ಸೋಲಾರಿಸ್ (ಸೋಲಾರಿಸ್) ಕಾರ್ಯಾಚರಣಾ ವ್ಯವಸ್ಥೆ
ಸೋಲಾರಿಸ್ (ಸೋಲಾರಿಸ್) ಎಂಬುದು, 1992ರಲ್ಲಿ ಮರುನಾಮಕರಣವಾದ ಸನ್ ಮೈಕ್ರೊಸಿಸ್ಟಮ್ಸ್ SunOSನ Unix ಕಾರ್ಯಾಚರಣಾ ವ್ಯವಸ್ಥೆಯಾಗಿದೆ. ಜನವರಿ 2010ರಲ್ಲಿ ಒರಾಕಲ್ ಸನ್‌ನ್ನು ತನ್ನ ಸ್ವಾಮ್ಯಕ್ಕೆ ಪಡೆದುಕೊಂಡ ನಂತರ, ಸೋಲಾರಿಸ್ ಈಗ ಒರಾಕಲ್ ಸೋಲಾರಿಸ್ ಎಂದು ಚಿರಪರಿಚಿತವಾಗಿ, ಒರಾಕಲ್ ಕಾರ್ಪೊರೇಷನ್‌ನ ಸ್ವತ್ತಾಗಿದೆ.[೧]
ಚಿತ್ರ:Oracle Solaris logo.png | |
ಡೆವಲಪರ್ಗಳು | Oracle Corporation |
---|---|
ಪ್ರೋಗ್ರಾಮಿಂಗ್ ಭಾಷೆ | C |
ಆಪರೇಟಿಂಗ್ ಸಿಸ್ಟಮ್ ಕುಟುಂಬ | Unix |
ಕೆಲಸದ ಸ್ಥಾನ | Current |
ಮೂಲ ಮಾದರಿ | Mixed open source / closed source |
ಆರಂಭಿಕ ಬಿಡುಗಡೆ | 1992 |
ಇತ್ತೀಚಿನ ಸ್ಥಿರ ಆವೃತ್ತಿ | 10 10/09 / ಅಕ್ಟೋಬರ್ 8, 2009 |
ಮಾರುಕಟ್ಟೆ ಗುರಿ | Workstation, Server |
ಭಾಷೆಗಳಲ್ಲಿ ಲಭ್ಯ | English |
ಪ್ಲಾಟ್‌ಫಾರ್ಮ್ | SPARC64, IA-32, x86-64 |
ಕರ್ನಲ್ ಪ್ರಕಾರ | Monolithic |
ಪ್ರಾಥಮಿಕ ಯೂಸರ್ ಇಂಟರ್ಫೆಸ್ | Java Desktop System or CDE |
ಲೈಸೆನ್ಸ್ | Various |
ಅಧಿಕೃತ ಜಾಲತಾಣ | oracle.com/solaris |
ಸೋಲಾರಿಸ್ ವಿಶಿಷ್ಟವಾಗಿ SPARC ವ್ಯವಸ್ಥೆಗಳ ಮೇಲೆ ಆರೋಹ್ಯತಾ ಲಕ್ಷಣಗಳು ಹಾಗೂ DTrace ಮತ್ತು ZFSನಂತಹ ಹಲವು ನವೀನ ಲಕ್ಷಣಗಳಿಗೆ ಮೂಲವಾಗಿರುವುದರಿಂದ ಚಿರಪರಿಚಿತವಾಗಿದೆ.[೨][೩] ಸನ್ ಮತ್ತು ಇತರೆ ಪೂರೈಕೆದಾರರು ನೀಡುವ SPARC-ಆಧಾರಿತ ಹಾಗೂ x86-ಆಧಾರಿತ ಕಾರ್ಯಕ್ಷೇತ್ರಗಳು ಮತ್ತು ಕೇಂದ್ರೀಕೃತ ಸಂಪನ್ಮೂಲ ಕಂಪ್ಯೂಟರ್ (ಸರ್ವರ್)ಗಳನ್ನು ಸೋಲಾರಿಸ್ ಬೆಂಬಲಿಸುತ್ತದೆ. ಇದೀಗ ಇತರೆ ಹೆಚ್ಚುವರಿ ವೇದಿಕೆಗಳಿಗೆ ಸರಿಹೊಂದುವಂತೆ ಸೋಲಾರಿಸ್ ರೂಪಾಂತರ ಮಾಡಲು ಯತ್ನಿಸಲಾಗುತ್ತಿದೆ.
ಸಿಂಗಲ್ ಯೂನಿಕ್ಸ್ ಸ್ಪೆಸಿಫಿಕೇಶನ್‌ಗಾಗಿ ಸೋಲಾರಿಸ್ ಪ್ರಮಾಣೀಕೃತವಾಗಿದೆ.
ಹಿಂದೆ ಸೋಲಾರಿಸ್‌ನ್ನು ಸ್ವಾಮ್ಯದ ತಂತ್ರಾಂಶವಾಗಿ ಅಭಿವೃದ್ಧಿಗೊಳಿಸಲಾಗಿದ್ದರೂ, ಎಲ್ಲಾ ಪ್ರಮುಖ ಸರ್ವರ್ ಕಂಪ್ಯೂಟರ್ ತಯಾರಕರು ನಿರ್ಮಿಸುವ ವ್ಯವಸ್ಥೆಗಳೂ ಇದನ್ನು ಬೆಂಬಲಿಸುತ್ತವೆ. ಇದರ ಬಹುತೇಕ ಕೋಡ್‌ಬೇಸ್ ಈಗ ಓಪನ್ ಸೋಲಾರಿಸ್ ಪ್ರಾಜೆಕ್ಟ್ ಮೂಲಕ ಓಪನ್ ಸೋರ್ಸ್ ಸಾಫ್ಟ್‌ವೇರ್ (ಮುಕ್ತ ಮೂಲ ತಂತ್ರಾಂಶ) ಆಗಿದೆ.
ಇತಿಹಾಸ
ಬದಲಾಯಿಸಿಆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಅತಿ ಜನಪ್ರಿಯ Unix ರೂಪಾಂತರಗಳಾದ BSD, System V ಹಾಗೂ ಝೆನಿಕ್ಸ್‌ಕಾರ್ಯಾಚರಣಾ ವ್ಯವಸ್ಥೆಗಳನ್ನು ವಿಲೀನಗೊಳಿಸುವ ಒಂದು ಯೋಜನೆಯಲ್ಲಿ ಸಹಯೋಗಿಗಳಾಗಲಿದ್ದೇವೆ ಎಂದು AT&T ಮತ್ತು ಸನ್ ಉದ್ದಿಮೆಗಳು ಇಸವಿ 1987ರಲ್ಲಿ ಘೋಷಿಸಿದವು. ಇದು ಯೂನಿಕ್ಸ್ ಸಿಸ್ಟಮ್ V ರಿಲೀಸ್ 4 (SVR4) ಆಗುವುದಿತ್ತು.[೪]
ದಿನಾಂಕ 4 ಸೆಪ್ಟೆಂಬರ್ 1991ರಂದು, ಸನ್ ತನ್ನ ಪ್ರಸ್ತುತ SunOS 4 ಎಂಬ BSD-ಆಧಾರಿತ Unixನ ಸ್ಥಾನದಲ್ಲಿ SVR4 ಅಧಾರಿತ ವ್ಯವಸ್ಥೆಯನ್ನು ಬದಲಿಸುವುದಾಗಿ ಘೋಷಿಸಿತು. ಇದನ್ನು ಆಂತರಿಕವಾಗಿ SunOS 5 ಎಂದು ಉಲ್ಲೇಖಿಸಲಾಯಿತು. ಆದರೆ ಅದೇ ಸಮಯ, ಮಾರುಕಟ್ಟೆಗಾಗಿ ಸೋಲಾರಿಸ್ 2 ಎಂಬ ಹೊಸ ನಾಮಕರಣವನ್ನು ಪರಿಚಯಿಸಲಾಯಿತು.[೫] SunOS 4.1.x ಸೂಕ್ಷ್ಮಪ್ರಮಾಣದ ಆವೃತ್ತಿಗಳನ್ನು ಸನ್ ಪೂರ್ವಾನ್ವಯವಾಗಿ ಸೋಲಾರಿಸ್ 1 ಎಂದು ನಾಮಕರಣ ಮಾಡಿದ್ದರೆ, ಸೋಲಾರಿಸ್ ಹೆಸರನ್ನು SVR4-ಆಧಾರಿತ SunOS 5.0 ಹಾಗೂ ಆನಂತರದ ಆವೃತ್ತಿಗಳನ್ನು ಉಲ್ಲೇಖಿಸಲು ಬಹುಶಃ ವಿಶಿಷ್ಟವಾಗಿ ಬಳಸಲಾಗಿದೆ.[೬]
ಈ ಹೊಸ 'ಓವರ್‌ಬ್ರಾಂಡ್' ಸಮರ್ಥನೆಯೇನೆಂದರೆ, ಇದು ಕೇವಲ SunOS (ಸನ್ ಕಾರ್ಯಾಚರಣಾ ವ್ಯವಸ್ಥೆ) ಮಾತ್ರವಲ್ಲ, ಜೊತೆಗೆ OpenWindows (ಒಪನ್‌ವಿಂಡೋಸ್) ಗ್ರಾಫಿಕಲ್ ಯ್ಯೂಸರ್ ಇಂಟರ್‌ಫೇಸ್ (ಚಿತ್ರಿತ ಬಳಕೆದಾರ ದೃಶ್ಯಪ್ರಾತಿನಿಧ್ಯ) ಹಾಗೂ Open Network Computing (ಮುಕ್ತ ಜಾಲ ಕಂಪ್ಯೂಟಿಂಗ್) (ONC) ಕಾರ್ಯಪ್ರವೃತ್ತಿಯನ್ನೂ ಸಹ ಒಳಗೊಂಡಿರುತ್ತದೆ. SunOS ಕಿರು-ಆವೃತ್ತಿಯನ್ನು ಸೋಲಾರಿಸ್ ಆವೃತ್ತಿಯ ಕ್ರಮಸಂಖ್ಯೆಯಲ್ಲಿ ಸೇರಿಸಲಾಗಿದೆ. ಉದಾಹರಣೆಗೆ, ಸೋಲಾರಿಸ್ 2.4 SunOS 5.4ನ್ನು ಒಳಗೊಂಡಿರುವುದು. ಸೋಲಾರಿಸ್ 2.6 ನಂತರ ಸನ್ ಇದರ ಕ್ರಮಸಂಖ್ಯೆಯಿಂದ '2.'ನ್ನು ತೆಗೆಯಿತು. ಹಾಗಾಗಿ, ಸೋಲಾರಿಸ್ 7 SunOS 5.7ನ್ನು ಒಳಗೊಂಡಿರುತ್ತದೆ. ಇತ್ತೀಚೆಗಿನ ಬಿಡುಗಡೆ SunOS 5.10 ಸೋಲಾರಿಸ್ 10 ರ ಕೇಂದ್ರಬಿಂದುವಾಗಿದೆ.
ಬೆಂಬಲಿತ ರಚನೆಗಳು
ಬದಲಾಯಿಸಿಸೋಲಾರಿಸ್ ತಾನು ಬೆಂಬಲಿಸುವ ವೇದಿಕೆಗಳಿಗಾಗಿ ಸಾಮಾನ್ಯ code base (ಕೋಡ್ ಬೇಸ್) ಬಳಸುತ್ತದೆ: SPARC ಹಾಗೂ i86pc (ಇದು x86 ಮತ್ತು x86-64 ಎರಡನ್ನೂ ಒಳಗೊಂಡಿರುತ್ತದೆ).[೭]
ಹಲವು CPUಗಳನ್ನು ಬೆಂಬಲಿಸುವ ಸೋಲಾರಿಸ್, symmetric multiprocessing (ಸಮ್ಮಿತೀಯ ಬಹು-ಸಂಸ್ಕರಣ) ಕಾರ್ಯಕ್ಕೆ ಸರಿಹೊಂದುವ ಖ್ಯಾತಿಯನ್ನು ಗಳಿಸಿದೆ.[೮]
(ಸೋಲಾರಿಸ್ 7ರ ನಂತರ 64-ಬಿಟ್ SPARC ಅನ್ವಯಿಕ ತಂತ್ರಾಂಶಗಳಿಗೆ ಬೆಂಬಲವನ್ನು ಸೇರಿಸಿ) ಇದು ಸನ್‌ನ SPARC ಹಾರ್ಡ್‌ವೇರ್ ಜತೆ ಐತಿಹಾಸಿಕವಾಗಿ ನಿಕಟ ಏಕೀಕೃತವಾಗಿದೆ. ಹಾಗಾಗಿ ಇದನ್ನು ಸಂಯುಕ್ತ ಪ್ಯಾಕೇಜ್ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ಇದು ಇನ್ನಷ್ಟು ವಿಶ್ವಾಸಾರ್ಹ ವ್ಯವಸ್ಥೆಗಳಿಗೆ ಕಾರಣವಾಗಿದೆ, ಆದರೆ ಅವು ಉಪಯುಕ್ತ PC ಯಂತ್ರಾಂಶಕ್ಕಿಂತಲೂ ಹೆಚ್ಚು ಬೆಲೆಗೆ ಲಭ್ಯವಾಗಿವೆ. ಸೋಲಾರಿಸ್ 2.1ರಿಂದ ಹಿಡಿದು x86 ವ್ಯವಸ್ಥೆಗಳನ್ನು ಸಹ ಬೆಂಬಲಿಸಿದೆ. ಇತ್ತೀಚೆಗಿನ ಆವೃತ್ತಿಯಾದ ಸೋಲಾರಿಸ್ 10 64-ಬಿಟ್ x86 ಆನ್ವಯಿಕ ತಂತ್ರಾಂಶಗಳಿಗೆ ಬೆಂಬಲಗಳನ್ನು ಹೊಂದಿರುತ್ತವೆ. ಇದರಿಂದಾಗಿ ಸನ್, x86-64 ರಚನೆಯನ್ನಾಧರಿಸಿದ ಉಪಯುಕ್ತ 64-ಬಿಟ್ CPUಗಳ ಲಭ್ಯತೆಯ ಅನುಕೂಲ ಪಡೆಯಬಹುದಾಗಿದೆ. AMD ಆಪ್ಟೆರಾನ್ ಮತ್ತು ಇಂಟೆಲ್ ಕ್ಸಿಯಾನ್ ಸಂಸ್ಕಾರಕಗಳನ್ನಾಧರಿಸುವ ತಮ್ಮದೇ ಆದ "x64" ಕಾರ್ಯಕ್ಷೇತ್ರಗಳು ಮತ್ತು ಸರ್ವರ್‌ಗಳು ಹಾಗೂ ಡೆಲ್, ಹ್ಯೂಲೆಟ್-ಪ್ಯಾಕಾರ್ಡ್ ಮತ್ತು IBM ಉದ್ದಿಮೆಗಳು ತಯಾರಿಸುವ x86 ವ್ಯವಸ್ಥೆಗಳಲ್ಲಿ ಬಳಕೆಗಾಗಿ ಸನ್, ಸೋಲಾರಿಸ್‌ನ್ನು ಜೋರಾಗಿ ಮಾರಾಟ ಮಾಡುತ್ತಿದೆ. ಇಸವಿ 2009ರಲ್ಲಿ, ಕೆಳಕಂಡ ಮಾರಾಟಗಾರರು ತಮ್ಮ x86 ಸರ್ವರ್ ವ್ಯವಸ್ಥೆಗಳಿಗಾಗಿ ಸೋಲಾರಿಸ್ ಬೆಂಬಲಿಸುತ್ತಾರೆ:
- ಡೆಲ್ ತನ್ನ ಸರ್ವರ್‌ಗಳಲ್ಲಿ ಸೋಲಾರಿಸ್ ಪರೀಕ್ಷಿಸಿ, ಪ್ರಮಾಣೀಕರಿಸಿ, ಅತ್ಯುತ್ತಮಗೊಳಿಸಿ, ತನ್ನ ಒಟ್ಟು ಡೆಲ್ ತಂತ್ರಾಂಶ ಮೆನ್ಯುಗಳಲ್ಲಿ ಆ ಸರ್ವರ್‌ಗಳನ್ನು ಹಲವು ಆಯ್ಕೆಗಳಲ್ಲಿ ಒಂದನ್ನಾಗಿ ಪ್ರಸ್ತುತಗೊಳಿಸಲಿದೆ.[೯]
- IBM ಸಹ ಆಯ್ದ x86-ಆಧಾರಿತ IBM ಸಿಸ್ಟಮ್ x ಸರ್ವರ್ ಮತ್ತು ಬ್ಲೇಡ್‌ಸೆಂಟರ್ ಸರ್ವರ್‌ಗಳಿಗಾಗಿ ಸೋಲಾರಿಸ್ ಮತ್ತು ಸೋಲಾರಿಸ್ ಸಬ್‌ಸ್ಕ್ರಿಪ್‌ಶನ್‌ಗಳನ್ನು ವಿತರಿಸುತ್ತದೆ.[೧೦]
- ಇಂಟೆಲ್[೧೧]
- ಹ್ಯೂಲೆಟ್ ಪ್ಯಾಕಾರ್ಡ್ [೧೨] ProLiant ಸರ್ವರ್ ಮತ್ತು ಬ್ಲೇಡ್ ಸಿಸ್ಟಮ್‌ಗಳ ಮೇಲೆ ಸೋಲಾರಿಸ್‌ಗಾಗಿ ತಂತ್ರಾಂಶ ತಾಂತ್ರಿಕ ನೆರವನ್ನು ವಿತರಿಸಿ ಒದಗಿಸುತ್ತದೆ.
- ಫುಜಿಟ್ಸು ಸೀಮೆನ್ಸ್ [೧೩]
ಇತರೆ ತಂತ್ರಾಂಶ ವೇದಿಕೆಗಳು
ಬದಲಾಯಿಸಿಸೋಲಾರಿಸ್ 2.5.1 PowerPC ತಂತ್ರಾಂಶ-ವೇದಿಕೆಗಾಗಿ ([[PowerPC Reference Platform (ಪಾವರ್‌ಪಿಸಿ ಉಲ್ಲೇಖ ತಂತ್ರಾಂಶ-ವೇದಿಕೆ) ಬೆಂಬಲವನ್ನು ಒಳಗೊಂಡಿತ್ತು, ಆದರೆ ಸೋಲಾರಿಸ್ 2.6 ಆವೃತ್ತಿ ಬಿಡುಗಡೆಯಾಗುವ ಮುಂಚೆ ಇದನ್ನು ರದ್ದುಗೊಳಿಸಲಾಯಿತು.|PowerPC Reference Platform (ಪಾವರ್‌ಪಿಸಿ ಉಲ್ಲೇಖ ತಂತ್ರಾಂಶ-ವೇದಿಕೆ) ಬೆಂಬಲವನ್ನು ಒಳಗೊಂಡಿತ್ತು, ಆದರೆ ಸೋಲಾರಿಸ್ 2.6 ಆವೃತ್ತಿ ಬಿಡುಗಡೆಯಾಗುವ ಮುಂಚೆ ಇದನ್ನು ರದ್ದುಗೊಳಿಸಲಾಯಿತು.[೧೪]]]
ಜನವರಿ 2006ರಲ್ಲಿ ಬ್ಲ್ಯಾಸ್ಟ್‌ವೇವ್‌ನಲ್ಲಿ ತಂತ್ರಾಂಶ ಅಭಿವೃದ್ಧಿಗೊಳಿಸುವವರ ಸಮುದಾಯವು ಒಂದು PowerPC (ಪವರ್‌ಪಿಸಿ) ಪೋರ್ಟ್ ಕುರಿತು ಕಾರ್ಯಾಚರಣೆ ನಡೆಸಿದರು. ಇದಕ್ಕೆ ಅವರು Polaris (ಪೋಲಾರಿಸ್) ಎಂಬ ಹೆಸರಿಟ್ಟರು.[೧೫] ಅಕ್ಟೋಬರ್ 2006ರಲ್ಲಿ, ಬ್ಲ್ಯಾಸ್ಟ್‌ವೇವ್ ಕಾರ್ಯಗಳು ಹಾಗೂ ಸನ್ ಲ್ಯಾಬ್ಸ್‌ನ ಪ್ರಾಜೆಕ್ಟ್ ಪಲ್ಸಾರ್ ಆಧರಿಸಿದ ಓಪನ್ ಸೋಲಾರಿಸ್ ಸಮುದಾಯ ಯೋಜನೆ [೧೬], ಪುನಃ ಸೋಲಾರಿಸ್ 2.5.1ರ ಅಂಶಗಳನ್ನು ಓಪನ್‌ಸೋಲಾರಿಸ್‌ನೊಳಗೆ ಪುನಃ ಸೇರಿಸಿ [೧೪] ಮೊದಲ ಅಧಿಕೃತ ಮೂಲ ಕೋಡ್ ಆವೃತ್ತಿಯನ್ನು ಘೋಷಿಸಿತು.[೧೭]
ಇಸವಿ 1997ರಲ್ಲಿ ಇಂಟೆಲ್ ಇಟೆನಿಯಮ್ ರಚನೆಗೆ ಸೋಲಾರಿಸ್ ಪೋರ್ಟ್‌ನ್ನು ಘೋಷಿಸಲಾಗಿತ್ತು, ಆದರೆ ಅದನ್ನು ಮಾರುಕಟ್ಟೆಗೆ ಪರಿಚಯಿಸಲಾಗಲಿಲ್ಲ.[೧೮]
z/VMನ ಅಡಿ IBM ಸಿಸ್ಟಮ್ z ಮೇಯ್ನ್‌ಫ್ರೇಮ್ ಆಧರಿಸಿ ಚಾಲನೆಯಾದ System zಗಾಗಿ ಸಿರಿಯಸ್ ಎಂಬ ಹೆಸರಿನ Openಸೋಲಾರಿಸ್‌ನ ಪೂರ್ವಪ್ರದರ್ಶನವನ್ನು IBM, ಸನ್ ಹಾಗೂ ಸೈನ್ ನೊಮೀನ್ ಅಸೋಷಿಯೇಟ್ಸ್ 28 ನವೆಂಬರ್ 2007ರಂದು ನಡೆಸಿದರು [೧೯] (ಇದು ಪೋಲಾರಿಸ್ ಪ್ರಾಜೆಕ್ಟ್‌ಗೆ ಸದೃಶವಾಗಿತ್ತು; ಅಲ್ಲದೇ, ಇದರ ಪ್ರಮುಖ ಅಭಿವೃದ್ಧಿಗಾರ ಆಸ್ಟ್ರೇಲಿಯಾದವರಾಗಿದ್ದರು; HMS ಸಿರಿಯಸ್ ಎಂಬುದು 1786ರಲ್ಲಿ ಆಸ್ಟ್ರೇಲಿಯಾವನ್ನು ಪರಿಶೋಧಿಸಲು ಹೊರಟ ಮೊದಲ ಹಡಗುಗಳ ಸಮೂಹದಲ್ಲಿ ಒಂದಾಗಿತ್ತು).
ದಿನಾಂಕ 17 ಅಕ್ಟೋಬರ್ 2008ರಂದು ಸಿರಿಯಸ್‌ನ ಮೂಲರೂಪ ಆವೃತ್ತಿಯನ್ನು ಲಭ್ಯಗೊಳಿಸಲಾಯಿತು.[೨೦] ಅದೇ ವರ್ಷ 19 ನವೆಂಬರ್‌ರಂದು ಸಿಸ್ಟಮ್ z IFL ಸಂಸ್ಕಾರಕಗಳ ಮೇಲೆ ಸಿರಿಯಸ್ ಬಳಕೆಗೆ IBM ಮಂಜೂರು ಮಾಡಿತು.[೨೧]
ಸೋಲಾರಿಸ್ ABI ಎಂಬ Linux ತಂತ್ರಾಂಶವೇದಿಕೆಯನ್ನೂ ಬೆಂಬಲಿಸುತ್ತದೆ. ಇದರಿಂದಾಗಿ ಸೋಲಾರಿಸ್ x86 ವ್ಯವಸ್ಥೆಗಳ ಮೇಲೆ ಸ್ಥಳೀಯ Linux ದ್ವಿಮಾನಗಳನ್ನು ನಡೆಸಬಹುದಾಗಿದೆ. ಈ ಲಕ್ಷಣವನ್ನು 'Linux ಆನ್ವಯಿಕೆಗಳಿಗಾಗಿ ಸೋಲಾರಿಸ್ ಕಂಟೇನರ್‌ಗಳು' (SCLA) ಎನ್ನಲಾಗುತ್ತಿತ್ತು. ಇದು ಸೋಲಾರಿಸ್ 10 8/07ರಲ್ಲಿ ಪರಿಚಯಿಸಲಾದ ಬ್ರ್ಯಾಂಡೆಡ್ ಜೋನ್ಸ್ ಕಾರ್ಯಚಟುವಟಿಕೆಗಳನ್ನು ಆಧರಿಸಿ ಈ ಹೆಸರನ್ನಿಡಲಾಗಿತ್ತು.[೨೨]
ಅಳವಡಿಸುವ ಮತ್ತು ಬಳಕೆಯ ಆಯ್ಕೆಗಳು
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(February 2010) |
ಸೋಲಾರಿಸ್‌ನ್ನು ವಿವಿಧ ಪ್ಯಾಕೇಜ್ ಆಗಿರುವ ತಂತ್ರಾಂಶ ಗುಂಪುಗಳಿಂದ ಅಳವಡಿಸಬಹುದು. ಕನಿಷ್ಠಪಕ್ಷದ 'ಕಡಿಮೆಗೊಳಿಸಿದ ಜಾಲ ನೆರವು' ಇಂದ ಹಿಡಿದು ಸಂಪೂರ್ಣವಾದ 'ಎಂಟೈರ್ ಪ್ಲಸ್ OEM' ತನಕ ವಿವಿಧ ಪ್ರಮಾಣಗಳಲ್ಲಿ ಸೋಲಾರಿಸ್ ಲಭ್ಯವಿದೆ. ವ್ಯಕ್ತಿಯೊಬ್ಬ ವ್ಯವಸ್ಥೆಯನ್ನು ಬಳಸಲು ಸೋಲಾರಿಸ್ ಅಳವಡಿಕೆಯ ಅಗತ್ಯವಿಲ್ಲ.
ಅಳವಡಿಸುವಿಕೆಯೊಂದಿಗೆ ಬಳಕೆ
ಬದಲಾಯಿಸಿಸೋಲಾರಿಸ್ ಅನ್ನು ಡೆಸ್ಕ್‌ಟಾಪ್ ಅಥವಾ ಸರ್ವರ್‌ನಲ್ಲಿ ಅಳವಡಿಸಲು ದೈಹಿಕ ಮಾಧ್ಯಮ ಅಥವಾ ಜಾಲದಿಂದ ಅಳವಡಿಸಬಹುದಾಗಿದೆ.
ಸೋಲಾರಿಸ್‌ಅನ್ನು ತಂತ್ರಾಂಶ-ವೇದಿಕೆಗಳಲ್ಲಿ ಟೆಕ್ಸ್ಟ್ ಕನ್ಸೋಲ್‌ನಿಂದ ವೀಡಿಯೊ ದೃಶ್ಯ ಮತ್ತು ಮೌಸ್ ಇಲ್ಲದೆ ಅಂತರ್‌ಕ್ರಿಯೆ ನಡೆಸುವ ಮೂಲಕ ಅಳವಡಿಸಬಹುದಾಗಿದೆ. ಸರ್ವರ್‌ಗಾಗಿ, ಪಂಕ್ತಿಯೊಂದರಲ್ಲಿ, ದೂರದ ದತ್ತಾಂಶ ಕೇಂದ್ರದಲ್ಲಿ ಟರ್ಮಿನಲ್ ಸರ್ವರ್‌ನಿಂದ ಅಥವಾ ಡಯಲಪ್ ಮೊಡೆಮ್ ಮೂಲಕವೂ ಸಹ ಆಯ್ಕೆ ಮಾಡಬಹುದಾಗಿದೆ.
ಸೋಲಾರಿಸ್ ಗ್ರ್ಯಾಫಿಕಲ್ ಕಾನ್ಸೊಲ್‌ನಿಂದ ಪರಸ್ಪರಕಾರ್ಯದ ಮೂಲಕ ಅಳವಡಿಸಬಹುದಾಗಿದೆ.
ಕಾಂಸೊಲ್‌ನ್ನು ಸಾಮಾನ್ಯವಾಗಿ ಬಳಸುವಂತಹ ಸ್ಥಳೀಯ ಪ್ರದೇಶದ ವೈಯಕ್ತಿಕ ಕಾರ್ಯಕ್ಷೇತ್ರಗಳು ಅಥವಾ ಲ್ಯಾಪ್‌ಟಾಪ್‌ಗಳಿಗಾಗಿ ಆಯ್ಕೆ ಮಾಡಬಹುದು.
ಸೋಲಾರಿಸ್‌ಅನ್ನು ಜಾಲದಲ್ಲಿ ಸ್ವಯಂಚಾಲಿತವಾಗಿ ಅಳವಡಿಸಬಹುದಾಗಿದೆ. ತೃತೀಯ ಪಕ್ಷದ ತಂತ್ರಾಂಶಗಳ ಸಂರಚನೆ ಮತ್ತು ಸ್ವಯಂಚಾಲಿತ ಅಳವಡಿಸುವಿಕೆ ಸೇರಿದಂತೆ ತಂತ್ರಾಂಶ ಸ್ಕ್ರಿಪ್ಟ್‌ಗಳು ಮತ್ತು ಸಂರಚನೆಯ ಕಡತಗಳೊಂದಿಗೆ, ಸಿಸ್ಟಮ್ ಅಡ್ಮಿನಿಸ್ಟ್ರೇಟರ್‌ಗಳು (ಕಂಪ್ಯೂಟರ್ ವ್ಯವಸ್ಥಾ ಮೇಲ್ವಿಚಾರಕರು) ಅಳವಡಿಕೆಗಳನ್ನು ಗ್ರಾಹಕೀಯಗೊಳಿಸಬಹುದಾಗಿದೆ.ಯಾವುದೇ ಹೆಚ್ಚುವರಿ ತಂತ್ರಾಂಶ ವ್ಯವಸ್ಥಾಪನಾ ಕಡತಗಳನ್ನು ಖರೀದಿಸದೆ ಇದನ್ನು ಅಳವಡಿಸಬಹುದು.
ಸೋಲಾರಿಸ್ ಅಳವಡಿಸಿದಾಗ, ಅಳವಡಿಸುವ ಕಾರ್ಯ ನಡೆದ ಕಂಪ್ಯೂಟರ್‌ನಲ್ಲೇ ಕಾರ್ಯನಿರ್ವಹಣೆ ವ್ಯವಸ್ಥೆಯು ಸೇರಿಕೊಳ್ಳುತ್ತದೆ. ಆನ್ವಯಿಕೆಗಳನ್ನು ಒಂದೊಂದಾಗಿ ಸ್ಥಳೀಯ ವ್ಯವಸ್ಥೆಗಳಲ್ಲಿ ಅಳವಡಿಸಬಹುದು, ಅಥವಾ ದೂರದ ವ್ಯವಸ್ಥೆಯಿಂದ ಜಾಲದ ಮೂಲಕ ಅಳವಡಿಸಬಹುದಾಗಿದೆ.
ಅಳವಡಿಸದೇ ಬಳಕೆ
ಬದಲಾಯಿಸಿಡೆಸ್ಕ್ಟಾಪ್ ಕಂಪ್ಯೂಟರ್ ಅಥವಾ ಸರ್ವರ್‌ನಲ್ಲಿ ಕಾರ್ಯಾಚರಣೆ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಅಳವಡಿಸದೇ ಸೋಲಾರಿಸ್ ಬಳಸಬಹುದಾಗಿದೆ.
ಡಿಸ್ಕ್-ರಹಿತ ತಾಂತ್ರಿಕ ಪರಿಸರಲ್ಲಿ, ಸೋಲಾರಿಸ್ ಅಳವಡಿಸಲಾಗಿರುವ, OS ವ್ಯವಸ್ಥೆಯುಳ್ಳ ದೂರದ ಸರ್ವರ್‌ನಿಂದ ಸೋಲಾರಿಸ್ ಸಜ್ಜುಗೊಳಿಸಬಹುದು; ಅಥವಾ, ಕೇವಲ ಲಭ್ಯ-ಜಾಗ ವಿನಿಮಯಕ್ಕಾಗಿ ಆಂತರಿಕ ಡಿಸ್ಕ್ ಹೊಂದಿರುವ ತಾಂತ್ರಿಕ ಪರಿಸರದಲ್ಲಿ ಬಳಸಬಹುದಾಗಿದೆ. ಇಂತಹ ತಾಂತ್ರಿಕ ವಿನ್ಯಾಸದಲ್ಲಿ, ನಿರ್ವಹಣಾ ವ್ಯವಸ್ಥೆಯು ಕಂಪ್ಯೂಟರ್‌ನಲ್ಲಿ ಇನ್ನೂ ಸ್ಥಳೀಯವಾಗಿ ನಡೆಯುತ್ತದೆ. ಆನ್ವಯಿಕೆಗಳು ನಡೆಯುತ್ತಿರುವಾಗ ಸ್ಥಳೀಯವಾಗಿರಬಹುದು ಅಥವಾ ಇಲ್ಲದಿರಬಹುದು. ಬಹಳ ತ್ವರಿತವಾದ ಸೆಟಪ್‌ನ ಅಗತ್ಯವಿರುವ ವಾಣಿಜ್ಯ ಉದ್ದಿಮೆಗಳು ಅಥವಾ ಶೈಕ್ಷಣಿಕ ಸಂಸ್ಥೆಗಳಿಗಾಗಿ ಇಂತಹ ವ್ಯವಸ್ಥೆಯನ್ನು ಆಯ್ದುಕೊಳ್ಳಬಹುದಾಗಿದೆ (ಕಾರ್ಯಕ್ಷೇತ್ರಗಳನ್ನು ಲೋಡಿಂಗ್ ಡಾಕ್‌ನಿಂದ ಬೇರ್ಪಡಿಸಬಹುದು, ಕೇಂದ್ರೀಯ ಸರ್ವರ್‌ನಲ್ಲಿ MAC ಅಡ್ರೆಸ್‌ನ್ನು ದಾಖಲಿಸಬಹುದು, ಕಾರ್ಯಕ್ಷೇತ್ರವನ್ನು ಜಾಲದಲ್ಲಿ ಪುನಃ ಸೇರಿಸಿದ ಕೂಡಲೇ ಬಳಕೆದಾರರು ಈ ಡೆಸ್ಕ್‌ಟಾಪ್‌ನ್ನು ಕೂಡಲೇ ತಮ್ಮ ಹತೋಟಿಗೆ ತರಬಹುದಾಗಿದೆ.) ಇದಲ್ಲದೆ,ಶೀಘ್ರ ಹೊಸ ಬದಲಾವಣೆ ಅಗತ್ಯವಾಗಿರುತ್ತದೆ.( ಡೆಸ್ಕ್‌ಟಾಪ್ ಹಾರ್ಡ್‌ವೇರ್ ವೈಫಲ್ಯ ಉಂಟಾದಲ್ಲಿ, ಹೊಸ ಕಾರ್ಯಕ್ಷೇತ್ರವನ್ನು ತಂದು, ಎಲ್ಲಾ ಅಗತ್ಯ ತಂತಿಗಳನ್ನು ಜೋಡಿಸಿ, ಪ್ಲಗ್-ಇನ್ ಮಾಡಿದ ಕೂಡಲೇ ಬಳಕೆದಾರರು ತಮ್ಮ ಕೆಲಸವನ್ನು ಯಾವ ಹಂತದಲ್ಲಿ ನಿಲ್ಲಿಸಲಾಗಿತ್ತೋ ಅಲ್ಲಿಂದ ಪುನಃ ಆರಂಭಗೊಳಿಸಬಹುದು).
ಸೋಲಾರಿಸ್ X ಟರ್ಮಿನಲ್‌ನಿಂದ ಬಳಸಬಹುದಾಗಿದೆ. ಒಳಗೆ ಸೇರಿಸಲಾದ ಅಥವಾ ಜಾಲಕ್ಕೆ ಲಭ್ಯವಿರುವ ಫರ್ಮ್‌ವೇರ್‌ನಿಂದ ಸೋಲಾರಿಸ್ ಸಜ್ಜುಗೊಳಿಸಿ, ಡೆಸ್ಕ್‌ಟಾಪ್ ಪರದೆಯನ್ನು ಬಳಕೆದಾರನಿಗೆ ಪ್ರದರ್ಶಿಸಬಹುದಾಗಿದೆ. ಒಂದು ಅಥವಾ ಹಲವು ಸರ್ವರ್‌ಗಳಲ್ಲಿ ಆನ್ವಯಿಕೆಗಳು ಮತ್ತು ಕಾರ್ಯಾಚರಣಾ ವ್ಯವಸ್ಥೆಯು ಪರೋಕ್ಷವಾಗಿ ನಡೆಯಬಹುದು, ಆದರೆ ಗ್ರಾಫಿಕಲ್ ರೆಂಡರಿಂಗ್(ಕೆಲವೊಮ್ಮೆ ವಿಂಡೋ ಮ್ಯಾನೇಜರ್) ಸಹ X ಟರ್ಮಿನಲ್‌ಗೆ ಸ್ಥಳಾಂತರಿಸಲಾಗುತ್ತದೆ. ಡೆಸ್ಕ್‌ಟಾಪ್ ಕಂಪ್ಯೂಟರ್ ಯಂತ್ರಾಂಶ ವಿಫಲವಾದಲ್ಲಿ, X ಟರ್ಮಿನಲ್‌ನ್ನು ಸುಲಭವಾಗಿ ಬದಲಾಯಿಸಬಹುದು; ತಮ್ಮ ಇತ್ತೀಚೆಗಿನ ಸೇವಿಂಗ್ ಪಾಯಿಂಟ್‌ನಿಂದ ತಮ್ಮ ಕಾರ್ಯವನ್ನು ಮುಂದುವರೆಸಬಹುದು.
ಸೋಲಾರಿಸ್‌ನ್ನು ಒಂದು 'ಥಿನ್ ಕ್ಲೈಯಂಟ್(ಸರ್ವರ್ ಅವಲಂಬಿತ ಕಿರುಕಂಪ್ಯೂಟರ್) ನಿಂದಲೂ ಬಳಸಬಹುದಾಗಿದೆ. ಆನ್ವಯಿಕೆಗಳು, ಕಾರ್ಯಾಚರಣ ವ್ಯವಸ್ಥೆ, 'ವಿಂಡೋ ಮ್ಯಾನೇಜರ್' ಮತ್ತು ಗ್ರ್ಯಾಫಿಕಲ್ ರೆಂಡರಿಂಗ್ ಒಂದು ಅಥವಾ ಹೆಚ್ಚು ದೂರದ-ಸರ್ವರ್‌ಗಳಲ್ಲಿ ನಡೆಯುತ್ತವೆ. ಕಂಪ್ಯೂಟರ್ ಜಾಲ ವ್ಯವಸ್ಥೆಯ ಮೇಲ್ವಿಚಾರಕರು (ಅಡ್ಮಿನಿಸ್ಟ್ರೇಟರ್‌ಗಳು) ಕೇಂದ್ರೀಯ ಸೋಲಾರಿಸ್ ವ್ಯವಸ್ಥೆಗೆ ಹೊಸ ಬಳಕೆದಾರ ಖಾತೆಯನ್ನು ಸೃಷ್ಟಿಸಬಹುದು. ಹೊಸ ಥಿನ್ ಕ್ಲೈಂಟ್‌ನ್ನು ತೆಗೆದು ಡೆಸ್ಕ್‌ಟಾಪ್‌ನಲ್ಲಿರಿಸಿ ಬಳಕೆದಾರರು ತಕ್ಷಣವೇ ತಮ್ಮ ಕೆಲಸ ಆರಂಭಿಸಬಹುದು. ಯಾವುದಾದರೂ ಯಂತ್ರಾಂಶ ವೈಫಲ್ಯವಾದಲ್ಲಿ, ಥಿನ್ ಕ್ಲೈಂಟ್ ಬದಲಿಸಿ ಬಳಕೆದಾರರು ಕೆಲಸವು ಯಾವ ಹಂತದಲ್ಲಿ ಸ್ಥಗಿತವಾಗಿತ್ತೋ (ನಡೆಯುತ್ತಿದ್ದ ಕೆಲಸವು 'ಸೇವ್' ಆಗಿದೆಯೋ ಇಲ್ಲವೋ ಇದಕ್ಕೆ ಸಂಬಂಧವಿರುವುದಿಲ್ಲ) ಅಲ್ಲಿಂದಲೇ ಮುಂದುವರೆಸಬಹುದಾಗಿದೆ.
ಡೆಸ್ಕ್‌ಟಾಪ್ (ಕಂಪ್ಯೂಟರ್ ಪರದೆ) ತಾಂತ್ರಿಕ ಪರಿಸರಗಳು
ಬದಲಾಯಿಸಿಸೋಲಾರಿಸ್ ಆರಂಭಿಕ ಆವೃತ್ತಿಗಳು OpenWindowsನ್ನು ಪ್ರಮಾಣಿತ ಡೆಸ್ಕ್‌ಟಾಪ್ ತಾಂತ್ರಿಕ ಪರಿಸರವನ್ನಾಗಿ ಬಳಸಿಕೊಂಡವು. ಸೋಲಾರಿಸ್ 2.0ಯಿಂದ 2.2ರ ತನಕ, OpenWindows NeWS ಹಾಗೂ X ಆನ್ವಯಿಕೆಗಳನ್ನು ಬೆಂಬಲಿಸಿತು. ಜೊತೆಗೆ, ಸನ್‌ನ ಹಿಂದಿನ ಆವೃತ್ತಿಗಳನ್ನು ಆಧರಿಸಿದ SunView ಆನ್ವಯಿಕೆಗಳನ್ನು ಚಾಲಿಸಲು, backward compatibility (ಮುಂಚಿನ ಆವೃತ್ತಿ ಹೊಂದಾಣಿಕೆ) ಸೌಲಭ್ಯವನ್ನು ಸಹ ನೀಡಿತ್ತು. ಇಸವಿ 1982ರಲ್ಲಿ ಬಿಡುಗಡೆಯಾದ ಸಾಮಾನ್ಯ ಮುದ್ರಣ ಭಾಷೆ PostScript (ಪೋಸ್ಟ್-ಸ್ಕ್ರಿಪ್ಟ್) ಬಳಸಿ ಮಾಹಿತಿ-ವಸ್ತು ಆಧಾರಿತ ರೀತಿಯಲ್ಲಿ ಆನ್ವಯಿಕೆಗಳನ್ನು ನಿರ್ಮಿಸಲು NeWS ಅವಕಾಶ ಕಲ್ಪಿಸಿತು. X ವಿಂಡೊ ಸಿಸ್ಟಮ್ 1984ರಲ್ಲಿ MITಯ ಪ್ರಾಜೆಕ್ಟ್ ಅಥೆನಾದಿಂದ ಉದ್ಭವವಾಯಿತು. ಜಾಲ ಸಂಪರ್ಕದಿಂದ ಪ್ರತ್ಯೇಕಗೊಂಡ, ಆನ್ವಯಿಕೆ ಚಾಲಿತವಾಗುತ್ತಿರುವ ಕಂಪ್ಯೂಟರ್‌ನಿಂದ ಈ ಅನ್ವಯಿಕೆಯ ಪ್ರದರ್ಶನದ ಸಂಪರ್ಕವನ್ನು ಕಳಚುವುದಕ್ಕೆ ಅವಕಾಶ ಕಲ್ಪಿಸಿತ್ತು. ಸನ್‌ನ ಮೂಲತಃ ಸಮಗ್ರ ಸನ್‌ವ್ಯೂ ಆನ್ವಯಿಕೆ ಸಂಪುಟವನ್ನು Xಗೆ ಪೋರ್ಟ್ ಮಾಡಲಾಯಿತು.
ಆನಂತರ, ಸೋಲಾರಿಸ್ 2.3 ಒಂದಿಗಿನ 'ಪರಂಪರಾಗತವಾದ' SunView ಆನ್ವಯಿಕೆಗಳು ಮತ್ತು NeWSಗಾಗಿ OpenWindows 3.3ನೊಂದಿಗಿನ ಬೆಂಬಲವನ್ನು ಸನ್ ಸ್ಥಗಿತಗೊಳಿಸಿತು. ಡಿಸ್ಪ್ಲೇ ಪೋಸ್ಟ್‌ಸ್ಕ್ರಿಪ್ಟ್ ಬೆಂಬಲ ಹೊಂದಿದ X11R5ಗೆ ಬದಲಾಯಿಸಿಕೊಂಡಿತು. ಚಿತ್ರಿತ ವಿನ್ಯಾಸಗಳು OPEN LOOK ಅಧರಿಸಿಯೇ ಉಳಿದುಕೊಂಡವು.OpenWindow 3.6.2, ಸೋಲಾರಿಸ್ 8ರ ಅಡಿ ಬಿಡುಗಡೆಯಾದ ಅಂತಿಮ ಆವೃತ್ತಿಯಾಗಿತ್ತು. ಸೋಲಾರಿಸ್ 9ರಲ್ಲಿ, ಇತರೆ ವಿಶಿಷ್ಟ OPEN LOOK ಆನ್ವಯಿಕೆಗಳೊಂದಿಗೆ OPEN LOOK ವಿಂಡೋ ಮ್ಯಾನೇಜರ್ (olwm)ನ್ನು ಸ್ಥಗಿತಗೊಳಿಸಲಾಯಿತು. ಆದರೆ, ಬೆಂಬಲ ಸಂಪುಟಗಳನ್ನು (ಸಪೋರ್ಟ್ ಲೈಬ್ರೆರೀಸ್) ಇನ್ನೂ ಒಟ್ಟುಗೂಡಿಸಿ ರವಾನಿಸಲಾಗುತ್ತಿತ್ತು. ಇದರಿಂದಾಗಿ, ಚಾಲ್ತಿಯಲ್ಲಿರುವ ಆನ್ವಯಿಕೆಗಳೊಂದಿಗೆ ದೀರ್ಘಕಾಲಿಕ ದ್ವಿಮಾನವಾದ 'ಮುಂಚಿನ ಆವೃತ್ತಿಗಳೊಂದಿಗೆ ಹೊಂದಾಣಿಕೆ' ಸೌಕರ್ಯ ಒದಗಿಸಿತು.
ಸೋಲಾರಿಸ್ಗಾಗಿ OPEN LOOK ವರ್ಚುಯಲ್ ವಿಂಡೋಸ್ ಮ್ಯಾನೇಜರ್ (olvwm)ನ್ನು sunfreeware (ಸನ್‌ಫ್ರೀವೇರ್) ನಿಂದ ಡೌನ್ಲೋಡ್ ಮಾಡಬಹುದಾಗಿದೆ. ಇದು ಸೋಲಾರಿಸ್ 10ರಂತಹ ಇತ್ತೀಚೆಗಿನ ಆವೃತ್ತಿಗಳ ಮೇಲೂ ಸಹ ಕೆಲಸ ಮಾಡಬಲ್ಲದು.
Unix ಡೆಸ್ಕ್‌ಟಾಪ್‌ಗಳನ್ನು ಪ್ರಮಾಣೀಕರಿಸಲು ಸನ್ ಹಾಗೂ ಇತರೆ ಯುನಿಕ್ಸ್ ವ್ಯಾಪಾರಿಗಳು ಉದ್ದಿಮೆಯ ಮೈತ್ರಿ ರಚಿಸಿದವು. ಕಾಮನ್ ಓಪನ್ ಸಾಫ್ಟ್‌ವೇರ್ ಎನ್‌ವೈರಾನ್‌ಮೆಂಟ್(COSE)ಉಪಕ್ರಮದ ಸದಸ್ಯನಾಗಿ, ಸನ್ Common Desktop Environment (ಸಾಮಾನ್ಯ ಡೆಸ್ಕ್‌ಟಾಪ್ ಪರಿಸರ)ದ ಸಹಅಭಿವೃದ್ಧಿಗೆ ನೆರವಾಯಿತು. ಪ್ರಮಾಣೀಕೃತ Unix ಡೆಸ್ಕ್‌ಟಾಪ್ ಪರಿಸರವನ್ನು ಸೃಷ್ಟಿಸಲು CDE ಒಂದು ಉಪಕ್ರಮವಾಗಿತ್ತು. ಪ್ರತಿ ವ್ಯಾಪಾರಿಯೂ ವಿವಿಧ ಅಂಶಗಳ ಕೊಡುಗೆ ನೀಡಿದರು: ಹ್ಯೂಲೆಟ್-ಪ್ಯಾಕಾರ್ಡ್ ವಿಂಡೋ ಮ್ಯಾನೇಜರ್ ವಿನ್ಯಾಸ ಮಾಡಿಕೊಟ್ಟಿತು; IBM ಫೈಲ್ ಮ್ಯಾನೇಜರ್ ವಿನ್ಯಾಸ ಮಾಡಿತು; ಸನ್ e-mail (ವಿದ್ಯುನ್ಮಾನ ಅಂಚೆ), ಕ್ಯಾಲೆಂಡರ್ ಸೌಕರ್ಯಗಳ ಜೊತೆಗೆ, ಡ್ರ್ಯಾಗ್-ಅಂಡ್-ಡ್ರಾಪ್ ಸಪೋರ್ಟ್ (ToolTalk (ಟೂಲ್ಟಾಕ್)) ವ್ಯವಸ್ಥೆಗಳನ್ನು ಒದಗಿಸಿತು. ಈ ಹೊಸ ಡೆಸ್ಕ್‌ಟಾಪ್ ಪರಿಸರವು Motif (ಮೋಟಿಫ್)ನೋಟ ಹಾಗೂ ವಿನ್ಯಾಸವನ್ನು ಆಧರಿಸಿತ್ತು. ಹಳೆಯ OPEN LOOK ಡೆಸ್ಕ್‌ಟಾಪ್ ಪರಿಸರವನ್ನು ಪರಂಪರಾಗತ ಎಂದು ಪರಿಗಣಿಸಲಾಯಿತು. ಸೋಲಾರಿಸ್ 2.5 ಹಾಗೂ ಮುಂದಿನ ಆವೃತ್ತಿಗಳು CDE ಬೆಂಬಲಿಸಿದವು. ಹಲವು ಓಪನ್ ಸಿಸ್ಟಮ್ ವ್ಯಾಪಾರಿಗಳು ರಚಿಸಿದ ವಿವಿಧ Unix ಡೆಸ್ಕ್‌ಟಾಪ್‌ಗಳನ್ನು CDE ಏಕೀಕರಿಸಿತು.
ಇಸವಿ 2001ರಲ್ಲಿ ಸೋಲಾರಿಸ್ 8ಗಾಗಿ, GTK+ ಟೂಲ್ಕಿಟ್ ಆಧಾರಿತ ಮುಕ್ತ ಮೂಲ ಡೆಸ್ಕ್‌ಟಾಪ್ ಪರಿಸರ GNOME 1.4ನ್ನು ಸನ್ ಮುನ್ನೋಟ ಬಿಡುಗಡೆ ಮಾಡಿತು.[೨೩] ಸೋಲಾರಿಸ್ 9 8/03 CDEಗೆ ಪರ್ಯಾಯವಾಗಿ GNOME 2.0ನ್ನು ಪರಿಚಯಿಸಿತು. ಸೋಲಾರಿಸ್ 10, GNOME-ಆಧಾರಿತ ಸನ್‌ನ ಜಾವಾ ಡೆಸ್ಕ್‌ಟಾಪ್ ಸಿಸ್ಟಮ್(JDS)ನ್ನು ಒಳಗೊಂಡಿದೆ. ಇದು ಸನ್‌ನ ಆಫೀಸ್ ಸೂಟ್ StarOffice (ಸ್ಟಾರ್ ಆಫೀಸ್) ಸೇರಿದಂತೆ ಆನ್ವಯಿಕೆಗಳ ದೊಡ್ಡ ಸಂಪುಟವನ್ನೇ ಹೊಂದಿದೆ. ಸನ್ JDSನ್ನು ಸೋಲಾರಿಸ್ 10ರ 'ಪ್ರಮುಖ ಅಂಶ' ಎಂದು ವಿವರಿಸಿದೆ.[೨೪]
ಮುಕ್ತ ಮೂಲ ಡೆಸ್ಕ್‌ಟಾಪ್ ಪರಿಸರಗಳಾದ KDE ಹಾಗೂ Xfce, ಜೊತೆಗೆ ಹಲವು ವಿವಿಧ ವಿಂಡೋ ಮ್ಯಾನೇಜರ್‌ಗಳು ಸಹ ಸೋಲಾರಿಸ್‌ನ ಇತ್ತೀಚೆಗಿನ ಆವೃತ್ತಿಗಳ ಮೇಲೆ ಕಂಪೈಲ್ ಆಗಿ ಚಾಲಿತವಾಗುತ್ತವೆ.
ಇಸವಿ 2003ರಿಂದಲೂ ಪ್ರಾಜೆಕ್ಟ್ ಲುಕಿಂಗ್ ಗ್ಲಾಸ್ ಎಂಬ ಹೊಸ ಡೆಸ್ಕ್‌ಟಾಪ್ ಪರಿಸರದಲ್ಲಿ ಸನ್ ಹೂಡಿಕೆ ಮಾಡುತ್ತಿದೆ. ಈ ಪರಿಸರವನ್ನು ಇತರೆ ಡೆಸ್ಕ್‌ಟಾಪ್ ವ್ಯಾಪಾರಿಗಳು ನಕಲು ಮಾಡಿದ್ದಾರೆ.
ಅನುಮತಿ
ಬದಲಾಯಿಸಿಕೆಲವು ಅಪವಾದಗಳ ಹೊರತುಪಡಿಸಿ, ಸೋಲಾರಿಸ್‌ನ ಮೂಲ ಕೋಡ್‌ನ್ನು ಓಪನ್ ಸೋಲಾರಿಸ್ ಮೂಲಕ, ಸಾಮಾನ್ಯ ಅಭಿವೃದ್ಧಿ ಮತ್ತು ವಿತರಣಾ ಅನುಮತಿಯಡಿ ಬಿಡುಗಡೆ ಮಾಡಲಾಗಿದೆ.[೨೫] CDDL OSI-ಮಂಜೂರಾತಿ ಪಡೆದ ಪರವಾನಗಿಯಾಗಿದೆ.[೨೬] ಇದನ್ನು ಉಚಿತ ತಂತ್ರಾಂಶ ಪ್ರತಿಷ್ಠಾನವು ಉಚಿತ ಎಂದು ಪರಿಗಣಿಸಿದೆ. ಆದರೆ, GPL ಇದರೊಂದಿಗೆ ಸರಿಹೊಂದಿಕೊಂಡಿಲ್ಲ.[೨೭]
ಅಂದು ಚಾಲ್ತಿಯಲ್ಲಿದ್ದ ಸೋಲಾರಿಸ್ ಡೆವೆಲಪ್ಮೆಂಟ್ ಕೋಡ್ ಬೇಸ್‌ನಿಂದ Openಸೋಲಾರಿಸ್ಸನ್ನು 14 ಜೂನ್ 2005ರಂದು ಚಾಲ್ತಿಗೊಳಿಸಲಾಯಿತು. ಇದರ ದ್ವಿಮಾನ ಮತ್ತು ಮೂಲ ಆವೃತ್ತಿಗಳೆರಡನ್ನೂ ವೆಚ್ಚವಿಲ್ಲದೇ ಪರವಾನಗಿ ಪಡೆದು, ಡೌನ್ಲೋಡ್ ಮಾಡಬಹುದಾಗಿದೆ. Xen ಬೆಂಬಲದಂತಹ ಮುಂಬರುವ ಸೌಕರ್ಯಗಳಿಗಾಗಿ ಮೂಲವನ್ನು ಈಗ Openಸೋಲಾರಿಸ್ ಪ್ರಾಜೆಕ್ಟ್‌ಗೆ ಸೇರಿಸಲಾಗಿದೆ. ಮುಂದಿನ ಸೋಲಾರಿಸ್ ಆವೃತ್ತಿಗಳೆಲ್ಲವೂ Openಸೋಲಾರಿಸ್‌ನಿಂದ ಪಡೆಯಲಾಗುತ್ತವೆ.[೨೮]
ಆವೃತ್ತಿ ಇತಿಹಾಸ
ಬದಲಾಯಿಸಿಸೋಲಾರಿಸ್ ಸದ್ಯಕ್ಕೆ DTrace, Doors (ಡೋರ್ಸ್), ಸರ್ವಿಸ್ ಮ್ಯಾನೆಜ್ಮೆಂಟ್ ಫೆಸಿಲಿಟಿ, ಸೋಲಾರಿಸ್ ಕಂಟೇನರ್ಸ್, ಸೋಲಾರಿಸ್ ಮಲ್ಟಿಪ್ಲೆಕ್ಸ್‌ಡ್ I/O, ಸೋಲಾರಿಸ್ ವಾಲ್ಯೂಮ್ ಮ್ಯಾನೇಜರ್, ZFS, ಹಾಗೂ ಸೋಲಾರಿಸ್ ಟ್ರಸ್ಟೆಡ್ ಎಕ್ಸ್‌ಟೆನ್ಷನ್ಸ್ ಸೌಕರ್ಯಗಳನ್ನು ಒಳಗೊಂಡಿದೆ.
ಸೋಲಾರಿಸ್ ಆವೃತ್ತಿಗಳಿಗೆ ನವೀಕರಣಗಳನ್ನು ನಿಯತಕಾಲಿಕವಾಗಿ ಬಿಡುಗಡೆ ಮಾಡಲಾಗುತ್ತದೆ, ಉದಾಹರಣೆಗೆ ಸೋಲಾರಿಸ್ 10 10/09.
ಕೆಳಕಂಡ ಸೋಲಾರಿಸ್ ಆವೃತ್ತಿಗಳನ್ನು ಏರುವ ಕ್ರಮದಲ್ಲಿ ಬಿಡುಗಡೆಗೊಳಿಸಲಾಗಿದೆ:
ಬಣ್ಣ | ಅರ್ಥ |
---|---|
ಕೆಂಪು | ಈ ಆವೃತ್ತಿಗೆ ಬೆಂಬಲ ಸ್ಥಗಿತಗೊಳಿಸಲಾಗಿದೆ |
ಹಸಿರು | ಬಿಡುಗಡೆ ಇನ್ನೂ ಬೆಂಬಲಿಸಲ್ಪಡುತ್ತಿದೆ |
ನೀಲಿ | ಭವಿಷ್ಯದ ಬಿಡುಗಡೆ |
ಸೋಲಾರಿಸ್ ಆವೃತ್ತಿ | SunOS ಆವೃತ್ತಿ | ಬಿಡುಗಡೆ ದಿನಾಂಕ | ಬೆಂಬಲದ ಅಂತ್ಯ[೨೯] | ಪ್ರಮುಖ ಹೊಸ ಲಕ್ಷಣ/ಸೌಕರ್ಯಗಳು | |
---|---|---|---|---|---|
SPARC | x86 | ||||
1.x | 4.1.x | 1991–1994 | - | ಸೆಪ್ಟೆಂಬರ್ 2003. | ಮಾರುಕಟ್ಟೆಯ ಉದ್ದೇಶಗಳಿಗಾಗಿ, SunOS 4ನ್ನು ಸೋಲಾರಿಸ್ 1 ಎಂದು ಮರುಹೆಸರಿಸಲಾಯಿತು. ಹೆಚ್ಚಿನ ಮಾಹಿತಿಗಾಗಿ SunOS ಲೇಖನ ಓದಿ. |
2.0 | 5.0 | ಜೂನ್, 1992. | - | ಜನವರಿ, 1999. | ಆರಂಭಿಕ ಆವೃತ್ತಿ (ಕೇವಲ ತಂತ್ರಾಂಶ ಅಭಿವೃದ್ಧಿಗೊಳಿಸುವವರಿಗೆ ಮಾತ್ರ ಲಭ್ಯ), ಕೇವಲ sun4c ರಚನೆಗಾಗಿ ಮಾತ್ರ ಬೆಂಬಲ.
NIS+ ನ ಮೊದಲ ಆವೃತ್ತಿ.[೩೦] |
2.1 | 5.1 | ಡಿಸೆಂಬರ್ 1992 | ಮೇ 1993 | ಏಪ್ರಿಲ್ 1999 | sun4 ಮತ್ತು sun4m ವಿನ್ಯಾಸಗಳಿಗಾಗಿ ಬೆಂಬಲಗಳನ್ನು ಸೇರಿಸಲಾಯಿತು; ಮೊದಲ ಸೋಲಾರಿಸ್ x86 ಬಿಡುಗಡೆ.
SMP ಬೆಂಬಲಿಸುವಂತಹ ಮೊದಲ ಮೊದಲ ಸೋಲಾರಿಸ್ 2 ಆವೃತ್ತಿ. |
2-2 | 5/2 | ಮೇ 1993 | - | ಮೇ 1999 | ಕೇವಲ SPARC ಬಿಡುಗಡೆ. sun4d ರಚನೆಗೆ ಬೆಂಬಲ ನೀಡುವಲ್ಲಿ ಇದು ಮೊದಲ ಆವೃತ್ತಿ. ಮಲ್ಟಿಥ್ರೆಡಿಂಗ್ ಲೈಬ್ರೆರಿಗಳಿಗೆ ಬೆಂಬಲ ನೀಡುವಲ್ಲಿ ಇದೇ ಮೊದಲು. (libthreadನಲ್ಲಿ UI ಥ್ರೆಡ್ಸ್ API)[೩೧]. |
2-3% | 5.3 | ನವೆಂಬರ್ 1993 | - | ಜೂನ್, 2002. | SPARC-ಆವೃತ್ತಿ ಮಾತ್ರ. OpenWindows 3.3 NeWS ಇಂದ ಡಿಸ್ಪ್ಲೇ PostScriptಗೆ ಬದಲಾಗುತ್ತದೆ; SunViewಗೆ ಬೆಂಬಲ ಅಂತ್ಯಗೊಳ್ಳುತ್ತದೆ.
autofs ಹಾಗೂ CacheFS ಫೈಲ್ ಸಿಸ್ಟಮ್‌ಗಳಿಗಾಗಿ ಹೆಚ್ಚುವರಿ ಬೆಂಬಲ. |
2.4 | [5] ^ [4] | ನವೆಂಬರ್ 1994 | ಸೆಪ್ಟೆಂಬರ್ 2003. | ಮೊದಲ ಏಕೀಕೃತ SPARC/x86 ಬಿಡುಗಡೆ. ಇದರಲ್ಲಿ OSF/Motif ರನ್‌ಟೈಮ್ ಬೆಂಬಲ. | |
2.5 | 5.5 | ನವೆಂಬರ್ 1995 | ಡಿಸೆಂಬರ್ 2003 | UltraSPARCಗೆ ಬೆಂಬಲ ನೀಡುವಲ್ಲಿ ಹಾಗೂ CDE, NFSv3 ಮತ್ತು NFS/TCP ಸೇರಿಸಿಕೊಳ್ಳುವಲ್ಲಿ ಇದೇ ಮೊದಲು. sun4 (VMEbus)ಗಾಗಿ ಅಂತ್ಯಗೊಂಡ ಬೆಂಬಲ.
POSIX.1c-1995 pthreads ಸೇರಿಸಲಾಯಿತು. Doors ಸೇರಿಸಲಾಯಿತು, ಆದರೂ ದಾಖಲಿತವಾಗಲಿಲ್ಲ.[೩೨] | |
2.5.1 | 5.5.1 | ಮೇ 1996 | ಸೆಪ್ಟೆಂಬರ್ 2005. | PowerPC ತಾಂತ್ರಿಕ ವೇದಿಕೆಗೆ ಬೆಂಬಲ ನೀಡಿದ ಏಕೈಕ ಆವೃತ್ತಿ; ಅಲ್ಟ್ರಾ ಎಂಟರ್ಪ್ರೈಸ್ ಬೆಂಬಲ ಸೇರಿಸಲಾಯಿತು; ಬಳಕೆದಾರ ಮತ್ತು ಸಮುದಾಯ IDಗಳನ್ನು (uid_t, gid_t) 32 ಬಿಟ್‌ಗಳಿಗೆ ವಿಸ್ತರಿಸಲಾಯಿತು,[೩೩] ಜೊತೆಗೆ ಸಂಸ್ಕಾರಕ ಸೆಟ್‌ಗಳು [೩೪] ಮತ್ತು ಆರಂಭಿಕ ರಿಸೋರ್ಸ್ ಮ್ಯಾನೆಜ್ಮೆಂಟ್ ತಂತ್ರಜ್ಞಾನಗಳನ್ನು ಸೇರಿಸಿಕೊಳ್ಳಲಾಯಿತು. | |
2.6 | 5.6 | July 1997 | July 2006 | Kerberos 5, PAM, TrueType ಫಾಂಟ್‌ಗಳು, ಹಾಗೂ WebNFS, ದೊಡ್ಡ ಕಡತ ಬೆಂಬಲ, ಹೆಚ್ಚಿಸಲಾದ procfs ಒಳಗೊಂಡಿವೆ. SPARCserver 600MP ಸೀರೀಸ್‌ಗಾಗಿ ಬೆಂಬಲ ಅಂತ್ಯ.[೩೫] | |
7 | 5.7 | ನವೆಂಬರ್ 1998 | ಆಗಸ್ಟ್ 2008 | ಮೊದಲ 64-ಬಿಟ್ UltraSPARC ಆವೃತ್ತಿ. ಫೈಲ್ ಸಿಸ್ಟಮ್ ಮೆಟಾ-ಡಾಟಾ ಲಾಗಿಂಗ್ (UFS ಲಾಗಿಂಗ್)ಗಾಗಿ ಸ್ಥಳೀಯ ಬೆಂಬಲ. x86 ತಾಂತ್ರಿಕ ವೇದಿಕೆಯಲ್ಲಿ MCA ಬೆಂಬಲ ಅಂತ್ಯ. ಅಂತಿಮ ನವೀಕರಣೆ ಸೋಲಾರಿಸ್ 7 11/99.[೩೬] | |
8 | 5.8 | ಫೆಬ್ರವರಿ 2000. | ಮಾರ್ಚ್ 2012. | ಮಲ್ಟಿಪಾತ್ I/O, ಸೋಲಾರಿಸ್ ವಾಲ್ಯೂಮ್ ಮ್ಯಾನೆಜರ್ [೩೭], IPMP ಒಳಗೊಂಡಿದೆ; IPv6 ಹಾಗೂ IPsecಗಾಗಿ ಮೊದಲ ಬೆಂಬಲ (manual keying ಮಾತ್ರ), mdb ಮಾಡ್ಯುಲರ್ ಡಿಬಗ್ಗರ್. ರೋಲ್-ಬೇಸ್ಡ್ ಅಕ್ಸೆಸ್ ಕಂಟ್ರೋಲ್ (RBAC) ಪರಿಚಯ; sun4c ಬೆಂಬಲ ಸ್ಥಗಿತ.
ಅಂತಿಮ ನವೀಕರಣ ಸೋಲಾರಿಸ್ 8 2/04.[೩೮] | |
9 | 5.9 | 28 ಮೇ 2002 | 10 ಜನವರಿ 2003. | ಅಕ್ಟೋಬರ್ 2014 | iPlanet ಡೈರೆಕ್ಟರಿ ಸರ್ವರ್, ರಿಸೋರ್ಸ್ ಮ್ಯಾನೆಜರ್, ಎಕ್ಸ್‌ಟೆಂಡೆಡ್ ಫೈಲ್ ಅಟ್ರಿಬ್ಯೂಟ್ಸ್, IKE IPsec ಕೀಯಿಂಗ್ ಹಾಗೂ Linux ಹೊಂದಾಣಿಕೆ ಸೇರ್ಪಡೆ; OpenWindows ಸ್ಥಗಿತ, sun4d ಬೆಂಬಲ ಅಂತ್ಯ.
ಸೋಲಾರಿಸ್ 9 9/05 ಇತ್ತೀಚೆಗಿನ ನವೀಕರಣ. |
10 | 5.10 | 31 ಜನವರಿ 2005 | - | x86-64 (AMD64/Intel 64) ಬೆಂಬಲ, DTrace (ಡೈನಾಮಿಕ್ ಟ್ರೇಸಿಂಗ್), ಸೋಲಾರಿಸ್ ಕಂಟೇಯ್ನರ್ಸ್, init.d NFSv4 ಸ್ಕ್ರಿಪ್ಟ್‌ಗಳ ಬದಲಿಗೆ ಸರ್ವಿಸ್ ಮ್ಯಾನೆಜ್ಮೆಂಟ್ ಫೆಸಿಲಿಟಿ (SMF) ಒಳಗೊಂಡಿವೆ. ಲೀಸ್ಟ್ ಪ್ರಿವಿಲೆಜ್ ಭದ್ರತಾ ಮಾದರಿ. sun4m ಮತ್ತು UltraSPARC I ಸಂಸ್ಕಾರಕಗಳಿಗಾಗಿ ಬೆಂಬಲ ಸ್ಥಗಿತ. EISA-ಆಧಾರಿತ PCಗಳಿಗೆ ಬೆಂಬಲ ಸ್ಥಗಿತ. ಜಾವಾ ಡೆಸ್ಕ್‌ಟಾಪ್ ಸಿಸ್ಟಮ್‌ನ್ನು (GNOME ಆಧಾರಿತ) ಯಥಾಸ್ಥಿತಿ ಡೆಸ್ಕ್‌ಟಾಪ್ ಆಗಿ ಸೇರಿಸಲಾಯಿತು.[೩೯]
[೪೧][೪೨]
|
ಕೆಲವು ಸೋಲಾರಿಸ್ ಆವೃತ್ತಿಗಳ ಇನ್ನಷ್ಟು ವಿವರಗಳು ಸಹ ಲಭ್ಯವಿವೆ.[೪೬] ಸೋಲಾರಿಸ್ 2 FAQನಲ್ಲಿ ಸೋಲಾರಿಸ್ ಬಿಡುಗಡೆಗಳನ್ನು ಸಹ ವಿವರಿಸಲಾಗಿದೆ.[೪೭]
ಅಭಿವೃದ್ಧಿ ಆವೃತ್ತಿ ಬಿಡುಗಡೆ
ಬದಲಾಯಿಸಿ1980ರ ಅಪರಾರ್ಧದಲ್ಲಿ ಆರಂಭವಾದಾಗಿಂದಲೂ, ಸೋಲಾರಿಸ್ ಕೋಡ್ ಆಧಾರಗಳು ಸತತವಾಗಿ ಅಭಿವೃದ್ಧಿಗೊಳ್ಳುತ್ತಿವೆ. ಅಂತಿಮವಾಗಿ ಇದು ಸೋಲಾರಿಸ್ 2.0 ಆಗಿ ಬಿಡುಗಡೆಯಾಯಿತು. ಸೋಲಾರಿಸ್ 10ರಂತಹ ಪ್ರತಿ ಆವೃತ್ತಿಯೂ, ಬಿಡುಗಡೆಯ ಸಮಯದಲ್ಲಿ ತೆಗೆದುಕೊಂಡ ಈ ಅಭಿವೃದ್ಧಿಯ ಕೋಡ್‌ಬೇಸ್ ಚಿತ್ರಣವನ್ನು ಆಧರಿಸಿದೆ. ಇನ್ನು ಪಡೆಯಲಾದ ಪ್ರಾಜೆಕ್ಟ್ ಎಂದು ಉಳಿಸಿಕೊಳ್ಳಲಾಗಿದೆ. ಮುಂದಿನ ಅಧಿಕೃತ ಆವೃತ್ತಿ ಹೊರಬರುವ ವರೆಗೂ, ವರ್ಷದಲ್ಲಿ ಹಲವು ಬಾರಿ ಆ ಪ್ರಾಜೆಕ್ಟ್‌ಗೆ ನವೀಕರಣಗಳನ್ನು ನಿರ್ಮಿಸಿ ರವಾನಿಸಲಾಗಿದೆ.
ಇಸವಿ 2005ರಲ್ಲಿ ಸೋಲಾರಿಸ್ 10 ಬಿಡುಗಡೆಯಾದಾಗಿಂದಲೂ ಸನ್‌ನಿಂದ ಅಭಿವೃದ್ಧಿಗೊಳ್ಳುತ್ತಿರುವ ಸೋಲಾರಿಸ್ ಆವೃತ್ತಿಗೆ ನೇವಡಾ ಎಂದು ಸಂಕೇತ ನಾಮವನ್ನು ನೀಡಲಾಗಿದೆ. ಇಂದು ಓಪನ್‌ಸೋಲಾರಿಸ್ ಕೋಡ್‌ಬೇಸ್ ಎನ್ನಲಾದ ಆಧಾರದಿಂದ ಇದನ್ನು ಪಡೆಯಲಾಗಿದೆ.
ಇಸವಿ 2003ರಲ್ಲಿ, ಸೋಲಾರಿಸ್ ಅಭಿವೃದ್ಧಿ ಪ್ರಕ್ರಿಯೆಗೆ ಸೇರ್ಪಡೆಯೊಂದನ್ನು ಆರಂಭಿಸಲಾಯಿತು. Software Express for ಸೋಲಾರಿಸ್ (ಅಥವಾ ಸರಳವಾಗಿ ಸೋಲಾರಿಸ್ Express ) ಎಂಬ ಕಾರ್ಯಕ್ರಮದಡಿ, ಸದ್ಯದ ಅಭಿವೃದ್ಧಿ ಮೂಲವನ್ನು ಅಧರಿಸಿದ ದ್ವಿಮಾನ ಆವೃತ್ತಿಯನ್ನು ಮಾಸಿಕ ಮೇರೆಗೆ ಡೌನ್ಲೋಡ್‌ಗಾಗಿ ಲಭ್ಯಗೊಳಿಸಲಾಯಿತು. ಇದರ ಮೂಲಕ, ಮುಂದಿನ ಸೋಲಾರಿಸ್ ಆವೃತ್ತಿಯತ್ತ ಮುನ್ನಡೆಯುವ ಸಮಯದಲ್ಲಿ, ಯಾರಾದರೂ ಸಹ, ಹೊಸ ಸೌಕರ್ಯಗಳನ್ನು ಪರಿಶೀಲಿಸಿ, OSನ ಸ್ಥಿರತೆ ಮತ್ತು ಗುಣಮಟ್ಟವನ್ನು ಪರೀಕ್ಷಿಸಬಹುದು.[೪೮] ಈ ಕಾರ್ಯಕ್ರಮಕ್ಕೆ ಆನಂತರದ ಬದಲಾವಣೆಯಲ್ಲಿ, ಬೆಂಬಲ ಸಹಿತ ತ್ರೈಮಾಸಿಕ ಆವೃತ್ತಿ ಮಾದರಿಯನ್ನು ಲಭ್ಯಗೊಳಿಸಲಾಯಿತು. ಇದನ್ನು ಸೋಲಾರಿಸ್ ಎಕ್ಸ್‌ಪ್ರೆಸ್ ಡೆವಲಪರ್ ಎಡಿಶನ್ (SXDE) ಎಂದು ಮರುನಾಮಕರಣ ಮಾಡಲಾಯಿತು.
ಇಸವಿ 2007ರಲ್ಲಿ, ಸನ್ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಇಂಡಿಯಾನಾ ಎಂಬ ಕಾರ್ಯಕ್ರಮವನ್ನು ಅನೇಕ ಗುರಿಗಳೊಂದಿಗೆ ಘೋಷಿಸಿತು. SXDE ಸ್ಥಾನದಲ್ಲಿ, ಓಪನ್ ಸೋಲಾರಿಸ್ ಪ್ರಾಜೆಕ್ಟ್‌ನ ಮುಕ್ತ ಮೂಲ (ಓಪನ್ ಸೋರ್ಸ್) ದ್ವಿಮಾನ ವಿತರಣೆ ಒದಗಿಸುವುದು ಈ ಹೊಸ ಕಾರ್ಯಕ್ರಮದ ಧ್ಯೇಯಗಳಲ್ಲಿ ಒಂದಾಗಿತ್ತು.[೪೯] Openಸೋಲಾರಿಸ್ 2008.05 ಈ ವಿತರಣೆಯ ಮೊದಲ ಆವೃತ್ತಿಯಾಗಿತ್ತು.
ಸೋಲಾರಿಸ್ ಎಕ್ಸ್‌ಪ್ರೆಸ್ ಕಮ್ಯೂನಿಟಿ ಎಡಿಷನ್ (SXCE) ವಿಶಿಷ್ಟವಾಗಿ ಓಪನ್ ಸೋಲಾರಿಸ್ ಅಭಿವೃದ್ಧಿಗೊಳಿಸುವವರಿಗಾಗಿ ರಚಿಸಲಾಗಿತ್ತು.[೫೦] ಇದನ್ನು ಎರಡು ವಾರಗಳಿಗೊಮ್ಮೆ ನವೀಕರಿಸಲಾಗುತ್ತಿತ್ತು. ಅಂತಿಮವಾಗಿ ಇದನ್ನು ಜನವರಿ 2010ರಲ್ಲಿ ಸ್ಥಗಿತಗೊಳಿಸಲಾಯಿತು. ಓಪನ್ ಸೋಲಾರಿಸ್ ವಿತರಣೆಯತ್ತ ಬದಲಾಯಿಸಿಕೊಳ್ಳಿರೆಂದು ಬಳಕೆದಾರರಿಗೆ ಶಿಫಾರಸು ಮಾಡಲಾಯಿತು.[೫೧] ಇಮೇಜ್ ಫೈಲ್‌ಗಳನ್ನು ಡೌನ್ಲೋಡ್ ಮಾಡುವಾಗ ಕಾಣಸಿಗುವ ಡೌನ್ಲೋಡ್ ಲೈಸೆನ್ಸ್‌ನಲ್ಲಿ, ಈ ತಂತ್ರಾಂಶದ ಬಳಕೆ ಕೇವಲ ವೈಯಕ್ತಿಕ, ಶೈಕ್ಷಣಿಕ ಮತ್ತು ಪರಿಶೀಲನಾತ್ಮಕ ಉದ್ದೇಶಗಳಿಗೆ ಸೀಮಿತವಾದುದು ಎಂದು ನಮೂದಿಸಲಾಗಿದೆ. ಆದರೆ, ಬಳಕೆದಾರರು ಈ ಆಕೃತಿಗಳಿಂದ ವಾಸ್ತವವಾಗಿ ಅಳವಡಿಸುವಾಗ ಪ್ರದರ್ಶಿತವಾಗುವ ಲೈಸೆನ್ಸ್ ಸ್ವೀಕೃತಿ ಪತ್ರದಲ್ಲಿ 'ವಾಣಿಜ್ಯ ಮತ್ತು ಅಭಿವೃದ್ಧಿ/ತಂತ್ರಾಂಶ ನಿರ್ಮಾಣ ಪರಿಸರಗಳಿಗೂ ಬಳಕೆಯಾಗಬಹುದು ಎಂಬುದನ್ನೂ ನಮೂದಿಸಲಾಗಿದೆ.
ಇವನ್ನೂ ನೋಡಿ
ಬದಲಾಯಿಸಿ- Openಸೋಲಾರಿಸ್
- ಟ್ರಸ್ಟೆಡ್ ಸೋಲಾರಿಸ್ (Trusted ಸೋಲಾರಿಸ್)
- OpenCSW - ಸೋಲಾರಿಸ್ ಸಮುದಾಯದಿಂದ, ಸೋಲಾರಿಸ್ ಸಮುದಾಯಕ್ಕಾಗಿ ತಂತ್ರಾಂಶ
- ಬ್ಲ್ಯಾಸ್ಟ್‌ವೇವ್ (Blastwave)
- ಕಾರ್ಯಾಚರಣಾ ವ್ಯವಸ್ಥೆಗಳ ಹೋಲಿಕೆ
- ಕಾರ್ಯಾಚರಣಾ ವ್ಯವಸ್ಥೆಗಳ ಕಾಲಾನುಕ್ರಮ
- ಸನ್ ಮ್ಯಾನೆಜ್ಮೆಂಟ್ ಸೆಂಟರ್ (Sun Management Center)
- Sun xVM
ಆಕರಗಳು
ಬದಲಾಯಿಸಿ- ↑ "Oracle Completes Acquisition of Sun". Yahoo. 27 January 2010. Retrieved 27 January 2010.
- ↑ Michael Totty (September 11, 2006). "Innovation Awards: The Winners Are..." Wall Street Journal. Retrieved 2008-07-05.
The DTrace trouble-shooting software from Sun was chosen as the Gold winner in The Wall Street Journal's 2006 Technology Innovation Awards contest
- ↑ "2008 Technology of the Year Awards: Storage - Best File System". InfoWorld. 2008. Retrieved 2008-07-05.
{{cite web}}
: Unknown parameter|month=
ignored (help) - ↑ Salus, Peter (1994). A Quarter Century of Unix. Addison-Wesley. pp. 199–200. ISBN 0-201-54777-5.
- ↑ "SunSoft introduces first shrink-wrapped distributed computing solution: Solaris" (Press release). Sun Microsystems, Inc. September 4, 1991. Archived from the original on 2008-02-02. Retrieved 2007-08-07.
- ↑ "What are SunOS and Solaris?". Knowledge Base. Indiana University Technology Services. 2006-03-12. Retrieved 2006-12-12.
- ↑ "Solaris OS: Hardware Compatibility Lists". BigAdmin System Administration Portal. Sun Microsystems, Inc. Retrieved 2006-12-12.
- ↑ Vance, Ashlee (2002-04-19). "Sun rethinks Solaris on Intel". Infoworld. IDG. Retrieved 2006-12-11.
Neither Microsoft Windows nor Linux can match Solaris in this type of high-end architecture, said Tony Iams, an analyst at Port Chester, N.Y., research company D.H. Brown and Associates. "Solaris has earned its reputation over a long period of time," Iams said. "They have been working on high-end scalability features for 10 years, and that's the only way you can get solid results."
- ↑ "Dell to Offer Sun's Solaris, OpenSolaris in Servers". eWeek. November 14, 2007. Retrieved 2007-11-14.[ಶಾಶ್ವತವಾಗಿ ಮಡಿದ ಕೊಂಡಿ]
- ↑ "IBM Expands Support for the Solaris OS on x86 Systems" (Press release). Sun Microsystems, Inc. August 16, 2007. Archived from the original on 2007-09-02. Retrieved 2007-08-16.
- ↑ "Intel Carrier Grade Platforms Certified for Sun Solaris" (Press release). Intel Corp. July 16, 2007. Retrieved 2007-08-16.
- ↑ "HP and Sun Microsystems Sign Multi-year Partnership Agreement for Solaris on HP ProLiant Servers" (Press release). Hewlett-Packard Company. 2009-02-25. Retrieved 2009-04-01.
- ↑ "Sun Microsystems and Fujitsu Siemens Computers Power PRIMERGY Servers with Solaris Operating System" (Press release). Sun Microsystems. Archived from the original on 2008-07-08. Retrieved 2008-06-10.
- ↑ ೧೪.೦ ೧೪.೧ "Kickstarting OpenSolaris on PowerPC". OpenSolaris Project. Archived from the original on 2012-02-29. Retrieved 2010-06-30.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "OpenSolaris Community Creates Kernel for Power Chips". ITJungle.
- ↑ "Embedded Solaris on PowerPC". Sun Research. Archived from the original on 2006-06-27. Retrieved 2010-06-30.
- ↑ "PowerPC at OpenSolaris". OpenSolaris Project. Archived from the original on 2012-04-08. Retrieved 2007-10-04.
- ↑ "SUN TO DELIVER ENTERPRISE-CLASS SOLARIS FOR INTEL'S MERCED PROCESSOR" (Press release). Intel Corporation, Sun Microsystems, Inc. December 16, 1997. Archived from the original on 2006-12-05. Retrieved 2006-09-10.
- ↑ "OpenSolaris Runs on IBM Mainframe". Reuters. Archived from the original on 2008-12-21. Retrieved 2007-11-30.
- ↑ "OpenSolaris Project: Systemz". OpenSolaris Project. Archived from the original on 2009-08-25. Retrieved 2010-06-30.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "IBM authorizes OpenSolaris on mainframes". The Register. 2008-11-24. Retrieved 2008-11-24.
- ↑ "BrandZ/SCLA FAQ". OpenSolaris Project. Archived from the original on 2006-10-04. Retrieved 2006-09-10.
- ↑ Mannina, Scott (2001-05-23). "Sun Announces GNOME 1.4 for Solaris". Retrieved 2009-02-09.
- ↑ "Sun Java Desktop System". Sun Microsystems Inc. 22 May 2006. Archived from the original on 2009-09-01. Retrieved 2007-03-10.
- ↑ "What source code does the OpenSolaris project include?". OpenSolaris FAQ. OpenSolaris Project. Archived from the original on 2012-01-02. Retrieved 2010-05-13.
- ↑ "The Approved Licenses". Open Source Initiative. Retrieved 2006-09-10.
- ↑ "Various Licenses and Comments about Them". Free Software Foundation. Retrieved 2006-09-10.
- ↑ "What is the difference between the OpenSolaris project and the Solaris Operating System?". OpenSolaris FAQ: General. OpenSolaris. Archived from the original on 2009-09-27. Retrieved 2010-06-30.
- ↑ "End of Service Life Status for Solaris Operating System". Sun Microsystems, Inc. Archived from the original on 2009-05-01. Retrieved 2009-06-16.
- ↑ Demetrios Stellas (September 3, 1992). "SUMMARY: Solaris 2.0 vs 2.1". Sun Managers mailing list. Archived from the original on 2006-10-04. Retrieved 2006-09-10.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Multithreading in the Solaris Operating Environment" (PDF). Sun Microsystems. 2002. Archived from the original (PDF) on 2009-03-27. Retrieved 2006-11-02.
- ↑ "Solaris 2.5". OCF Solaris History. Archived from the original on 2005-11-18. Retrieved 2010-06-30.
- ↑ "Solaris 2.5.1". OCF Solaris History. Archived from the original on 2005-09-12. Retrieved 2010-06-30.
- ↑ Matthias Laux (2001). "Solaris Processor Sets Made Easy". Sun Microsystems Inc. Retrieved 2007-03-10.
{{cite web}}
: Unknown parameter|month=
ignored (help) - ↑ "Solaris 2.6". OCF Solaris History. Archived from the original on 2005-11-13. Retrieved 2010-06-30.
- ↑ "Solaris 7". OCF Solaris History. Archived from the original on 2005-09-07. Retrieved 2010-06-30.
- ↑ http://www.sun.com/software/ಸೋಲಾರಿಸ್/8/ds/ds-sol8oe/index.xml[ಶಾಶ್ವತವಾಗಿ ಮಡಿದ ಕೊಂಡಿ]
- ↑ "Solaris 8". SunOS & Solaris Version History (OCF Solaris History). UC Berkeley Open Computing Facility. Archived from the original on 2006-09-07. Retrieved 2006-09-10.
- ↑ "Solaris 10 What's New". Sun Microsystems.
- ↑ "SAMBA and SWAT in Solaris 10 Update 4 (Solaris 10 8/07)". As Good A Place As Any: Tim Thomas' Blog. Retrieved 2007-12-01.
- ↑ "Introducing Enhanced Intel SpeedStep to Solaris". Retrieved 2008-05-06.
- ↑ "AMD PowerNow! for Solaris". Retrieved 2008-05-06.
- ↑ "General FAQs for Solaris 10". Archived from the original on 2008-03-28. Retrieved 2008-10-23.
- ↑ "Solaris 10 10/09 What's New". Retrieved 2009-10-09.
- ↑ "End of Service Life Status for Solaris Operating System". Oracle. Retrieved 2010-12-26.
- ↑ "SunOS & Solaris Version History". UC Berkeley Open Computing Facility. Archived from the original on 2006-07-08. Retrieved 2006-09-10.
- ↑ Casper Dik (April 26, 2005). "What machines does Solaris 2.x run on?". Solaris 2 FAQ. Retrieved 2006-09-10.
- ↑ "10 New Network Services Components Featured in Sun's Java Enterprise System; New Software Express Program Accelerates Customer Access to Future Technologies" (Press release). Sun Microsystems, Inc. September 16, 2003. Archived from the original on 2007-03-25. Retrieved 2008-08-16.
- ↑ Robert Baty (2007-07-31). "Project Indiana". Sun Microsystems. Retrieved 2007-12-01.
- ↑ "Operating System/Networking (ON) Download Center". OpenSolaris web site. Archived from the original on 2006-12-10. Retrieved 2006-12-12.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Derek Cicero (2010-01-06). "Update on SXCE". Sun Microsystems. Archived from the original on 2010-03-12. Retrieved 2010-03-21.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)
ಬಾಹ್ಯ ಕೊಂಡಿಗಳು
ಬದಲಾಯಿಸಿ- ಸೋಲಾರಿಸ್‌ನ ಅಧಿಕೃತ ಮುಖಪುಟ
- Solaris ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- ಸೋಲಾರಿಸ್ 10ರಲ್ಲಿ JDSಗಳ ಪರದೆ-ಚಿತ್ರಗಳು (ಸ್ಕ್ರೀನ್ಷಾಟ್ಗಳು)
- SunHELP - Sun/ಸೋಲಾರಿಸ್ ವಾರ್ತೆಗಳು, ಆಕರಗಳು/ಉಲ್ಲೇಖಗಳು ಮತ್ತು ಮಾಹಿತಿ
- ನಿಕೋಲಾಯ್ ಬೆಜ್ರೋಕೋವ್. ಸೋಲಾರಿಸ್ vs. ಲೈನಕ್ಸ್: ಎಕೋಸಿಸ್ಟಮ್-ಬೇಸ್ಡ್ ಅಪ್ರೋಚ್ ಎಂಡ್ ಫ್ರೇಮ್ವರ್ಕ್ ಫಾರ್ ದಿ ಕಂಪ್ಯಾರಿಶನ್ ಇನ್ ಲಾರ್ಜ್ ಎಂಟರ್ಪ್ರೈಸ್ ಎನ್ವೈರಾನ್ಮೆಂಟ್ಸ್ - ಸೋಲಾರಿಸ್ 10 ಮತ್ತು ಲಿನುಕ್ಸ್ (Linux) 2.6ನ್ನು ಹೋಲಿಸುವ ದೊಡ್ಡ ಸಾಫ್ಟ್ಪನೋರಾಮಾ ಲೇಖನ
- ಸನ್ ಕಂಟ್ರಿ
- ಸೋಲಾರಿಸ್ ಬ್ಲಾಗ್ ಪ್ಲ್ಯಾನೆಟ್ ಫೀಡ್ Archived 2010-05-05 ವೇಬ್ಯಾಕ್ ಮೆಷಿನ್ ನಲ್ಲಿ.