ಸೊದಾಲ್ ಮಂದಿರ, ಜಲಂಧರ್



ಸೊದಾಲ್ ಮಂದಿರವನ್ನು ಬಾಬಾ ಸೊದಾಲ್ ನೆನಪಿಗಾಗಿ ನಿರ್ಮಿಸಲಾಗಿದೆ. ನಂಬಿಕೆಯ ಪ್ರಕಾರ, ಒಂದೊಮ್ಮೆ ಬಾಬಾ ಸೊದಲರು ತಾಯಿಯೊಂದಿಗೆ ಕೊಳದ ಹತ್ತಿರ ಬಂದಿದ್ದರು. ತುಂಟ ಬಾಲಕರಾಗಿದ್ದ ಅವರು ಸುಮ್ಮನಿರಲಾರದೆ ಚೇಷ್ಟೆಗಾಗಿ ತಾಯಿಯ ಮೇಲೆ ಜೇಡಿ ಮಣ್ಣಿನ ಉಂಡೆಗಳನ್ನು ಎಸೆಯ ಹತ್ತಿದರು. ಇದರಿಂದ ಕುಪಿತಳಾದ ತಾಯಿ ಹಿಡಿ ಶಾಪವನ್ನು ಹಾಕಿದಳು.[] ಇದರಿಂದ ಪ್ರಭಾವಿತನಾದ ಬಾಲಕನು ಆ ಕೊಳದಲ್ಲಿ ಹಾರಿದನು ಹಾಗು ಮತ್ತೆ ಎಂದಿಗೂ ಮರಳಲಿಲ್ಲ. ಆದರೆ ಬಾಬಾಜಿಯು ಸರ್ಪದ ರೂಪದಲ್ಲಿ ಪ್ರತ್ಯಕ್ಷರಾಗಿ ತಾನು ಪ್ರಪಂಚದಿಂದ ದೂರ ಸರಿದಿದ್ದಕ್ಕೆ ಕಾರಣ ತಿಳಿಸಿದರು ಹಾಗು ಚಾದಾ ಮತ್ತು ಆನಂದ್ ಕುಲದವರು ತಮ್ಮನ್ನು ಪೂಜಿಸಬೇಕೆಂದು ತಿಳಿಸಿದರು. ಸೊದಾಲ್ ಮೇಳ ಪ್ರತಿ ವರ್ಷ ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿ ಅನಂತ್ ಚೋದಾದಲ್ಲಿ ಆಯೋಜಿಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ