದು ಅಥವಾ ಯಾವುದೇ ಸ್ವರಪ್ರಸ್ತಾರದಲ್ಲಿ ಹಾಡಬಹುದಾಗಿದೆ. ಇದು ಒಂದೇ ರೀತಿಯ ಹಾಡಾಗಿರುತ್ತದೆ. ಎಲ್ಲಿವರೆಗೆ ಸ್ಥಾಯಿಭೇದಗಳು ಇರುತ್ತವೆಯೋ ಅಲ್ಲಿವರೆಗೆ ಒಂದೇ ರೀತಿಯದ್ದಾಗಿರುತ್ತದೆ. ಈ ರೀತಿ ಬೇರೆ ಸ್ವರಪದ್ಧತಿಯಲ್ಲಿ ನುಡಿಸಿದ ಸ್ವರಮೇಳವು ಸ್ವರಪ್ರಸ್ತಾರಕ್ಕೆ ಹೊಂದಿಕೊಳ್ಳುವಂತಿರುತ್ತದೆ.

ಯಾವಾಗ ಸ್ಥಾಯಿಭೇದಗಳು ಸ್ವರಾಷ್ಟಕ ಶ್ರೇಣಿ ಅಥವಾ ಎಂಟು ಸ್ವರಗಳ ಶ್ರೇಣಿಯನ್ನು (12 ಉಪ ಸ್ವರಚಿಹ್ನೆಗಳು) ಮೀರಿಸಿದಾಗ, ಈ ಸ್ಥಾಯಿಭೇದಗಳನ್ನು ‘ವಿಸ್ತಾರವಾದ ಸ್ಥಾಯಿಭೇದಗಳು’ ಎಂಬ ಹೆಸರಿನಲ್ಲಿ ಕರೆಯಲಾಯಿತು. ಇವು ಮುಖ್ಯವಾಗಿ 9ನೇ, 11ನೇ ಮತ್ತು 13ನೇ ಸ್ಥಾಯಿಭೇದಗಳನ್ನು ಒಳಗೊಂಡಿರುತ್ತದೆ. ಜಾಜ್ (Jazz) ಮತ್ತು ಬ್ಲ್ಯೂ ಮ್ಯೂಸಿಕ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ವಿಸ್ತಾರ ಸ್ಥಾಯಿಭೇದಗಳನ್ನು ಈ ಕೆಳಗಿನಂತೆ ಹೆಸರಿಸಲಾಗಿದೆ:

  • ಎರಡನೇ ಸ್ಥಾಯಿಭೇದ + ಸ್ವರಾಷ್ಟಕಶ್ರೇಣಿ = 9ನೇ ಸ್ಥಾಯಿಭೇದ/9ನೇ
  • ನಾಲ್ಕನೇ ಸ್ಥಾಯಿಭೇದ + ಸ್ವರಾಷ್ಟಕಶ್ರೇಣಿ = 11ನೇ ಸ್ಥಾಯಿಭೇದ/11ನೇ
  • 6ನೇ ಸ್ಥಾಯಿಭೇದ + ಸ್ವರಾಷ್ಟಕಶ್ರೇಣಿ = 13ನೇ ಸ್ಥಾಯಿಭೇದ/13ನೇ

ಈ ವರ್ಗೀಕರಣವನ್ನು ಹೊರತುಪಡಿಸಿ, ಸ್ಥಾಯಿಭೇದಗಳು ಸ್ವರಸ್ವಾಮ್ಯವುಳ್ಳ ಮತ್ತು ಸ್ವರಮೇಳವಿಲ್ಲದ (ಅಪಶ್ರುತಿಯ) ಎಂಬ ಎರಡು ಭಾಗಗಳಾಗಿಯೂ ವಿಂಗಡಿಸಲಾಗುತ್ತದೆ. ಈ ಕೆಳಗೆ ವಿವರಿಸಲಾದಂತೆ, ಸ್ವರಮೇಳವುಳ್ಳ ಸ್ಥಾಯಿಭೇದಗಳು ಶಾಂತಭಾವವನ್ನು ತರುತ್ತವೆ ಮತ್ತು ಅಪಶ್ರುತಿಯ ಸ್ಥಾಯಿಭೇದಗಳು ಉದ್ವೇಗ ಭಾವವನ್ನು ತರುತ್ತವೆ.

ಸ್ವರಮೇಳವುಳ್ಳ ಸ್ಥಾಯಿಭೇದಗಳಲ್ಲಿ ಒಂದೇ ಶ್ರುತಿ, ಸ್ವರಾಷ್ಟಕಶ್ರೇಣಿ, ಐದನೇ ಸ್ವರ, ನಾಲ್ಕನೇ ಸ್ವರ ಮತ್ತು ಮೂರನೆಯ ಉಚ್ಚ ಹಾಗೂ ನೀಚ ಸ್ವರಗಳಿಂದ ಗಣನೆಗೆ ಬರುತ್ತವೆ. ಮೂರನೇ ಸ್ವರವು ಅಪೂರ್ಣ ಎಂದು ಗಣನೆಗೆ ತೆಗೆದುಕೊಳ್ಳಲಾಗುತ್ತಿದ್ದು, ಈ ಮೊದಲಿನವು ಪರಿಗಣನೆಗೆ ಒಳಪಡುತ್ತವೆ. ಶಾಸ್ತ್ರೀಯ ಸಂಗೀತದಲ್ಲಿ ನಾಲ್ಕನೇ ಸ್ವರವನ್ನು ಅಪಶ್ರುತಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದರ ಕಾರ್ಯವು ಸ್ವರಸಂವಾದಿಯಾಗಿದೆ.

ಉಳಿದ ಎಲ್ಲ ಸ್ಥಾಯಿಭೇದಗಳು, ಅವುಗಳಾದ ಏಳನೇ, ಒಂಭತ್ತನೇ, ಹನ್ನೊಂದನೇ ಮತ್ತು ಹದಿಮೂರನೇ ಸ್ವರಗಳು ಅಪಶ್ರುತಿ ಮತ್ತು ಅಪಶ್ರುತಿಯನ್ನು ಸುಶ್ರುತಿಯನ್ನಾಗಿ ಪರಿವರ್ತಿಸಲು (ಉದ್ವೇಗ ಭಾವವನ್ನು ತರುವ) ಮತ್ತು ಸಾಮಾನ್ಯವಾದ ಸಿದ್ಧತೆಗಳು (ಸಂಗೀತ ವಿಧಾನದ ಬಳಕೆಯ ಮೇಲೆ ಅವಲಂಭಿತವಾದ) ಗಣನೆಗೆ ಒಳಪಡುತ್ತದೆ.

ವಾದ್ಯದ ಸ್ವರಮೇಳಗಳು ಮತ್ತು ಒತ್ತಡ ಬದಲಾಯಿಸಿ

ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಸ್ವರ ಸಾಮರಸ್ಯವನ್ನು ಸ್ವರಮೇಳಗಳನ್ನು ಬಳಕೆ ಮಾಡುವ ಮೂಲಕ ಹಾಳುಗೆಡವಿದ್ದಾರೆ. ಇವುಗಳನ್ನು ಸ್ಥಾಯಿ ವರ್ಗಗಳ ಜೊತೆಯಲ್ಲಿ ಬಳಸಲಾಗುತ್ತದೆ. ಟರ್ಷಿಯನ್ ಅಥವಾ ಟರ್ಷಿಯಲ್ ಸ್ವರ ಸಾಮರಸ್ಯದಲ್ಲಿ ಆದ್ದರಿಂದ 3ನೇ ಸ್ವರದ ಸ್ಥಾಯಿಭೇದದ ನಂತರ ಹೆಸರಿಸಲಾಯಿತು. ಸ್ವರಮೇಳಗಳ ವಿವಿಧತೆಯನ್ನು ಹುಟ್ಟುಹಾಕಿ ಮತ್ತು 3ನೇ ಸ್ವರದ ಉಚ್ಚ ಮತ್ತು ನೀಚ ಸ್ಥಾಯಿ ಭೇದಗಳ ನಡುವಿನ ಸ್ವರ ಸ್ಥಾಯಿ ಎಂದು ಹೆಸರಿಸಲಾಯಿತು. ಮೂಲ ಸ್ವರದಿಂದ ಪ್ರಾರಂಭಿಸಿ, ನಂತರ ತೃತೀಯ ಸ್ವರವನ್ನು ಮೂಲಸ್ವರಕ್ಕಿಂತ ಹೆಚ್ಚಿಸಿ ಮತ್ತು ಪಂಚಮಾದಿ ಸ್ವರಕ್ಕಿಂತ ಮೇಲಿನ ಮೂಲಸ್ವರ (ಇದು ತ್ರಿಸ್ವರಕ್ಕಿಂತ ಮೇಲ್ಪಟ್ಟ ತ್ರಿಸ್ವರ), ಇತ್ಯಾದಿ ಎಂದು ಗುರುತಿಸಲಾಯಿತು. ( ಸ್ವರಮೇಳದ ಇತರೆ ಪ್ರಕಾರಗಳನ್ನು ಮೂಲ ಸ್ವರದ ವಿರುದ್ಧವಾಗಿ ಅವುಗಳ ಸ್ವರಸ್ಥಾಯಿಯನ್ನು ಅನುಸರಿಸಿ ಹೆಸರು ನೀಡಲಾಯಿತು. ಇದನ್ನು ಸಂಖ್ಯಾಧಾರಿತ ಸ್ವರಮೇಳಯನ್ನು ಅನುಸರಿಸಿ ನೀಡಲಾಗುತ್ತಿರಲಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.) ಸಾಂಪ್ರದಾಯಿಕವಾಗಿ, ಸ್ವರಮೇಳವು ಕೊನೆಪಕ್ಷ 3 ಸದಸ್ಯರನ್ನು ಮುಖ್ಯವಾಗಿ ಹೊಂದಿರಬೇಕು. ಆಗ ಮಾತ್ರ ಅದನ್ನು ಸ್ವರಮೇಳ ಎಂದು ಕರೆಯಲಾಗುತ್ತದೆ. ಆದರೂ ಕೆಲವೊಮ್ಮೆ ಇಬ್ಬರು ಸದಸ್ಯರೂ ಸ್ವರಮೇಳವೆಂದು ಪರಿಗಣಿಸಲಾಗುತ್ತದೆ. ಅತಿಮುಖ್ಯವಾಗಿ ರಾಕ್ ಸಂಗೀತದಲ್ಲಿ (ಶಕ್ತಿಯುತ ಸ್ವರಮೇಳಗಳು ನೋಡಿ) ಇದು ಪರಿಗಣನೆಗೆ ಬರುತ್ತದೆ. ಸ್ವರಮೇಳದಲ್ಲಿ ಮೂರು ಸದಸ್ಯರಿದ್ದರೆ ಅದನ್ನು ಸ್ವರತ್ರಯ ಮೇಳ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಮೂರು ಸದಸ್ಯರನ್ನು ಹೊಂದಿರುತ್ತದೆ. ಏಕೆಂದರೆ ಇದು ಮೂರು ಸದಸ್ಯರಿಂದ ಅತ್ಯವಶ್ಯವಾಗಿ ರಚಿಸಲ್ಪಟ್ಟಿದೆ ( ನಾಲ್ಕನೆಯ ಮತ್ತು ಐದನೆಯ ಸ್ವರಸಾಂಗತ್ಯವು ಇತರೆ ಸ್ಥಾಯಿಭೇದಗಳ ಜತೆ ಸ್ವರಮೇಳವನ್ನು ರಚಿಸುತ್ತದೆ). ಸ್ಥಾಯಿಭೇದಗಳ ಸಂಗ್ರಹದ ವಿಶಾಲತೆಗನುಗುಣವಾಗಿ ಇದು ನಿಂತಿದೆ. ಇದರಿಂದ ವಿವಿಧ ಗುಣಮಟ್ಟದ ಸ್ವರಮೇಳವು ಹುಟ್ಟಿಕೊಳ್ಳುತ್ತದೆ. ಪ್ರಖ್ಯಾತ ಮತ್ತು ಜಾಜ್ ಸ್ವರಸಂಗೀತದಲ್ಲಿ ಹಾಡುಗಾರರ ಮೂಲಸ್ವರದ ಹಲವಾರು ಕಾಲಮಿತಿಗಳು ಮತ್ತು ಗುಣಲಕ್ಷಣಗಳು ಅವರ ಗುಣಮಟ್ಟವನ್ನು ತೋರಿಸುತ್ತದೆ. ಸರಳವಾಗಿ ಮತ್ತು ಸಾಧ್ಯವಾಗುವ ರೀತಿಯಲ್ಲಿ ನಾಮಸೂಚಿ ಪದ್ಧತಿಯನ್ನು ಕಾಯ್ದುಕೊಳ್ಳವುದು, ಕೆಲವು ತೊಂದರೆಗಳನ್ನು ಇಲ್ಲಿ ಒಪ್ಪಿಕೊಳ್ಳಲಾಗುತ್ತದೆ (ಅಂಕಪಟ್ಟಿ ರಚಿಸಬಾರದು). ಉದಾಹರಣೆಗೆ, ಸ್ವರಮೇಳ ಸದಸ್ಯರು ಸಿ, ಇ, ಮತ್ತು ಜಿ ಶ್ರುತಿಯನ್ನು ಸ್ವರತ್ರಯದ ಸಿ ಉಚ್ಚ ಸ್ಥರದಲ್ಲಿ ಹಾಡುತ್ತಾರೆ. ಇದನ್ನು ಸರಳ ಕೊರತೆಯಂದು ಪರಿಗಣಿಸಿ ಸಿ ಸ್ವರಮೇಳ ಎಂದು ಕರೆಯಲಾಗುತ್ತದೆ. ಎ ಬಿ ಸ್ವರಮೇಳ (ಇದರಲ್ಲಿ ಎ-ತಪ್ಪು ಎಂದು ಉಚ್ಚರಿಸಲಾಗುತ್ತದೆ), ಎಬಿ, ಸಿ ಮತ್ತು ಇಬಿ ಸದಸ್ಯರನ್ನು ಇದು ಒಳಗೊಂಡಿದೆ.

ಸಂಗೀತದ ಹಲವಾರು ವಿಧಗಳಲ್ಲಿ, ಮುಖ್ಯವಾಗಿ ಬರಾಕ್ ಮತ್ತು ಜಾಜ್ ಮಾದರಿಯ ಸಂಗೀತಗಳಲ್ಲಿ ಸ್ವರಮೇಳವು ಭಾವೋದ್ರೇಕವನ್ನು ದ್ವಿಗುಣಗೊಳಿಸುತ್ತದೆ. ಹೆಚ್ಚಿನ ಸ್ವರಮೇಳ ಸದಸ್ಯರಿಂದ ಭಾವೋದ್ರೇಕವು ಅಪಶ್ರುತಿಗೆ ಹೋಲುವ ಸ್ಥಾಯಿಭೇದವನ್ನು ಹುಟ್ಟುಹಾಕುತ್ತದೆ. ಇದು ಒಂದು ಅಥವಾ ಹೆಚ್ಚಿನ ಉಳಿದ ಸ್ವರಮೇಳ ಸದಸ್ಯರಿಗೆ ಸಂಬಂಧಪಟ್ಟಿರುತ್ತದೆ. ಟರ್ಷಿಯನ್ ಸಿದ್ಧಾಂತದ ಹಿನ್ನೆಲೆಯಲ್ಲಿ ಸ್ವರಮೇಳವನ್ನು ರಚಿಸುವಾಗ ಮೂರನೇ ಹಂತವನ್ನು ಬಳಸಿಕೊಳ್ಳಲಾಗುತ್ತದೆ. ಇಲ್ಲಿ ಸರಳವಾದ ಒತ್ತಡವನ್ನು ಹಾಕುವ ಮೂಲಕ ಈಗಾಗಲೇ ಬಳಕೆಯಲ್ಲಿರುವ ಮೂಲ ಸ್ವರದ ಮೂರನೇ ಮತ್ತು ಐದನೇ ಮನೆಯನ್ನು ಬಳಸಿಕೊಳ್ಳಲಾಗುತ್ತದೆ. ಇನ್ನೊಮ್ಮೆ ಮೂರನೇಯ ಮತ್ತು ಐದಕ್ಕಿಂತ ಮೇಲಿನದನ್ನು ಬಳಕೆ ಮಾಡುವ ಮೂಲಕ ಹೆಚ್ಚಾಗಿ ಹೊಂದಿಕೊಳ್ಳದ ಸದಸ್ಯನನ್ನು ಬಳಸಿಕೊಳ್ಳಲಾಗುತ್ತದೆ. ಇಲ್ಲಿ ಏಳನೇಯದು ಮೂಲ ಸ್ವರಕ್ಕಿಂತ ತುಂಬಾ ಭಿನ್ನವಾಗಿ ಕಂಡುಬರುತ್ತದೆ ಆದ್ದರಿಂದ ಇದನ್ನು ಸ್ವರಮೇಳದಲ್ಲಿ ಏಳನೇಯದು ಎಂದು ಕರೆಯಲಾಗುತ್ತದೆ. ನಾಲ್ಕು-ಮಟ್ಟುಗಳ ಸ್ವರ ಮೇಳವನ್ನು "ಏಳನೇ ಸ್ವರಮೇಳ" ಎಂದು ಕರೆಯಲಾಗುತ್ತದೆ. ಸ್ವರಮೇಳವನ್ನು ರಚಿಸಲು ತೃತೀಯ ಶೃತಿಯ ಗುಂಪು (stacked) ವೈಯುಕ್ತಿಕ ವೈಶಾಲ್ಯತೆಯನ್ನು ಅವಲಂಬಿಸಿದೆ. ಸ್ಥಾಯಿಭೇದವು ಮೂಲಸ್ವರ ಮತ್ತು ಸ್ವರಮೇಳದ ಸಪ್ತಸ್ವರವು ಉಚ್ಚ, ನೀಚ ಅಥವಾ ಒಂದು ಶ್ರುತ್ಯಂತರ ತಗ್ಗಿಸಿರುವುದರ ನಡುವೆ ಇದೆ. (ಸ್ಥಾಯಿಭೇದದ ಸ್ವರವನ್ನು ಸ್ವಲ್ಪ ಹೆಚ್ಚಿಸಿದಾಗ ಸಪ್ತಸ್ವರ ಮೂಲಸ್ವರವು ಉತ್ಪತ್ತಿಯಾಗುತ್ತದೆ ಮತ್ತು ಈ ಕಾರಣದಿಂದ ಸ್ವರಮೇಳದ ಹೆಸರುಪದ್ಧತಿಯಿಂದ ಹೊರಹೋಗುತ್ತದೆ.) ಹೆಸರು ಪದ್ಧತಿಯು ಕೆಲ ನ್ಯೂನತೆಗಳನ್ನು ಒಳಗೊಂಡಂತೆ, ಸಿ7 ವು ಮೂಲಸ್ವರ, ತೃತೀಯ ಶ್ರೇಣಿ ಮತ್ತು ಪಂಚಮ ಶ್ರೇಣಿಯ ಸ್ವರಮೇಳವನ್ನು ತೋರಿಸುತ್ತದೆ. ಮತ್ತು ಸಪ್ತಸ್ವರವು ಸಿ, ಇ, ಜಿ ಮತ್ತು ಬಿ ಬಿ ಶ್ರೇಣಿಯನ್ನು ಹೊರಹೊಮ್ಮಿಸುತ್ತದೆ. ಉಳಿದ ನಮೂನೆಯ ಸಪ್ತಸ್ವರ ಸ್ವರಮೇಳವು ಸ್ಪಷ್ಟವಾಗಿ ಹೆಸರು ನಮೂದಿಸಿರುತ್ತವೆ. ಅವುಗಳೆಂದರೆ ಸಿ ಉಚ್ಚ 7 (ಸಿ,ಇ, ಜಿ, ಬಿ), ಸಿ ಶ್ರುತಿ ಹೆಚ್ಚಳ 7 (ಇಲ್ಲಿ ಮೇಲಣ ಸ್ವರದಲ್ಲಿ ಹೆಚ್ಚಳವಾಗುವುದು ಪಂಚಮಶ್ರೇಣಿಗೆ ಅನ್ವಯವಾಗುತ್ತದೆ. ಆದರೆ ಸಪ್ತಶ್ರೇಣಿಗೆ ಅನ್ವಯವಾಗುವುದಿಲ್ಲ. (ಅವುಗಳಾದ ಸಿ, ಇ, ಜಿ#, ಬಿಬಿ ಇತ್ಯಾದಿ). (ಹೆಸರುಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾರ್ಡ್ (ಸಂಗೀತ) ಅನ್ನು ನೋಡಿ)

ಮೂರನೇ ಶ್ರುತಿ ಶ್ರೇಣಿಯನ್ನು ಮುಂದುವರಿಸಿದಾಗ ಏಳನೇ ಸ್ವರಮೇಳವು ಭಾವೋದ್ರೇಕವನ್ನು ಹೆಚ್ಚಿಸುತ್ತದೆ ಅಥವಾ ಭಾವೋದ್ರೇಕವನ್ನು ವೃದ್ದಿಸುತ್ತದೆ. (ಅವುಗಳು ಸ್ವರಾಷ್ಟಕ ಶ್ರೇಣಿಗಿಂತ ಹೆಚ್ಚಿದ್ದಲ್ಲಿ ಮೂಲಸ್ವರದ ಮೇಲೆ ತೃತೀಯ ಶ್ರೇಣಿ ಗುಂಪು ಆಗಿರುತ್ತದೆ.) 9ನೇ ಶ್ರೇಣಿ (ನವಕ)ಗಳು, 11ನೇ ಶ್ರೇಣಿ ಮತ್ತು 13ನೇ ಶ್ರೇಣಿಗಳು ಸ್ವರಮೇಳದ ಹೆಸರನ್ನು ಸೃಷ್ಟಿಸುತ್ತದೆ. (ದ್ವಿತೀಯ ಮತ್ತು ತೃತೀಯ ಶ್ರೇಣಿಯನ್ನು ಹೊರತುಪಡಿಸಿ, ಸ್ವರಮೇಳದ ತೃತೀಯ ಶ್ರೇಣಿಯ ವಿಧಗಳನ್ನು ವಿಶಾಲವಾದ ಸ್ಥಾಯಿಭೇದವಾಗಿ ಗುಂಪಿನ ಮೇಲೆ ಹೆಸರಿಸಲಾಗುತ್ತದೆ. ಇದನ್ನು ಸ್ವರಮೇಳದ ಸದಸ್ಯರ ಸಂಖ್ಯೆ ಮೇಲೆ ನಿರ್ಧರಿಸಲಾಗುವುದಿಲ್ಲ. ಸ್ವರಮೇಳದ 9ನೇ ಶ್ರೇಣಿಯಲ್ಲಿ ಐದು ಸದಸ್ಯರು ಮಾತ್ರ ಇರುತ್ತಾರೆ. 9 ಜನ ಇರುವುದಿಲ್ಲ.) 13ನೇ ಶ್ರೇಣಿಯಾಚೆ ಅಸ್ತಿತ್ವದಲ್ಲಿರು ಸ್ವರಮೇಳ ಸದಸ್ಯರು ಹಾಡನ್ನು ಪುನರ್ ಕೇಳುವಂತೆ ವಿಸ್ತೃತಪಡಿಸುತ್ತಾರೆ. ಮತ್ತು ಸಾಮಾನ್ಯವಾಗಿ ಹೆಸರುಪದ್ಥತಿಯಿಂದ ಹೊರನಡೆಯುತ್ತಾರೆ. ಸಂಕೀರ್ಣ ಸ್ವರಮೇಳವು ವಿಸ್ತೃತ ಸ್ವರಮೇಳದ ತಳಹದಿಯಲ್ಲಿ ನಿಂತಿದ್ದು, ಜಾಜ್ ಸಂಗೀತದ ಪ್ರಖ್ಯಾತಿ ಮೇಲೆ ಹುಟ್ಟುಹಾಕಲಾಗಿದೆ.

ಪ್ರಾತಿನಿಧಿಕವಾಗಿ, ಸಾಮಾನ್ಯ ಶಾಸ್ತ್ರೀಯ ಸಂಗೀತ ಕಲಿಕಾ ಹಂತದಲ್ಲಿ ಸ್ವರಮೇಳದ ಅಪಶ್ರುತಿಯನ್ನು (ಭಾವೋದ್ರೇಕದ ಸ್ವರಮೇಳ) ಸ್ವರಮೇಳವಾಗಿ ರೂಪಾಂತರಿಸಿ ಶ್ರುತಿಬದ್ಧ ಸ್ವರಮೇಳವಾಗಿ ಮಾರ್ಪಾಟು ಮಾಡಲಾಗುತ್ತದೆ. ಸ್ವರಮೇಳ ಅಥವಾ ಸ್ವರಸಂಗಾತದ ರಾಗವು ಸಾಮಾನ್ಯವಾಗಿ ಕಿವಿಗೆ ಕೇಳಲು ಆಹ್ಲಾದಕರವಾಗಿರುತ್ತದೆ. ಯಾವಾಗ ಶ್ರುತಿ ಮತ್ತು ಅಪಶ್ರುತಿಗಳ ರಾಗದ ನಡುವೆ ಸಮತೋಲನ ಏರ್ಪಟ್ಟಾಗ ಇದು ಸಾಧ್ಯವಾಗುತ್ತದೆ. ಸಾಮಾನ್ಯ ಪದದಲ್ಲಿ ಹೇಳಬೇಕಾದರೆ, ಭಾವೋದ್ರೇಕ ಮತ್ತು ಶಾಂತತಾ ಭಾವಗಳ ನಡುವೆ ಸಮತೋಲನ ಏರ್ಪಟ್ಟ ಸಂದರ್ಭ ಇದು ಸಾಧ್ಯವಾಗುತ್ತದೆ. ಈ ಕಾರಣದಿಂದಾಗಿ ಸಾಮಾನ್ಯವಾಗಿ ಭಾವೋದ್ವೇಗವು ವಿಷಮಮೇಳವನ್ನು ಕಲ್ಪಿಸುತ್ತದೆ (ಗಾಯನ ಮಾಡಿದ ರಾಗಮೇಳದಲ್ಲಿ ಅಪಶ್ರುತಿ ಸೃಷ್ಟಿಸು) ಮತ್ತು ನಂತರ ದೃಢವಾಗಿರುವುದು.[೧೬]

ವಿಷಮಮೇಳದ ಭಾವೋದ್ರೇಕ ಎಂದರೆ, ಶ್ರುತಿಬದ್ಧ ಸ್ವರಮೇಳದ ಕೃತಿಮಾಲೆಯನ್ನು ನಿಧಾನವಾಗಿ ಅಪಶ್ರುತಿ ಸ್ವರಮೇಳದ ಜತೆ ಸೇರಿಸುವುದು. ಈ ಮಾರ್ಗದಿಂದ ಸಂಗೀತ ರಚನೆಕಾರ ರಕ್ಷಣಾತ್ಮಕವಾಗಿ ಭಾವೋದ್ರೇಕ ಸಂಗೀಕವನ್ನು ನಯವಾಗಿ, ಕೇಳುಗರಿಕೆ ಯಾವುದೇ ಅಡಚಣೆಯಾಗದಂತೆ ರಚಿಸುತ್ತಾನೆ. ಒಮ್ಮೆ ಈ ಹಾಡಿನ ತುಣುಕು ಅಂತಿಮಘಟ್ಟದ ಅರ್ಧಭಾಗ ತಲುಪಿದರೆ, ಕೇಳುಗರು ಭಾವೋದ್ರೇಕವನ್ನು ಕಡಿಮೆ ಮಾಡಿಕೊಂಡು ಶಾಂತತೆ ಅಳವಡಿಸಿಕೊಳ್ಳಲು ಈ ಹಾಡನ್ನು ಬಯಸುತ್ತಾರೆ. ಪ್ರಚಲಿತದಲ್ಲಿರುವ ಶ್ರುತಿಬದ್ಧ ಸ್ವರಮೇಳವನ್ನು ನುಡಿಸಿದಾಗ ಅದು ಹಿಂದಿನ ಸ್ವರಮೇಳದ ಭಾವೋದ್ರೇಕವನ್ನು ದೃಢಪಡಿಸುತ್ತದೆ. ಕೇಳುಗರಿಗೆ ಆಹ್ಲಾದಕರ ರಾಗ ನುಡಿಸಿದಲ್ಲಿ ಭಾವೋದ್ರೇಕವು ಕಡಿಮೆಯಾಗುತ್ತದೆ.[೧೬]

ಸ್ವರ ಸಾಮರಸ್ಯದ ಗ್ರಹಿಕೆ ಬದಲಾಯಿಸಿ

ಸ್ವರ ಸಾಮರಸ್ಯವು ಸ್ವರ ಪ್ರಾಸವನ್ನಾಧರಿಸಿದ್ದು ಇದರ ವ್ಯಾಖ್ಯಾನವು ಪಾಶ್ಚಿಮಾತ್ಯ ಸಂಗೀತದ ಸಂದರ್ಭದಲ್ಲಿ ಹಲವಾರು ಭಾರಿ ಬದಲಾಗಿದೆ. ಮನೋವೈಜ್ಞಾನಿಕ ದೃಷ್ಟಿಯಲ್ಲಿ, ಸ್ವರಪ್ರಾಸವು ನಿರಂತರವಾಗಿ ಅಸ್ಥಿರವಾಗಿರುವಂತಹದ್ದಾಗಿದೆ. ಸ್ವರಪ್ರಾಸವು ಬಹಳ ಬದಲಾಗಬಹುದಾಗಿದೆ. ವಾದ್ಯದ ಸ್ವರಮೇಳ ಅನೇಕ ಕಾರಣಗಳಿಂದ ವ್ಯಂಜನವನ್ನು ಧ್ವನಿಸಬಹುದು.

ಇವುಗಳಲ್ಲಿ ಒಂದು ಗ್ರಹಿಕೆಗೆ ಸಂಬಂಧಿಸಿದ ಕಠೋರತೆಯ ಕೊರತೆಯಿಂದಾಗುತ್ತದೆ. ಆವರ್ತನಾಂಕಗಳು ನಿರ್ಣಾಯಕ ಆವರ್ತನ ಶ್ರೇಣಿಯಲ್ಲಿದ್ದಾಗ ಕಠೋರವೆನಿಸುತ್ತದೆ, ಇದು ಕಿವಿಯ ವಿವಿಧ ಅವರ್ತನಗಳನ್ನು ಬೇರ್ಪಡಿಸುವ ಸಾಮರ್ಥ್ಯದ ಮಾನವಾಗಿರುತ್ತದೆ. ತಾರಕ ಆವರ್ತನಗಳಲ್ಲಿ ನಿರ್ಣಾಯಕ ಆವರ್ತನ ಶ್ರೇಣಿಯು 2 ಮತ್ತು 3 ಸ್ವರಾಂಶಗಳಲ್ಲಿರುತ್ತದೆ ಮತ್ತು ಕಡಿಮೆ ಆವರ್ತನಗಳಲ್ಲಿ ಇದು ಹೆಚ್ಚಾಗುತ್ತದೆ. ಎರಡು ಒಂದೇ ಕಾಲದಲ್ಲಿನ ಸುಸಂಗತ ಸಂಕೀರ್ಣ ಧ್ವನಿಗಳ ಕಠೋರತೆಯು ಅವುಗಳ ವಿಸ್ತಾರನ್ನು ಮತ್ತು ಧ್ವನಿಗಳ ನಡುವಿನ ಸ್ಥಾಯಿಯನ್ನವಂಬಿಸಿರುತ್ತದೆ. ವರ್ಣೀಯ ಸ್ವರಶ್ರೇಣಿಯಲ್ಲಿ ಅತ್ಯಂತ ಕಠೋರವಾದ ಸ್ಥಾಯಿಯೆಂದರೆ ಎರಡನೇ ಮಂದ್ರ ಮತ್ತು ಅದರ ವಿಪರ್ಯಯ ಏಳನೇ ತಾರಕ. ಮಧ್ಯಮ ಹಂತದಲ್ಲಿನ ವಿಶಿಷ್ಟವಾದ ಕಾಲ್ಪನಿಕ ಒಳಗೊಳ್ಳುವಿಕೆಯಿಂದಾಗಿರುವ, ಎರಡನೇ ಕಠೋರ ಸ್ಥಾಯಿಯೆಂದರೆ ಎರಡನೇ ತಾರಕ ಮತ್ತು ಏಳನೇ ಮಂದ್ರವಾಗಿದೆ, ಮೂರುಧ್ವನಿ ಮೂರನೇ ಮಂದ್ರ (ಆರನೇ ತಾರಕ), ಮೂರನೇ ತಾರಕ (ಆರನೇ ಮಂದ್ರ) ಮತ್ತು ನಾಲ್ಕನೇ ಮಧ್ಯಮ(ಐದನೆಯದು)ಗಳನ್ನನುಸರಿಸಿ ಎರಡನೇ ತಾರಕ ಮತ್ತು ಏಳನೇ ಮಂದ್ರ ಬರುತ್ತದೆ.

ಎರಡನೇ ಕಾರಣವೆಂದರೆ ಗ್ರಹಣಕ್ಕೆ ಸಂಬಂಧಿಸಿದ ಸಮ್ಮಿಳನ. ಇದರ ಸಮಸ್ತ ವರ್ಣಪಟಲ ಮತ್ತು ಸುಸಂಗತ ಸರಣಿಯು ಒಂದೇ ತೆರೆನಾಗಿದ್ದರೆ ಗ್ರಹಿಕೆಯಲ್ಲಿ ವಾದ್ಯದ ಸ್ವರಮೇಳಯು ಸಮ್ಮಿಳನವಾಗುತ್ತದೆ. ಇದರ ವ್ಯಾಖ್ಯಾನದ ಪ್ರಕಾರ ತಾರಕ ಸಾಮಾನ್ಯವಾದ್ಯ ಸ್ವರಮೇಳಯು ಮಂದ್ರ ಸಾಮಾನ್ಯವಾದ್ಯ ಸ್ವರಮೇಳಗಿಂತ ಚೆನ್ನಾಗಿ ಸಮ್ಮಿಳನವಾಗುತ್ತದೆ ಮತ್ತು ಏಳನೇ ತಾರಕ-ಮಂದ್ರ ವಾದ್ಯದ ಸ್ವರಮೇಳಯು ಏಳನೇ ತಾರಕ-ಮಂದ್ರ ಅಥವಾ ಏಳನೇ ಮಂದ್ರ-ತಾರಕಕ್ಕಿಂತ ಚೆನ್ನಾಗಿ ಕರಗುತ್ತದೆ. ಈ ವ್ಯತ್ಯಾಸಗಳು ಮೃದುಗೊಳಿಸಿದ ಸಂದರ್ಭಗಳಲ್ಲಿ ತಕ್ಷಣ ಗೋಚರಿಸುವುದಿಲ್ಲ ಆದರೆ ಇದು ಮುಖ್ಯವಾಹಿನಿಯಲ್ಲಿನ ಸಂಗೀತದ ಧ್ವನಿಯಲ್ಲಿ ಏಕೆ ಮೂರುಧ್ವನಿಗಳ ತಾರಕವು ಮೂರುಧ್ವನಿಗಳ ಮಂದ್ರಕ್ಕಿಂತ ಮತ್ತು ಏಳನೇ ತಾರಕ-ಮಂದ್ರವು ಉಳಿದ ಏಳನೇಯದಕ್ಕಿಂತ ಸಾಮಾನ್ಯವಾಗಿ ಹೆಚ್ಚು ಪ್ರಚಲಿತವಾಗಿದೆ ಎಂದು ವಿವರಿಸುತ್ತದೆ (ಮೂರುಧ್ವನಿ ಸ್ಥಾಯಿಯ ಅಪಶ್ರುತಿಯಿದ್ದರೂ). ಈ ಹೋಲಿಕೆಗಳು ಅವುಗಳ ಶೈಲಿಯನ್ನವಲಂಬಿಸಿರುತ್ತದೆ.

ಮೂರನೇ ಕಾರಣವೆಂದರೆ ಅನ್ಯೋನ್ಯತೆ. ಕೆಲವೊಮ್ಮೆ ಸಂಗೀತದ ಪ್ರಸಂಗಗಳಲ್ಲಿ ಕೇಳಿದ ವಾದ್ಯದ ಸ್ವರಮೇಳಗಳು ಹೆಚ್ಚಾಗಿ ವ್ಯಂಜನವನ್ನು ಧ್ವನಿಸಲು ಬಯಸುತ್ತದೆ. ಈ ತತ್ವಗಳು ಪಾಶ್ಚಿಮಾತ್ಯ ಸಂಗೀತದ ನಿಧಾನವಾದ ಐತಿಹಾಸಿಕ ಸುಸಂಗತ ಸಂಕೀರ್ಣತೆಯ ಬೆಳವಣಿಗೆಯನ್ನು ವಿವರಿಸುತ್ತದೆ. ಉದಾಹರಣೆಗೆ, ಸುಮಾರು 1600 ಸಜ್ಜುಗೊಳಿಸದ ಏಳನೇಯ ವಾದ್ಯದ ಸ್ವರಮೇಳಗಳ ಪರಿಚಯವಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ವ್ಯಂಜನ ಎಂದು ಅರಿತುಕೊಳ್ಳುವಂತಾಗುತ್ತದೆ.

ಪಾಶ್ಚಿಮಾತ್ಯ ಸಂಗೀತವು ತಾರಕ ಮತ್ತು ಮಂದ್ರ ಸಾಮಾನ್ಯವಾದ್ಯ ಸ್ವರಮೇಳಗಳನ್ನಾಧರಿಸಿದೆ. ವಾದ್ಯದ ಸ್ವರಮೇಳಗಳು ಸಮ್ಮಿಳನ ಮತ್ತು ಕಠೋರತೆಯ ಕೊರತೆಗಳೆರಡರಲ್ಲೂ ವ್ಯಂಜನ ಆಗಿರುವುದರಿಂದ ಇವುಗಳು ಬಹಳ ಪ್ರಧಾನವಾಗಿದೆ. ಅವುಗಳು ನಾಲ್ಕನೇಯ ಮಧ್ಯಮ/ಐದನೇ ಸ್ಥಾಯಿಗಳನ್ನು ಒಳಗೊಳ್ಳುವುದರಿಂದ ಸಮ್ಮಿಳನವಾಗುತ್ತದೆ. ಅವುಗಳು ಎರಡನೇ ತಾರಕ ಮತ್ತು ಮಂದ್ರ ಸ್ಥಾಯಿಗಳ ಕೊರತೆಯಿಂದ ಕಠೋರತೆಯನ್ನು ಕಳೆದುಕೊಳ್ಳುತ್ತದೆ. ವರ್ಣೀಯ ಸ್ವರ ಶ್ರೇಣಿಯ ಮೂರು ಧ್ವನಿಗಳ ಬೇರೆ ಯಾವುದೇ ಸಂಯೋಜನೆಗಳೂ ಇದನ್ನು ತೃಪ್ತಿಗೊಳಿಸುವುದಿಲ್ಲ.

ಸ್ವರಪ್ರಾಸ ಮತ್ತು ಅಪಶ್ರುತಿಯಲ್ಲಿನ ಸಮತೋಲನ ಬದಲಾಯಿಸಿ

ಪ್ರಾಂಕ್‌ ಜಪ್ಪ ವಿವರಿಸುವಂತೆ,

"The creation and destruction of harmonic and 'statistical' tensions is essential to the maintenance of compositional drama. Any composition (or improvisation) which remains consistent and 'regular' throughout is, for me, equivalent to watching a movie with only 'good guys' in it, or eating cottage cheese."q:Frank Zappa

ಸಂಯೋಜಕ ಪ್ರತ್ಯೇಕ ವ್ಯಂಜನಗಳನ್ನು ಧ್ವನಿಗಳನ್ನು ಬಳಸಿ ಕೇಳುಗನನ್ನು ಓಲೈಸಬಹುದೆಂದು ಹೇಳಲಾಗುವುದಿಲ್ಲ. ಹೆಚ್ಚಿನ ಒತ್ತಡವೂ ಕೇಳುಗನನ್ನು ವಿಚಲಿತಗೊಳಿಸುತ್ತದೆ. ಈ ಎರಡರ ಸಮತೋಲನವು ಕೆಲವೊಮ್ಮೆ ಅಪೇಕ್ಷಣೀಯವಾಗಿರುತ್ತದೆ.

ಸಮಕಾಲೀನ ಸಂಗೀತದಲ್ಲಿ ಒತ್ತಡವು ಬರೊಕೆ ಅಥವಾ ಶಾಸ್ತ್ರೀಯದ ಕಾಲಕ್ಕಿಂತ ಕಡಿಮೆ ಸಜ್ಜುಗೊಂಡಿತ್ತು ಮತ್ತು ಕಡಿಮೆ ರಚಿಸಲ್ಪಟ್ಟಿತ್ತು, ಆದ್ದರಿಂದ ಹೊಸ ಶೈಲಿಗಳಾದ ಗಝ್ ಮತ್ತು ಬ್ಲೂಸ್‌ಗಳು ಸಾಮಾನ್ಯವಾಗಿ ಒತ್ತಡವನ್ನೊಳಗೊಂಡಿರುವುದಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಇವನ್ನೂ ಗಮನಿಸಿ ಬದಲಾಯಿಸಿ

  • ಬಾರ್ಬರ್‌ಶಾಪ್ ಸಂಗೀತ
  • ಸ್ವರಪ್ರಾಸ ಮತ್ತು ಅಪಶ್ರುತಿ
  • ಸಂಗೀತವಾದ್ಯಗಳ ಸ್ವರಮೇಳ(ಸಂಗೀತ)
  • ಸ್ವರಮೇಳ
  • ವರ್ಣೀಯ ಸ್ವರವಾದ್ಯಗಳ ಸ್ವರಮೇಳ
  • ವರ್ಣೀಯ ತೃತೀಯ ಸ್ವರ
  • ಸಹಸ್ವರ ರಾಗ
  • ರಾಗಮಾಲಿಕೆಯ ಸರಣಿಗಳು
  • ಸುಸಂಗತಗೊಳಿಸಿದ ಸ್ವರಶ್ರೇಣಿ
  • ಸ್ವರೈಕ್ಯ (ಸಂಗೀತ)
  • ಸಂಗೀತದ ಪರಿಭಾಷೆಯ ಪಟ್ಟಿ
  • ಗಣಿತದಲ್ಲಿನ ಸಂಗೀತದ ಸ್ವರಶ್ರೇಣಿ
  • Musica universalis
  • ಪೀಟರ್ ವೆಸ್ಟರ್‌ಗಾರ್ಡ್‌ನ ಧ್ವನಿಯ ಸಿದ್ಧಾಂತ
  • ವಿಳಂಬ
  • ಸಂಗೀತದ ಭೌತಶಾಸ್ತ್ರ
  • ಸ್ವರಪ್ರಸ್ತಾರವೊಂದರ ಸ್ವರಗಳ ಪರಸ್ಪರ ಸಂಬಂಧ
  • ಏಕೀಕೃತ ಕ್ಷೇತ್ರ
  • ಏರುಧ್ವನಿ

ಉಲ್ಲೇಖಗಳು ಬದಲಾಯಿಸಿ

ಅಡಿ ಟಿಪ್ಪಣಿಗಳು ಬದಲಾಯಿಸಿ

  1. ಮಾಮ್, ವಿಲಿಯಮ್ ಪಿ. (1996). ಮ್ಯೂಸಿಕ್ ಕಲ್ಚರ್ಸ್ ಆಫ್ ದ ಫೆಸಿಫಕ್, ದ ನಿಯರ್ ಈಸ್ಟ್, ಆ‍ಯ್‌೦ಡ್ ಏಷ್ಯಾ , ಪು.15. ಐಎಸ್‌ಬಿಎನ್ 0-595-20284-5. ಮೂರನೇ ಆವೃತ್ತಿ. "ಸಮಶ್ರುತಿಯ ರಚನೆಯು...ಪಾಶ್ಚಾತ್ಯ ಸಂಗೀತದಲ್ಲಿ ಹೆಚ್ಚು ಸಾಮಾನ್ಯವಾಗಿದೆ, ಕೆಲವೊಮ್ಮೆ ಧ್ವನಿಗಳನ್ನು ಪ್ರಗತಿಯೆಡೆಗೆ ಚಲಿಸುತ್ತಿರುವಂತೆ ವಾದ್ಯದ ಸ್ವರಮೇಳಗಳಲ್ಲಿ (ಸಮರಸ್ಯಗಳು) ರಚಿಸಲಾಗುತ್ತದೆ. ವಾಸ್ತವವಾಗಿ ಈ ಸ್ವರ ಸಾಮರಸ್ಯದ ಗತಿಯು ಪಾಶ್ಚಾತ್ಯ ಮತ್ತು ಪಾಶ್ಚಾತ್ಯವಲ್ಲದ ಸಂಗೀತದ ಒಂದು ಪ್ರಮುಖ ವ್ಯತ್ಯಾಸವಾಗಿದೆ."
  2. Dahlhaus, Car. "Harmony", Grove Music Online, ed. L. Macy (accessed 24 February 2007), grovemusic.com (subscription access).
  3. ಜಮಿನಿ, ಡೆಬೆರಹ್(2005). ಸ್ವರ ಸಾಮರಸ್ಯ ಮತ್ತು ರಚನೆ: ಪ್ರಾರಂಭದಿಂದ ಮಧ್ಯದವರೆಗೂ , ಪು.147. ಐಎಸ್‌ಬಿಎನ್‌ 1-59474-023-2
  4. '1. ಸ್ವರ ಸಾಮರಸ್ಯ' ದ ಕಾನ್‌ಸೈಸ್ ಆಕ್ಸ್‌ಫರ್ಡ್ ಡಿಕ್ಷನರಿ ಆಫ್ ಇಂಗ್ಲೀಷ್ ಎಪ್ಟಿಮಾಲಜಿ ಇನ್ ಇಂಗ್ಲೀಷ್ ಲಾಂಗ್ವೇಜ್ ರೆಫೆರೆನ್ಸ್ , ಆಕ್ಸ್‌ಫರ್ಡ್ ರೆಫೆರೆನ್ಸ್ ಆನ್‌ಲೈನ್‌ ನ ಮೂಲಕ ನೋಡಲಾಗಿದೆ (24ನೇ ಫೆಬ್ರವರಿ 2007)
  5. [46] ^ ಹಾರ್ಮೋನಿಯ, ಹೆನ್ರಿ ಜಾರ್ಜ ಲಿಡ್ಡೆಲ್, ರಾಬರ್ಟ ಸ್ಕಾಟ್, ಒಂದು ಗ್ರೀಕ್-ಇಂಗ್ಲಿಷ್ ನಿಘಂಟು, ಎಟ್ ಪೆರ್ಸಯುಸ್‌.
  6. ೬.೦ ೬.೧ Dahlhaus, Carl. "Harmony", Grove Music Online, ed. L. Macy (accessed 24 February 2007), grovemusic.com (subscription access).
  7. ೭.೦ ೭.೧ ೭.೨ ಅರ್ನಾಲ್ಡ್ ವಿಟ್ಟಲ್, " ಸ್ವರ ಸಾಮರಸ್ಯ", ದ ಆಕ್ಸ್‌ಫರ್ಡ್ ಕಂಪ್ಯಾನಿಯನ್ ಟು ಮ್ಯೂಸಿಕ್ , ed. ಆಲಿಸನ್ ಲತಮ್, (ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, 2002) ( 16 ನವೆಂಬರ್ 2007ರಂದು [ಆಕ್ಸ್‌ಫರ್ಡ್ ರೆಫೆರೆನ್ಸ್ ಆನ್‌ಲೈನ್‌]ನ ಮೂಲಕ ನೋಡಲಾಗಿದೆ, is gayubview=Main&entry=t114.e3144 )
  8. Harmony, §3: Historical development. "Carl Dahlhaus", Grove Music Online, ed. L. Macy (accessed 16 November 2007), grovemusic.com (subscription access).
  9. see also Whitall 'Harmony: 4. Practice and Principle', Oxford Companion to Music
  10. Regula Qureshi. "India, §I, 2(ii): Music and musicians: Art music", Grove Music Online, ed. L. Macy (accessed 16 November 2007), grovemusic.com (subscription access). ಮತ್ತು ಕ್ಯಾಥರಿನ್ ಶ್ಮಿಟ್ ಜೋನ್ಸ್, 'ಲಿಸನಿಂಗ್ ಟು ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್', ಕನೆಕ್ಸಿಯಾನ್ಸ್, (16 ನವೆಂಬರ್ 2007ರಂದು ನೋಡಲಾಗಿದೆ) [೧]
  11. Harold S. Powers/Richard Widdess. "India, §III, 2: Theory and practice of classical music: Rāga", Grove Music Online, ed. L. Macy (accessed 16 November 2007), grovemusic.com (subscription access).
  12. Harold S. Powers/Richard Widdess. "India, §III, 3(ii): Theory and practice of classical music: Melodic elaboration", Grove Music Online, ed. L. Macy (accessed 16 November 2007), grovemusic.com (subscription access).
  13. Rob C. Wegman. "Improvisation, §II: Western art music", Grove Music Online, ed. L. Macy (accessed 16 November 2007), grovemusic.com (subscription access).
  14. Robert D Levin. "Improvisation, §II, 4(i): The Classical period in Western art music: Instrumental music", Grove Music Online, ed. L. Macy (accessed 16 November 2007), grovemusic.com (subscription access).
  15. Bruno Nettl. "Improvisation, §I, 2: Concepts and practices: Improvisation in musical cultures", Grove Music Online, ed. L. Macy (accessed 16 November 2007), grovemusic.com (subscription access).
  16. ೧೬.೦ ೧೬.೧ ಶೆಟ್‌ಮನ್, ರಾಡ್ (2008). ದ ಪಿಯಾನೊ ಎನ್‌‍ಸೈಕ್ಲೊಪೀಡಿಯಾಸ್ "ಮ್ಯೂಸಿಕ್ ಫಂಡಮೆಂಟಲ್ಸ್ ಇಬುಕ್" , ಪು.20-43 (10 ಮಾರ್ಚ್ 2009ರಂದು ನೋಡಲಾಗಿದೆ). PianoEncyclopedia.com

ಸ್ವರಸಂಕೇತಗಳು ಬದಲಾಯಿಸಿ

  • ಡಾಲ್‌ಹೌಸ್, ಕಾರ್ಲ್. Gjerdingen, ರಾಬರ್ಟ್ ಒ. ಟ್ರಾನ್ಸ್. (1990). ಸ್ಟಡೀಸ್ ಇನ್ ದ ಆರಿಜಿನ್ ಆಫ್ ಹಾರ್ಮೊನಿಕ್ ಟೊನಾಲಿಟಿ , p. 141. ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್. ಐಎಸ್‌ಬಿಎನ್ 0-595-20284-5.
  • ವ್ಯಾನ್ ಡರ್ ಮರ್ವೆ, ಪೀಟರ್(1989). ಆರಿಜಿನ್ಸ್ ಆಫ್ ದ ಪಾಪುಲರ್ ಸ್ಟೈಲ್: ದ ಆ‍ಯ್‌೦ಟಿಸಿಡೆಂಟ್ಸ್ ಆಫ್ ಟ್ವೆಂಟಿಯತ್-ಸೆಂಚುರಿ ಪಾಪುಲರ್ ಮ್ಯೂಸಿಕ್ . ಆಕ್ಸ್‌ಫರ್ಡ್: ಕ್ಲಾರೆನ್ಡನ್ ಪ್ರೆಸ್. ಐಎಸ್‌ಬಿಎನ್ 0-595-20284-5.
  • ನೆಟ್ಲೆಸ್, ಬಾರಿ& ಗ್ರಾಫ್, ರಿಚರ್ಡ್ (1997). ದ ಕಾರ್ಡ್ ಸ್ಕೇಲ್ ಥಿಯರಿ ಆ‍ಯ್‌೦ಡ್ ಜಾಝ್ ಹಾರ್ಮೊನಿ . ಅಡ್ವಾನ್ಸ್ ಮ್ಯೂಸಿಕ್, ISBN 3-89221-056-X

ಬಾಹ್ಯ ಕೊಂಡಿಗಳು ಬದಲಾಯಿಸಿ

ಹೆಚ್ಚಿನ ಓದಿಗಾಗಿ ಬದಲಾಯಿಸಿ

  • ಪ್ರೌಟ್, ಇಬೆನೆಜರ್, ಹಾರ್ಮೊ್ನಿ, ಇಟ್ಸ್ ಥಿಯರಿ ಆ‍ಯ್‌೦ಡ್ ಪ್ರಾಕ್ಟೀಸ್ (1889, 1901ರಲ್ಲಿ ಪರಿಶೀಲಿಸಲಾಗಿದೆ)