ಸ್ವರ್ಣಯುಗ (ಸುವರ್ಣಯುಗ) ಪದವು ಗ್ರೀಕ್ ಪುರಾಣಗಳಿಂದ ಬರುತ್ತದೆ, ವಿಶೇಷವಾಗಿ ಹೆಸಿಯಡ್‍ನ ಕೃತಿಯಿಂದ. ಇದು ಐದು ಯುಗಗಳಾದ್ಯಂತ ಜನರ ಸ್ಥಿತಿಯ ಕಾಲಕ್ರಮೇಣವಾದ ಅವನತಿಯ ವಿವರಣೆಯ ಭಾಗವಾಗಿದೆ.

ಸ್ವರ್ಣಯುಗವು ಮೊದಲಿನಿಂದಲೂ ಇದ್ದ ಶಾಂತಿ, ಸಾಮರಸ್ಯ, ಸ್ಥಿರತೆ ಮತ್ತು ಸಮೃದ್ಧಿಯ ಅವಧಿಯನ್ನು ಸೂಚಿಸುತ್ತದೆ. ಈ ಯುಗದಲ್ಲಿ ಶಾಂತಿ ಮತ್ತು ಸಾಮರಸ್ಯಗಳು ಪ್ರಚಲಿತವಾಗಿದ್ದವು, ಜನರು ತಮ್ಮ ಆಹಾರಕ್ಕಾಗಿ ಕೆಲಸ ಮಾಡಬೇಕಾಗಿರಲಿಲ್ಲ, ಏಕೆಂದರೆ ಭೂಮಿಯು ಹೇರಳವಾಗಿ ಆಹಾರವನ್ನು ಒದಗಿಸುತ್ತಿತ್ತು. ಜನರು ಬಹಳ ವಯಸ್ಸಿನವರೆಗೆ ಯುವರೂಪದಿಂದಿಗೆ ಬಾಳುತ್ತಿದ್ದರು. ಅಂತಿಮವಾಗಿ ಶಾಂತಿಯಿಂದ ಸಾಯುತ್ತಿದ್ದರು, ಮತ್ತು ಅವರ ಆತ್ಮಗಳು ಸಂರಕ್ಷಕರಾಗಿ ಇರುತ್ತಿದ್ದವು.

ದಕ್ಷಿಣ ಏಷ್ಯಾ ಉಪಖಂಡದ ಧಾರ್ಮಿಕ ಮತ್ತು ತತ್ತ್ವಶಾಸ್ತ್ರೀಯ ಸಂಪ್ರದಾಯಗಳಲ್ಲಿ ಹೋಲುವ ಪರಿಕಲ್ಪನೆಗಳಿವೆ. ಉದಾಹರಣೆಗೆ, ವೈದಿಕ ಅಥವಾ ಪ್ರಾಚೀನ ಹಿಂದೂ ಸಂಸ್ಕೃತಿಯು ಇತಿಹಾಸವನ್ನು ಆವರ್ತಕವೆಂದು, ಸರತಿಯಾಗಿ ಬರುವ ಅಂಧಕಾರ ಮತ್ತು ಸುವರ್ಣ ಯುಗಗಳಿಂದ ಕೂಡಿದ್ದೆಂದು ಕಂಡಿತು. ಕಲಿ ಯುಗ (ಕಬ್ಬಿಣದ ಯುಗ), ದ್ವಾಪರ ಯುಗ (ಕಂಚಿನ ಯುಗ), ತ್ರೇತಾಯುಗ (ಬೆಳ್ಳಿ ಯುಗ) ಮತ್ತು ಸತ್ಯಯುಗಗಳು (ಸ್ವರ್ಣಯುಗ) ನಾಲ್ಕು ಗ್ರೀಕ್ ಯುಗಗಳಿಗೆ ಅನುರೂಪವಾಗಿವೆ. ಅದೇ ರೀತಿಯ ನಂಬಿಕೆಗಳು ಪ್ರಾಚೀನ ಮಧ್ಯಪ್ರಾಚ್ಯ ಮತ್ತು ಪ್ರಾಚೀನ ವಿಶ್ವದಾದ್ಯಂತ ಕೂಡ ಇವೆ.[]

ಉಲ್ಲೇಖಗಳು

ಬದಲಾಯಿಸಿ
  1. Richard Heinberg (1989). Memories and Visions of Paradise: Exploring the Universal Myth of a Lost Golden Age Los Angeles, Calif.: Tarcher. 282 pp. MISBN 0-87477-515-9.