ಸೋನಗಾರ
ಸೋನಗಾರನು ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಕೆಲಸದಲ್ಲಿ ಪರಿಣತಿ ಹೊಂದಿರುವ ಒಬ್ಬ ಲೋಹಗೆಲಸಕಾರ. ಐತಿಹಾಸಿಕವಾಗಿ, ಸೋನಗಾರರು ಬೆಳ್ಳಿ ಸಾಮಾನು, ಹರಿವಾಣಗಳು, ಪಾನಪಾತ್ರೆಗಳು, ಅಲಂಕಾರಿಕ ಮತ್ತು ಬಳಸಬಲ್ಲ ಪಾತ್ರೆಗಳು, ಸಾಂಪ್ರದಾಯಿಕ ಅಥವಾ ಧಾರ್ಮಿಕ ವಸ್ತುಗಳನ್ನು ಕೂಡ ತಯಾರಿಸಿದ್ದಾರೆ, ಮತ್ತು ಅಪರೂಪವಾಗಿ ಕಿಂಟ್ಸುನಿ ಬಳಸಿ,[೧] ಆದರೆ ಅಮೂಲ್ಯ ಲೋಹಗಳ ಏರುತ್ತಿರುವ ಬೆಲೆಗಳು ಅಂತಹ ವಸ್ತುಗಳ ತಯಾರಿಕೆಯನ್ನು ದೊಡ್ಡ ಮಟ್ಟಿಗೆ ಕುಂಠಿತಗೊಳಿಸಿವೆ.
ಸೋನಗಾರರು ಅರದಿಂದ ಉಜ್ಜಿ, ಬೆಸುಗೆ ಹಾಕಿ, ಗರಗಸದಿಂದ ಕತ್ತರಿಸಿ, ಫ಼ೋರ್ಜಿಂಗ್‍ನಿಂದ, ಎರಕ ಹಾಕುವಿಕೆಯಿಂದ, ಮತ್ತು ಲೋಹದ ನಯಗೊಳಿಸುವಿಕೆ ಮೂಲಕ ಲೋಹಕ್ಕೆ ಆಕಾರ ಕೊಡುವುದರಲ್ಲಿ ನುರಿತವರಾಗಿರಬೇಕು. ಈ ಉದ್ಯೋಗ ಆಗಾಗ್ಗೆ ಆಭರಣ ತಯಾರಿಕೆ ಕೌಶಲಗಳು, ಜೊತೆಗೆ ಬಹಳವಾಗಿ ಹೋಲುವ ರಜತಕರ್ಮಿಯ ಕೌಶಲಗಳನ್ನೂ ಒಳಗೊಂಡಿದೆ.
ಉಲ್ಲೇಖಗಳು
ಬದಲಾಯಿಸಿ