ಸ್ಫಟಿಕ ಲಿಂಗ ಬೆಣಚುಕಲ್ಲಿನಿಂದ (ಸ್ಫಟಿಕ ಶಿಲೆ) ತಯಾರಿಸಲಾದ ಒಂದು ಬಗೆಯ ಲಿಂಗ.

ಸ್ಫಟಿಕ ಮಾಲೆ

ಸ್ಫಟಿಕ ಶಿಲೆ ಒಂದು ಅರೆ ಅಮೂಲ್ಯ ರತ್ನ. ಸ್ಫಟಿಕ ಶಿಲೆಯ ಅನೇಕ ವಿಭಿನ್ನ ವೈವಿಧ್ಯಗಳಿವೆ. ಉನ್ನತ ಗುಣಮಟ್ಟದ ಬೆಣಚುಕಲ್ಲಿನ ಸ್ಫಟಿಕಗಳು ದ್ಯುತೀಯ ಅಥವಾ ವಿದ್ಯುನ್ಮಾನ ಗುಣಲಕ್ಷಣಗಳಿರುವ ಏಕ ಸ್ಫಟಿಕ ಸಿಲಿಕಾಗಳಾಗಿರುತ್ತವೆ ಮತ್ತು ಇದರಿಂದ ಇವು ಕಗ್ಗಲ್ಲು ಕೆತ್ತನೆಗೆ ಸೂಕ್ತವಾಗಿರುತ್ತವೆ. ದಕ್ಷಿಣ ಭಾರತದಲ್ಲಿನ ಹಿಂದೂ ದೇವಾಲಯಗಳು ಶಿವಲಿಂಗಗಳನ್ನು ಮಾಡಲು ಈ ಅರೆ ಅಮೂಲ್ಯ ಖನಿಜವನ್ನು ಬಳಸುತ್ತವೆ. ಸ್ಫಟಿಕಶಿಲೆಯ ಮಣಿಗಳನ್ನು ಅರೆಪಾರದರ್ಶಕ ಗುಲಾಬಿ ಬೆಣಚುಕಲ್ಲಿನಿಂದ ಕತ್ತರಿಸಿ, ಮಣಿಗಳಾಗಿ ನಯಗೊಳಿಸಿ ತಯಾರಿಸಲಾಗುತ್ತದೆ. ಪ್ರತಿ ಮಣಿಯು ವ್ಯಾಸದಲ್ಲಿ ಸುಮಾರು ಹತ್ತು ಮಿಲಿಮೀಟರ್ ಇರುತ್ತದೆ. ಇದು ಶಾಖದ ಉತ್ತಮ ವಾಹಕ. ಹಾಗಾಗಿ ಜನರು ತಮ್ಮ ದೇಹವನ್ನು ತಂಪಾಗಿಡಲು ಸ್ಫಟಿಕ ಆಭರಣಗಳನ್ನು ಧರಿಸುತ್ತಾರೆ. ಈ ಮಣಿಗಳು ಗುಣಪಡಿಸುವ ಲಕ್ಷಣಗಳನ್ನು ಹೊಂದಿವೆ ಎಂದು ಕೆಲವು ಇತರ ಜನರು ಹಕ್ಕುಸಾಧಿಸುತ್ತಾರೆ.

ಹಿಂದೂ ಶೈವ ದೇವಾಲಯಗಳಲ್ಲಿ, ಶೈವ ಆಗಮರು ಶಿವನನ್ನು ಸ್ಫಟಿಕ ಲಿಂಗದ ರೂಪದಲ್ಲಿ ಪೂಜಿಸಲು ಅವಕಾಶ ನೀಡುತ್ತಾರೆ. ಸ್ಫಟಿಕ ಲಿಂಗ ನಟರಾಜನ ವಿಗ್ರಹವನ್ನು ಪ್ರತಿನಿಧಿಸುತ್ತದೆ. ಸ್ಫಟಿಕ ಲಿಂಗಗಳನ್ನು ಶಿವನ ಗರ್ಭಗುಡಿಯಲ್ಲಿ ರಕ್ಷಿಸಲಾಗಿರುತ್ತದೆ. ಹಿಂದೂ ಅರ್ಚಕರು ಸ್ಫಟಿಕ ಲಿಂಗಕ್ಕೆ ಹಾಲು, ನೀರು ಅಥವಾ ವಿಭೂತಿ ಅರ್ಪಿಸಿ ಪವಿತ್ರೀಕರಿಸುತ್ತಾರೆ. ಅವರು ೧೦೮ ಬಾರಿ ಶಿವ ಪಂಚಾಕ್ಷರಿ ಮಂತ್ರವನ್ನೂ ಪಠನ ಮಾಡುತ್ತಾರೆ. ಸ್ಫಟಿಕ ಲಿಂಗವು ಎಲ್ಲ ಅಕರ್ಮಗಳು ಮತ್ತು ಶಾಪಗಳನ್ನು ಹೋಗಲಾಡಿಸುತ್ತದೆಂದು ಮತ್ತು ಒಬ್ಬರ ಆತ್ಮವಿಶ್ವಾಸ ಹಾಗೂ ಶಕ್ತಿಯನ್ನು ವರ್ಧಿಸುತ್ತದೆಂದು ನಂಬಲಾಗಿದೆ.

ಚಿದಂಬರಮ್‍ನ ತಿಳ್ಳೈ ನಟರಾಜ ದೇವಾಲಯದಲ್ಲಿ ಒಂದು ಸ್ಫಟಿಕ ಲಿಂಗವಿದೆ. ಆದಿ ಶಂಕರರು ಇಲ್ಲಿ ಒಂದು ಸ್ಫಟಿಕ ಲಿಂಗವನ್ನು ನೀಡಿದರು ಎಂದು ಹೇಳಲಾಗಿದೆ ಮತ್ತು ಇದನ್ನು ಇಂದಿಗೂ ಪೂಜಿಸಲಾಗುತ್ತದೆ. ಸ್ಫಟಿಕ ಲಿಂಗವನ್ನು ಚಿತ್ ಸಭೆಯಲ್ಲಿ ಪ್ರತಿಷ್ಠಾಪಿಸಲಾಗಿದೆ.

ಮದುರೈಯ ಮೀನಾಕ್ಷಿ ಅಮ್ಮನವರ ದೇವಾಲಯದಲ್ಲಿ ಒಂದು ಶತಮಾನಗಳಷ್ಟು ಹಳೆಯ ಸ್ಫಟಿಕ ಲಿಂಗವಿದೆ. ಇದರಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಹಾಗಾಗಿ ಸರಿಯಾದ ವಿವರಣೆಯಿರುವ ಒಂದು ಹೊಸ ಆರು ಅಂಗುಲದ ಸ್ಫಟಿಕ ಲಿಂಗವನ್ನು ಹಿಮಾಲಯದಿಂದ ತರಲಾಗಿದೆ.

ರಾಮೇಶ್ವರದ ರಾಮನಾಥಸ್ವಾಮಿ ದೇವಾಲಯದ ಮೊದಲ ಒಳ ಮೊಗಸಾಲೆಯಲ್ಲಿ, ಭಕ್ತರು ಪವಿತ್ರ ಬಿಳಿ ಸ್ಫಟಿಕ ಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ. ಶ್ರೀ ಚಕ್ರ (ಸೇತು ಪೀಠ) ಮತ್ತು ಸ್ಫಟಿಕ ಲಿಂಗವನ್ನು ಹಿಂದೂ ಸಂನ್ಯಾಸಿ ಆದಿ ಶಂಕರರು ಪ್ರತಿಷ್ಠಾಪಿಸಿದರು. ಸ್ಫಟಿಕ ಲಿಂಗ ದರ್ಶನಕ್ಕೆ ಮುಂಜಾನೆ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ, ಅಂದರೆ ಬೆಳಿಗೆ ೫ ರಿಂದ ೬ ಗಂಟೆ ಮಧ್ಯೆ.[]

ಉಲ್ಲೇಖಗಳು

ಬದಲಾಯಿಸಿ
  1. "Rameswaram". Archived from the original on 2016-03-03. Retrieved 2017-05-15.