ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕಾ ಹೊಲ

'ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕಾ ಹೊಲ'

'Sanborn Agricultural Experiment Farm’ (UMC), Columbiaಸಂಪಾದಿಸಿ

ಇಂದಿಗೂ ನಾವು, ಕೊಲಂಬಿಯಾನಗರದ ಮಿಸ್ಸೂರಿ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಸ್ಥಾಪಿಸಲ್ಪಟ್ಟ ’ಸ್ಯಾನ್ ಬರ್ನ್ ಕೃಷಿ ಪ್ರಾಯೋಗಿಕಾ ಹೊಲ,’ ವನ್ನು ವೀಕ್ಷಿಸಬಹುದು. [೧] ಇದು ಅಸ್ತಿತ್ವಕ್ಕೆ ಬಂದಿದ್ದು ೧೮೮೮ ರಲ್ಲಿ. ಅಮೆರಿಕದಲ್ಲೇ ಪ್ರಪ್ರಥಮವಾಗಿ ಮಣ್ಣಿನ ಕೊಚ್ಚಿಕೊಂಡುಹೋಗುವಿಕೆ, ಪ್ರತಿಬೆಳೆಯಲ್ಲೂ ಅದಕ್ಕೆ ಬೇಕಾದ ಸಮಯವನ್ನು ನಿರ್ಧರಿಸಿ ಬಿತ್ತನೆ, ಕಟಾವುಮಾಡುವ ಸುಧಾರಿತ ಪದ್ಧತಿಗಳ-ಅಭ್ಯಾಸ, ಮತ್ತು ಬೇಸಾಯದಲ್ಲಿ ಅವಲಂಭಿಸಬೇಕಾದ ಕೆಲವೊಂದು ನಡುವಳಿಕೆಗಳು ಇತ್ಯಾದಿಗಳನ್ನು ತಿಳಿಯುವಸಲುವಾಗಿ ಅನುಸಂಧಾನವನ್ನು ಮಾಡುವ ಪ್ರಯತ್ನ ಶುರುವಾದದ್ದೇ ಈ ಜಾಗದಲ್ಲಿ.

’ಸಾಯಿಲ್ ಕನ್ಸರ್ವೇಶನ್,’ಗೆ ಪ್ರಧಾನ ಆದ್ಯತೆಸಂಪಾದಿಸಿ

’ಸಾಯಿಲ್ ಕನ್ಸರ್ವೇಶನ್,’ ಪಾಲಿಸಿಯನ್ನು ಅಳವಡಿಸಿ ಜಾರಿಗೆತಂದು ಸುವ್ಯವಸ್ಥಿತಗೊಳಿಸಿದ ವಿಶೇಷತೆಗೆ ಇದು ಪ್ರಸಿದ್ಧಿಯಾಗಿತ್ತು. ದೇಸಿ-ಗೊಬ್ಬರ, ರಸ-ಗೊಬ್ಬರಗಳ ಮೇಲೆ ಸಂಶೋಧನೆಗಳು ನಡೆದವು. ಸನ್, ೧೯೧೪ ರಲ್ಲಿ ರಸ-ಗೊಬ್ಬರಗಳ ಬಳಕೆಗೆ ಹೆಚ್ಚಿನ ಗಮನಹರಿಸಲಾಯಿತು. ಆಹಾರ ಧಾನ್ಯಗಳ ಗುಣಸಂವರ್ಧನೆ, ಹಾಗೂ ಹೆಚ್ಚು ಇಳುವರಿಯನ್ನು ಸಾಧಿಸುವ ನಿಟ್ಟಿನಲ್ಲಿ ಹಲವಾರು ಮೂಲ-ಪ್ರಯೋಗಗಳನ್ನು ಈ ಹೊಲದಲ್ಲಿ ಮಾಡಲಾಯಿತು. [೨]

ಪ್ರಾಯೋಗಿಕಾ ಹೊಲ,' ಸಕ್ರಿಯವಾಗಿದೆಸಂಪಾದಿಸಿ

'ಸ್ಯಾನ್ ಬಾರ್ನ್',[೩] 'ಕೃಷಿಪ್ರಾಯೋಗಿಕಾ-ಹೊಲ' ವನ್ನು ಅದರ ಪ್ರಥಮ ನಿರ್ದೇಶಕರಾಗಿದ್ದ ’ಡಾ. ಸ್ಯಾನ್ ಬಾರ್ನ್,’ ರ ಗೌರವಾರ್ಥವಾಗಿ ಹಾಗೆಯೇ ಕಾಪಾಡಿಕೊಂಡು ಬಂದಿದ್ದಾರೆ. ಅಮೆರಿಕದ ಪ್ರಮುಖ ಬೆಳೆಯಾಗಿದ್ದ, ಮೆಕ್ಕೇಜೋಳದ ಫಸಲನ್ನು '(Corn)' ಉತ್ತಮಪಡಿಸುವ ಗುರಿಯಿಂದಲೇ ಸ್ಥಾಪಿಸಲ್ಪಟ್ಟ ಹೊಲವಿದು. ಅಂದಿನದಿನಗಳಲ್ಲಿ ಅತಿಹೆಚ್ಚಿನ ತಂತ್ರಜ್ಞಾನ, ಹಾಗೂ ವಿಕಸಿತ-ವೈಜ್ಞಾನಿಕ ಪದ್ಧತಿಗಳು ಲಭ್ಯವಾಗದಿದ್ದರೂ, ಸಸ್ಯ-ಸಂರಕ್ಷಣೆ, ಮತ್ತು ಸಸ್ಯಗಳಲ್ಲಿ ಅಧಿಕ ಉತ್ಪಾದನೆಯನ್ನು ಪಡೆಯಲು ಮಾಡಿದ ಪ್ರಯತ್ನಗಳು, ಕ್ರಮೇಣ ಆಹಾರಧಾನ್ಯಗಳ, ಎಣ್ಣೆಕಾಳುಗಳ, ಹತ್ತಿ, ಸೆಣಬು, ಮುಂತಾದ ವಿಕಸಿತ ಸಸ್ಯಗಳು, ವಸ್ತ್ರ-ನಿರ್ಮಾಣವಲಯದಲ್ಲಿ ಕೊಡುತ್ತಿರುವ ಕೊಡುಗೆಗೆ ದಾರಿಯಾಗಿ, ಇಂದು ನಾವುಕಾಣುವ ಪ್ರಚಂಡ-ಉತ್ಪಾದನಾ ಸಾಮರ್ಥ್ಯಗಳಿಗೆ ನಾಂದಿಯಾಯಿತು. ತರಕಾರಿ, ಹಣ್ಣು-ಹಂಪಲುಗಳು ವರ್ಷ-ವಿಡೀ ದೊರೆಯುವಂತಾದವು. ಈ ಪ್ರಾಯೋಗಿಕಾ ಹೊಲದ ಸಮೀಪದಲ್ಲೇ, ಅಂದರೆ, 'ಮಿಸ್ಸೂರಿ ವಿಶ್ವವಿದ್ಯಾಲಯ'ದ ಹತ್ತಿರವಿರುವ, ಸುಪ್ರಸಿದ್ಧ ಬೀಜತಯಾರಿಕಾ ಕಂಪೆನಿ, 'ಮೋನ್ಸ್ಯಾಂಟೊ'[೪] 'ಮಿಸ್ಸೂರಿ ಕೃಷಿವಿಶ್ವವಿದ್ಯಾಲಯದ ಬೆಳೆ ಸಂಶೋಧನಾ ಕಾರ್ಯ'ಗಳಿಗೆ ವಿತ್ತೀಯ ಸಹಾಯವನ್ನು ನೀಡುತ್ತಾ ಬಂದಿದೆ.

ಉಲ್ಲೇಖಗಳುಸಂಪಾದಿಸಿ

  1. Sanborn Field helped develop an antibiotic from the ground up October 12, 2012
  2. Plot No: 23, Sanborn field, UMC campus, USA
  3. 'ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ, ವೆಂಕಟೇಶ್ ಬರಹ
  4. ವಿಶ್ವವಿದ್ಯಾಲಯದ ಕೃಷಿ ಸಂಬಂಧಿ ಪರಿಯೋಜನೆಗಳಿಗೆ ವಿತ್ತೀಯ ಸಹಾಯದ ನೆರವನ್ನು ನೀಡುತ್ತಿದೆ. 'Monsanto grant will fund plant-science research