ಸ್ಪಾರ್ಟಕಸ್ (Greek: [Σπάρτακος, Spártakos] Error: {{Lang}}: text has italic markup (help)

Spartacus
Spartacus by Denis Foyatier, 1830
ಭಾಗವಹಿಸಿದ ಯುದ್ಧ(ಗಳು)Third Servile War
Latin
Spartacus[೧]) (ಸುಮಾರು. 109 BC – 71 BC) ಮೂರನೇ ಗುಲಾಮರ ಯುದ್ಧದಲ್ಲಿ ಗುಲಾಮರ ಅತ್ಯಂತ ಪ್ರಮುಖ ನಾಯಕನಾಗಿದ್ದ, ಇದೊಂದು ರೋಮನ್ ರಿಪಬ್ಲಿಕ್ ವಿರುದ್ಧವಾದ ಪ್ರಮುಖ ಗುಲಾಮರ ದಂಗೆಯಾಗಿತ್ತು. ಯುದ್ಧಾನಂತರದ ಘಟನೆಗಳಲ್ಲಿ ಸ್ಪಾರ್ಟಕಸ್ ಭಾಗಿಯಾಗಿರುವ ಬಗ್ಗೆ ಹೆಚ್ಚೇನೂ ತಿಳಿದುಬಂದಿಲ್ಲ, ಹಾಗು ಅಸ್ತಿತ್ವದಲ್ಲಿರುವ ಚಾರಿತ್ರಿಕ ವಿವರಗಳು ಕೆಲವೊಂದು ಬಾರಿ ವಿರೋಧಾತ್ಮಕವಾಗಿರುತ್ತವೆ ಜೊತೆಗೆ ಯಾವಾಗಲು ನಂಬಲರ್ಹವಾಗಿರುವುದಿಲ್ಲ. ಈತ ಒಬ್ಬ ನಿಪುಣ ಮಿಲಿಟರಿ ನಾಯಕನಾಗಿದ್ದ.

ಸ್ಪಾರ್ಟಕಸ್ ನ ಹೋರಾಟವನ್ನು ಸಾಮಾನ್ಯವಾಗಿ ಗುಲಾಮರನ್ನು-ವಶದಲ್ಲಿರಿಸಿಕೊಂಡಿದ್ದ ಕುಲೀನ ವರ್ಗದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುವ ತುಳಿತಕ್ಕೊಳಪಟ್ಟ ಜನರ ಹೋರಾಟವಾಗಿ ಕಾಣಲಾಗುತ್ತದೆ, ಇದು 19ನೇ ಶತಮಾನದಿಂದೀಚೆಗೆ ಆಧುನಿಕ ಬರಹಗಾರರಲ್ಲಿ ಹೊಸ ಅರ್ಥವನ್ನು ಹುಟ್ಟುಹಾಕಿದೆ. ಸ್ಪಾರ್ಟಕಸ್ ನ ದಂಗೆಯು ಹಲವು ಆಧುನಿಕ ಸಾಹಿತ್ಯಕ ಹಾಗು ರಾಜಕೀಯ ಬರಹಗಾರರಿಗೆ ಉತ್ತೇಜಕವಾಗಿದೆ, ಇದು ಪ್ರಾಚೀನ ಹಾಗು ಆಧುನಿಕ ಎರಡೂ ಸಂಸ್ಕೃತಿಗಳಲ್ಲಿ ಸ್ಪಾರ್ಟಕಸ್ ನನ್ನು ಒಬ್ಬ ಜನಪದ ನಾಯಕನನ್ನಾಗಿ ಮಾಡುತ್ತದೆ.

ಮೂಲ ಬದಲಾಯಿಸಿ

ಮಯೇಡಿಯನ್ನು ಒಳಗೊಂಡಂತೆ ಥ್ರಾಸಿಯನ್ ಬುಡಕಟ್ಟುಗಳು

ಪ್ರಾಚೀನ ಮೂಲಗಳ ಪ್ರಕಾರ ಸ್ಪಾರ್ಟಕಸ್ ಒಬ್ಬ ಥ್ರಾಸಿಯನ್ ಆಗಿದ್ದ. ಪ್ಲುಟಾರ್ಚ್ ಈತನನ್ನು "ಅಲೆಮಾರಿ ಜನಾಂಗ ಮೂಲದ ಒಬ್ಬ ಥ್ರಾಸಿಯನ್" ಎಂದು ವಿವರಿಸುತ್ತಾನೆ.[೨] ಅಪ್ಪಿಯನ್, "ಹುಟ್ಟಿನಿಂದ ಒಬ್ಬ ಥ್ರಾಸಿಯನ್ ಆಗಿದ್ದ ಈತ, ಒಂದೊಮ್ಮೆ ರೋಮನ್ನರ ಸೇನೆಯಲ್ಲಿ ಸೈನಿಕನಾಗಿ ಕಾರ್ಯನಿರ್ವಹಿಸಿದ್ದ, ಆದರೆ ನಂತರದಲ್ಲಿ ಬಂಧನಕ್ಕೊಳಪಟ್ಟು, ಕುಸ್ತಿಮಲ್ಲರಿಗೆ ಮಾರಲ್ಪಟ್ಟನೆಂದು" ಹೇಳುತ್ತಾನೆ.[೩] ಫ್ಲೋರಸ್ (2.8.8) "ಈತ ಒಬ್ಬ ಥ್ರಾಸಿಯನ್ ಕೂಲಿ ಸೈನಿಕನಾಗಿ ಕಾರ್ಯನಿರ್ವಹಿಸಿ, ನಂತರದಲ್ಲಿ ಒಬ್ಬ ರೋಮನ್ ಸೈನಿಕನಾಗುತ್ತಾನೆ, ಒಬ್ಬ ಸೈನಿಕನಾಗಿ ಸೈನ್ಯದಿಂದ ಪರಾರಿಯಾಗಿ, ಡಕಾಯಿತನಾಗುತ್ತಾನೆ, ಹಾಗು ನಂತರದಲ್ಲಿ ತನ್ನ ಸ್ವಸಾಮರ್ಥ್ಯದಿಂದ ಒಬ್ಬ ಕುಸ್ತಿಮಲ್ಲನಾಗುತ್ತಾನೆ" ಎಂದು ವಿವರಿಸಿದ್ದಾನೆ.[೪] ಕೆಲವು ಲೇಖಕರು, ಮಯೇಡಿಯ ಥ್ರಾಸಿಯನ್ ಬುಡಕಟ್ಟನ್ನು ಸೂಚಿಸುತ್ತಾರೆ,[೫] ಇದು ಪ್ರಾಚೀನ ಕಾಲದಲ್ಲಿ ಥ್ರೆಸ್ ನ ನೈಋತ್ಯ ತುದಿಯ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು ಎಂದು ಹೇಳುತ್ತಾರೆ(ಇಂದಿನ ನೈಋತ್ಯ ಬಲ್ಗೇರಿಯಾ).[೬][೭][೮] ಮಯೇಡಿ ಬುಡಕಟ್ಟಿನ ಪ್ರವಾದಿನಿಯಾಗಿದ್ದ ಸ್ಪಾರ್ಟಕಸ್ ನ ಪತ್ನಿಯನ್ನೂ ಸಹ ಆತನೊಂದಿಗೆ ಗುಲಾಮಳನ್ನಾಗಿ ಮಾಡಿಕೊಳ್ಳಲಾಗಿತ್ತೆಂದೂ ಸಹ ಪ್ಲುಟಾರ್ಚ್ ಬರೆಯುತ್ತಾನೆ.

ಉಳಿದಂತೆ ಸ್ಪಾರ್ಟಕಸ್ ಎಂಬ ಹೆಸರನ್ನು ಕಪ್ಪು ಸಮುದ್ರ ಪ್ರದೇಶದೊಂದಿಗೆ ಪ್ರಮಾಣೀಕರಿಸಲಾಗುತ್ತದೆ: ಥ್ರಾಸಿಯನ್ ಸಾಮ್ರಾಜ್ಯದ ಸಿಮ್ಮೆರಿಯನ್ ಬೋಸ್ಫೋರಸ್[೯] ಹಾಗು ಪಾಂಟಸ್[೧೦] ರಾಜರುಗಳು ಇದನ್ನು ಹೊಂದಿದ್ದರೆಂದು ಹೇಳಲಾಗುತ್ತದೆ, ಹಾಗು ತ್ರಾಸಿಯನ್ "ಸ್ಪಾರ್ಟ" "ಸ್ಪಾರ್ಡಕಸ್"[೧೧] ಅಥವಾ "ಸ್ಪಾರಡೋಕಸ್",[೧೨] ಓಡ್ರಿಸಾಯೇನ ಸೇಯುಥೆಸ್ Iನ ತಂದೆಯೆಂದೂ ಸಹ ಪರಿಚಿತನಾಗಿದ್ದ.

ಗುಲಾಮಗಿರಿ ಹಾಗು ಬಿಡುಗಡೆ ಬದಲಾಯಿಸಿ

100 BCಯಲ್ಲಿ ರೋಮನ್ ರಿಪಬ್ಲಿಕ್

ವಿವಿಧ ಮೂಲಗಳು ಹಾಗು ಅವುಗಳ ಉಲ್ಲೇಖಗಳ ಪ್ರಕಾರ, ಸ್ಪಾರ್ಟಕಸ್, ರೋಮನ್ ಸೈನ್ಯದಳದ ಒಬ್ಬ ಸೈನಿಕನಾಗಿದ್ದು ನಂತರದಲ್ಲಿ ಗುಲಾಮನಾಗಿರಬಹುದು, ಅಥವಾ ಸೈನ್ಯದಳದಿಂದ ಬಂಧನಕ್ಕೊಳಪಟ್ಟಿರಬಹುದು.[೧೩] ಸ್ಪಾರ್ಟಕಸ್, ಕತ್ತಿಮಲ್ಲನ ಶಾಲೆಯಲ್ಲಿ ತರಬೇತಿ ಪಡೆದ(ಲುಡುಸ್ ), ಇದು ಕಾಪುವ ಸಮೀಪದಲ್ಲಿದ್ದ ಈ ಶಾಲೆಯು ಲೆಂಟುಲಸ್ ಬಾಟಿಯಾಟಸ್ ಗೆ ಸೇರಿತ್ತು. 73 BCಯಲ್ಲಿ, ಸ್ಪಾರ್ಟಕಸ್, ಕತ್ತಿಮಲ್ಲರಿಂದ ಪಾರಾಗಲು ಯತ್ನಿಸುತ್ತಿದ್ದ ಗುಂಪಿನವರೊಡನೆ ಸೇರಿದ್ದ. ಈ ರಹಸ್ಯ ಯೋಜನೆಯು ಬಯಲಾಯಿತು ಆದರೆ ಸುಮಾರು 70[೧೪] ಜನರು ಅಡುಗೆ ಸಾಮಾನುಗಳನ್ನು ಬಳಸಿಕೊಂಡು ಶಾಲೆಯಿಂದ ಹೊರಹೋಗಲು ಕಾಳಗ ನಡೆಸಿದರು, ಹಾಗು ಕುಸ್ತಿಮಲ್ಲರ ಆಯುಧಗಳು ಹಾಗು ರಕ್ಷಾ ಕವಚಗಳ ಹಲವಾರು ಬಂಡಿಗಳನ್ನು ವಶಪಡಿಸಿಕೊಂಡರು.[೧೫] ಈ ರೀತಿ ಪಾರಾದ ಗುಲಾಮರ ಬೆನ್ನಟ್ಟಿ ಯುದ್ಧ ಮಾಡಲು ಕಳುಹಿಸಿದಂತಹ ಸಣ್ಣ ಸೈನ್ಯವನ್ನು ಹಿಮ್ಮೆಟಿಸಿದರು, ಕಾಪುವ ಸುತ್ತಮುತ್ತಲಿನ ಪ್ರದೇಶವನ್ನು ಲೂಟಿ ಮಾಡಿದರು, ತಮ್ಮ ಶ್ರೇಣಿಗೆ ಹಲವಾರು ಇತರ ಗುಲಾಮರನ್ನು ನೇಮಕ ಮಾಡಿಕೊಂಡರು, ಹಾಗು ಅಂತಿಮವಾಗಿ ಮೌಂಟ್ ವೆಸುವಿಯಸ್ ನ ಮೇಲಿದ್ದ ಇವರಿಗಿಂತ ಪ್ರಬಲವಾದ ಸೈನ್ಯಕ್ಕೆ ಶರಣಾದರು.[೧೬][೧೭]

ಒಂದೊಮ್ಮೆ ಬಿಡುಗಡೆಯಾದ ನಂತರ, ಬಿಡುಗಡೆಯಾದ ಕುಸ್ತಿಮಲ್ಲರು ಸ್ಪಾರ್ಟಕಸ್ ಹಾಗು ಗೌಲ್ ನ ಮತ್ತಿಬ್ಬರು ಗುಲಾಮರಾದ — ಕ್ರಿಕ್ಸಸ್ ಹಾಗು ಒಯೆನೋಮೌಸ್ ರನ್ನು ತಮ್ಮ ನಾಯಕರುಗಳನ್ನಾಗಿ ಮಾಡಿಕೊಂಡರು. ಆದಾಗ್ಯೂ ರೋಮನ್ ಲೇಖಕರು, ಗುಲಾಮರು ಸ್ಪಾರ್ಟಕಸ್ ನನ್ನು ತಮ್ಮ ನಾಯಕನನ್ನಾಗಿ ಮಾಡಿಕೊಂಡಿದ್ದ ಸದೃಶ ಗುಂಪೆಂದು ಭಾವಿಸುತ್ತಾರೆ, ಇವರು ತಮ್ಮ ಶ್ರೇಣಿವ್ಯವಸ್ಥೆಯ ಮಿಲಿಟರಿ ನಾಯಕತ್ವವನ್ನು ಗುಲಾಮರ ಅಸಂಕಲ್ಪಿತ ತಂಡಕ್ಕೆ ಹಂಚಿಕೆ ಮಾಡಿರಬಹುದು, ಇದು ಇತರ ಗುಲಾಮ ನಾಯಕರುಗಳು ತಮ್ಮ ಶ್ರೇಣಿಯಿಂದ ಅಧೀನ ಸ್ಥಾನಕ್ಕಿಳಿಯುವಂತಾಯಿತು. ಕ್ರಿಕ್ಸಸ್ ಹಾಗು ಒಯೆನೋಮೌಸ್ ರ ಸ್ಥಾನಗಳು — ಹಾಗು ನಂತರದಲ್ಲಿ, ಕ್ಯಾಸ್ಟಸ್ ನ ಸ್ಥಾನವನ್ನು — ಮೂಲಗಳನ್ನು ಆಧರಿಸಿ ಸ್ಪಷ್ಟವಾಗಿ ನಿರೂಪಿಸಲು ಸಾಧ್ಯವಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಮೂರನೇ ಗುಲಾಮರ ಯುದ್ಧ ಬದಲಾಯಿಸಿ

ರೋಮನ್ ಸೈನ್ಯದಳದ ಅನುಪಸ್ಥಿತಿಯಿಂದಾಗಿ ರೋಮನ್ನರ ಪ್ರತಿಕ್ರಿಯೆಗೆ ಅಡ್ಡಿಯುಂಟಾಯಿತು, ಈ ಸೈನ್ಯದಳವು ಈಗಾಗಲೇ ಸ್ಪೇನ್ ದಂಗೆ ಹಾಗು ಮೂರನೇ ಮಿಥ್ರಿಡಾಟಿಕ್ ಯುದ್ಧದಲ್ಲಿ ಭಾಗಿಯಾಗಿತ್ತು. ಇದಲ್ಲದೆ, ರೋಮನ್ನರು ಈ ದಂಗೆಯನ್ನು ಒಂದು ಯುದ್ಧಕ್ಕಿಂತ ಹೆಚ್ಚಾಗಿ ಒಂದು ಶೋಧನಾಕಾರ್ಯವೆಂದು ಪರಿಗಣಿಸಿತ್ತು. ರೋಮ್, ತನ್ನ ದಂಡಾಧಿಕಾರಿ ಗೈಯಸ್ ಕ್ಲಾಡಿಯಸ್ ಗ್ಲಬೇರಸ್ ನ ಆಧಿಪತ್ಯದಲ್ಲಿ ಸಹಾಯಕ ಸೇನೆಯನ್ನು ರವಾನಿಸಿತು, ಈ ದಳವು ಪರ್ವತದ ಮೇಲೆ ಬೀಡು ಬಿಟ್ಟಿದ್ದ ಗುಲಾಮರಿಗೆ ಮುತ್ತಿಗೆ ಹಾಕಿತು, ಈ ರೀತಿಯಾದ ಮುತ್ತಿಗೆಯಿಂದಾಗಿ ಗುಲಾಮರು ನಿರಾಹಾರರಾಗಿ ತಮಗೆ ಶರಣಾಗಬಹುದೆಂಬ ಭರವಸೆಯನ್ನು ಇದು ಹೊಂದಿತ್ತು. ಬಳ್ಳಿಗಳನ್ನು ಹಗ್ಗಗಳನ್ನಾಗಿ ಮಾಡಿಕೊಂಡ ಸ್ಪಾರ್ಟಕಸ್ ನ ಉಪಾಯವು ಅವರನ್ನು ಆಶ್ಚರ್ಯಚಕಿತರನ್ನಾಗಿಸಿತು, ಈ ಬಳ್ಳಿಗಳ ಮೂಲಕ ಅವನು ತನ್ನ ಜನರೊಂದಿಗೆ ಅಗ್ನಿಪರ್ವತದ ಪ್ರಪಾತದಿಂದ ಏರಿ, ಹಿಂಭಾಗದಿಂದ ರಕ್ಷಣೆಯಿಲ್ಲದ ರೋಮನ್ ಶಿಬಿರವನ್ನು ಆಕ್ರಮಣ ಮಾಡಿ, ಹಲವರನ್ನು ಕೊಂದು ಹಾಕಿದ.[೧೮] ಗುಲಾಮರು, ಎರಡನೇ ಆಕ್ರಮಣವನ್ನೂ ಸಹ ಯಶಸ್ವಿಯಾಗಿ ಎದುರಿಸಿದರು, ಹೆಚ್ಚುಕಡಿಮೆ ದಂಡಾಧಿಕಾರಿಯನ್ನು ಸೆರೆಹಿಡಿದು, ಆತನ ಕೆಳಗಿನ ಅಧಿಕಾರಿಗಳನ್ನು ಕೊಲ್ಲುವುದರ ಜೊತೆಗೆ ಮಿಲಿಟರಿ ಆಯುಧಗಳನ್ನು ವಶಪಡಿಸಿಕೊಂಡರು.[೧೯] ಈ ಯಶಸ್ಸುಗಳ ಜೊತೆಗೆ, ಹೆಚ್ಚು ಹೆಚ್ಚು ಗುಲಾಮರು ಸ್ಪಾರ್ಟಕನ್ ಸೇನೆಗೆ ಸೇರ್ಪಡೆಯಾದರು, ಈ ರೀತಿಯಾಗಿ "ಆ ಪ್ರದೇಶದ ಹಲವು ದನಗಾಹಿಗಳು ಹಾಗು ಕುರುಬರು" ಸೇನೆಗೆ ಸೇರ್ಪಡೆಯಾದರು, ಈ ರೀತಿ ಅವರ ಶ್ರೇಣಿಯು 70,000ಕ್ಕೆ ಏರಿತು.[೨೦]

ಇಂತಹ ವಾಗ್ವಾದಗಳಲ್ಲಿ ಸ್ಪಾರ್ಟಕಸ್ ಒಬ್ಬ ಅದ್ಭುತ ಕಾರ್ಯತಂತ್ರಜ್ಞನೆಂದು ಸಾಬೀತುಪಡಿಸಿದ, ಇದು ಆತನ ಪೂರ್ವದ ಮಿಲಿಟರಿ ಅನುಭವವನ್ನು ಸೂಚಿಸುತ್ತದೆ. ಗುಲಾಮರು ಸಾಕಷ್ಟು ಮಿಲಿಟರಿ ತರಬೇತಿಯನ್ನು ಹೊಂದಿರದಿದ್ದರೂ ಸಹ, ಅವರು ಶಿಸ್ತುಬದ್ಧ ರೋಮನ್ ಸೈನ್ಯವನ್ನು ಎದುರಿಸುವಾಗ ಲಭ್ಯವಿರುವ ಸ್ಥಳೀಯ ಆಯುಧಗಳು ಹಾಗು ಅಸಾಧಾರಣವಾದ ಉಪಾಯಗಳನ್ನು ಬಳಕೆ ಮಾಡಿಕೊಂಡರು.[೨೧] ಅವರು 73–72 BC ವಸಂತಋತುವಿನಲ್ಲಿ ತರಬೇತಿ, ಯುದ್ಧ ಸಿದ್ಧತೆ ಹಾಗು ಹೊಸ ಸೈನಿಕರನ್ನು ಪಾಳೆಯಕ್ಕೆ ಸೇರಿಸಿಕೊಳ್ಳುವಲ್ಲಿ ಮುಳುಗಿದರು, ಹಾಗು ನೋಲ, ನುಸೆರಿಯಾ, ಥುರೀ ಹಾಗು ಮೆಟಾಪೊನ್ಟಂ ಪಟ್ಟಣಗಳನ್ನು ಒಳಗೊಂಡಂತೆ ಇತರ ಪಟ್ಟಣಗಳನ್ನು ವಶಪಡಿಸಿಕೊಳ್ಳುವ ಮೂಲಕ ತಮ್ಮ ಭೂಪ್ರದೇಶವನ್ನು ವಿಸ್ತರಿಕೊಂಡರು.[೨೨] ಈ ಸ್ಥಳಗಳ ನಡುವಿನ ಅಂತರ ಹಾಗು ತರುವಾಯದ ಘಟನೆಗಳು, ಗುಲಾಮರು ತಮ್ಮ ಉಳಿದ ನಾಯಕರುಗಳಾದ ಸ್ಪಾರ್ಟಕಸ್ ಹಾಗು ಕ್ರಿಕ್ಸಸ್ ರ ಆಧಿಪತ್ಯದಲ್ಲಿ ಎರಡು ಗುಂಪುಗಳಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು ಎಂಬುದನ್ನು ಸೂಚಿಸುತ್ತದೆ.

72 BCಯ ವಸಂತಋತುವಿನಲ್ಲಿ, ಗುಲಾಮರು ತಮ್ಮ ಚಳಿಗಾಲದ ಶಿಬಿರಗಳನ್ನು ತೊರೆದು, ಉತ್ತರದಿಕ್ಕಿಗೆ ಹೋಗಲು ಆರಂಭಿಸಿದರು. ಅದೇ ಸಮಯದಲ್ಲಿ, ರೋಮನ್ ರಾಷ್ಟ್ರೀಯ ಪರಿಷತ್ತು, ದಂಡಾಧಿಕಾರಿಗಳ ಸೈನ್ಯದ ಸೋಲಿನ ಬಗ್ಗೆ ಎಚ್ಚರಿಕೆ ನೀಡಿತು, ಜೊತೆಗೆ ಲುಸಿಯಸ್ ಗೆಲ್ಲಿಯಸ್ ಪುಬ್ಲಿಕಾಲ ಹಾಗು ಗ್ನಯೇಯುಸ್ ಕಾರ್ನೆಲಿಯಸ್ ಲೆಂಟುಲುಸ್ ಕ್ಲೊಡಿಯಾನಸ್ ರ ಆಧಿಪತ್ಯದಲ್ಲಿ ಕಾನ್ಸಲಿನ ಸೈನ್ಯದಳವನ್ನು ರವಾನಿಸಿತು.[೨೩] ಈ ಎರಡೂ ಸೈನ್ಯದಳಗಳು ಆರಂಭದಲ್ಲಿ ಯಶಸ್ಸನ್ನು ಕಂಡವು—ಮೌಂಟ್ ಗರ್ಗನಾಸ್[೨೪] ಸಮೀಪ ಕ್ರಿಕ್ಸಸ್ ನ ಆಧಿಪತ್ಯದಲ್ಲಿ 30,000 ಗುಲಾಮರ ಗುಂಪನ್ನು ಇದು ಸೋಲಿಸಿತು—ಆದರೆ ನಂತರದಲ್ಲಿ ಸ್ಪಾರ್ಟಕಸ್ ನಿಂದ ಸೋತು ಹೋಯಿತು. ಈ ಸೋಲುಗಳನ್ನು ಯುದ್ಧದ ಬಗೆಗಿನ ಎರಡು ಅತ್ಯಂತ ವ್ಯಾಪಕವಾದ(ಉಪಲಬ್ಧ) ಇತಿಹಾಸಗಳು ಅಪ್ಪಿಯನ್ ಹಾಗು ಪ್ಲುಟಾರ್ಚ್ ರಿಂದ ಭಿನ್ನವಾಗಿ ನಿರೂಪಿತವಾಗಿವೆ.[೨೫][೨೬][೨೭][೨೮]

ಸ್ಪಷ್ಟವಾಗಿ ನಿರೋಧಿಸಲಾಗದ ದಂಗೆಯಿಂದ ಎಚ್ಚೆತ್ತ, ರಾಷ್ಟ್ರೀಯ ಪರಿಷತ್ತು, ಮಾರ್ಕಸ್ ಲಿಸಿನಿಯಸ್ ಕ್ರಾಸ್ಸುಸ್ ಗೆ ಇದರ ಮೇಲ್ವಿಚಾರಣೆಯನ್ನು ವಹಿಸಿತು, ಈತ ರೋಮ್ ನ ಒಬ್ಬ ಅತ್ಯಂತ ಶ್ರೀಮಂತನಾಗಿದ್ದು, ಸ್ಥಾನಳನ್ನು ಅಲಂಕರಿಸಬಹುದಾದ ಏಕೈಕ ಸ್ವಯಂಸೇವಕನಾಗಿದ್ದ, ಜೊತೆಗೆ ದಂಗೆಯನ್ನು ಕೊನೆಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದ. ಕ್ರಾಸ್ಸುಸ್ ಗೆ, ಎಂದು ಸೈನ್ಯದಳದ ಉಸ್ತುವಾರಿಯನ್ನು ವಹಿಸಲಾಯಿತು, ಇದರಲ್ಲಿ ಸರಿಸುಮಾರು 40,000–50,000ದಷ್ಟು ತರಬೇತಿ ಪಡೆದ ರೋಮನ್ ಸೈನಿಕರಿದ್ದರು,[೨೯][೩೦] ಇವರನ್ನು ಬಹಳ ಒರಟಾಗಿ, ನಿರ್ದಯನಾಗಿ, ಶಿಸ್ತಿನಿಂದ ನಡೆಸಿಕೊಳ್ಳುತ್ತಿದ್ದ, ದಂಗೆಯೆದ್ದವರಲ್ಲಿ ಹತ್ತರಲ್ಲೊಬ್ಬನನ್ನು ಕೊಲ್ಲುವ ಮೂಲಕ ಶಿಕ್ಷೆಯನ್ನು ಮತ್ತೆ ಕ್ರಮಬದ್ಧವಾಗಿಸಲಾಗುತ್ತಿತ್ತು.[೩೧] ಸ್ಪಾರ್ಟಕಸ್ ಹಾಗು ಆತನ ಅನುಚರರು, ಯಾವುದೇ ಸ್ಪಷ್ಟವಾದ ಕಾರಣಗಳಿಲ್ಲದೆ ಇಟಲಿಯ ದಕ್ಷಿಣ ಭಾಗದಿಂದ ಹಿಂದಕ್ಕೆ ಸರಿದು, ಮತ್ತೊಮ್ಮೆ 71 BC ಆರಂಭದಲ್ಲಿ ಉತ್ತರ ದಿಕ್ಕಿಗೆ ಚಲಿಸಿದರು, ಕ್ರಾಸ್ಸುಸ್, ತನ್ನ ಆರು ಸೈನ್ಯದಳವನ್ನು ಪ್ರದೇಶದ ಗಡಿಗಳಲ್ಲಿ ನಿಯೋಜಿಸುವುದರ ಜೊತೆಗೆ ತನ್ನ ಸಹಾಯಕ ಮುಮ್ಮಿಯಸ್ ನನ್ನು ಎರಡು ಸೈನ್ಯದಳದೊಂದಿಗೆ ಸ್ಪಾರ್ಟಕಸ್ ನ ಬೆನ್ನಟ್ಟಿ ಕಾರ್ಯಾಚರಣೆ ನಡೆಸುವಂತೆ ಕಳುಹಿಸಿದ. ಗುಲಾಮರ ಜೊತೆ ಕದನಕ್ಕಿಳಿಯಬಾರದೆಂಬ ಆದೇಶವಿದ್ದರೂ ಸಹ, ಮುಮ್ಮಿಯಸ್ ಸಮಯೋಚಿತವಾಗಿ ಸಿಕ್ಕ ಅವಕಾಶದಲ್ಲಿ ಅವರ ಮೇಲೆ ಆಕ್ರಮಣ ನಡೆಸಿದ ಆದರೆ ಅವನನ್ನು ಅಲ್ಲಿಂದ ಓಡಿಸಲಾಯಿತು.[೩೨] ಇದರ ನಂತರ, ಕ್ರಾಸ್ಸುಸ್ ನ ಸೈನ್ಯದಳಗಳು ಹಲವಾರು ಕಾರ್ಯಾಚರಣೆಗಳಲ್ಲಿ ಜಯಗಳಿಸಿದರು, ಇದು ಸ್ಪಾರ್ಟಕಸ್ ಗೆ ಲುಕಾನಿಯಾದುದ್ದಕ್ಕೂ ದೂರದ ದಕ್ಷಿಣ ಮೇಲೆ ದಂಡೆತ್ತುವಂತೆ ನಿರ್ಬಂಧ ಹೇರಿತು, ಇದರಲ್ಲಿ ಕ್ರಾಸ್ಸುಸ್ ಜಯವನ್ನು ಸಾಧಿಸಿದ. 71 BC ಕೊನೆಯಲ್ಲಿ, ಸ್ಪಾರ್ಟಕಸ್, ಸ್ಟ್ರೈಟ್ ಆಫ್ ಮೆಸ್ಸಿನ ಸಮೀಪ ರೆಗಿಯಂ(ರೆಗ್ಗಿಯೋ ಕಾಲಬ್ರಿಯ)ನಲ್ಲಿ ಶಿಬಿರ ಹೂಡಿದ.

ಪ್ಲುಟಾರ್ಚ್ ನ ಪ್ರಕಾರ, ಸ್ಪಾರ್ಟಕಸ್ ಸಿಸಿಲಿಯನ್ ಹಡಗುಗಳ್ಳರೊಂದಿಗೆ ಸಿಸಿಲಿಯಿಂದ 2,000 ಜನರನ್ನು ರವಾನಿಸುವಂತೆ ಒಪ್ಪಂದ ಮಾಡಿಕೊಂಡ, ಅಲ್ಲಿ ಗುಲಾಮರು ದಂಗೆಯೇಳುವಂತೆ ಹಾಗು ಸೈನ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಆತ ಹೊಂದಿದ್ದ. ಆದಾಗ್ಯೂ, ಇವನಿಗೆ ಹಡಗುಗಳ್ಳರು ವಂಚನೆ ಮಾಡಿದರು, ಈತನಿಂದ ಹಣವನ್ನು ಪಡೆದ ಅವರು ನಂತರದಲ್ಲಿ ದಂಗೆಯೆದ್ದ ಗುಲಾಮರನ್ನು ಬಿಟ್ಟುಬಿಟ್ಟರು.[೩೨] ಕೆಲವು ಮೂಲಗಳ ಪ್ರಕಾರ, ಹಡಗುನಿರ್ಮಾಣ ಹಾಗು ತೆಪ್ಪಗಳ ಮೂಲಕ ದಂಗೆಕೋರರು ಪರಾರಿಯಾಗಲು ಯತ್ನಿಸಿದರು, ಆದರೆ ಕ್ರಾಸ್ಸುಸ್, ದಂಗೆಕೋರರು ಸಿಸಿಲಿಯನ್ನು ದಾಟದಂತೆ ಅನಿರ್ದಿಷ್ಟ ಕ್ರಮಗಳನ್ನು ಕೈಗೊಂಡ, ಹಾಗು ಅವರ ಪ್ರಯತ್ನಗಳನ್ನು ಅಲ್ಲೇ ಕೈಬಿಡುವಂತಾಯಿತು.[೩೩] ಸ್ಪಾರ್ಟಕಸ್ ನ ಸೈನ್ಯವು ನಂತರ ರೆಗಿಯುಂನೆಡೆಗೆ ಹಿಮ್ಮೆಟ್ಟಿತು. ಕ್ರಾಸ್ಸುಸ್ ನ ಸೈನ್ಯದಳಗಳು ಅವರನ್ನು ಹಿಂಬಾಲಿಸಿದವು ಹಾಗು ಅವರ ಆಗಮನದ ನಂತರ, ದಂಗೆಯೆದ್ದ ಗುಲಾಮರ ಪದೇ ಪದೇ ದಾಳಿಯ ಹೊರತಾಗಿಯೂ ರೆಗಿಯುಂನ ಭೂಸಂಧಿಯುದ್ಧಕ್ಕೂ ಕೋಟೆಯ ನಿರ್ಮಾಣ ಮಾಡಿದರು. ದಂಗೆಕೋರರು ಈಗ ಮುತ್ತಿಗೆಗೆ ಒಳಪಟ್ಟರು ಹಾಗು ತಮ್ಮ ನಿತ್ಯಬಳಕೆಯ ವಸ್ತುಗಳ ಸರಬರಾಜಿನಿಂದ ವಂಚಿತರಾದರು.[೩೪]

ಸ್ಪಾರ್ಟಕಸ್ ನ ಪತನ

ಈ ಸಮಯದಲ್ಲಿ, ಪೊಂಪೆಯ ಸೈನ್ಯದಳವು ಸ್ಪೇನ್ ನಿಂದ ಹಿಂದಿರುಗಿತು ಹಾಗು ಇದರ ರಾಷ್ಟ್ರೀಯ ಪರಿಷತ್ತು ಕ್ರಾಸ್ಸುಸ್ ಗೆ ಬೆಂಬಲ ನೀಡಲು ದಕ್ಷಿಣಕ್ಕೆ ರವಾನೆಯಾಗಬೇಕೆಂದು ಆದೇಶ ನೀಡಿತು.[೩೫] ಈ ನಡುವೆ ಕ್ರಾಸ್ಸುಸ್, ಪೊಂಪೆ ಸೈನ್ಯದಳದ ಆಗಮನದಿಂದ ತನ್ನ ಖ್ಯಾತಿಗೆ ಕುಂದು ಉಂಟಾಗಬಹುದೆಂದು ಹೆದರಿದ, ಸ್ಪಾರ್ಟಕಸ್, ಕ್ರಾಸ್ಸುಸ್ ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ವಿಫಲನಾದ.[೩೬] ಇದಕ್ಕೆ ಕ್ರಾಸ್ಸುಸ್ ನಿರಾಕರಿಸಿದಾಗ, ಸ್ಪಾರ್ಟಕಸ್ ನ ಸೈನ್ಯದ ಒಂದು ಭಾಗವು ಪೆಟೆಲಿಯಾ ಪರ್ವತದ ಪಶ್ಚಿಮ ದಿಕ್ಕಿಗೆ ರವಾನೆಯಾಯಿತು(ಬ್ರುಟ್ಟಿಯುಂನಲ್ಲಿರುವ ಇಂದಿನ ಸ್ಟ್ರೋನ್ಗೋಲಿ), ಜೊತೆಗೆ ಕ್ರಾಸ್ಸುಸ್ ನ ಸೈನ್ಯದಳಗಳು ಇವರನ್ನು ಬೆನ್ನಟ್ಟಿದವು.[೩೭] ಮುಖ್ಯ ಸೈನ್ಯದಿಂದ ಪ್ರತ್ಯೇಕಗೊಂಡ ದಂಗೆಕೋರರ ಒಂದು ಭಾಗವನ್ನು ಸೆರೆಹಿಡಿಯುವಲ್ಲಿ ಸೈನ್ಯದಳವು ಯಶಸ್ವಿಯಾದಾಗ,[೩೮] ಸ್ಪಾರ್ಟಕಸ್ ನ ಸೈನ್ಯದಲ್ಲಿದ್ದ ಶಿಸ್ತುಬದ್ಧತೆಯು ಭಂಗವಾಯಿತು, ಏಕೆಂದರೆ ಸಣ್ಣ ಗುಂಪುಗಳು, ಮೇಲೆರಗಿ ಬರುತ್ತಿರುವ ಸೈನ್ಯದಳಗಳ ಮೇಲೆ ಸ್ವತಂತ್ರವಾಗಿ ಆಕ್ರಮಣ ಮಾಡಲು ಆರಂಭಿಸಿದ್ದವು.[೩೯] ಸ್ಪಾರ್ಟಕಸ್ ತನ್ನ ಸೈನ್ಯವನ್ನು ಸುತ್ತಮುತ್ತಲು ಚೆದುರಿಸಿದ ಹಾಗು ಕೊನೆಯ ಪ್ರಯತ್ನವೆಂಬಂತೆ ಸೈನ್ಯದಳದ ಮೇಲೆ ತನ್ನ ಸಂಪೂರ್ಣ ಬಲವನ್ನು ಒಟ್ಟುಗೂಡಿಸಿಕೊಂಡ, ಇದರಲ್ಲಿ ಗುಲಾಮರು ಸಂಪೂರ್ಣವಾಗಿ ಸೋತುಹೋದರು, ಇದರಲ್ಲಿ ಬಹಳಷ್ಟು ಮಂದಿ ಯುದ್ಧರಂಗದಲ್ಲಿ ಮಡಿದರು.[೪೦] ಅಂತಿಮವಾಗಿ ಸ್ಪಾರ್ಟಕಸ್ ನ ಸಾವಿನ ಬಗ್ಗೆ ತಿಳಿದುಬಂದಿಲ್ಲ, ಏಕೆಂದರೆ ಅವನ ದೇಹವು ಎಲ್ಲೂ ಪತ್ತೆಯಾಗಿಲ್ಲ, ಆದರೆ ಇತಿಹಾಸಜ್ಞರು ಅವನು ತನ್ನ ಜನರೊಂದಿಗೆ ಯುದ್ಧಭೂಮಿಯಲ್ಲಿ ಸತ್ತುಹೋದನೆಂದು ಅಭಿಪ್ರಾಯಪಡುತ್ತಾರೆ.[೪೧] ಕ್ರಾಸ್ಸುಸ್ ನ ಸೈನ್ಯದಳವು ಸೆರೆಹಿಡಿದ ದಂಗೆಯೆದ್ದ ಆರು ಸಾವಿರ ಜನರನ್ನು ರೋಮ್ ನಿಂದ ಕಾಪುವವರೆಗೂ ಅಪ್ಪಿಯನ್ ಮಾರ್ಗದಲ್ಲಿ ಸಾಲಾಗಿ ನಿಲ್ಲಿಸಿ ಶಿಲುಬೆಗೆ ಏರಿಸಿ ಸಾಯಿಸಲಾಯಿತು.[೪೨]

ಉದ್ದೇಶಗಳು ಬದಲಾಯಿಸಿ

ಸ್ಪಾರ್ಟಕಸ್ ನ ಉದ್ದೇಶದ ಬಗ್ಗೆ ಸಾಂಪ್ರದಾಯಿಕ ಇತಿಹಾಸಜ್ಞರ ನಡುವೆ ಭಿನ್ನಾಭಿಪ್ರಾಯಗಳಿವೆ. ಪ್ಲುಟಾರ್ಚ್, ಸ್ಪಾರ್ಟಕಸ್ ಕೇವಲ ಸಿಸಲ್ಪೈನ್ ಗೌಲ್ ಗೆ ಉತ್ತರ ದಿಕ್ಕಿನ ಮೂಲಕ ಪರಾರಿಯಾಗಲು ಮಾತ್ರ ಇಚ್ಛಿಸಿ, ತನ್ನ ಜನರನ್ನು ಅವರ ಮನೆಗಳಿಗೆ ವಾಪಸ್ಸು ಕಳುಹಿಸುವ ಉದ್ದೇಶವನ್ನು ಹೊಂದಿದ್ದನೆಂದು ಬರೆಯುತ್ತಾನೆ,[೪೩] ಅಪ್ಪಿಯನ್ ಹಾಗು ಫ್ಲೋರಸ್, ರೋಮ್ ನೆಡೆಗೆ ಆತ ಸೈನ್ಯವನ್ನು ಮುನ್ನಡೆಸುವ ಉದ್ದೇಶವನ್ನು ಹೊಂದಿದ್ದನೆಂದು ಬರೆಯುತ್ತಾರೆ.[೪೪] ನಂತರದಲ್ಲಿ ಈ ಉದ್ದೇಶವನ್ನೂ ಸಹ ಕೈಬಿಡುತ್ತಾನೆಂದೂ ಸಹ ಅಪ್ಪಿಯನ್ ಹೇಳುತ್ತಾನೆ, ಇದಕ್ಕೆ ಮುಖ್ಯ ಕಾರಣ ರೋಮನ್ನರ ಎಡೆಗೆ ಇದ್ದ ಭಯವೆಂದು ಕಾಣುತ್ತದೆ. ಸ್ಪಾರ್ಟಕಸ್ ನ ಯಾವುದೇ ಚಟುವಟಿಕೆಗಳು, ರೋಮನ್ ಸಮಾಜವನ್ನು ಮಾರ್ಪಡಿಸುವ ಅಥವಾ ಗುಲಾಮಗಿರಿಯನ್ನು ತೆಗೆದುಹಾಕುವ ಉದ್ದೇಶಗಳಿಗೆ ಪೂರಕವಾಗಿರಲಿಲ್ಲ, ಕೆಲವೊಂದು ಕಾಲ್ಪನಿಕ ಪರಿಗಣನೆಗಳಲ್ಲಿ, ಉದಾಹರಣೆಗೆ 1960ರ ಚಿತ್ರ ಸ್ಪಾರ್ಟಕಸ್ ನಲ್ಲಿ ಈ ರೀತಿಯಾಗಿ ನಿರೂಪಿಸಲಾಗಿದೆ.

73 BC ಹಾಗು 72 BC ಆರಂಭದಲ್ಲಿ ನಡೆದ ಘಟನೆಗಳ ಆಧಾರದ ಮೇಲೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಗುಲಾಮರ ಗುಂಪು [೪೫] ಹಾಗು ಪ್ಲುಟಾರ್ಚ್ ನ ಒಂದು ವ್ಯಾಖ್ಯಾನವು ಸೂಚಿಸುವಂತೆ, ಪರಾರಿಯಾದ ಕೆಲ ಗುಲಾಮರು ಆಲ್ಪ್ಸ್ ಪರ್ವತಕ್ಕೆ ಪರಾರಿಯಾಗುವ ಬದಲು ಇಟಲಿಯನ್ನು ಲೂಟಿ ಮಾಡಲು ಇಚ್ಚಿಸಿದರು,[೪೩] ಆಧುನಿಕ ಬರಹಗಾರರು, ಸ್ಪಾರ್ಟಕಸ್ ನ ಅಧೀನದಲ್ಲಿದ್ದವರ ನಡುವೆ ಗುಂಪುಗಾರಿಕೆಯ ಇಬ್ಭಾಗದ ಬಗ್ಗೆ ಊಹಿಸುತ್ತಾರೆ, ಇವರು ಸ್ವಾತಂತ್ರ್ಯಕ್ಕಾಗಿ ಆಲ್ಪ್ಸ್ ಪರ್ವತಕ್ಕೆ ಪರಾರಿಯಾಗಲು ಇಚ್ಚಿಸಿದ್ದರು, ಹಾಗು ಕ್ರಿಕ್ಸಸ್ ನ ಅಧೀನದಲ್ಲಿದ್ದವರು, ದಕ್ಷಿಣ ಇಟಲಿಯಲ್ಲೇ ಉಳಿದು ಅದರ ಮೇಲೆ ಆಕ್ರಮಣ ನಡೆಸಿ, ಅದನ್ನು ಲೂಟಿ ಮಾಡಲು ಇಚ್ಚಿಸಿದ್ದರು.

ಪರಂಪರೆ ಬದಲಾಯಿಸಿ

ರಾಜಕೀಯ ಬದಲಾಯಿಸಿ

  • ಹೈತಿಯಲ್ಲಿ ನಡೆದ ಗುಲಾಮರ ದಂಗೆಗೆ ಹೆನ್ರಿ ಕ್ರಿಸ್ಟೋಫರ್ ನಾಯಕನಾಗಿದ್ದ, ನಂತರದಲ್ಲಿ ಈತನ ಸ್ಥಾನಕ್ಕೆ ಟೌಸ್ಸೈಂಟ್ ಲ' ಔವೆರ್ಚೂರ್ ಉತ್ತರಾಧಿಕಾರಿಯಾದ. ಟೌಸ್ಸೈಂಟ್ ಲ' ಔವೆರ್ಚೂರ್ ನ ಸ್ಥಾನವನ್ನು ನಂತರದಲ್ಲಿ ಜೀನ್-ಜಾಕ್ವೆಸ್ ಡೆಸ್ಸಲೈನ್ಸ್ ಆಕ್ರಮಿಸಿದ (1791—1804), ಈತನನ್ನು "ಕಪ್ಪು ಸ್ಪಾರ್ಟಕಸ್" ಎಂದು ಅವನ ಎದುರು ಯುದ್ಧದಲ್ಲಿ ಸೋತಿದ್ದ ಅವನ ವೈರಿ ಕಾಮ್ಟೆ ಡೆ ಲವುಕ್ಸ್ ಕರೆಯುತ್ತಿದ್ದ.
  • ಬವಾರಿಯನ್ ಇಲ್ಲ್ಯುಮಿನಾಟಿಯ ಸ್ಥಾಪಕ, ಆಡಂ ವೆಯಿಶೌಪ್ಟ್, ಸಾಮಾನ್ಯವಾಗಿ ತನ್ನನ್ನು ತಾನು ಪತ್ರಗಳಲ್ಲಿ ಸಂಬೋಧಿಸುವಾಗ ಸ್ಪಾರ್ಟಕಸ್ ಎಂದು ಕರೆದುಕೊಳ್ಳುತ್ತಿದ್ದ.[೪೬]
  • ಕಾರ್ಲ್ ಮಾರ್ಕ್ಸ್, ಸ್ಪಾರ್ಟಕಸ್ ನನ್ನು ತನ್ನ ನಾಯಕರುಗಳಲ್ಲಿ ಒಬ್ಬನೆಂದು ಪರಿಗಣಿಸುತ್ತಿದ್ದರು[೪೭], ಹಾಗು "ಸಂಪೂರ್ಣ ಪುರಾತನ ಇತಿಹಾಸದಲ್ಲೇ ಅತ್ಯದ್ಭುತ ವ್ಯಕ್ತಿಯೆಂದು" ಆತನ ಬಗ್ಗೆ ವಿವರಣೆ ನೀಡುತ್ತಾರೆ ಹಾಗು "ಒಬ್ಬ ಮಹಾನ್ ಕಾರ್ಯನೀತಿಜ್ಞ (ಆದಾಗ್ಯೂ ಗ್ಯಾರಿಬಾಲ್ಡಿಯಷ್ಟಲ್ಲ), ಉದಾತ್ತ ಮನೋಭಾವವನ್ನು ಹೊಂದಿದ್ದ, ಪ್ರಾಚೀನ ಅತ್ಯಂತ ಕೆಳಪ್ರಜಾವರ್ಗದ ಪ್ರಮುಖ ಪ್ರತಿನಿಧಿಯಾಗಿದ್ದ."[೪೮]
  • ಆಧುನಿಕ ಯುಗದಲ್ಲಿ ಸ್ಪಾರ್ಟಕಸ್ ನನ್ನು ಒಬ್ಬ ದೊಡ್ಡ ಉತ್ತೇಜಕ ಕ್ರಾಂತಿಕಾರಿಯೆಂದು ಪರಿಗಣಿಸಲಾಗುತ್ತದೆ, ಇದರಲ್ಲಿ ಗಮನಾರ್ಹವಾದುದೆಂದರೆ ಜರ್ಮನ್ ಸ್ಪಾರ್ಟಾಸಿಸ್ಟ್ ಲೀಗ್, ಇದು ಜರ್ಮನಿಯ ಕಮ್ಯುನಿಸ್ಟ್ ಪಕ್ಷ, ಹಾಗು 1970ರ ಆಸ್ಟ್ರಿಯನ್ ಉಗ್ರ ಬಲಪಂಥೀಯ ವಿರೋಧಿ ಸಂಸ್ಥೆಯ ಹರಿಕಾರನಾಗಿದ್ದ.
  • ಇಪ್ಪತ್ತನೆ ಶತಮಾನದ ಯುರೋಪಿಯನ್ ಕಮ್ಯೂನಿಸ್ಟ್ ಆಳ್ವಿಕೆಯು, ಸ್ಪಾರ್ಟಕಸ್ ಗೆ ದಬ್ಬಾಳಿಕೆಯ ವಿರುದ್ಧ ಹೋರಾಟ ನಡೆಸಿದ ಒಬ್ಬ ಹೋರಾಟಗಾರನೆಂದು ಪ್ರತಿಬಿಂಬಿಸಿತು (ಕೆಳಗೆ ನೀಡಲಾಗಿರುವ "ಸ್ಪೋರ್ಟ್ಸ್"ಸ್ಪಾರ್ಟಕಸ್#ಸ್ಪೋರ್ಟ್ಸ್ ವಿಭಾಗವನ್ನು ನೋಡಿ).
  • ಪ್ರಸಿದ್ಧ ಲ್ಯಾಟಿನ್ ಅಮೆರಿಕನ್ ಮಾರ್ಕ್ಸ್ ವಾದಿ ಕ್ರಾಂತಿಕಾರಿ ಷೆ ಗುಯೇವರ ಕೂಡ ಸ್ಪಾರ್ಟಕಸ್ ನ ಒಬ್ಬ ಕಟ್ಟಾ ಅಭಿಮಾನಿಯಾಗಿದ್ದರು.

ಕಲಾತ್ಮಕತೆ ಬದಲಾಯಿಸಿ

ಚಲನಚಿತ್ರ ಮತ್ತು ದೂರದರ್ಶನ ಬದಲಾಯಿಸಿ

  • ಆಂತೋನಿ ಮನ್ನ್ ಆರಂಭದಲ್ಲಿ ಸ್ಪಾರ್ಟಕಸ್ (1960) ಚಿತ್ರವನ್ನು ನಿರ್ದೇಶಿಸಲು ಸಹಿ ಹಾಕಿದ್ದರು, ಚಿತ್ರದ ಕಾರ್ಯಕಾರಿ ನಿರ್ವಹಣೆ-ನಿರ್ಮಾಣ ಹಾಗು ಅಭಿನಯದ ಜವಾಬ್ದಾರಿಯನ್ನು ಕಿರ್ಕ್ ಡೌಗ್ಲಾಸ್ ವಹಿಸಿಕೊಂಡಿದ್ದರು. ಚಿತ್ರವು ಹೊವರ್ಡ್ ಫಾಸ್ಟ್ ರ ಕಾದಂಬರಿ ಸ್ಪಾರ್ಟಕಸ್ ನ್ನು ಆಧರಿಸಿತ್ತು. ಮನ್ನ್ ಹಾಗು ಡೌಗ್ಲಾಸ್ ಚಿತ್ರದ ಶೈಲಿ ಹಾಗು ವಿಷಯವಸ್ತುವಿನ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು ಹಾಗು ಮನ್ನ್ ಚಿತ್ರದಿಂದ ಹೊರಬಿದ್ದರು ಹಾಗು ನಂತರದಲ್ಲಿ ಚಿತ್ರದ ನಿರ್ದೇಶನಕ್ಕೆ ಅಸಮ್ಮತಿಯನ್ನು ಸೂಚಿಸಿದರು. "ನಾನು ಸ್ಪಾರ್ಟಕಸ್!" ಎಂಬ ಈ ಚಿತ್ರದ ಪದಗುಚ್ಛ, ಇತರ ಹಲವು ಚಿತ್ರಗಳು, ದೂರದರ್ಶನ ಕಾರ್ಯಕ್ರಮಗಳು, ಹಾಗು ಜಾಹಿರಾತುಗಳಲ್ಲಿ ಸೂಚಿತವಾಗಿವೆ.
  • ಇಟಲಿಯಲ್ಲಿ Il ಫಿಗ್ಲಿಯೋ ಡಿ ಸ್ಪಾರ್ಟಕಸ್ ಎಂಬ ಶೀರ್ಷಿಕೆಯಡಿಯಲ್ಲಿ ಕುಬ್ರಿಕ್ ರ ಚಿತ್ರಕ್ಕೆ ಒಂದು ಅನಧಿಕೃತ ಉತ್ತರಭಾಗವನ್ನು ಚಿತ್ರಿಸಲಾಯಿತು (ದಿ ಸನ್ ಆಫ್ ಸ್ಪಾರ್ಟಕಸ್ ; ಇಂಗ್ಲಿಷ್ ಸಿನೆಮಾ ಅವತರಣಿಕೆ: ದಿ ಸ್ಲೇವ್ [೪೯]) 1963ರಲ್ಲಿ ಬಿಡುಗಡೆಯಾಯಿತು. ಶೀರ್ಷಿಕೆಯ ಪಾತ್ರವನ್ನು ಸ್ಟೀವ್ ರೀವ್ಸ್ ವಹಿಸಿದ್ದರು, ಚಿತ್ರದಲ್ಲಿ ಮೊದಲಿಗೆ ರೋಮನ್ ಅಧಿಪತಿಯಾಗಿ ಕಂಡುಬರುತ್ತಾನೆ, ಆದರೆ ಅಂತಿಮದಲ್ಲಿ ತನ್ನ ನಿಜವಾದ ಪರಂಪರೆಯ ಬಗ್ಗೆ ಅರಿತು, ತನ್ನ ತಂದೆಯ ಹತ್ಯೆಗೆ ಕಾರಣನಾದ ಕ್ರಾಸ್ಸುಸ್ ನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ.
  • ಸ್ಪಾರ್ಟಕಸ್ ಅಂಡ್ ದಿ ಸನ್ ಬಿನೀಥ್ ದಿ ಸೀ ಎಂಬ 1985–1987ರ ಕಾರ್ಟೂನ್ ಸರಣಿಯು ಸಡಿಲವಾಗಿ ಸ್ಪಾರ್ಟಕಸ್ ನನ್ನು ಆಧರಿಸಿದೆ.
  • 1995ರ ಚಿತ್ರ ಕ್ಲೂಲೆಸ್ ನಲ್ಲಿ, ಕ್ರಿಶ್ಚಿಯನ್, ಸ್ಟ್ಯಾನ್ಲಿ ಕುಬ್ರಿಕ್ ರ ಚಿತ್ರದ ರೂಪಾಂತರವನ್ನು, ತಮ್ಮ ಸಲಿಂಗಕಾಮತೆಯ ಬಗ್ಗೆ ತಿಳಿಸಲು ಸೂಕ್ಷ್ಮವಾದ ಪ್ರಯತ್ನದ ಒಂದು ಭಾಗವಾಗಿ ಬಳಸಿಕೊಳ್ಳುತ್ತಾರೆ.
  • 1996ರ ಚಿತ್ರ ದಟ್ ಥಿಂಗ್ ಯು ಡು ನಲ್ಲಿ, ಟಾಮ್ ಎವರೆಟ್ ಸ್ಕಾಟ್ ರ ಪಾತ್ರ ಗೈ 'ಶೇಡ್ಸ್' ಪ್ಯಾಟರ್ಸನ್ ತನ್ನನ್ನು ತಾನು ಸ್ಪಾರ್ಟಕಸ್ ಎಂದು ಹೇಳಿಕೊಳ್ಳುತ್ತಾನೆ.
  • 2003ರ ಚಿತ್ರ ದಿ ರಿಕ್ರ್ಯೂಟ್ ನಲ್ಲಿ, ಕಾಲಿನ್ ಫಾರೆಲ್ ರ ಪಾತ್ರವು ಸ್ಪಾರ್ಟಕಸ್ ಎಂಬ ಕಂಪ್ಯೂಟರ್ ಪ್ರೋಗ್ರಾಮ್ ನ್ನು ರಚಿಸುತ್ತದೆ, ಇದು CIAನ ಗಮನವನ್ನು ಸೆಳೆಯುತ್ತದೆ.
  • 2004ರಲ್ಲಿ, ಫಾಸ್ಟ್ ರ ಕಾದಂಬರಿಯನ್ನು ಸ್ಪಾರ್ಟಕಸ್ ಎಂದು ರೂಪಾಂತರಗೊಳಿಸಲಾಯಿತು, ಇದು ದೂರದರ್ಶನಕ್ಕಾಗಿ ತಯಾರಾದ ಚಿತ್ರವಾಗಿದ್ದು, ಇದನ್ನು USA ನೆಟ್ವರ್ಕ್ ನಿರ್ಮಾಣ ಮಾಡಿದೆ, ಇದರ ಮುಖ್ಯ ಭೂಮಿಕೆಯಲ್ಲಿ ಗೊರನ್ ವಿಸ್ನ್ಜಿಕ್ ಇದ್ದಾರೆ.
  • 2007-2008ರ BBCಯ ಸಾಕ್ಷ್ಯನಾಟಕದ ಒಂದು ಸಂಚಿಕೆ ಹೀರೋಸ್ ಅಂಡ್ ವಿಲನ್ಸ್ , ಸ್ಪಾರ್ಟಕಸ್ ನ ಪಾತ್ರವನ್ನು ಹೊಂದಿದೆ.
  • "Xena: Warrior Princess" ಕಾರ್ಯಕ್ರಮವು, ತನ್ನ ಮೊದಲ ಸೀಸನ್ ನಲ್ಲಿ ಒಂದು ಸಂಚಿಕೆಯನ್ನು ಪ್ರಸಾರ ಮಾಡಿತ್ತು, ಇದು ಸ್ಟ್ಯಾನ್ಲಿ ಕುಬ್ರಿಕ್ ರ ಚಿತ್ರದ ಹಲವಾರು ದೃಶ್ಯಗಳನ್ನು ಒಳಗೊಂಡಂತೆ ಕಥೆಯ ಬಗ್ಗೆ ಸಣ್ಣದಾದ ಪರಿಚಯ ನೀಡಿತು.
  • ದೂರದರ್ಶನ ಸರಣಿ Spartacus: Blood and Sand ಯನ್ನು ಸ್ಯಾಮ್ ರೈಮಿ ನಿರ್ಮಾಣ ಮಾಡಿದ್ದರು ಹಾಗು ಆಂಡಿ ವೈಟ್ ಫೀಲ್ಡ್ ಇದರಲ್ಲಿ ಪಾತ್ರ ವಹಿಸಿದ್ದರು, ಹಾಗು ನಂತರದಲ್ಲಿ ಲಿಯಾಮ್ ಮ್ಯಾಕ್ಇನ್ಟೈರೆ ಶೀರ್ಷಿಕೆಯ ಪಾತ್ರದಲ್ಲಿ ಅಭಿನಯಿಸಿದರು, ಇದು ಜನವರಿ 2010ರಲ್ಲಿ ಸ್ಟಾರ್ಜ್ ಪ್ರೀಮಿಯಂ ಕೇಬಲ್ ನೆಟ್ವರ್ಕ್ ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.[೫೦][೫೧]

ಸಾಹಿತ್ಯ ಬದಲಾಯಿಸಿ

  • ಹೊವರ್ಡ್ ಫಾಸ್ಟ್, ಸ್ಪಾರ್ಟಕಸ್ ಎಂಬ ಚಾರಿತ್ರಿಕ ಕಾದಂಬರಿಯನ್ನು ಬರೆದರು, ಇದು ಕಿರ್ಕ್ ಡೌಗ್ಲಾಸ್ ಅಭಿನಯದ 1960ರಲ್ಲಿ ಬಿಡುಗಡೆಯಾದ ಸ್ಟ್ಯಾನ್ಲಿ ಕುಬ್ರಿಕ್ ರ ಚಿತ್ರವನ್ನು ಆಧರಿಸಿದೆ.
  • ಆರ್ಥರ್ ಕೊಯೆಸ್ಟ್ಲರ್, ಸ್ಪಾರ್ಟಕಸ್ ನ ಬಗ್ಗೆ ದಿ ಗ್ಲಾಡಿಯೇಟರ್ಸ್ ಎಂಬ ಕಾದಂಬರಿಯನ್ನು ಬರೆದರು.
  • ಸ್ಕಾಟಿಷ್ ಲೇಖಕ ಲೆವಿಸ್ ಗ್ರಾಸಿಕ್ ಗಿಬ್ಬನ್ ಸ್ಪಾರ್ಟಕಸ್ ಎಂಬ ಕಾದಂಬರಿಯನ್ನು ಬರೆದರು.
  • ಕೋಲೀನ್ ಮ್ಯಾಕ್ಕುಲ್ಲೋಗ್ಹ್ ರ ಕಾದಂಬರಿ ಫಾರ್ಚೂನ್'ಸ್ ಫೆವರಿಟ್ ನಲ್ಲಿ ಸ್ಪಾರ್ಟಕಸ್ ಎಂಬುದು ಒಂದು ಪ್ರಮುಖ ಪಾತ್ರವಾಗಿದೆ.
  • ಇಟಾಲಿಯನ್ ಲೇಖಕ ರಫೆಲ್ಲೋ ಜಿಯೋವಗ್ನೋಲಿ ತಮ್ಮ ಚಾರಿತ್ರಿಕ ಕಾದಂಬರಿ ಸ್ಪಾರ್ಟಕಸ್ ನ್ನು 1874ರಲ್ಲಿ ರಚಿಸಿದರು. ಅವರ ಕಾದಂಬರಿಯು ನಂತರದಲ್ಲಿ ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ತರ್ಜುಮೆಗೊಂಡು, ಪ್ರಕಟವಾಗಿದೆ.
  • ಪೋಲಿಷ್ ಲೇಖಕ ಹಲಿನ ರುಡ್ನಿಕ ಬರೆದ ಉಚ್ಜ್ನಿಯೋವಿಯೇ ಸ್ಪಾರ್ಟಕುಸ (ಸ್ಪಾರ್ಟಕಸ್ ನ ಶಿಷ್ಯರು) ಎಂಬ ಕಾದಂಬರಿಯೂ ಸಹ ಇದೆ.
  • ರೆವರೆಂಡ್ ಎಲಿಜಾ ಕೆಲ್ಲೋಗ್ಗ್ ರ ಸ್ಪಾರ್ಟಕಸ್ ಟು ದಿ ಗ್ಲಾಡಿಯೇಟರ್ಸ್ ಅಟ್ ಕಪುವ ವನ್ನು ಶಾಲಾಬಾಲಕರು ತಮ್ಮಲ್ಲಿರುವ ವಾಕ್ಪುಟುತ್ವವನ್ನು ಅಭ್ಯಾಸ ಮಾಡಲು ಪರಿಣಾಮಕಾರಿಯಾಗಿ ಬಳಸುತ್ತಾರೆ.
  • ಸ್ಪಾರ್ಟಕಸ್, ಕಾನನ್ ಇಗ್ಗುಲ್ಡೆನ್ ರ 'ಎಂಪರರ್' ಸರಣಿಯ ಪುಸ್ತಕ ದಿ ಡೆತ್ ಆಫ್ ಕಿಂಗ್ಸ್ ನಲ್ಲೂ ಸಹ ಕಂಡುಬರುತ್ತಾನೆ.
  • ಟೋಬಿ ಬ್ರೌನ್ ರ ಸ್ಪಾರ್ಟಕಸ್ ಅಂಡ್ ಹಿಸ್ ಗ್ಲೋರಿಯಸ್ ಗ್ಲಾಡಿಯೇಟರ್ಸ್ , ಮಕ್ಕಳ ಇತಿಹಾಸ ಪುಸ್ತಕದ ಸರಣಿ ಡೆಡ್ ಫೇಮಸ್ ನ ಭಾಗವಾಗಿದೆ.
  • ವಿಲಿಯಂ H. ಕೀತ್ ರ ಬೋಲೋ ಕಾದಂಬರಿ ಬೋಲೋ ರೈಸಿಂಗ್ ನಲ್ಲಿ, HCT ಪಾತ್ರ "ಹೆಕ್ಟರ್" ಸ್ಪಾರ್ಟಕಸ್ ನನ್ನು ಆಧರಿಸಿದೆ.
  • ಡೇವಿಡ್ ಲುಬರ್ ರ ಕಾದಂಬರಿ ಫ್ಲಿಪ್ ನಲ್ಲಿ, ದಂತಕಥೆ ಎನಿಸಿದ್ದ ರಯಾನ್ ಸ್ಪಾರ್ಟಕಸ್ ಆಗುತ್ತಾರೆ, ಅದರಲ್ಲೂ ವಿಶೇಷವಾಗಿ ಶಾಲೆಯಲ್ಲಿ ದಬಾವಣೆ ಮಾಡುವ ಹುಡುಗನು ತನ್ನ ವಿರುದ್ಧ ಕಾದಾಡಲು ಸವಾಲೆಸಗಿದಾಗ ಅವನು ಸ್ಪಾರ್ಟಕಸ್ ನ ಪಾತ್ರ ವಹಿಸುತ್ತಾನೆ.
  • ಅಮಲ್ ಡನ್ಕೋಲ್, ಆಧುನಿಕ ಈಜಿಪ್ಷಿಯನ್ ಕವಿ, ತಮ್ಮ ಮೇರುಕೃತಿ "ದಿ ಲಾಸ್ಟ್ ವರ್ಡ್ಸ್ ಆಫ್ ಸ್ಪಾರ್ಟಕಸ್" ನ್ನು ರಚಿಸುತ್ತಾರೆ.
  • ಸ್ಟೀವನ್ ಸೆಯ್ಲರ್ ರ ಕಾದಂಬರಿ ಆರ್ಮ್ಸ್ ಆಫ್ ನೆಮೆಸಿಸ್ , ಅವರ ರೋಮ ಸಬ್ ರೋಸ ಸರಣಿಯ ಭಾಗವಾಗಿದ್ದು, ಇದು ಮೂರನೇ ಗುಲಾಮರ ಯುದ್ಧವನ್ನು ಆಧರಿಸಿ ಹೆಣೆಯಲಾದಂತಹ ಕಾದಂಬರಿಯಾಗಿದೆ.
  • ಮ್ಯಾಕ್ಸ್ ಗಲ್ಲೋ, "ಲೆಸ್ ರೋಮೈನ್ಸ್ ಎಂಬ ಕಾದಂಬರಿಯನ್ನು ರಚಿಸುತ್ತಾರೆ.ಸ್ಪಾರ್ಟಕಸ್.ಲಾ ರಿವೋಲ್ಟೆ ಡೆಸ್ ಎಸ್ಕ್ಲೆವ್ಸ್", ಲಿಬ್ರೈರಿ ಅರ್ಥೆಮೆ ಫಯಾರ್ಡ್, 2006.
  • 2010ರಲ್ಲಿ ಪೀಟರ್ ಸ್ತೋಥಾರ್ಡ್, ಸ್ಪಾರ್ಟಕಸ್ ನ ದಂಗೆಯನ್ನು ಆತ್ಮಚರಿತ್ರೆಯ ಅಂಶಗಳೊಂದಿಗೆ ತಮ್ಮ ಜೀವನಚರಿತ್ರೆ ಆನ್ ದಿ ಸ್ಪಾರ್ಟಕಸ್ ರೋಡ್ ನಲ್ಲಿ ಚಿತ್ರಿಸಿದ್ದಾರೆ.

ಸಂಗೀತ ಬದಲಾಯಿಸಿ

  • ಸ್ಪಾರ್ಟಕಸ್ ಎಂಬದು ಒಂದು ನೃತ್ಯರೂಪಕವಾಗಿದ್ದು, ಜೊತೆಗೆ ಇದಕ್ಕೆ ಸಂಗೀತವನ್ನು ಆರಂ ಖಚಟುರಿಯನ್ ಒದಗಿಸಿದ್ದಾರೆ. .
  • ಆಸ್ಟ್ರೇಲಿಯನ್ ಸಂಗೀತಕಾರ ಕಾರ್ಲ್ ವೈನ್, ಪಿಯಾನೋಗಾಗಿ ಒಂದು ಸಣ್ಣ ರಚನೆ "ಸ್ಪಾರ್ಟಕಸ್" ಅನ್ನು ರಚಿಸಿದ್ದಾರೆ, ಇದನ್ನು ರೆಡ್ ಬ್ಲ್ಯೂಸ್ ನಿಂದ ಆಯ್ದುಕೊಳ್ಳಲಾಗಿದೆ.
  • ಜರ್ಮನ್ ತಂಡ ಟ್ರಿಯುಂವಿರಟ್, ಸ್ಪಾರ್ಟಕಸ್ ಎಂಬ ಆಲ್ಬಮ್ ನ್ನು 1975ರಲ್ಲಿ ಬಿಡುಗಡೆ ಮಾಡಿತು.
  • UK ಸಂಗೀತತಂಡ ದಿ ಫಾರ್ಮ್(ಬ್ಯಾಂಡ್), ಸ್ಪಾರ್ಟಕಸ್ (ದಿ ಫಾರ್ಮ್ ಆಲ್ಬಮ್) ನ್ನು 1991ರಲ್ಲಿ ಬಿಡುಗಡೆ ಮಾಡಿತು.
  • ಜೆಫ್ ವಾಯ್ನೆ ತಮ್ಮ ಸಂಗೀತ ವಾಚನ ಜೆಫ್ ವಾಯ್ನೆ'ಸ್ ಮ್ಯೂಸಿಕಲ್ ವರ್ಶನ್ ಆಫ್ ಸ್ಪಾರ್ಟಕಸ್ ನ್ನು 1992ರಲ್ಲಿ ಬಿಡುಗಡೆ ಮಾಡಿದರು.

ಫ್ಯಾಂಟಮ್ ರೆಜಿಮೆಂಟ್, ಒಂದು ವಿಶ್ವ ದರ್ಜೆಯ (ಹಿಂದಿನ ಡಿವಿಷನ್ 1) ಡ್ರಂ ಕಾರ್ಪ್ಸ್ ಇಂಟರ್ನ್ಯಾಷನಲ್ ನ ಡ್ರಂ ಕಾರ್ಪ್ಸ್, ಸ್ಪಾರ್ಟಕಸ್ ಹೆಸರಿನ ಕಾರ್ಯಕ್ರಮದ ಪ್ರದರ್ಶನ ನೀಡಿತು, ಆ ಮೂಲಕ ತಮ್ಮ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ 1981, 1982, ಹಾಗು 2008ರಲ್ಲಿ ನೀಡಲಾದಂತಹ ಪ್ರದರ್ಶನದ ಸಂಗೀತ ಹಾಗು ದೃಶ್ಯಗಳನ್ನು ನಿರೂಪಿಸಿತು. 2008ರಲ್ಲಿ ಅವರು ನೀಡಿದ ಕಾರ್ಯಕ್ರಮವು ವರ್ಲ್ಡ್ ಚ್ಯಾಂಪಿಯನ್ಶಿಪ್ ಫೈನಲ್ಸ್ ನಲ್ಲಿ ಜಯಗಳಿಸಿತು.

  • "ಲವ್ ಥೀಮ್ ಫ್ರಂ ಸ್ಪಾರ್ಟಕಸ್ " ಸ್ವಿಂಗ್ ಆಫ್ ಡಿಲೈಟ್ ಕಾರ್ಲೋಸ್ ಸಂಟಾನ, ವಾಯ್ನೆ ಶಾರ್ಟರ್, 1980
  • ಅಮೆರಿಕನ್ ಹಾರ್ಡ್ ಕೋರ್ ಬ್ಯಾಂಡ್, ದಿ ಫಾಲ್ ಆಫ್ ಟ್ರಾಯ್, "ಸ್ಪಾರ್ಟಕಸ್" ಹೆಸರಿನ ಹಾಡಿನ ರಚನೆ ಮಾಡಿತು..
  • ಸ್ಪಾರ್ಟಕಸ್ ಚಿತ್ರದ ಉಲ್ಲೇಖಗಳನ್ನು ರೋಜರ್ ವಾಟರ್ ರ 2010ರ ದಿ ವಾಲ್ ಪ್ರವಾಸ ಪ್ರದರ್ಶನದ ಆರಂಭಿಕ ಪ್ರದರ್ಶನಗಳಲ್ಲಿ ಬಳಸಿಕೊಳ್ಳಲಾಗಿತ್ತು

ಆಟಗಳು ಬದಲಾಯಿಸಿ

  • ಬೋರ್ಡ್ ಆಟ "ಐ ಆಮ್ ಸ್ಪಾರ್ಟಕಸ್" ಮೂರನೇ ಗುಲಾಮರ ಯುದ್ಧವನ್ನು ಆಧರಿಸಿದೆ ಹಾಗು ಸ್ಪಾರ್ಟಕಸ್ ನನ್ನು ಪಂದ್ಯದ ಒಂದು ಕಾಯಿಯನ್ನಾಗಿ ಒಳಗೊಂಡಿದೆ.
  • ಬೋರ್ಡ್ ಆಟ ಹೀರೋಸ್ಕೇಪ್ , ಸ್ಪಾರ್ಟಕಸ್ ನನ್ನು ಆಟದ ಒಂದು ಕಾಯಿಯನ್ನಾಗಿ ಬಳಸಿಕೊಳ್ಳುತ್ತದೆ.
  • RTS ಪಂದ್ಯವುAge of Empires: The Rise of Rome ರೋಮನ್ನರ ದೃಷ್ಟಿಕೋನದಲ್ಲಿ ಗುಲಾಮರ ದಂಗೆಯನ್ನು ಒಳಗೊಂಡಿದೆ

ರೇಡಿಯೋ ಬದಲಾಯಿಸಿ

  • "ದಿ ಹಿಸ್ಟರೀಸ್ ಆಫ್ ಪ್ಲಿನಿ ದಿ ಎಲ್ಡರ್" – 1957ರ ಬ್ರಿಟಿಶ್ ರೇಡಿಯೋ ಕಾಮೆಡಿ ಸಂಚಿಕೆಯಲ್ಲಿ ದಿ ಗೂನ್ ಷೋ ಪೌರಾಣಿಕ ಚಿತ್ರಗಳನ್ನು ಅಣಕಮಾಡುತ್ತದೆ – ಸ್ಪಾರ್ಟಕಸ್, ಸೀಸರ್ ನ ಪತ್ನಿಯೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡು, ಸೀಸರ್ ನಿಂದ ತಪ್ಪಿಸಿಕೊಳ್ಳಬೇಕಾಗಿ ಬಂದಾಗ ಬ್ಲಡ್ನೋಕ್ ಗೆ ಗುಪ್ತನಾಮವನ್ನು ಇರಿಸಿಕೊಳ್ಳಬೇಕಾಗುತ್ತದೆ; "ನಿಮಗೆ ಈ ಗಾದೆ ಗೊತ್ತಾ, 'ಸೀಸರ್ ಗೆ ತನ್ನ ಪತ್ನಿಯ ಮೇಲೆ ಅನುಮಾನ ಮೂಡಿದೆ'? ಸರಿ ನಾನು ಈ ಎಲ್ಲ ಅವಿವೇಕಗಳನ್ನು ನಾನು ಕೊನೆಗಾಣಿಸುತ್ತೇನೆ

!".

ಕ್ರೀಡೆಗಳು ಬದಲಾಯಿಸಿ

  • ಹಲವಾರು ಬಲ್ಗೇರಿಯನ್ ಫುಟ್ಬಾಲ್ ಕ್ಲಬ್ ಗಳು ಸ್ಪಾರ್ಟಕಸ್ ಎಂಬ ಹೆಸರನ್ನು ಹೊಂದಿವೆ: ಇವುಗಳನ್ನು ಅತ್ಯಂತ ಜನಪ್ರಿಯವಾದುದೆಂದರೆ PFC ಸ್ಪಾರ್ಟಕ್ ವರ್ನ, FC ಸ್ಪಾರ್ಟಕ್ ಪ್ಲೋವ್ಡಿವ್ ಹಾಗು PFC ಸ್ಪಾರ್ಟಕ್ ಪ್ಲೆವೆನ್.
  • ಸ್ಲೊವಾಕಿಯಾದ ಅತ್ಯಂತ ಹಳೆಯ ಹಾಗು ಅತ್ಯಂತ ಜನಪ್ರಿಯ ಫುಟ್ಬಾಲ್ ತಂಡವೆಂದರೆ ಸ್ಪಾರ್ಟಕ್ ಟ್ರನವ.
  • ರಷ್ಯನ್ ಸ್ಪೋರ್ಟ್ಸ್ ಕ್ಲಬ್ FC ಸ್ಪಾರ್ಟಕ್ ಎಂಬ ಹೆಸರನ್ನು ಹೊಂದಿದೆ, ಇದರಲ್ಲಿ FC ಸ್ಪಾರ್ಟಕ್ ಮಾಸ್ಕೋ ಬಹಳ ಪ್ರಸಿದ್ಧವಾದುದು, ಹಾಗು ಸ್ಪಾರ್ಟಕ್ ಸ್ಪೋರ್ಟ್ ಸೊಸೈಟಿ, ಸ್ಪಾರ್ಟಕಸ್ ನ ಗೌರವಾರ್ಥವಾಗಿ ಇರಿಸಲಾದ ಹೆಸರಾಗಿದೆ.[೫೨]
  • ಸ್ಪಾರ್ಟಕಿಯಡ್, ಒಲಂಪಿಕ್ ಕ್ರೀಡೆಗಳ ಸೋವಿಯತ್ ಬ್ಲಾಕ್ ರೂಪಾಂತರವಾಗಿದೆ.[೫೩] ಈ ಹೆಸರನ್ನು ಜೆಕೊಸ್ಲೋವಾಕಿಯಾನಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ಮಾಸ್ ಜಿಮ್ನಾಸ್ಟಿಕ್ಸ್ ಪ್ರದರ್ಶನದಲ್ಲೂ ಸಹ ಬಳಸಲಾಗುತ್ತದೆ.
  • ಸ್ವಿಸ್ಸ್ ವೃತ್ತಿಪರ ಸೈಕಲ್ ಸವಾರ ಫಾಬಿಯನ್ ಕ್ಯಾಂಸೆಲ್ಲರರಿಗೆ ಸ್ಪಾರ್ಟಕಸ್ ಎಂಬ ಉಪನಾಮವಿದೆ.
  • ಸ್ಪಾರ್ಟಕಸ್ 7s ಎಂಬುದು 2006ರಲ್ಲಿ ರೂಪಿತವಾದ ಅಂತಾರಾಷ್ಟ್ರೀಯ ರಗ್ಬಿ ಸೆವೆನ್ಸ್ ಗೆ ನೀಡಲಾದ ಹೆಸರು.
  • ಒಟ್ಟಾವಾ ಸೆನೆಟರ್ಸ್ ನ ಅದೃಷ್ಟ ಪ್ರಾಣಿ ಸಿಂಹವಾಗಿದ್ದು, ಇದಕ್ಕೆ ಸ್ಪಾರ್ಟಕ್ಯಾಟ್ ಎಂಬ ಹೆಸರನ್ನು ನೀಡಲಾಗಿದೆ, ತಂಡದ ಚಿಹ್ನೆ ಒಬ್ಬ ರೋಮನ್ ಅಧಿಪತಿಯಾದಂದೀಚೆಗೆ ಸ್ಪಾರ್ಟಕಸ್ ಮೇಲಿನ ಒಂದು ನಾಟಕವಾಗಿದೆ.
  • ಯೂನಿವರ್ಸಿಟಿ ಆಫ್ ತಂಪಾ ಸ್ಪಾರ್ಟನ್ ನ ಅದೃಷ್ಟ ಚಿಹ್ನೆಯನ್ನು ಸ್ಪಾರ್ಟಕಸ್ ನ ಮೇಲೆ ಇರಿಸಲಾಗಿದೆ.
  • ಸ್ಪಾನಿಶ್ ಬ್ಯಾಸ್ಕೆಟ್ ಬಾಲ್ ಆಟಗಾರ ಫೆಲಿಪೆ ರೆಯೆಸ್ ರನ್ನು ಎಸ್ಪಾರ್ಟಕೊ ಎಂಬ ಹೆಸರಿನಿಂದ ಕರೆಯಲಾಗುತ್ತದೆ, ಇದು ಸ್ಪಾನಿಶ್ ಭಾಷೆಯಲ್ಲಿ ಸ್ಪಾರ್ಟಕಸ್ ಎಂಬ ಅರ್ಥವನ್ನು ನೀಡುತ್ತದೆ.

ಸ್ಥಳಗಳು ಬದಲಾಯಿಸಿ

  • ಸೌತ್ ಶೆಟ್ಲ್ಯಾಂಡ್ ದ್ವೀಪದಲ್ಲಿರುವ ಲಿವಿಂಗ್ಸ್ಟನ್ ದ್ವೀಪದ ಮೇಲಿರುವ ಸ್ಪಾರ್ಟಕಸ್ ಶಿಖರ.

ಉಲ್ಲೇಖಗಳು‌ ಬದಲಾಯಿಸಿ

  1. M. Tullius Cicero,
  2. ಪ್ಲುಟಾರ್ಚ್, ಕ್ರಾಸ್ಸುಸ್ 8
  3. ಅಪ್ಪಿಯನ್, ಸಿವಿಲ್ ವಾರ್ಸ್ 1.116
  4. ಫ್ಲೋರಸ್, ಎಪಿಟೋಮ್ ಆಫ್ ರೋಮನ್ ಹಿಸ್ಟರಿ 2.8
  5. ದಿ ಹಿಸ್ಟರೀಸ್, ಸಲ್ಲುಸ್ಟ್, ಪ್ಯಾಟ್ರಿಕ್ ಮ್ಯಾಕ್ಗುಷಿನ್, ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, 1992, ISBN 0-19-872143-9, ಪುಟ. 112.
  6. ದಿ ಕೇಂಬ್ರಿಡ್ಜ್ ಏನ್ಶಿಯಂಟ್ ಹಿಸ್ಟರಿ: pt. 1. ದಿ ಪ್ರಿಹಿಸ್ಟರಿ ಆಫ್ ದಿ ಬಾಲ್ಕನ್ಸ್; ಅಂಡ್ ದಿ ಮಿಡಲ್ ಈಸ್ಟ್ ಅಂಡ್ ದಿ ಏಜಿಯನ್ ವರ್ಲ್ಡ್, ಟೆಂತ್ ಟು ಎಯ್ತ್ ಸೆಂಚುರೀಸ್ B.C, ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 1982, ಪುಟ. 601.
  7. ದಿ ಸ್ಪಾರ್ಟಕಸ್ ವಾರ್, ಬ್ಯಾರಿ S. ಸ್ಟ್ರಾಸ್, ಸೈಮನ್ ಹಾಗು ಸ್ಚುಸ್ಟೆರ್, 2009, ISBN 1-4165-3205-6, ಪುಟ.31.
  8. ಪೂರ್ವಕ್ಕೆ ಸಮೀಪವಿರುವ ಇತರ ರಾಜ್ಯಗಳು ಹಾಗು ಅಸ್ಸಿರಿಯನ್ ಹಾಗು ಬ್ಯಾಬಿಲೋನಿಯನ್ ಸಾಮ್ರಾಜ್ಯಗಳು, ಎಂಟು ಹಾಗು ಆರನೇ ಶತಮಾನ B.C.ಯಿಂದ., ಸಂಪುಟ 3, ಜಾನ್ ಬೋರ್ಡ್ಮನ್, ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 1991, ISBN 0-521-22717-8, ಪುಟ. 601.
  9. ಡಿಯೋಡೋರಸ್ ಸಿಕುಲಸ್, ಹಿಸ್ಟಾರಿಕಲ್ ಲೈಬ್ರರಿ ಪುಸ್ತಕ 12
  10. ಡಿಯೋಡೋರಸ್ ಸಿಕುಲಸ್, ಹಿಸ್ಟಾರಿಕಲ್ ಲೈಬ್ರರಿ ಪುಸ್ತಕ16
  11. ತಯೂಸಿಡೈಡೆಸ್, ಹಿಸ್ಟರಿ ಆಫ್ ದಿ ಪೆಲೋಪೋನ್ನೆಶಿಯನ್ ವಾರ್ 2.101
  12. "ಟ್ರೈಬ್ಸ್, ಡೈನಾಸ್ಟ್ಸ್ ಅಂಡ್ ಕಿಂಗ್ಡಂಸ್ ಆಫ್ ನಾರ್ದರ್ನ್ ಗ್ರೀಸ್ : ಹಿಸ್ಟರಿ ಅಂಡ್ ನ್ಯುಮಿಸ್ಮ್ಯಾಟಿಕ್ಸ್". Archived from the original on 2007-08-27. Retrieved 2011-04-28.
  13. ಅಪ್ಪಿಯನ್ , ಸಿವಿಲ್ ವಾರ್ಸ್ , 1:116; ಪ್ಲುಟಾರ್ಚ್ , ಕ್ರಾಸ್ಸುಸ್ , 8:2. ಗಮನಿಸಿ: ಸಹಾಯಕನಾಗಿ ಸ್ಪಾರ್ಟಕಸ್ ನ ಸ್ಥಾನಮಾನದ ಬಗ್ಗೆ ಆಧಾರವನ್ನು ಅಪ್ಪಿಯನ್ ನ ಲೊಯೇಬ್ ಆವೃತ್ತಿಯಿಂದ ಆಯ್ದುಕೊಳ್ಳಲಾಗಿದೆ, ಇದನ್ನು ಹೊರೇಸ್ ವೈಟ್ ತರ್ಜುಮೆ ಮಾಡಿದ್ದಾರೆ, ಇದರ ಪ್ರಕಾರ "...ಈತ ಒಂದೊಮ್ಮೆ ರೋಮನ್ನರಲ್ಲಿ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದ..." ಆದಾಗ್ಯೂ, ಜಾನ್ ಕಾರ್ಟರ್ ರ ಪೆಂಗ್ವಿನ್ ಕ್ಲ್ಯಾಸಿಕ್ಸ್ ರೂಪಾಂತರದ ತರ್ಜುಮೆಯು ಈ ರೀತಿ ಉಲ್ಲೇಖಿಸುತ್ತದೆ: "...ಈತ ಒಂದೊಮ್ಮೆ ರೋಮನ್ನರ ವಿರುದ್ಧವಾಗಿ ಹೋರಾಟ ನಡೆಸಿದ್ದ ಹಾಗು ನಂತರದಲ್ಲಿ ಈತನನ್ನು ಬಂಧಿಸಿ, ಮಾರಾಟಮಾಡಲಾಗಿತ್ತು...".
  14. ಆದಾಗ್ಯೂ, ಸಿಸೆರೋ ಪ್ರಕಾರ (Ad ಅಟ್ಟಿಕುಮ್ VI, ii, 8) ಆರಂಭದಲ್ಲಿ ಅವನ ಅನುಚರರು 50ಕ್ಕಿಂತ ಕಡಿಮೆ ಮಂದಿ ಇದ್ದರು.
  15. ಪ್ಲುಟಾರ್ಚ್ , ಕ್ರಾಸ್ಸುಸ್ , 8:1–2; ಅಪ್ಪಿಯನ್ , ಸಿವಿಲ್ ವಾರ್ಸ್ , 1:116; ಲಿವಿ , ಪೆರಿಯೋಚಯೇ , 95:2 Archived 2011-06-29 ವೇಬ್ಯಾಕ್ ಮೆಷಿನ್ ನಲ್ಲಿ.; ಫ್ಲೋರಸ್ , ಎಪಿಟೋಮ್ , 2.8. ಪ್ಲುಟಾರ್ಚ್ 78 ಮಂದಿ ಪರಾರಿಯಾದರೆಂದು ವಾದಿಸಿದರೆ, ಲಿವಿ 74 ಮಂದಿಯೆಂದು ವಾದಿಸುತ್ತಾನೆ, ಅಪ್ಪಿಯನ್ “ಸುಮಾರು ಎಪ್ಪತ್ತು” ಮಂದಿ ಎಂದು ಹೇಳಿದರೆ, ಫ್ಲೋರಸ್ “ಮೂವತ್ತು ಅಥವಾ ಅದಕ್ಕೂ ಹೆಚ್ಚು ಮಂದಿ” ಎಂದು ವಾದಿಸುತ್ತಾನೆ. “ಚಾಪರ್ಸ್ ಅಂಡ್ ಸ್ಪಿಟ್ಸ್” ಲೈಫ್ ಆಫ್ ಕ್ರಾಸ್ಸುಸ್ ನಿಂದ.
  16. ಪ್ಲುಟಾರ್ಚ್ , ಕ್ರಾಸ್ಸುಸ್ , 9:1.
  17. ಅಪ್ಪಿಯನ್ , ಸಿವಿಲ್ ವಾರ್ಸ್ , 1:116; ಫ್ಲೋರಸ್ , ಎಪಿಟೋಮ್ , 2.8.
  18. ಪ್ಲುಟಾರ್ಚ್we46', ಕ್ರಾಸ್ಸುಸ್, 9:1–3; ಫ್ರೊಂಟಿನುಸ್, ಸ್ಟ್ರಾಟಗೆಮ್ಸ್, ಪುಸ್ತಕ I, 5:20–22; ಅಪ್ಪಿಯನ್, ಸಿವಿಲ್ ವಾರ್ಸ್, 1:116; ಬ್ರೌಗ್ಹ್ಟನ್, ಮ್ಯಾಜಿಸ್ಟ್ರೇಟ್ಸ್ ಆಫ್ ದಿ ರೋಮನ್ ರಿಪಬ್ಲಿಕ್, ಪುಟ. 109.
  19. ಪ್ಲು ಟಾರ್ಚ್, ಕ್ರಾಸ್ಸುಸ್, 9:4–5; ಲಿವಿ, ಪೆರಿಯೋಚಯೇ , 95 Archived 2011-06-29 ವೇಬ್ಯಾಕ್ ಮೆಷಿನ್ ನಲ್ಲಿ.; ಅಪ್ಪಿಯನ್, ಸಿವಿಲ್ ವಾರ್ಸ್, 1:116; ಸಲ್ಲುಸ್ಟ್, ಹಿಸ್ಟರೀಸ್, 3:64–67.
  20. ಪ್ಲುಟಾರ್ಚ್, ಕ್ರಾಸ್ಸುಸ್, 9:3; ಅಪ್ಪಿಯನ್, ಸಿವಿಲ್ ವಾರ್, 1:116.
  21. ಫ್ರೊಂಟಿನುಸ್ , ಸ್ಟ್ರಾಟಗೆಮ್ಸ್ , ಪುಸ್ತಕ I, 5:20–22 ಹಾಗು ಪುಸ್ತಕ VII:6.
  22. ಫ್ಲೋರುಸ್ , ಎಪಿಟೋಮ್ , 2.8.
  23. ಅಪ್ಪಿಯನ್ , ಸಿವಿಲ್ ವಾರ್ಸ್ , 1:116–117; ಪ್ಲುಟಾರ್ಚ್, ಕ್ರಾಸ್ಸುಸ್ 9:6; ಸಲ್ಲುಸ್ಟ್, ಹಿಸ್ಟರೀಸ್ , 3:64–67.
  24. ಅಪ್ಪಿಯನ್ , ಸಿವಿಲ್ ವಾರ್ಸ್ , 1:117; ಪ್ಲುಟಾರ್ಚ್ , ಕ್ರಾಸ್ಸುಸ್ 9:7; ಲಿವಿ , ಪೆರಿಯೋಚಯೇ 96 Archived 2017-07-19 ವೇಬ್ಯಾಕ್ ಮೆಷಿನ್ ನಲ್ಲಿ..
  25. ಅಪ್ಪಿಯನ್ , ಸಿವಿಲ್ ವಾರ್ಸ್ , 1:117.
  26. ಪ್ಲುಟಾರ್ಚ್ , ಕ್ರಾಸ್ಸುಸ್ , 9:7.
  27. ಸ್ಪಾರ್ಟಕಸ್ ಅಂಡ್ ದಿ ಸ್ಲೇವ್ ರೆಬೀಲಿಯನ್
  28. Shaw, Brent D. (2001). Spartacus and the slave wars: a brief history with documents. Palgrave Macmillan. ISBN 0312237030.
  29. ಪ್ಲುಟಾರ್ಚ್ , ಕ್ರಾಸ್ಸುಸ್ 10:1.
  30. ಅಪ್ಪಿಯನ್ , ಸಿವಿಲ್ ವಾರ್ಸ್ , 1:118; ಸ್ಮಿತ್ , ಏ ಡಿಕ್ಷನರಿ ಆಫ್ ರೋಮನ್ ಆಂಟಿಕ್ವಿಟೀಸ್ , "ಎಕ್ಸೆರ್ಸಿಟಸ್", ಪುಟ.494.
  31. ಅಪ್ಪಿಯನ್ , ಸಿವಿಲ್ ವಾರ್ಸ್ , 1:118.
  32. ೩೨.೦ ೩೨.೧ ಪ್ಲುಟಾರ್ಚ್ , ಕ್ರಾಸ್ಸುಸ್ , 10:1–3.
  33. ಫ್ಲೋರಸ್ , ಎಪಿಟೋಮ್ , 2.8; ಸಿಸೆರೋ , ಒರಷಿಯನ್ಸ್ , "ಫಾರ್ ಕ್ವಿಂತಿಯಸ್, ಸೆಕ್ಸ್ಟಸ್ ರೋಸ್ಸಿಯಸ್ ...", 5.2
  34. ಪ್ಲುಟಾರ್ಚ್ , ಕ್ರಾಸ್ಸುಸ್ , 10:4–5.
  35. ಕಾಂಟ್ರಾಸ್ಟ್ ಪ್ಲುಟಾರ್ಚ್ , ಕ್ರಾಸ್ಸುಸ್ , 11:2 ಜೊತೆಗೆ ಅಪ್ಪಿಯನ್ , ಸಿವಿಲ್ ವಾರ್ಸ್ , 1:119.
  36. ಅಪ್ಪಿಯನ್ , ಸಿವಿಲ್ ವಾರ್ಸ್ , 1:120.
  37. ಅಪ್ಪಿಯನ್ , ಸಿವಿಲ್ ವಾರ್ಸ್ , 1:120; ಪ್ಲುಟಾರ್ಚ್ , ಕ್ರಾಸ್ಸುಸ್ , 10:6.
  38. ಪ್ಲುಟಾರ್ಚ್ , ಕ್ರಾಸ್ಸುಸ್ , 11:3; ಲಿವಿ , ಪೆರಿಯೋಚಯೇ , 97:1 Archived 2017-07-19 ವೇಬ್ಯಾಕ್ ಮೆಷಿನ್ ನಲ್ಲಿ.. ಬ್ರ್ಯಾಡ್ಲಿ , ಸ್ಲೆವರಿ ಅಂಡ್ ರೆಬಿಲಿಯನ್ . ಪುಟ. 97; ಪ್ಲುಟಾರ್ಚ್ , ಕ್ರಾಸ್ಸುಸ್ , 11:4.
  39. ಪ್ಲುಟಾರ್ಚ್ , ಕ್ರಾಸ್ಸುಸ್ , 11:5;.
  40. ಅಪ್ಪಿಯನ್ , ಸಿವಿಲ್ ವಾರ್ಸ್ , 1:120; ಪ್ಲುಟಾರ್ಚ್ , ಕ್ರಾಸ್ಸುಸ್ , 11:6–7; ಲಿವಿ , ಪೆರಿಯೋಚಯೇ , 97.1 Archived 2017-07-19 ವೇಬ್ಯಾಕ್ ಮೆಷಿನ್ ನಲ್ಲಿ..
  41. ಅಪ್ಪಿಯನ್, ಸಿವಿಲ್ ವಾರ್ಸ್ , 1:120; ಫ್ಲೋರಸ್ , ಎಪಿಟೋಮ್ , 2.8.
  42. ಅಪ್ಪಿಯನ್ , ಸಿವಿಲ್ ವಾರ್ಸ್ , 1.120.
  43. ೪೩.೦ ೪೩.೧ ಪ್ಲುಟಾರ್ಚ್ ಕ್ರಾಸ್ಸುಸ್ , 9:5–6.
  44. ಅಪ್ಪಿಯನ್ , ಸಿವಿಲ್ ವಾರ್ಸ್ , 1:117; ಫ್ಲೋರಸ್ , ಎಪಿಟೋಮ್ , 2.8.
  45. ಪ್ಲುಟಾರ್ಚ್ , ಕ್ರಾಸ್ಸುಸ್ , 9:7; ಅಪ್ಪಿಯನ್ , ಸಿವಿಲ್ ವಾರ್ಸ್ , 1:117.
  46. Douglas Reed (1 January 1978). The controversy of Zion. Dolphin Press. p. 139. Retrieved 21 July 2010.
  47. ಕಾರ್ಲ್ ಮಾರ್ಕ್ಸ್'ಸ್ "ಕನ್ಫೆಷನ್"
  48. ಲೆಟರ್ ಫ್ರಂ ಮಾರ್ಕ್ಸ್ ಟು ಎಂಗೆಲ್ಸ್ ಇನ್ ಮ್ಯಾಂಚೆಸ್ಟರ್
  49. http://www.imdb.com/title/tt0299537/
  50. "ಆರ್ಕೈವ್ ನಕಲು". Archived from the original on 2012-07-16. Retrieved 2011-04-28.
  51. http://spartacus.ausxip.com/2009/06/
  52. ಹಿಸ್ಟರಿ ಆಫ್ ಸ್ಪಾರ್ಟಕ್ Archived 2016-09-22 ವೇಬ್ಯಾಕ್ ಮೆಷಿನ್ ನಲ್ಲಿ., fcspartak.ru (Russian)
  53. ಗ್ರೇಟ್ ಸೋವಿಯತ್ ಎನ್ಸೈಕ್ಲೋಪೀಡಿಯ, ಮೂರನೆ ಆವೃತ್ತಿ, ಸಂಪುಟ 24 (ಭಾಗ 1), ಪುಟ. 286, ಮಾಸ್ಕೋ, ಸೋವೆಟ್ಸ್ಕಾಯ ಎಂಟ್ಸಿಕ್ಲೋಪೀಡಿಯ ಪಬ್ಲಿಷರ್, 1976

ಗ್ರಂಥಸೂಚಿ ಬದಲಾಯಿಸಿ

ಪ್ರಾಚೀನ ಲೇಖಕರು ಬದಲಾಯಿಸಿ

  • ಅಪ್ಪಿಯನ್. ಸಿವಿಲ್ ವಾರ್ಸ್ . J. ಕಾರ್ಟರ್ ರಿಂದ ತರ್ಜುಮೆಗೊಂಡಿದೆ. (ಹಾರ್ಮಂಡ್ಸ್ ವರ್ತ್: ಪೆಂಗ್ವಿನ್ ಬುಕ್ಸ್, 1996)
  • ಫ್ಲೋರಸ್. ಎಪಿಟೊಂ ಆಫ್ ರೋಮನ್ ಹಿಸ್ಟರಿ . (ಲಂಡನ್: W. ಹೆಯಿನೆಮನ್ನ್, 1947)
  • ಒರೋಸಿಯಸ್. ದಿ ಸೆವೆನ್ ಬುಕ್ಸ್ ಆಫ್ ಹಿಸ್ಟರಿ ಅಗೈನ್ಸ್ಟ್ ದಿ ಪೇಗನ್ಸ್ . ರಾಯ್ J. ಡೆಫೆರ್ರಾರಿ ತರ್ಜುಮೆ ಮಾಡಿದ್ದಾರೆ. (ವಾಶಿಂಗ್ಟನ್, DC: ಕ್ಯಾಥೊಲಿಕ್ ಯೂನಿವರ್ಸಿಟಿ ಆಫ್ ಅಮೆರಿಕ ಪ್ರೆಸ್, 1964).
  • ಪ್ಲುಟಾರ್ಚ್. ಫಾಲ್ ಆಫ್ ದಿ ರೋಮನ್ ರಿಪಬ್ಲಿಕ್ . R. ವಾರ್ನೆರ್ ರಿಂದ ತರ್ಜುಮೆಗೊಂಡಿದೆ. (ಲಂಡನ್: ಪೆಂಗ್ವಿನ್ ಬುಕ್ಸ್, 1972), "ದಿ ಲೈಫ್ ಆಫ್ ಕ್ರಾಸ್ಸುಸ್" ಹಾಗು "ದಿ ಲೈಫ್ ಆಫ್ ಪಾಂಪೆ"ಗೆ ವಿಶೇಷ ಒತ್ತು ನೀಡಲಾಗಿದೆ.
  • ಸಲ್ಲುಸ್ಟ್. ಕಾನ್ಸ್ಪಿರಸಿ ಆಫ್ ಕಾಟಿಲೈನ್ ಅಂಡ್ ದಿ ವಾರ ಆಫ್ ಜುಗುರ್ಥ . (ಲಂಡನ್: ಕಾನ್ಸ್ಟೇಬಲ್, 1924)

ಆಧುನಿಕ ಇತಿಹಾಸ ಲೇಖನ ಬದಲಾಯಿಸಿ

  • ಬ್ರ್ಯಾಡ್ಲಿ, ಕೀತ್ R. ಸ್ಲೇವರಿ ಅಂಡ್ ರೆಬಿಲಿಯನ್ ಇನ್ ದಿ ರೋಮನ್ ವರ್ಲ್ಡ್, 140 B.C.–70 B.C. ಬ್ಲೂಮಿಂಗ್ಟನ್; ಇಂಡಿಯಾನಪೋಲಿಸ್: ಇಂಡಿಯಾನ ವಿಶ್ವವಿದ್ಯಾಲಯ ಮುದ್ರಣಾಲಯ, 1989 (ದಪ್ಪರಟ್ಟಿನ ಪುಸ್ತಕ, ISBN 0-253-31259-0); 1998 (ಹಿಂಬದಿಯಲ್ಲಿ ಕಾಗದದ ಹೊದಿಕೆ, ISBN 0-253-21169-7). [ಅಧ್ಯಾಯ V] ದಿ ಸ್ಲೇವ್ ವಾರ್ ಆಫ್ ಸ್ಪಾರ್ಟಕಸ್, ಪುಟಗಳು. 83–101.
  • ರುಬಿನ್ ಸೋಹ್ನ್, ವೊಲ್ಫ್ ಗ್ಯಾಂಗ್ ಜೀವ್. ಸ್ಪಾರ್ಟಕಸ್' ಅಪ್ರೈಸಿಂಗ್ ಅಂಡ್ ಸೋವಿಯತ್ ಹಿಸ್ಟಾರಿಕಲ್ ರೈಟಿಂಗ್ . ಆಕ್ಸ್ಫರ್ಡ್: ಆಕ್ಸ್ಬೌ ಬುಕ್ಸ್, 1987 (ಹಿಂಬದಿಯಲ್ಲಿ ಕಾಗದದ ಹೊದಿಕೆ, ISBN 0-9511243-1-5).
  • ಸ್ಪಾರ್ಟಕಸ್: ಫಿಲಂ ಅಂಡ್ ಹಿಸ್ಟರಿ , ಮಾರ್ಟಿನ್ M. ವಿಂಕ್ಲರ್ ರ ಸಂಪಾದನೆ. ಆಕ್ಸ್ಫರ್ಡ್: ಬ್ಲ್ಯಾಕ್ ವಾಲ್ ಪಬ್ಲಿಷರ್ಸ್, 2007 (ದಪ್ಪರಟ್ಟಿನ ಹೊದಿಕೆ, ISBN 1-4051-3180-2; ಕಾಗದದ ಹೊದಿಕೆ, ISBN 1-4051-3181-0).
  • ಟ್ರೌ, M.J. ಸ್ಪಾರ್ಟಕಸ್: ದಿ ಮಿಥ್ ಅಂಡ್ ದಿ ಮ್ಯಾನ್ . ಸ್ಟ್ರೌಡ್, ಯುನೈಟೆಡ್ ಕಿಂಗ್ಡಂ: ಸುಟ್ಟನ್ ಪಬ್ಲಿಷಿಂಗ್, 2006 (ದಪ್ಪರಟ್ಟಿನ ಹೊದಿಕೆ, ISBN 0-7509-3907-9).
  • ಗೆನ್ನೆರ್, ಮೈಕಲ್. "ಸ್ಪಾರ್ಟಕಸ್. Eine Gegengeschichte des Altertums nach den Legenden der Zigeuner". ಎರಡು ಸಂಪುಟಗಳು. (ಹಿಂಬದಿಯಲ್ಲಿ ಕಾಗದದ ಹೊದಿಕೆ.) ಟ್ರಿಕೊಂಟ್ ವೆರ್ಲಾಗ್, ಮುಂಚೆನ್ 1979/1980. Vol 1 ISBN 3-88167-053-X Vol 2 ISBN 3-88167-0
  • ಪ್ಲಮೆನ್ ಪವ್ಲೋವ್, ಸ್ಟಾನಿಮೀರ್ ಡಿಮಿಟ್ರೋವ್,ಸ್ಪಾರ್ಟಕ್ - sinyt na drenva Trakija /ಸ್ಪಾರ್ಟಕಸ್ - ದಿ ಸನ್ ಆಫ್ ಏನ್ಷಿಯಂಟ್ ಥ್ರೆಸ್ . ಸೋಫಿಯ, 2009, ISBN 978-954-378-024-2

ಬಾಹ್ಯ ಕೊಂಡಿಗಳು‌ ಬದಲಾಯಿಸಿ