ಸೌರ ವಿದ್ಯುತ್ಕೋಶ
ಸೌರ ವಿದ್ಯುತ್ಕೋಶವು (ದ್ಯುತಿವಿದ್ಯುಜ್ಜನಕ ಕೋಶ ಎಂದೂ ಕರೆಯಲಾದ) ಬೆಳಕಿನ ಶಕ್ತಿಯನ್ನು ದ್ಯುತಿವಿದ್ಯುಜ್ಜನಕ ಪರಿಣಾಮದಿಂದ ನೇರವಾಗಿ ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಒಂದು ವಿದ್ಯುತ್ ಸಾಧನ. ಅದು ಒಂದು ರೀತಿಯ ದ್ಯುತಿವಿದ್ಯುತ್ ಕೋಶ (ಏಕೆಂದರೆ ಅದರ ವಿದ್ಯುತ್ ಗುಣಲಕ್ಷಣಗಳು—ಉದಾಹರಣೆಗೆ ಪ್ರವಾಹ, ವಿದ್ಯುದ್ಬಲ, ಅಥವಾ ರೋಧವು—ಬೆಳಕು ಅದರ ಮೇಲೆ ಬಿದ್ದಾಗ ಬದಲಾಗುತ್ತವೆ), ಅಂದರೆ ಬೆಳಕಿಗೆ ಒಡ್ಡಲಾದಾಗ ಅದು ಯಾವುದೇ ಬಾಹ್ಯ ವಿದ್ಯುದ್ಬಲ ಮೂಲಕ್ಕೆ ಜೋಡಿಸಲ್ಪಡದೆಯೇ ವಿದ್ಯುತ್ಪ್ರವಾಹವನ್ನು ಉತ್ಪಾದಿಸಿ ಸಮರ್ಥಿಸುತ್ತದೆ. ಬೆಳಕಿನ ಮೂಲ ಅಗತ್ಯವಾಗಿ ಸೂರ್ಯ ಆಗದಿದ್ದಾಗಲೂ (ಉದಾಹರಣೆಗೆ ದೀಪ-ಪ್ರಕಾಶ, ಕೃತಕ ಬೆಳಕು) ಕೋಶಗಳನ್ನು ದ್ಯುತಿವಿದ್ಯುಜ್ಜನಕ ಎಂದು ವಿವರಿಸಬಹುದು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |