ಸ್ಟೆಫಿ ಡಿ'ಸೋಜಾ
ಸ್ಟೆಫನಿ "ಸ್ಟೆಫಿ" ಡಿ'ಸೋಜಾ (೨೬ ಡಿಸೆಂಬರ್ ೧೯೩೬ - ೧೧ ಸೆಪ್ಟೆಂಬರ್ ೧೯೯೮) ಅವರು ಅಥ್ಲೆಟಿಕ್ಸ್ ಮತ್ತು ಮಹಿಳಾ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಒಬ್ಬ ಭಾರತೀಯ ಕ್ರೀಡಾಪಟು.
ವೈಯುಕ್ತಿಕ ಮಾಹಿತಿ | ||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|
ಹುಟ್ಟು ಹೆಸರು | ಸ್ಟೆಫನೀ ಸೀಕ್ವೇರಾ | |||||||||||||||||||
ಪುರ್ಣ ಹೆಸರು | ಸ್ಟೆಫಿ ಡಿಸೋಜಾ | |||||||||||||||||||
ಅಡ್ಡ ಹೆಸರು(ಗಳು) | ಹಾರುವ ರಾಣಿ[೧] | |||||||||||||||||||
ರಾಷ್ರೀಯತೆ | ಭಾರತೀಯರು | |||||||||||||||||||
ಜನನ | ೨೬ ಡಿಸೆಂಬರ್ ೧೯೩೬ ಗೋವಾ, ಪೋರ್ಚುಗೀಸ್ ಭಾರತ | |||||||||||||||||||
ಮರಣ | 11 September 1998 ಜೆಮ್ಶೆಡ್‌ಪುರ, ಭಾರತ | (aged 61)|||||||||||||||||||
ಆಲ್ಮ ಮಾಟರ್ | ಸರ್ದಾರ್ ದಸ್ತೂರ್ ಬಾಲಕಿಯರ ಶಾಲೆ ಫರ್ಗೂಸನ್ ಕಾಲೇಜು | |||||||||||||||||||
ಉದ್ಯೋಗದಾತ | ಭಾರತೀಯ ರೈಲ್ವೇ | |||||||||||||||||||
ಎತ್ತರ | 5 ft 2 in (157 cm) | |||||||||||||||||||
ತೂಕ | 110 lb (50 kg) | |||||||||||||||||||
Sport | ||||||||||||||||||||
ಕ್ರೀಡೆ | ಟ್ರ್ಯಾಕ್ ಆಂಡ್ ಫೀಲ್ಡ್ | |||||||||||||||||||
ಸ್ಪರ್ಧೆಗಳು(ಗಳು) | ಓಟ (ಸ್ಪ್ರಿಂಟ್) | |||||||||||||||||||
ಪದಕ ದಾಖಲೆ
|
ವೃತ್ತಿಜೀವನ
ಬದಲಾಯಿಸಿಇವರ ವಿದ್ಯಾಭ್ಯಾಸ ಸರ್ದಾರ್ ದಸ್ತುರ್ ಬಾಲಕಿಯರ ಶಾಲೆಯಲ್ಲಿ ನಡೆಯಿತು. ಇವರು ಫರ್ಗ್ಯೂಸನ್ ಕಾಲೇಜಿನಲ್ಲಿ ಪದವಿ ಪಡೆದರು. ತದನಂತರ ಇವರು ಕೇಂದ್ರ ರೈಲ್ವೆಯ ಪುಣೆ ವಿಭಾಗದಲ್ಲಿ ಕೆಲಸ ಮಾಡಿದರು. ಆನಂತರ ಮದುವೆಯಾಗಿ ಜಮ್ಶೆಡ್‌ಪುರಕ್ಕೆ ಸ್ಥಳಾಂತಗೊಂಡರು. ಅವರು ಸುಮಾರು ೫ ಅಡಿ ೨ ಇಂಚು ಉದ್ದವಿದ್ದರು ಮತ್ತು ೫೦ ಕೆಜಿ ತೂಕವಿದ್ದರು. ಅವರನ್ನು ಫ್ಲೈಯಿಂಗ್ ರಾಣಿ ಎಂದು ಕರೆಯುತ್ತಿದ್ದರು.
ಸಾಧನೆ
ಬದಲಾಯಿಸಿಇವರು ೧೯೫೪ ರಲ್ಲಿ ಮನಿಲಾ ಏಷ್ಯನ್ ಕ್ರೀಡಾಕೂಟದಲ್ಲಿ ೪*೪೦೦ ಮೀಟರ್ ರಿಲೇ ಯಲ್ಲಿ ಚಿನ್ನದ ಪದಕವನ್ನು ಗೆದ್ದರು. ಆ ಸ್ಪರ್ಧೆಯಲ್ಲಿ ಇವರು ಜಪಾನಿನ ಒಟಗಾರನಿಂದ ೪ ಮೀಟರ್‌ಗಳಷ್ಟು ಮುನ್ನಡೆ ಸಾಧಿಸಿದ್ದರು.[೨] , ಕ್ರಿಸ್ಟಿನ್ ಬ್ರೌನ್ ಮತ್ತು ಮೇರಿ ಡಿ'ಸೋಜಾ ಅವರ ತಂಡದ ಇತರ ಸದಸ್ಯರಾಗಿದ್ದರು. ಅವರು ೧೯೫೮ ರಲ್ಲಿ ಟೊಕಿಯೊದಲ್ಲಿ ನಡೆದ ೨೦೦ ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನದಲ್ಲಿದ್ದರು. ಅವರು ೪*೧೦೦ ಮೀ ರಿಲೇ ತಂಡದ ಸದಸ್ಯರಾಗಿದ್ದರು ಮತ್ತು ಅದರಲ್ಲಿ ಮೂರನೇ ಸ್ಥಾನವನ್ನು ಗಳಿಸಿದರು. ಅದೇ ವರ್ಷ ಕಾರ್ಡಿಷ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ದೇಶಕ್ಕಾಗಿ ಆಡಿದರು. ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಉದ್ದ ಜಿಗಿತದಲ್ಲಿ ಚಿನ್ನದ ಪದಕವನ್ನು ಗೆದ್ದಾಗ ಸ್ಟೀಫಿ ಡಿ'ಸೋಜಾ ಅವರು ೧೯೫೩ರಲ್ಲಿ ೧೬ ವರ್ಷದ ಶಾಲಾ ವಿದ್ಯಾರ್ಥಿಯಾಗಿ ರಾಷ್ಟ್ರೀಯವಾಗಿ ಮಿಂಚಿದ್ದರು. ಅಲ್ಲಿಂದ ಅವರು ಸುಮಾರು ೧೨ ವರ್ಷಗಳ ಕಾಲ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. ಈ ಅವಧಿಯಲ್ಲಿ ಅವರು ೧೦೦ ಮೀ, ೨೦೦ ಮೀ ,೪೦೦ ಮೀ ಮತ್ತು ೮೦೦ ಮೀ ನಲ್ಲಿ ರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದರು. ಅವರು ಮೊದಲ ಬಾರಿಗೆ ೧೯೫೪ ರಲ್ಲಿ ೨೦೦ ಮೀ ಓಟದಲ್ಲಿ ನಲ್ಲಿ ಚಿನ್ನದ ಪದಕವನ್ನು ಗೆದ್ದರು.[೩]
ಅವರು ೧೯೬೧ ರಲ್ಲಿ ೧೦೦ ಮೀಟರ್ ಓಟದಲ್ಲಿ ೧೨.೨ ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ನಂತರ ಅವರು ೧೯೬೪ರಲ್ಲಿ ೪೦೦ ಮೀಟರ್ ಮತ್ತು ೮೦೦ ಮೀಟರ್ ಓಟದ ಸ್ಪರ್ಧೆಗಳಲ್ಲಿ ಹೊಸ ಅಂಕಗಳನ್ನು ಸೃಷ್ಟಿಸಿದರು. ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ೪೦೦ ಮೀಟರ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಅವರು ಆಯ್ಕೆಗೊಂಡರು.[೪] ಸ್ಟೇಫೀ ಡಿ ಸೋಜಾ ದೇಶಕ್ಕಾಗಿ ಹಾಕಿ ಆಡಿದರು. ಅವರು ಎರಡು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ೧೯೫೩ ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಮಾಡಿ ಭಾರತವನ್ನು ಪ್ರತಿನಿಧಿಸಿದರು ಮತ್ತು ೧೯೬೧ ರಲ್ಲಿ ಶ್ರೀಲಂಕಾ ವಿರುದ್ದ ಭಾರತೀಯ ತಂಡದ ನಾಯಕತ್ವ ವಹಿಸಿದರು.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳು
ಬದಲಾಯಿಸಿವರ್ಷ | ಪಂದ್ಯ | ಸ್ಥಳ | ಸ್ಥಾನ | ಫಲಿತಾಂಶ | ಶರಾ |
---|---|---|---|---|---|
೧೯೫೪ | ಏಷ್ಯನ್ ಗೇಮ್ಸ್ | ಮಾನಿಲಾ | ಪ್ರಥಮ | ೪x೧೦೦ ಮೀಟರ್ | ೪೯.೫ |
೧೯೫೪ | ಏಷ್ಯನ್ ಗೇಮ್ಸ್ | ಮಾನಿಲಾ | ಚತುರ್ಥ | ೨೦೦ ಮೀಟರ್ | |
೧೯೫೭ | ನ್ಯಾಷನಲ್ ಚಾಂಪಿಯನ್‌ಶಿಪ್ | ಪ್ರಥಮ | |||
ಪ್ರಥಮ | ೨೦೦ ಮೀಟರ್ | ||||
೧೯೫೮ | ಏಷ್ಯನ್ ಗೇಮ್ಸ್ | ಟೋಕ್ಯೋ | ದ್ವಿತೀಯ | ೨೦೦ ಮೀಟರ್ | ೨೬.೨ |
ತೃತೀಯ | ೪೦೦ ಮೀಟರ್ ರಿಲೇ | ೪೯.೯ | |||
೧೯೫೮ | ಕಾಮನ್‌ವೆಲ್ತ್ ಗೇಮ್ಸ್ | ಕಾರ್ಡಿಫ್ | ಹೀಟ್ಸ್ ನಲ್ಲಿ ಹೊರಹಾಕಲಾಗಿದೆ | ೧೦೦ ಮೀ & ೨೦೦ ಮೀ |
ಪ್ರಶಸ್ತಿಗಳು
ಬದಲಾಯಿಸಿಇವರು ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ಮಹಿಳೆಯಾಗಿದ್ದರು. ಅನೇಕ ವರ್ಷಗಳ ಕಾಲ ಆಲ್ ಇಂಡಿಯ ಕಾ ಕೌನ್ಸಿಲ ಫಾರ್ ಸ್ಪೋರ್ಟ್ಸ್‌ನ ಸದಸ್ಯರಾಗಿದ್ದರು. ೧೯೯೮ರಲ್ಲಿ ಅವರು ತಮ್ಮ ೬೧ ನೇ ವಯಸ್ಸಿನಲ್ಲಿ ಜೆಮ್ಶೆಡ್‌ಪುರದಲ್ಲಿ ಕೊನೆಯುಸಿರೆಳೆದರು.
ಉಲ್ಲೇಖಗಳು
ಬದಲಾಯಿಸಿ- ↑ "Ground zero: Sorry, ma'am. Hockey is dead, you live". 4 March 2010.
- ↑ "Stephie D'Souza - Sports Bharti | sportsbharti.comSports Bharti | sportsbharti.com". www.sportsbharti.com. Archived from the original on 2017-07-31.
- ↑ Indian Express, December 24, 1956
- ↑ "Stephie D'Souza - Sports Bharti | sportsbharti.comSports Bharti | sportsbharti.com". www.sportsbharti.com. Archived from the original on 2017-07-31.