ಸೌಪ್ತಿಕ ಪರ್ವ
ಸೌಪ್ತಿಕ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಹತ್ತನೆಯದು. ಸೌಪ್ತಿಕ ಪರ್ವವು ೨ ಉಪ ಪುಸ್ತಕಗಳು ಮತ್ತು ೧೮ ಅಧ್ಯಾಯಗಳನ್ನು ಹೊಂದಿದೆ. ಸೌಪ್ತಿಕ ಪರ್ವವು ಕುರುಕ್ಷೇತ್ರ ಯುದ್ಧದ ೧೮ನೇ ದಿನದ ನಂತರದ ರಾತ್ರಿ ಕೌರವರಲ್ಲಿ ನಾಲ್ಕು ಬದುಕುಳಿದಿರುವವರ ಪೈಕಿ ಮೂವರಾದ ಅಶ್ವತ್ಥಾಮ, ಕೃತವರ್ಮ ಮತ್ತು ಕೃಪಾಚಾರ್ಯರ ಸೇಡನ್ನು ವಿವರಿಸುತ್ತದೆ.