ಸ್ಟಾಂಪು ಸುಂಕ ಎಂಬುದು ದಸ್ತಾವೇಜುಗಳ ಮೇಲೆ ವಿಧಿಸಲ್ಪಡುವ ಒಂದು ತೆರಿಗೆಯಾಗಿದೆ. ಐತಿಹಾಸಿಕವಾಗಿ ಹೇಳುವುದಾದರೆ, ಚೆಕ್ಕುಗಳು, ಪಾವತಿ ಚೀಟಿಗಳು, ಸೇನಾ ದಳ್ಳಾಳಿ ರುಸುಮುಗಳು, ಮದುವೆ ಪರವಾನಗಿಗಳು ಮತ್ತು ಭೂಮಿ ವ್ಯವಹಾರದ ನಿರ್ವಹಣೆಗಳಂಥ ಕಾನೂನುಬದ್ಧ ದಸ್ತಾವೇಜುಗಳ ಬಹುಭಾಗವನ್ನು ಇದು ಒಳಗೊಂಡಿತ್ತು. ದಸ್ತಾವೇಜು ಕಾನೂನುಬದ್ಧವಾಗಿ ಕಾರ್ಯಗತವಾಗುವುದಕ್ಕೆ ಅಥವಾ ಜಾರಿಗೆ ಬರುವುದಕ್ಕೆ ಅಥವಾ ಪರಿಣಾಮಕಾರಿಯಾಗುವುದಕ್ಕೆ ಮುಂಚಿತವಾಗಿ ಸ್ಟಾಂಪು ಸುಂಕವು ಪಾವತಿಸಲ್ಪಟ್ಟಿದೆ ಎಂಬುದನ್ನು ಸೂಚಿಸಲು ದಸ್ತಾವೇಜಿನ ಮೇಲೆ ಒಂದು ಭೌತಿಕ ಸ್ಟಾಂಪನ್ನು (ಒಂದು ತೆರಿಗೆ ಸ್ಟಾಂಪು) ಲಗತ್ತಿಸಬೇಕಾಗಿತ್ತು ಅಥವಾ ಮೊಹರನ್ನು ಒತ್ತಬೇಕಾಗಿತ್ತು. ತೆರಿಗೆಯ ಹೆಚ್ಚು ಆಧುನಿಕವಾದ ರೂಪಾಂತರಗಳ ಅಥವಾ ಆವೃತ್ತಿಗಳ ಅನುಸಾರ ವಾಸ್ತವಿಕ ಸ್ಟಾಂಪೊಂದನ್ನು ಇನ್ನು ಮುಂದೆ ಲಗತ್ತಿಸಬೇಕಾಗಿಲ್ಲ.

ಆಸ್ಟ್ರೇಲಿಯಾ

ಬದಲಾಯಿಸಿ

ಆಸ್ಟ್ರೇಲಿಯಾದ ಒಕ್ಕೂಟ ಸರ್ಕಾರವು ಸ್ಟಾಂಪು ಸುಂಕವನ್ನು ವಿಧಿಸುವುದಿಲ್ಲ. ಆದಾಗ್ಯೂ, ಹಲವಾರು ದಸ್ತಾವೇಜುಗಳು (ಲಿಖಿತ ದಸ್ತಾವೇಜುಗಳು) ಮತ್ತು ವ್ಯವಹಾರ ನಿರ್ವಹಣೆಗಳ ಮೇಲೆ ಆಸ್ಟ್ರೇಲಿಯಾದ ಸಂಸ್ಥಾನಗಳು ಸ್ಟಾಂಪು ಸುಂಕಗಳನ್ನು ವಿಧಿಸುತ್ತವೆ. ಸ್ಟಾಂಪು ಸುಂಕದ ದರಗಳು ಸಂಸ್ಥಾನದಿಂದ ಸಂಸ್ಥಾನಕ್ಕೆ ಬದಲಾಗುತ್ತಾ ಹೋಗುತ್ತವೆ ಮತ್ತು ಅದೇ ರೀತಿಯಲ್ಲಿ ಸುಂಕಕ್ಕೆ ಒಳಪಡುವ ದಸ್ತಾವೇಜುಗಳು ಅಥವಾ ವ್ಯವಹಾರ ನಿರ್ವಹಣೆಗಳ ಸ್ವರೂಪವೂ ಸಹ ಬದಲಾಗುತ್ತಾ ಹೋಗುತ್ತದೆ. "ವ್ಯವಹಾರ ನಿರ್ವಹಣೆಯ ಸುಂಕ " ಎಂಬುದಾಗಿ ಈಗ ಮತ್ತೆಮತ್ತೆ ಉಲ್ಲೇಖಿಸಲ್ಪಡುವ ಸುಂಕವನ್ನು ಭೌತಿಕ ದಸ್ತಾವೇಜೊಂದಕ್ಕೆ ಕೆಲವೊಂದು ಆಡಳಿತ ಕ್ಷೇತ್ರಗಳು ವಿಧಿಸುತ್ತಿಲ್ಲ.

ಸುಂಕದ ಪ್ರಮುಖ ಸ್ವರೂಪಗಳಲ್ಲಿ ಇವು ಸೇರಿವೆ: ಭೂಮಿ, ವ್ಯವಹಾರದ ಅಸ್ತಿತ್ವಗಳು, ಷೇರುಗಳು, ಮತ್ತು ಸುಂಕ ವಿಧಿಸಬಹುದಾದ ಸ್ವತ್ತಿನ ಇತರ ಸ್ವರೂಪಗಳ ಮಾರಾಟದ ಮೇಲಿನ ವರ್ಗಾವಣೆ ಸುಂಕ; ಅಡಮಾನ ಸುಂಕ; ಗುತ್ತಿಗೆ ಸುಂಕ ಮತ್ತು ಸರಕುಗಳ ಬಾಡಿಗೆಯ ಮೇಲೆ ವಿಧಿಸುವ ಸುಂಕ. ಯಾರು ತಮ್ಮ ಮೊದಲ ಮನೆಯನ್ನು ಖರೀದಿಸುತ್ತಿರುತ್ತಾರೋ ಅಂಥವರಿಗೆ ವರ್ಗಾವಣೆ ಸುಂಕ ಮತ್ತು ಅಡಮಾನ ಸುಂಕಗಳಿಂದ ಸೋಡಿಗಳು ಅಥವಾ ವಿನಾಯಿತಿಗಳು ಲಭ್ಯವಿವೆ.

2005ರ ಏಪ್ರಿಲ್‌ 20ರಂದು ಹಲವಾರು ಸಂಸ್ಥಾನಗಳು ಮತ್ತು ಸೀಮೆಗಳ[specify] ಕಂದಾಯ ಅಧಿಕಾರಿಗಳು ಪ್ರಕಟಣೆಯೊಂದನ್ನು ನೀಡಿ, ಮುಂಬರುವ ಐದು ವರ್ಷಗಳಲ್ಲಿ ಹಲವಾರು ರೀತಿಯ ಸುಂಕಗಳನ್ನು[specify] ಕ್ರಮೇಣ ಬಳಕೆಗೆ ತರುವುದಾಗಿ ತಿಳಿಸಿದರು.[ಸೂಕ್ತ ಉಲ್ಲೇಖನ ಬೇಕು] ಆದಾಗ್ಯೂ, ಭೂಮಿ ಮಾಲೀಕತ್ವ ವರ್ಗಾವಣೆಗಳ ಮೇಲಿನ ಸುಂಕವು ಉಳಿದುಕೊಳ್ಳುತ್ತದೆ.

ಹಾಂಕಾಂಗ್

ಬದಲಾಯಿಸಿ

ಹಾಂಕಾಂಗ್‌ ಸ್ಟಾಂಪು ಸುಂಕ ವಿಶೇಷಾಜ್ಞೆ ಅಧ್ಯಾಯ 117ರ (ಸ್ಟಾಂಪ್‌ ಡ್ಯೂಟಿ ಆರ್ಡಿನೆನ್ಸ್‌-SDO) ಅನುಸೂಚಿ 1ರ ಅನುಸಾರ, 4 ಅಧಿಕರಣಗಳಾಗಿ ವರ್ಗೀಕರಿಸಲ್ಪಟ್ಟಿರುವ, ಕಾನೂನಿನ ನಿರ್ಬಂಧಕ್ಕೊಳಪಟ್ಟಿರುವವ ಕೆಲವೊಂದು ದಸ್ತಾವೇಜುಗಳಿಗೆ ಸ್ಟಾಂಪು ಸುಂಕವು ಅನ್ವಯಿಸುತ್ತದೆ. ಅವುಗಳ ವಿವರ ಹೀಗಿದೆ:

  • ಅಧಿಕರಣ 1: ಹಾಂಕಾಂಗ್‌‌ನಲ್ಲಿನ ಸ್ಥಿರ ಸ್ವತ್ತಿಗೆ ಸಂಬಂಧಿಸಿದ ಎಲ್ಲಾ ಮಾರಾಟ ಅಥವಾ ಗುತ್ತಿಗೆ ವ್ಯವಹಾರ ನಿರ್ವಹಣೆಗಳು.
  • ಅಧಿಕರಣ 2: ಹಾಂಕಾಂಗ್‌ ಸ್ಟಾಕ್‌ನ ವರ್ಗಾವಣೆ.
  • ಅಧಿಕರಣ 3: ಹಾಂಕಾಂಗ್‌ನ ಎಲ್ಲಾ ಧಾರಕ ದಸ್ತಾವೇಜುಗಳು.
  • ಅಧಿಕರಣ 4: ಮೇಲಿನ ದಸ್ತಾವೇಜುಗಳಿಗೆ ಸಂಬಂಧಿಸಿದ ಯಾವುದೇ ಮಾದರಿಪ್ರತಿಗಳು ಮತ್ತು ದಾಖಲೆಯ ದ್ವಿಪ್ರತಿಗಳು.

ಹಾಂಕಾಂಗ್‌ನಲ್ಲಿನ ಸಂಘಟಿತ ಸಂಸ್ಥೆಗಳಾಗಿರುವ ಅಥವಾ ಹಾಂಕಾಂಗ್‌ ಸ್ಟಾಕ್‌ ವಿನಿಮಯ ಕೇಂದ್ರದಲ್ಲಿ ಪಟ್ಟೀಕರಿಸಲ್ಪಟ್ಟಿರುವ ಕಂಪನಿಗಳ ಷೇರುಗಳು ಉದಾಹರಣೆಗಳ ಪೈಕಿ ಒಂದೆನಿಸಿಕೊಂಡಿದೆ. ಉಲ್ಲೇಖಿಸಲಾದ ಷೇರುಗಳನ್ನು ಹೊರತುಪಡಿಸಿ, ಷೇರುಗಳು ಮತ್ತು ವಿಕ್ರಯಾರ್ಹ ಆಧಾರ ಪತ್ರಗಳು, ಯುನಿಟ್‌ ಟ್ರಸ್ಟ್‌‌ಗಳಲ್ಲಿನ ಅತ್ಯಂತ ಕನಿಷ್ಟವಾದ ಷೇರುಗಳು (ಯುನಿಟ್‌ಗಳು), ಮತ್ತು ಸ್ಟಾಕ್‌ಗೆ ಚಂದಾದಾರನಾಗುವುದರ ಅಥವಾ ಹಂಚಿಕೆಯನ್ನು ಪಡೆಯುವುದಕ್ಕೆ ಸಂಬಂಧಿಸಿದ್ದರ ಹಕ್ಕುಗಳು ಇವೆಲ್ಲವೂ HK ಸ್ಟಾಕ್‌ ಎಂಬುದಾಗಿ ವ್ಯಾಖ್ಯಾನಿಸಲ್ಪಟ್ಟಿವೆ. ಭೂಮಿಯ ಮಾರಾಟದ ಕುರಿತಾದ ವರ್ಗಾವಣೆ ಪತ್ರವೊಂದರ ಮೇಲೆ ಕ್ರಮವೃದ್ಧಿಯ ದರಗಳಲ್ಲಿ ಸ್ಟಾಂಪು ಸುಂಕವನ್ನು ವಿಧಿಸಲಾಗುತ್ತದೆ ಮತ್ತು ಪರಿಗಣನಾ ಮೊತ್ತದ 0.75%ನಿಂದ 3.75%ವರೆಗೆ ಈ ಕ್ರಮವೃದ್ಧಿಯ ದರಗಳ ವ್ಯಾಪ್ತಿಯಿರುತ್ತದೆ. ಪರಿಗಣನಾ ಮೊತ್ತವು 6 ದಶಲಕ್ಷ HK$ನ್ನು ಮೀರಿದ ಸಂದರ್ಭದಲ್ಲಿ, 3.75%ನಷ್ಟಿರುವ ಗರಿಷ್ಟ ದರವು ಅನ್ವಯಿಸುತ್ತದೆ.

ಉಲ್ಲೇಖಗಳು

ಸಿಂಗಪೂರ್‌‌

ಬದಲಾಯಿಸಿ

1998ರಿಂದ, ಸಿಂಗಪೂರ್‌‌ನಲ್ಲಿನ ಸ್ಟಾಂಪು ಸುಂಕವು ಕೇವಲ ಸ್ಥಿರ ಸ್ವತ್ತು, ಸ್ಟಾಕ್‌ಗಳು ಮತ್ತು ಷೇರುಗಳಿಗೆ ಸಂಬಂಧಿಸಿದ ದಸ್ತಾವೇಜುಗಳಿಗಷ್ಟೇ ಅನ್ವಯಿಸುತ್ತದೆ. ಸಿಂಗಪೂರ್‌‌ನ ಸ್ವತ್ತಿನ ಖರೀದಿಗಳು ಅಥವಾ ಸಿಂಗಪೂರ್‌‌ ವಿನಿಮಯ ಕೇಂದ್ರದಲ್ಲಿ ವಿನಿಮಯ ಮಾಡಲ್ಪಟ್ಟ ಷೇರುಗಳ ಖರೀದಿಗಳು ಸ್ಟಾಂಪು ಸುಂಕಕ್ಕೆ ಒಳಪಡುತ್ತವೆ.

ಅನ್ವಯವಾಗುವ ದರಗಳು ಮತ್ತು ಹೆಚ್ಚಿನ ಮಾಹಿತಿಯನ್ನು ಸಿಂಗಪೂರ್‌ನ ಅಂತರ್ದೇಶಿ ಕಂದಾಯ ಪ್ರಾಧಿಕಾರ‌‌ದಿಂದ (ಇನ್‌ಲ್ಯಾಂಡ್‌ ರೆವಿನ್ಯೂ ಅಥಾರಿಟಿ ಆಫ್‌ ಸಿಂಗಪೂರ್‌) ಪಡೆಯಬಹುದು. ಸಿಂಗಪೂರ್‌‌ ಸ್ಟಾಂಪು ಸುಂಕಗಳನ್ನು ಒಳಗೊಳ್ಳುವ ಕಾನೂನುಗಳು ಸ್ಟಾಂಪು ಸುಂಕಗಳ ಕಾಯಿದೆಯಲ್ಲಿ ಕಂಡುಬರುತ್ತವೆ.[]

ಐರ್ಲೆಂಡ್‌ ಗಣರಾಜ್ಯ

ಬದಲಾಯಿಸಿ

ಐರ್ಲೆಂಡ್‌ ಗಣರಾಜ್ಯದಲ್ಲಿ ಹಲವಾರು ವಸ್ತುಗಳ ಮೇಲೆ ಸ್ಟಾಂಪು ಸುಂಕಗಳನ್ನು ವಿಧಿಸಲಾಗುತ್ತದೆ. ಅವುಗಳಲ್ಲಿ ಕ್ರೆಡಿಟ್‌ ಕಾರ್ಡ್‌‌ಗಳು, ಡೆಬಿಟ್‌ ಕಾರ್ಡ್‌‌‌‌ಗಳು, ATM ಕಾರ್ಡ್‌‌ಗಳು, ಚೆಕ್ಕುಗಳು, ಸ್ವತ್ತು ವರ್ಗಾವಣೆಗಳು, ಮತ್ತು ನ್ಯಾಯಾಲಯದ ನಿಶ್ಚಿತ ದಸ್ತಾವೇಜುಗಳು ಸೇರಿವೆಯಾದರೂ ಸುಂಕ ವಿಧಿಸುವಿಕೆಯು ಇಷ್ಟಕ್ಕೇ ಸೀಮಿತಗೊಂಡಿಲ್ಲ.

ಯುನೈಟೆಡ್‌ ಕಿಂಗ್‌ಡಂ

ಬದಲಾಯಿಸಿ

"ಸ್ಟಾಂಪು ಸುಂಕದ ಮೀಸಲು ತೆರಿಗೆ"ಯು (ಸ್ಟಾಂಪ್‌ ಡ್ಯೂಟಿ ರಿಸರ್ವ್‌ ಟ್ಯಾಕ್ಸ್‌-SDRT) ನಿಶ್ಚಿತ ಷೇರುಗಳು ಮತ್ತು ಇತರ ಆಧಾರ ಪತ್ರಗಳನ್ನು ವರ್ಗಾವಣೆ ಮಾಡುವುದಕ್ಕಾಗಿರುವ ಒಡಂಬಡಿಕೆಗಳ ಮೇಲೆ 1986ರಲ್ಲಿ ಪರಿಚಯಿಸಲ್ಪಟ್ಟಿತಾದರೂ, ಇದು ಮಧ್ಯಸ್ಥಗಾರರಿಗೆ (ಅರ್ಹತಾ ನಿರ್ಧಾರಕವಾಗಿರುವ ಒಂದು ವಿನಿಮಯ ಕೇಂದ್ರದ ಸದಸ್ಯರಾಗಿರುವ ಮಾರ್ಕೆಟ್‌ ಮೇಕರ್‌ಗಳು ಮತ್ತು ದೊಡ್ಡ ಬ್ಯಾಂಕುಗಳಂಥವು) ಒಂದು ಪರಿಹಾರವನ್ನು ನೀಡಿತು.[] ಸ್ಟಾಂಪು ಸುಂಕದಿಂದ ಜನ್ಯವಾದ ಒಂದು ಹೊಸ ವರ್ಗಾವಣೆ ತೆರಿಗೆಯಾದ "ಸ್ಟಾಂಪು ಸುಂಕ ಭೂಮಿ ತೆರಿಗೆ"ಯು (ಸ್ಟಾಂಪ್‌ ಡ್ಯೂಟಿ ಲ್ಯಾಂಡ್‌ ಟ್ಯಾಕ್ಸ್‌-SDLT), ಭೂಮಿ ಮತ್ತು ಸ್ವತ್ತು ವ್ಯವಹಾರ ನಿರ್ವಹಣೆಗಳಿಗೆ ಸಂಬಂಧಿಸಿದಂತೆ 2003ರ ಡಿಸೆಂಬರ್‌ 1ರಿಂದ ಪರಿಚಯಿಸಲ್ಪಟ್ಟಿತು. SDLT ಎಂಬುದು ಒಂದು ಸ್ಟಾಂಪು ಸುಂಕವಲ್ಲವಾದರೂ, "ಭೂಮಿ ವ್ಯವಹಾರದ ನಿರ್ವಹಣೆಗಳ" ಮೇಲೆ ವಿಧಿಸಲಾಗುವ ಸ್ವಯಂ-ನಿಗದಿಪಡಿಸಲ್ಪಟ್ಟ ವರ್ಗಾವಣೆ ತೆರಿಗೆಯ ಒಂದು ಸ್ವರೂಪವಾಗಿದೆ.

2010ರ ಮಾರ್ಚ್‌ 24ರಂದು ಆಲಿಸ್ಟೇರ್‌‌ ಡಾರ್ಲಿಂಗ್‌ ಎಂಬ ಪ್ರಧಾನಾಧಿಕಾರಿಯು (ಚಾನ್ಸೆಲರ್‌) UK ಸ್ಟಾಂಪು ಸುಂಕಕ್ಕೆ ಎರಡು ಗಮನಾರ್ಹವಾದ ಬದಲಾವಣೆಗಳನ್ನು ಪರಿಚಯಿಸಿದ. 250,000£ ಮೌಲ್ಯಕ್ಕಿಂತಲೂ ಕೆಳಗಿರುವ ಒಂದು ಸ್ವತ್ತನ್ನು ಮೊದಲ-ಬಾರಿಗೆ ಖರೀದಿಸುತ್ತಿರುವ ಖರೀದಿದಾರರಿಗೆ ಸಂಬಂಧಿಸಿದಂತೆ ಮುಂದಿನ ಎರಡು ವರ್ಷಗಳವರೆಗೆ ಸ್ಟಾಂಪು ಸುಂಕವನ್ನು ರದ್ದುಪಡಿಸಲಾಯಿತು. 1 ದಶಲಕ್ಷ £ಗೂ ಹೆಚ್ಚಿನ ಬೆಲೆಯನ್ನು ಹೊಂದಿರುವ ಸ್ವತ್ತುಗಳ ಮೇಲಿನ ಸ್ಟಾಂಪು ಸುಂಕದಲ್ಲಿ 4%ನಿಂದ 5%ವರೆಗೆ ಒಂದು ಏರಿಕೆಯನ್ನು ಮಾಡುವ ಮೂಲಕ ಈ ಕ್ರಮವು ಸರಿದೂಗಿಸಲ್ಪಟ್ಟಿತು.

ಅಮೆರಿಕಾ ಸಂಯುಕ್ತ ಸಂಸ್ಥಾನ

ಬದಲಾಯಿಸಿ

ವ್ಯವಹಾರಕ್ಕೆ ಸಂಬಂಧಿಸಿದ ಪತ್ರಗಳು, ಟಿಪ್ಪಣಿಗಳು ಮತ್ತು ಇತರ ವ್ಯವಹಾರಾರ್ಯ ದಸ್ತಾವೇಜುಗಳ ಮೇಲೆ ಪ್ರಮಾಣ ಸಹಿತವಾದ ಹಲವಾರು ಸ್ಟಾಂಪು ತೆರಿಗೆಗಳನ್ನು ಒಕ್ಕೂಟದ ಸರ್ಕಾರವು ಹಿಂದೆ ವಿಧಿಸಿತಾದರೂ, ಇತ್ತೀಚಿನ ದಿನಗಳಲ್ಲಿ ಇಂಥ ತೆರಿಗೆಗಳು ಕೇವಲ ಸಂಸ್ಥಾನಗಳ ವತಿಯಿಂದ ವಿಧಿಸಲ್ಪಡುತ್ತಿವೆ. ವಿಶಿಷ್ಟವೆಂಬಂತೆ, ಸ್ಥಿರಾಸ್ತಿಯು ವರ್ಗಾಯಿಸಲ್ಪಟ್ಟಾಗ ಅಥವಾ ಮಾರಲ್ಪಟ್ಟಾಗ, ಸಾರ್ವಜನಿಕ ದಾಖಲೆಗಳಲ್ಲಿ ವ್ಯವಹಾರ ಪತ್ರದ ನೋಂದಣಿಯಾಗುವ ಸಮಯದಲ್ಲಿ ಸ್ಥಿರಾಸ್ತಿ ವರ್ಗಾವಣೆ ತೆರಿಗೆಯೊಂದನ್ನು ಸಂಗ್ರಹಿಸಲಾಗುತ್ತದೆ. ಇದರ ಜೊತೆಗೆ, ಸ್ಥಿರಾಸ್ತಿಗೆ ಪ್ರತಿಯಾಗಿ ಸಾಲಗಳನ್ನು ಪಡೆಯುವ ಅಡಮಾನಗಳು ಅಥವಾ ಇತರ ದಸ್ತಾವೇಜುಗಳ ಮೇಲೆ ಅನೇಕ ಸಂಸ್ಥಾನಗಳು ತೆರಿಗೆಯೊಂದನ್ನು ವಿಧಿಸುತ್ತವೆ. ಒಂದು ಅಡಮಾನ ತೆರಿಗೆ , ಅಗ್ರಾಹ್ಯ ಮೌಲ್ಯಗಳ ತೆರಿಗೆ , ಅಥವಾ ಪ್ರಮಾಣ ಸಹಿತವಾದ ಸ್ಟಾಂಪು ತೆರಿಗೆ ಎಂಬುದಾಗಿ ನಾನಾ ಬಗೆಯಾಗಿ ಪರಿಚಿತವಾಗಿರುವ ಈ ತೆರಿಗೆಯನ್ನೂ ಸಹ, ದಾಖಲಿಸುವ ಪ್ರಾಧಿಕಾರದೊಂದಿಗೆ ಅಡಮಾನ ಅಥವಾ ನ್ಯಾಸವಿಶ್ವಾಸದ ಪತ್ರವನ್ನು ನೋಂದಣಿ ಮಾಡಿಸುವ ಸಮಯದಲ್ಲಿ ಸಾಮಾನ್ಯವಾಗಿ ಸಂಗ್ರಹಿಸಲಾಗುತ್ತದೆ.

ಸ್ವೀಡನ್‌‌

ಬದಲಾಯಿಸಿ

ಸ್ವತ್ತೊಂದರ ಖರೀದಿ ಮೌಲ್ಯದ ಮೇಲೆ ಸ್ವೀಡನ್ನಿನ ಕಾನೂನು 1.5%ನಷ್ಟಿರುವ ಒಂದು ಸ್ಟಾಂಪು ಸುಂಕವನ್ನು ವಿಧಿಸುತ್ತದೆ.

ಇವನ್ನೂ ಗಮನಿಸಿ

ಬದಲಾಯಿಸಿ
  • ಹಣಕಾಸಿನ ವ್ಯವಹಾರ ನಿರ್ವಹಣೆ ತೆರಿಗೆ
  • ಯುನೈಟೆಡ್‌ ಕಿಂಗ್‌ಡಂನಲ್ಲಿನ ಸ್ಟಾಂಪು ಸುಂಕ
  • ವರ್ಗಾವಣೆ ತೆರಿಗೆ

ಉಲ್ಲೇಖಗಳು

ಬದಲಾಯಿಸಿ
  1. Stamp Duties Act ([[[:ಟೆಂಪ್ಲೇಟು:Singapore legislation/index]] Cap. 312])
  2. "HMRC Stamp Taxes Manual" (PDF). p. 8,11. Archived from the original (PDF) on 2012-03-07. Retrieved 2011-02-19. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)