ಸ್ನಾನಘಟ್ಟ ಎಂದರೆ ನದಿ ಅಥವಾ ಕೊಳದ ದಡದ ಪಕ್ಕದಲ್ಲಿರುವ ಸ್ನಾನದ ಅಥವಾ ಶವಸಂಸ್ಕಾರದ ಸ್ಥಳದಂತಹ ಒಂದು ಜಲಸಮೂಹಕ್ಕೆ ಅಥವಾ ಹಡಗುಕಟ್ಟೆಗೆ ಕರೆದೊಯ್ಯುವ ಮೆಟ್ಟಿಲುಗಳ ಸರಣಿ, ಉದಾಹರಣೆಗೆ ವಾರಾಣಸಿಯ ಸ್ನಾನಘಟ್ಟಗಳು, ಧೋಭಿ ಘಾಟ್ ಅಥವಾ ಆಪ್ರವಾಸಿ ಘಾಟ್.[][] ಸ್ನಾನಘಟ್ಟಗಳ ಮೂಲಕ ಸಾಗುವ ರಸ್ತೆಗಳನ್ನು ಘಾಟ್ ರಸ್ತೆಗಳೆಂದು ಕರೆಯಲಾಗುತ್ತದೆ.

ಗಂಗಾ ನದಿಯ ದಂಡೆಯಲ್ಲಿರುವ ಪ್ರಸಿದ್ಧ ದಶಾಶ್ವಮೇಧ ಸ್ನಾನಘಟ್ಟ, ವಾರಾಣಸಿ

ನದಿಯ ಸ್ನಾನಘಟ್ಟಗಳು

ಬದಲಾಯಿಸಿ

ಗಂಗಾ ನದಿಯ ಉದ್ದಕ್ಕೂ ಇರುವ ಅಸಂಖ್ಯಾತ ಮಹತ್ವದ ಸ್ನಾನಘಟ್ಟಗಳೆಂದರೆ ವಾರಣಸಿ ಸ್ನಾನಘಟ್ಟಗಳು (ವಾರಾಣಸಿ ನಗರವು ೮೮ ಸ್ನಾನಘಟ್ಟಗಳನ್ನು ಹೊಂದಿದೆ). ಈ ಬಹುತೇಕ ಸ್ನಾನಘಟ್ಟಗಳನ್ನು ವಿವಿಧ ಮರಾಠಾ ಅರಸರ ಆಶ್ರಯದಡಿ ನಿರ್ಮಿಸಲಾಯಿತು, ಉದಾ. ೧೮ನೇ ಶತಮಾನದಲ್ಲಿ ಅಹಲ್ಯಾ ಬಾಯಿ ಹೋಳ್ಕರ (೧೭೬೭ರಿಂದ ೧೭೯೫ರ ವರೆಗೆ ಮಾಲ್ವಾ ರಾಜ್ಯದ ರಾಣಿ).[]

ಉಲ್ಲೇಖಗಳು

ಬದಲಾಯಿಸಿ
  1. Sunithi L. Narayan, Revathy Nagaswami, 1992, Discover sublime India: handbook for tourists, Page 5.
  2. Ghat definition, Cambridge dictionary.
  3. Eck, Diana L. (1999). Banaras : city of light (repr. ed.). New York: Columbia University Press. pp. 90, 222. ISBN 9780231114479. Retrieved 5 September 2017.