ಸ್ಯಾಮ್ಯುಯೆಲ್ ಕ್ರಾಂಪ್ಟನ್

ಸ್ಯಾಮ್ಯುಯೆಲ್ ಕ್ರಾಂಪ್ಟನ್,[] [೩ ಡಿಸೆಂಬರ್ ೧೭೫೩-೨೬ ಜೂನ್, ೧೮೨೭) ಬ್ರಿಟನ್ ದೇಶದಲ್ಲಿ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಹತ್ತಿ ನೂಲುವ ಪ್ರಕ್ರಿಯೆಯಲ್ಲಿ ಬಳಕೆಗೆಬಂದ ಎರಡು ಪ್ರಮುಖ ಯಂತ್ರಗಳ ಗುಣಾವಗುಣಗಳನ್ನು ಬಳಸಿಕೊಂಡು ಮತ್ತೊಂದು ಹೊಸ ಯಂತ್ರವನ್ನು ನಿರ್ಮಿಸಿ, ಅಮರರಾದ ವ್ಯಕ್ತಿಯೆಂದು 'ಬ್ರಿಟನ್ನಿನ ಯಂತ್ರೋದ್ಯಮ ಚರಿತ್ರೆ'ಯಲ್ಲಿ ದಾಖಲಿಸಲ್ಪಟ್ಟಿದ್ದಾರೆ. ಅವರು 'ಮ್ಯೂಲ್' ಎಂಬ ತಮ್ಮ ಆಧುನಿಕ ಯಂತ್ರದ ಮೂಲಕ, ಅತ್ಯಂತ ಸೂಕ್ತವಾದ ಹತ್ತಿ ದಾರ ತಯಾರಿಸುವ ದಿಶೆಯಲ್ಲಿ 'ಮೇರುವ್ಯಕ್ತಿ', ಹಾಗೂ 'ಪ್ರವರ್ತಕ'ನೆಂಬ ಹೆಗ್ಗಳಿಕೆಗೆ ಪಾತ್ರನಾದವರು. ಆತ ಒಬ್ಬ ಸಮರ್ಥ, ವಿಜ್ಞಾನಿ, ತಂತ್ರಜ್ಞ, ಹತ್ತಿದಾರ ನೂಲುವ ಯಂತ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ವಿಶ್ವದಾದ್ಯಂತ ಹೆಸರಾಗಿದ್ದರು. ಅವರು ತಮ್ಮ ವೃತ್ತಿಯಲ್ಲಿ ಹಿರಿಯರಾಗಿದ್ದ, ಜೇಮ್ಸ್ ಹಾರ್ಗ್ರಿವ್ಸ್ ಮತ್ತು ರಿಚರ್ಡ್ ಆರ್ಕ್ ರೈಟ್ ನಿರ್ಮಿಸಿದ ಹತ್ತಿ ದಾರ ನಿರ್ಮಾಣ ಯಂತ್ರಗಳನ್ನು ಬಹಳ ಹತ್ತಿರದಿಂದ ಅಭ್ಯಾಸಮಾಡಿ ಮ್ಯೂಲ್ ಎಂಬ ಯಂತ್ರವನ್ನು ಸಂರಚಿಸಿದರು. ಈ ಯಂತ್ರ ಜೇಮ್ಸ್ ಹಾರ್ಗ್ರಿವ್ಸ್ ಮತ್ತು ಸರ್ ರಿಚರ್ಡ್ ಆರ್ಕ್‍ರೈಟ್,ರ ತರಹವೇ ಕಾರ್ಯನಿರ್ವಹಿಸಿದರೂ, ಇನ್ನೂ ಮುಂದೆ ಸಾಗಿ ಉತ್ಪಾದನೆಯಲ್ಲಿ ಒಂದು ಕ್ರಾಂತಿಯನ್ನೇ ನಿರ್ಮಿಸಿತು. ಬ್ರಿಟನ್ ನಲ್ಲಿ ಶುರುವಾದ 'ಕೈಗಾರಿಕಾ ಕ್ರಾಂತಿ',[] ವಿಶ್ವದ ದಿನಬಳಕೆಯ ವಸ್ತುಗಳ ಉತ್ಪಾದನಾ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಲು ಸಹಾಯವಾಯಿತು. ಈ ಯಂತ್ರದ ಬಲದಿಂದ ಬ್ರಿಟನ್ ರಾಷ್ಟ್ರ ನೂರುವರ್ಷಕ್ಕೂ ಮೇಲ್ಪಟ್ಟು ಹತ್ತಿ ಬಟ್ಟೆ ನಿರ್ಮಾಣದಲ್ಲಿ ವಿಕ್ರಮವನ್ನು ಸಾಧಿಸಿತು. ಬ್ರಿಟನ್ನಿನ ಅಧೀನದಲ್ಲಿದ್ದ ವಿಶ್ವದ ರಾಷ್ಟ್ರಗಳಿಗೆಲ್ಲಾ ಯಂತ್ರೋಪಕರಣಗಳು, ಮಾನವ ಸಂಸಾಧನಗಳು, ಮತ್ತು ಪ್ರಾವೀಣ್ಯತೆಗಳ ನೆರವನ್ನು ಕೊಡುವಲ್ಲಿ ನೂರು ವರ್ಷಕ್ಕೂ ಮೇಲ್ಪಟ್ಟು ಮುಂಚೂಣಿಯಲ್ಲಿತ್ತು.

ಸ್ಯಾಮ್ಯುಯೆಲ್ ಕ್ರಾಂಪ್ಟನ್
Born(೧೭೫೩-೧೨-೦೩)೩ ಡಿಸೆಂಬರ್ ೧೭೫೩
10 Firwood Fold, Bolton, Lancashire, England
Died26 June 1827(1827-06-26) (aged 73)
17 King Street, Bolton, Lancashire, England
Resting placeSt Peter's Church, Bolton-le-Moors, Lancashire, England
NationalityEnglish
Occupation(s)Inventor, pioneer of the spinning industry
Known forSpinning mule
Signature
'ಮ್ಯೂಲ್' ಎಂಬ ಹೆಸರಿನ ಹತ್ತಿ ನೂಲು ತೆಗೆಯುವ ಯಂತ್ರವನ್ನು ನಿರ್ಮಿಸಿದ ಸ್ಯಾಮ್ಯುಯೆಲ್ ಕ್ರಾಂಪ್ಟನ್'
Hall i'th' Wood 'ಮನೋರ್ ಹೌಸ್'
'ಗ್ರೇಟ್ ಬ್ರಿಟನ್ ನ ಬೋಲ್ಟನ್ ನಗರದಲ್ಲಿರುವ ಸೇಂಟ್ ಪೀಟರ್ಸ್ ಸ್ಮಶಾನದಲ್ಲಿ ಸ್ಯಾಮ್ಯುಯೆಲ್ ಕ್ರಾಂಟನ್ ರವರ ಸಮಾಧಿ'

ಜನನ,ವಿದ್ಯಾಭ್ಯಾಸ, ವೃತ್ತಿಜೀವನ

ಬದಲಾಯಿಸಿ

ಸ್ಯಾಮ್ಯುಯೆಲ್, ೧೦, 'ಫಿರ್ ವುಡ್ ಫೋಲ್ಡ್' ಬೋಲ್ಟನ್, ಲಂಕಾಶೈರ್ ನ ನಿವಾಸಿಗಳಾಗಿದ್ದ, 'ಜಾರ್ಜ್', ಮತ್ತು 'ಬೆಟ್ಟಿ ಕ್ರಾಂಪ್ಟನ್', ದಂಪತಿಗಳ ಮಗನಾಗಿ ಜನಿಸಿದರು. (née Elizabeth Holt of Turton) 'ಸ್ಯಾಮ್ಯುಯೆಲ್ ರ ತಂದೆ, 'ಹಾಲ್ ಇ ಟ್' ನ, ವ್ಯವಸ್ಥಾಪಕರು. ಸ್ಯಾಮ್ಯುಯೆಲ್ ರವರಿಗೆ ಇಬ್ಬರು ತಂಗಿಯರಿದ್ದರು. ಅವರು, ಇನ್ನೂ ಬಾಲಕನಾಗಿದ್ದಾಗಲೆ ತಂದೆಯವರು ನಿಧನರಾದರು. ಇದರಿಂದಾಗಿ ಮನೆಯ ನಿರ್ವಹಣೆಯ ಹೊರೆ ಅವರ ಮೇಲೆ ಬಿದ್ದಿತು. 'ಸ್ಯಾಮ್ಯುಯೆಲ್', ಪರಂಪರಾಗತವಾಗಿ ಬಂದಿದ್ದ ದಾರ ನೂಲುವ ಗೃಹೋದ್ಯೋಗವನ್ನು ಅವಲಂಭಿಸಿದರು. ಜೇಮ್ಸ್ ಹಾರ್ಗ್ರಿವ್ಸ್ ನಿರ್ಮಿಸಿದ ಸ್ಪಿನ್ನಿಂಗ್ ಜೆನ್ನಿಯನ್ನು ಬಳಸಿ ದಾರ ತಯಾರುಮಾಡಿ, ಬಟ್ಟೆ ತಯಾರಕರಿಗೆ ಮಾರುತ್ತಿದ್ದರು. ಅದರಲ್ಲಿ ಏನಾದರು ಹೊಸ ಸಾಧ್ಯತೆಗಳನ್ನು ಬಳಕೆಗೆ ತರುವ ಬಗ್ಗೆ ಯಾವಾಗಲು ಯೋಚಿಸುತ್ತಿದ್ದರು. ಹೀಗೆ, ೫-೬ ವರ್ಷ ಸತತವಾಗಿ ಪರಿಶ್ರಮಿಸಿ ಗುಟ್ಟಾಗಿ ಸಂಶೋಧನೆಯಲ್ಲಿ ತೊಡಗಿದ್ದರು. ಬಿಡುವಿನ ವೇಳೆಯಲ್ಲಿ ಮನೆಗೆ ಬೇಕಾದ ವರಮಾನವನ್ನು ಹೆಚ್ಚಿಸಲು, ಬೋಲ್ಟನ್ ನಗರದ ಥಿಯೇಟರ್ ನಲ್ಲಿ 'ವೈಲನ್' ನುಡಿಸುವ ವೃತ್ತಿಯನ್ನು ಆರಿಸಿಕೊಂಡರು.

ಮ್ಯೂಲ್ ಹೆಸರುಬರಲು ಕಾರಣ

ಬದಲಾಯಿಸಿ

ದಿನವಿಡೀ ಕಷ್ಟದ ಕೆಲಸಮಾಡಲು ಸಾಮರ್ಥ್ಯವುಳ್ಳ ಹೇಸರಗತ್ತೆಗೆ (ಹೆಣ್ಣು ಕುದುರೆ ಮತ್ತು ಗಂಡು ಕತ್ತೆಗಳ ಸಂಗಮ) ಇಂಗ್ಲೀಷ್ ಭಾಷೆಯಲ್ಲಿ 'ಮ್ಯೂಲ್' ಎನ್ನುತ್ತಾರೆ. 1779, 'ಮ್ಯೂಲ್ ಯಂತ್ರ'[] ರೂಪುಗೊಂಡಾಗ ಹಾಗೆ ಕರೆಯಲು ಕಾರಣ, 'ಆರ್ಕ್ ರೈಟ್' ನ 'ವಾಟರ್ ಫ್ರೇಮ್' ಮತ್ತು 'ಜೇಮ್ಸ್ ಹಾರ್ಗ್ರಿವ್ಸ್' ನ ಸ್ಪಿನ್ನಿಂಗ್ ಜೆನ್ನಿಯ ಕಾರ್ಯವಿಧಾನಗಳನ್ನು ಹೊಂದಿದ್ದಲ್ಲದೆ, ಜೊತೆಗೆ ಹೇಸರಕತ್ತೆಯಂತೆ ದುಡಿಯುವ ಸಾಮರ್ಥ್ಯ ಹೊಂದಿತ್ತು. 'ಸ್ಥಿರ ಫ್ರೇಮ್', ಮೇಲೆ ಹಲವು ಬಾಬಿನ್ ಗಳನ್ನೂ ಸ್ಥಾಪಿಸಲಾಗಿದ್ದು, ಇದನ್ನು 'ಹೆಡ್ ಸ್ಟಾಕ್' ಮುಖಾಂತರ ಸ್ಪಿಂಡಲ್ ಗಳಿರುವ ಸಮಾನಾಂತರ ಪೆಟ್ಟಿಗೆಗೆ ಸಂಪರ್ಕಕೊಟ್ಟಿದ್ದಾರೆ. ಗಾಡಿ ಸಾಗುವಾಗ ಉತ್ಕರ್ಷ ಹೊಂದಿದ ರೋವಿಂಗ್, ಸುರುಳಿಗಳನ್ನು ಪಡೆಯುತ್ತದೆ. ಗಾಡಿ ವಾಪಸ್ ಬರುವಾಗ, ಹೊಸದಾಗಿ ತಯಾರಾದ ರೋವಿಂಗ್ಸ್ ನ್ನು ಸ್ಪಿಂಡಲ್ ಗಳ ಮೇಲೆ ಸುತ್ತಲಾಗುತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

'ಸ್ಯಾಮ್ಯುಯೆಲ್ ಕ್ರಾಂಪ್ಟನ್', ೧೬, ಫೆಬ್ರವರಿ ೧೭೮೦ ರಲ್ಲಿ ಬೋಲ್ಟನ್ ನ 'ಪ್ಯಾರೀಶ್ ಚರ್ಚ್',ನಲ್ಲಿ 'ಕ್ರಾಂಪ್ಟನ್ ಮೇರಿ ಪಿಮ್ ಪ್ಲೇಟ್' [ಪಿಮ್ಬ್ಲೆ],ಎಂಬ ಹುಡುಗಿಯನ್ನು ವಿವಾಹವಾದರು. ಈ ದಂಪತಿಗಳಿಗೆ ೮ ಮಕ್ಕಳು. ಜಾರ್ಜ್ ಕ್ರಾಂಟನ್ (ಜನನ : ೮, ಜನವರಿ ೧೭೮೧), ಮುಂದೆಯೂ ತಮ್ಮ ಮನೆತನದ ವೃತ್ತಿಯನ್ನು ಮುಂದುವರೆಸಿದರು.

ಮ್ಯೂಲ್ ಯಂತ್ರದ ಸಂರಚನೆ

ಬದಲಾಯಿಸಿ

1779, ರಲ್ಲಿ ಸ್ಯಾಮ್ಯುಯೆಲ್ ಕ್ರಾಂಪ್ಟನ್ ರು, 'ಮ್ಯುಲ್ ಜೆನ್ನಿ' ಯನ್ನು ಸಂರಚಿಸಿದರು. ಈ ಯಂತ್ರದಲ್ಲಿ ತಯಾರಾದ ಹತ್ತಿ ನೂಲು, ಮಸ್ಲಿನ್ ಬಟ್ಟೆಯನ್ನು ನೇಯುವ ಪ್ರಕ್ರಿಯೆಯಲ್ಲಿ ಉಪಯೊಗವಾಗುತ್ತಿತ್ತು. ಸ್ಥಾನೀಯ ನೇಕಾರರು, ಈ ಯಂತ್ರಕ್ಕೆ 'ಮಸ್ಲಿನ್ ವ್ಹೀಲ್' ಅಥವಾ 'ಹಾಲ್ ಇ ಟ್' ಎಂದು ಹೆಸರಿಟ್ಟಿದ್ದರು. ಇದು, ಮನೆಯಲ್ಲಿ ಪರಿವಾರದ ಜೊತೆ ವಾಸಿಸುತ್ತಿದ್ದ ಹೆಸರು. ಹೀಗೆಯೇ ಜನಪ್ರಿಯತೆಯನ್ನು ಗಳಿಸಿದ ಯಂತ್ರಕ್ಕೆ 'ಸ್ಪಿನ್ನಿಂಗ್ ಮ್ಯೂಲ್' ಎಂದು ಹೆಸರಿಸಲಾಯಿತು. ಹೀಗೆ ತಯಾರಾದ ದಾರಕ್ಕೆ ಅಪಾರ ಬೇಡಿಕೆ ಇತ್ತು. ಬೇಕಾದ ಪೇಟೆಂಟ್ ಗಳಿಸುವಲ್ಲಿ ಸ್ವಲ್ಪ ತೊಡಕಾಗಿತ್ತು. ಬೇರೆ ಬೇರೆ ನೇಕಾರರ ವಿರೋಧಗಳಿಂದಾಗಿ ಕ್ರಾಂಪ್ಟನ್ ತನ್ನ ಯಂತ್ರವನ್ನು ನಾಶಮಾಡುವುದು ಇಲ್ಲವೇ ಸಾರ್ವಜನರಿಗೆ ಉಚಿತವಾಗಿ ತೊರಿಸುವುದೊಂದೇ ಸಾಧ್ಯತೆ ಇತ್ತು. ೬೦ ಪೌಂಡ್ £60, ಹಣ ಮಾತ್ರ ಸಿಕ್ಕಿತು. ವ್ಯವಹಾರ ಚತುರತೆಯಿಲ್ಲದ ಕ್ರಾಂಪ್ಟನ್, ತನ್ನ ಸಮಾಧಾನಕ್ಕೆ ದಾರ ನೂಲುವ ಪ್ರಕ್ರಿಯೆ ಪ್ರಾರಂಭಿಸಿದರು. ಆದರೆ, ಅದರಿಂದ ಹಣ ದೊರೆಯಲಿಲ್ಲ.

ಹತ್ತಿದಾರದ ನಿರ್ಮಾಣದ ವಿಧಿ

ಬದಲಾಯಿಸಿ

ರೋವಿಂಗ್ ಗಳನ್ನೂ 'ಆರ್ಕ್ ರೈಟ್' ಯಂತ್ರದ ತರಹವೇ 'ಟ್ವಿಸ್ಟ್' ಕೊಟ್ಟ ಬಳಿಕ ಸ್ಪಿಂದಳ್ ನ್ನು ಹೊತ್ತ ಬಂಡಿ ಹಿಂದೆ-ಮುಂದೆ ನಿಧಾನವಾಗಿ ಸಾಗುತ್ತ ೫೪ ದಾರವನ್ನು ಸ್ಪಿಂಡಲ್ ಮೇಲೆ ಸುತ್ತುತ್ತಿತ್ತು. ಮಸ್ಲಿನ ದಾರಗಳೆಂದು ಹೆಸರು ಪಡೆದ ಕೈನೂಲಿನ ದಾರಕ್ಕಿಮ್ತ ಸೂಕ್ಷ್ಮವಾದ ದಾರಗಳನ್ನು ತಯಾರಿಸಬಹುದೆಂದು ವರ್ತಕರಿಗೆ ಮತ್ತು ಉದ್ಯಮಶೀಲರಿಗೆ ತೋರಿಸಿಕೊಟ್ಟರು. (40s) 14 ಶಿಲಿಂಗ್ಸ್/ಪೌಂಡ್ ಗೆ ಮಾರಾಟವಾಗುತ್ತಿತ್ತು. (80s) ದಾರಕ್ಕೆ 42 ಶಿಲಿಂಗ್ಸ್/ಪೌಂಡ್ ಬೆಲೆ ಯಿತ್ತು. ಮ್ಯುಲ್ ಯಂತ್ರ ಬಹಳ ಸಮಯವಾದರೂ ಪೇಟೆಂಟ್ ಗಳಿಸಲಿಲ್ಲ. ಅದನ್ನು ಗ್ರಹಿಸಿ ಹಲವರು ತಾವು ಯಂತ್ರಗಳನ್ನು ನಿರ್ಮಿಸಿ ಮಾರಲು ಆರಂಭಿಸಿದರು. ೧೭೯೦ ರಲ್ಲಿ ಮರದ ಸಾಮಾನುಗಳನ್ನು ಬಳಸಿನಿರ್ಮಿಸಿದ್ದ ಯಂತ್ರ, 1834 ರಲ್ಲಿ ಗಟ್ಟಿಯಾದ ಉಕ್ಕಿನಲ್ಲಿ ತಯಾರಾಗಿ, ಸ್ವಯಂ ಚಾಲಿತ ಯಂತ್ರವಾಯಿತು. 1812 ರಲ್ಲಿ ಲಂಕಾಶೈರ್ ಜಿಲ್ಲೆಯಲ್ಲಿ ಸುಮಾರು ೪-೫ ಮಿಲಿಯನ್ ಸ್ಪಿಂಡಲ್ ಬಳಕೆಯಲ್ಲಿತ್ತು. ಕ್ರಾಂಪ್ಟನ್ ಆವಿಷ್ಕಾರಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ.

ಯಂತ್ರನಿರ್ಮಾಪಕರಿಗೆ ಗೌರವ

ಬದಲಾಯಿಸಿ

1800, ರಲ್ಲಿ £500 ಹಣ ವಂತಿಗೆಯನ್ನು ಸಾರ್ವಜನಿಕರಿಂದ ಪಡೆಯಲಾಯಿತು. 1809, ರಲ್ಲಿ 'ಎಡ್ಮಂಡ್ ಕಾರ್ಟ್ ರೈಟ್',ಯಂತ್ರ ಮಗ್ಗ ದ ನಿರ್ಮಾಪಕರಿಗೆ, £10,000 ಹಣವನ್ನು ಬ್ರಿಟಿಷ್ ಪಾರ್ಲಿಮೆಂಟ್ ಮಂಜೂರುಮಾಡಿತು. 1811, ಸ್ಯಾಮ್ಯುಯೆಲ್ ಕ್ರಾಂಪ್ಟನ್ ರು, ಲಂಕಾಶೈರ್, ಸ್ಕಾಟ್ ಲ್ಯಾಂಡ್ ನ ಜಿಲ್ಲೆಗಳಲ್ಲಿ ಪರ್ಯಟನೆ ಮಾಡಿ ತಮ್ಮ 'ಮ್ಯೂಲ್' ಯಂತ್ರದ ಪ್ರಸಿದ್ದಿ ಕಂಡು ಸಂತೋಷಪಟ್ಟರು. 1812,ರಲ್ಲಿ ಪಾರ್ಲಿಮೆಂಟ್ £5000 ಬಹುಮಾನ ಪ್ರಕಟಿಸಿತು. ಕ್ರಾಂಪ್ಟನ್ ರು, ಈ ಹಣದ ಬಲದಿಂದ ಕೆಲವು ತಮ್ಮದೇ ಆದ 'ಬಿಝಿನೆಸ್' ಪ್ರಾರಂಬಿಸಿದರು. ಅವುಗಳಲ್ಲಿ 'ಬ್ಲೀಚಿಂ ಕಾರ್ಖಾನೆ' ಪ್ರಮುಖವಾದದ್ದು. ಹತ್ತಿ ವ್ಯಾಪಾರಿಯಾಗಿ, ಹಾಗೂ ದಾರ ನಿರ್ಮಾಪಕರಾಗಿ ಮಾರುಕಟ್ಟೆಯಲ್ಲಿ ಪ್ರವೇಶಿಸಿದರು. ಆದರೆ, ಅವರಿಗೆ ಅಪೇಕ್ಷಿಸಿದಷ್ಟು ಯಶಸ್ಸು ಸಿಗಲಿಲ್ಲ. 1824 ರಲ್ಲಿ, ಕೆಲವು ಆಪ್ತ ಸ್ನೇಹಿತರು ಅವರಿಗೇ ಗೊತ್ತಿಲ್ಲದಂತೆ £63 ಗಳ ವರ್ಷಾಶನವನ್ನು ಖರೀದಿಸಿ, 'ಕ್ರಾಂಟನ್' ರಿಗೆ, ಉಡುಗೊರೆ ಕೊಟ್ಟರು.

ಪುಥಳಿಯ ಸ್ಥಾಪನೆ

ಬದಲಾಯಿಸಿ

ಸಾರ್ವಜನಿಕರ ದೇಣಿಗೆಯ ಮೇರೆಗೆ ಸ್ಯಾಮ್ಯುಯೆಲ್ ಕ್ರಾಂಪ್ಟನ್ ರ, ಪುಥಲಿಯನ್ನು ಪ್ರತೀಕವಾಗಿ ಲಂಡನ್ ನ, ನೆಲ್ಸನ್ ಸ್ಕೇರ್ ನಲ್ಲಿ, ಸೆಪ್ಟೆಂಬರ್ ೨೪, ೧೮೬೨ ನಲ್ಲಿ ಸ್ಥಾಪಿಸಲಾಯಿತು. 'ಬೋಲ್ಟನ್ ನಗರದ ಔದ್ಯೊಗಿಕ ಪ್ರಗತಿಯ ಹರಿಕಾರ,'ನಾಗಿ, ಅವರಿಗೆ ಗೌರವ ಸಮರ್ಪಿಸಿಲಾಯಿತು. ಅವರ ಮರಣಾನಂತರ ಅವರ ಸಮಾಧಿಯ ಬಳಿ ಬೋರ್ಡ್ ನಲ್ಲಿ ಬರೆದ ಒಕ್ಕಣೆ, ಈ ರೀತಿ ಇತ್ತು. "ಕಲ್ಲಿನ ಅಡಿಯಲ್ಲಿ ಮಣ್ಣಿನಲ್ಲಿ, ಭೂಗತವಾದ, ಬೋಲ್ಟನ್ Hall i'th' Wood, ನಿವಾಸಿಯ, ಪಾರ್ಥಿವ ಶರೀರ, ಸ್ಪಿನ್ನಿಂಗ್ ಯಂತ್ರದ ಆವಿಷ್ಕಾರಿ ಸ್ಯಾಮ್ಯುಯೆಲ್ ಕ್ರಾಂಪ್ಟನ್ ರವರದು. ಅವರು, 'ಮ್ಯೂಲ್' ಎಂಬ ಅತ್ಯುನ್ನತ ಯಂತ್ರದ ನಿರ್ಮಾಪಕರು. ಸ್ಯಾಮ್ಯುಯೆಲ್ ಕ್ರಾಂಪ್ಟನ್ ರು, ೨೬ ನೆಯ ಜೂನ್, ೧೮೨೭ ರಂದು ತಮ್ಮ ೭೨ ನೆಯ ವಯಸ್ಸಿನಲ್ಲಿ, ಇಹಲೋಕವನ್ನು ತೊರೆದರು. "Mors Ultimo Linea Rerum Est." ಲ್ಯಾಟಿನ್ ಭಾಷೆಯಲ್ಲಿರುವ ಈ ವಾಕ್ಯದ ಅರ್ಥ : 'ಮರಣವೇ ಮನುಷ್ಯ ಜೀವನದ ಕೊನೆಯ ಸೀಮಾ ರೇಖೆ.' 1861 ರಲ್ಲಿ ಸ್ಥಾನಿಯ ಬಟ್ಟೆ ನೇಕಾರರು,'ಸೇಂಟ್ ಪೀಟರ್ಸ್ ಸ್ಮಶಾನ' ದಲ್ಲಿ ನಿರ್ಮಿಸಿರುವ ಈ ಗ್ರಾನೈಟ್ ಸ್ಮಾರಕಕ್ಕೆ ತಮ್ಮ ಅನುಪಮ ಧನಸಹಾಯ ಮಾಡಿದ್ದಾರೆ.

ತಮ್ಮ ಸ್ವಗೃಹದಲ್ಲಿ (ಬೋಲ್ಟನ್ ನಗರದ ಕಿಂಗ್ಸ್ ಸ್ಟ್ರೀಟ್ ನಲ್ಲಿದ್ದ) ೨೬ ಜುನ್ ೧೮೨೭ ರಲ್ಲಿ ನಿಧನರಾದರು. ಅವರ ಪಾರ್ಥಿವಶರಿರವನ್ನು 'ಪ್ಯಾರೀಶ್ ಚರ್ಚ್' ನಲ್ಲಿ ದಫನಾಯಿಸಲಾಯಿತು.

ಉಲ್ಲೇಖಗಳು

ಬದಲಾಯಿಸಿ
  1. Today in Scinece Histroy, Samuel Crompton
  2. 'Innovations of the Industrial Revolution'
  3. The life and times of Samuel Crompton,inventor of the Spinning machine called The Mule-Gilbert J.French, 1859

ಬಾಹ್ಯ ಸಂಪರ್ಕಗಳು

ಬದಲಾಯಿಸಿ