ಸೋನಾಮುಖಿ
ಸೋನಾಮುಖಿ
ಬದಲಾಯಿಸಿಸಂ: ಮಾರ್ಕಂಡಿಕ
ಹಿಂ: ಸನಾಕಪತ್ತ
ಮ: ಶೋನಾಮುಖಿ
ಗು: ಸೆನಮಕ್ಕಿ
ತೆ: ನೆಲಪೊನ್ನ
ತ: ನಿಲಾದರಾಯ್
ವರ್ಣನೆ
ಬದಲಾಯಿಸಿನೆಲದ ಮೇಲೆ ಹರಡುವ, ಎಲೆಗಳು ಹಸಿರು, ಹೂವು ಹಳದಿ, ಕಾಯಿ ಚಪ್ಪಟೆಯಾಗಿದ್ದು ತುದಿಯಲ್ಲಿ ಬಾಗಿರುವುದು. ಕಾಂಡದಿಂದ ಸಂಯುಕ್ತ ಪತ್ರದ ತೊಟ್ಟಿನ ಕೆಳಗಡೆ ಟೊಪ್ಪಿಯಂತೆ ತೆಳುವಾದ ಎಲೆಯಿರುತ್ತದೆ. ಹೂವಿನಲ್ಲಿ ಸಾಮಾನ್ಯವಾಗಿ ಐದು ದಳಗಳಿರುತ್ತವೆ. ಮತ್ತು ಹೊಳೆಯುವ ಹಳದಿ ಬಣ್ಣ ಹೊಂದಿರುತ್ತದೆ. ಅಕ್ಟೋಬರ್, ಡಿಸೆಂಬರ್ ತಿಂಗಳಲ್ಲಿ ಹೂ ಕಾಯಿ ಬಿಡುತ್ತದೆ.
ಸರಳ ಚಿಕಿತ್ಸೆಗಳು
ಬದಲಾಯಿಸಿಮಲಬದ್ಧತೆಯಲ್ಲಿ
ಬದಲಾಯಿಸಿಸೋನಾಮುಖಿ 2 ಗ್ರಾಂ, ಸೋಂಪು ಮತ್ತು ಗುಲಾಬಿ ಹೂವಿನ ದಳ ಎರಡು ಸೇರಿ 5 ಗ್ರಾಂ, ಒಣಗಿದ ದ್ರಾಕ್ಷಿ 2 ಗ್ರಾಂ ಮತ್ತು ಅಂಜೂರದ ಹಣ್ಣು 20 ಗ್ರಾಂ ಇವೆಲ್ಲವನ್ನು ಸೇರಿಸಿ ಕಲ್ಪತ್ತಿನಲ್ಲಿ ಹಾಕಿ ನುಣ್ಣಗೆ ಅರೆಯುವುದು ಹೀಗೆ ಅರೆದ ಕಲ್ಕವನ್ನು ನೀರಿಗೆ ಹಾಕಿ, ಅಷ್ಟಾಂಶ ಕಷಾಯ ಮಾಡಿ, ತಣ್ಣಗಾದ ಮೇಲೆ ಶೋಧಿಸುವುದು. ರಾತ್ರಿ ವೇಳೆ ನಾಲ್ಕು ಟೀ ಚಮಚ ಸೇವಿಸುದು. ಬೆಳಗ್ಗೆ ಒಂದೆರಡು ಬೇದಿ ಆಗಿ, ಮಲಬದ್ಧತೆ ಮತ್ತು ನೆಗಡಿ ಪರಿಹಾರವಾಗುವುದು.
ಜ್ವರದಲ್ಲಿ ಹೆಚ್ಚಾಗಿ ಬರುವ ಬೆವರನ್ನು ತಡೆಯಲು
ಬದಲಾಯಿಸಿಅರ್ಧ ಟೀ ಚಮಚ ಸೋನಾಮುಖಿ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಸುವುದು. ಅಲ್ಪ ಪ್ರಮಾಣ ಒಳ್ಳೆಯದು. ದಿವಸಕ್ಕೆ ಒಂದೇ ವೇಳೆ ವೈದ್ಯರ ಸಲಹೆ ಮೇರೆಗೆ ಉಪಚಾರ ನೀಡುವುದು.
ಜ್ವರ ಹೆಚ್ಚಾಗಿ ನಾಲಿಗೆಯ ಮೇಲೆ ಮೊಳೆಗಳಾದರೆ
ಬದಲಾಯಿಸಿಒಂದೆರಡು ಚಿಟಿಕೆ ಸೋನಾಮುಖಿಯ ನಯವಾದ ಚೂರ್ಣವನ್ನು ಜೇನಿನಲ್ಲಿ ಕಲಸಿ ನಾಲಿಗೆಯ ಮೇಲೆ ಸವರುವುದು.
ಜ್ವರದಲ್ಲಿ
ಬದಲಾಯಿಸಿಸೋನಾಮುಖಿ, ಅಳಲೆಕಾಯಿ ಮತ್ತು ಶುಂಠಿ, ತಲಾ 5-5 ಗ್ರಾಂ ತೆಗೆದುಕೊಂಡು, ಚೆನ್ನಾಗಿ ಜಜ್ಜಿ, ನೀರಿಗೆ ಹಾಕಿ ಕಾಯಿಸಿ, ಕಷಾಯ ಮಾಡುವುದು. ನಾಲ್ಕು ಟೀ ಚಮಚ ಕಷಾಯಕ್ಕೆ ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ದಿವಸಕ್ಕೆ ಒಂದೇ ವೇಳೆ
ಸ್ತನದ ಹುಣ್ಣು ಮತ್ತು ಗಡ್ಡೆಗಳಿಗೆ
ಬದಲಾಯಿಸಿಧಾತುಪುಷ್ಟಿ ಮತ್ತು ನಪುಂಕತ್ವ ಪರಿಹಾರಕ್ಕಾಗಿ
ಬದಲಾಯಿಸಿಸೋನಾಮುಖಿ ಆಡುಸೋಗೆ ಎಲೆ, ಮುತ್ತಗದ ಬೇರು ಕರೀ ಲಕ್ಕಿ ಬೇರು ಗುಳ್ಳದ ಬೇರು , ಭೃಂಗರಾಜನ ಎಲೆ, ಇವೆಲ್ಲವನ್ನು ಸಮತೂಕ ಸೇರಿಸಿ ನುಣ್ಣಗೆ ಕುಟ್ಟಿ ಚೂರ್ಣ ಮಾಡುವುದು. ವೇಳೆಗೆ 2 ಗ್ರಾಂ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ಸೇವಿಸುವುದು.
ಚರ್ಮವ್ಯಾಧಿಯಲ್ಲಿ
ಬದಲಾಯಿಸಿಸೋನಾಮುಖಿಯ ಬೀಜ ಮತ್ತು ಕ್ಕೆ ಕಾಯಿ ಗಿಡದ ತಿರುಳನ್ನು ನಯವಾಗಿ ಅರೆದು, ಮೊಸರಿನಲ್ಲಿ ಕಲಸಿ ಲೇಪಿಸುವುದು.
ಮಲಬದ್ಧತೆ
ಬದಲಾಯಿಸಿಬೀಜ ತೆಗೆದ ಖರ್ಜೂರ, ಒಣ ದ್ರಾಕ್ಷಿ, ಅತಿಮಧುರ, ಸೋನಾಮುಖಿ, ತಲಾ 2 1/2 ಗ್ರಾಂ ಸೇರಿಸಿ, ಚೆನ್ನಾಗಿ ಕುಟ್ಟಿ, 200 ಮಿ.ಲೀ ನೀರಿಗೆ ಹಾಕಿ, ಕಾಯಿಸಿ. ಚತುಷ್ಟಾಂಶ ಕಷಾಯ ಮಾಡಿ ತಣ್ಣಗಾದ ಮೇಲೆ ಶೋಧಿಸಿ, ರಾತ್ರಿ ಸೇವಿಸುವುದು.
ಗುಲ್ಮದ ಗಡ್ಡೆಯಲ್ಲಿ
ಬದಲಾಯಿಸಿ5 ಗ್ರಾಂ ಸೋನಾಮುಖಿಯ ನಯವಾದ ಚೂರ್ಣ ಮತ್ತು 5 ಗ್ರಾಂ ಸೈಂಧವ ಲವಣದ ಪುಡಿಯನ್ನು ಚೆನ್ನಾಗಿ ಮಿಶ್ರ ಮಾಡುವುದು. ಇದರಲ್ಲಿ 1/2 ಟೀ ಚಮಚ ಚೂರ್ಣವನ್ನು ಸೇವಿಸಿ, ಮೇಲೆ ನೀರು ಕುಡಿಯುವುದು. ನೆಲಾವರಿಕೆಯ ಅರ್ಕ ಸೇವಿಸುವುದರಿಂದಲೂ ಸಹಾ ಗುಲ್ಮದ ಗಡ್ಡೆ ಮಹೋದರ ಬಾಯಲ್ಲಿ ದುರ್ಗಂದ ಸಹ ವಾಸಿಯಾಗುವುದು.
ರಾಸಯನಿಕ ವಿಭಜನೆ
ಬದಲಾಯಿಸಿಕೆಥಾರ್ಟಿನ್ ಮತ್ತು ಎಲೋಡಿನ್,ಆಮ್ಲಗಳಿರುವುವು ಮತ್ತು "ಸೆನ್ನಾಪಿಕ್ರಿ" ಸಕ್ಕರೆಯಿರುವುದು. ಎಲೆಗಳ ಚೂರ್ಣದ ಪ್ರಮಾಣ 250ರಿಂದ 500 ಮಿ. ಗ್ರಾಂ.ಗೆ ಮೀರಬಾರದು
ಎಚ್ಚರಿಕೆ
ಬದಲಾಯಿಸಿಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಹೊಟ್ಟೆಯಲ್ಲಿ ನುಲಿಯುವ ನೋವು( ಹೊಸೆಯುವ) ಬಾಯಾರಿಕೆ ಮತ್ತು ವಾಂತಿ ಸಹ ಆಗಬಹುದು. ಆದುದರಿಂದ ಈ ಉಪದ್ರವಗಳಿಂದ ರಕ್ಷಣೆ ಪಡೆಯಲು, ನೆಲಾವರಿಕೆಯೊಂದಿಗೆ ಸಕ್ಕರೆ, ಶುಂಠಿ, ಸೈಂಧವ ಲವಣ ಸೇವಿಸಿಬೇಕು.
ಉಲ್ಲೇಖ
ಬದಲಾಯಿಸಿಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು
ಸಂಪಾದಕರು: ವೈದ್ಯ ಎ. ಆರ್. ಎಂ. ಸಾಹೇಬ್
ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು