ಸೈಂಟ್ ಜಾನ್ ಥ್ಯಾಕರೆ
ಸೈಂಟ್ ಜಾನ್ ಥ್ಯಾಕರೆ (೧೭೭೮ – ೧೮೨೪) ಒಬ್ಬ ಕಲೆಕ್ಟರ್ ಮತ್ತು ರಾಜಕೀಯ ಏಜೆಂಟ್ ಆಗಿದ್ದನು. ಇವನು ೧೮೨೦ ರ ಸಮಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗಾಗಿ ದಕ್ಷಿಣ ಭಾರತದಲ್ಲಿ ಕೆಲಸ ಮಾಡುತ್ತಿದ್ದನು.
ಸೈಂಟ್ ಜಾನ್ ಥ್ಯಾಕರೆ | |
---|---|
ಚಿತ್ರ:St John Thackeray's monument at Dharwad, India.jpg | |
Born | ೧೭೭೮ |
Died | ೨೩ ಅಕ್ಟೋಬರ್ ೧೮೨೪ |
Resting place | ಢಾರಾವಾಡ, ಕರ್ನಾಟಕ |
Monuments | ಥ್ಯಾಕರೆಯ ಸ್ಮಾರಕ ಢಾರವಾಡದ ಕಿತ್ತೂರು ಚೆನ್ನಮ್ಮ ಉದ್ಯಾನವನದಲ್ಲಿದೆ |
Citizenship | ಬ್ರಿಟಿಷ್ |
Known for | ದಕ್ಷಿಣ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಕಲೆಕ್ಟರಾಗಿ ಮತ್ತು ರಾಜಕೀಯ ಏಜೆಂಟ್ ಆಗಿದ್ದನು |
ಆರಂಭಿಕ ಜೀವನ
ಬದಲಾಯಿಸಿಸೈಂಟ್ ಜಾನ್ ಥ್ಯಾಕರೆ ಅವನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ [೧] ದಕ್ಷಿಣ ಮಹ್ರತ್ತಾ ದೋಬ್ ಪ್ರದೇಶಕ್ಕಾಗಿ ಕಲೆಕ್ಟರ್ ಮತ್ತು ರಾಜಕೀಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದನು ಮತ್ತು ಮದ್ರಾಸ್ ಸಿವಿಲ್ ಸೇವೆಗೆ ಸೇರಿದವನಾಗಿದ್ದನು. [೨]
ಕಿತ್ತೂರಿನ ಮೇಲೆ ದಾಳಿ
ಬದಲಾಯಿಸಿಹಿನ್ನೆಲೆ
ಬದಲಾಯಿಸಿ೧೫೮೫ ರಲ್ಲಿ ದೇಸಾಯಿ ಸ್ಥಾಪಿಸಿದ ಕಿತ್ತೂರು ಸಾಮ್ರಾಜ್ಯವನ್ನು ಆಳುತ್ತಿದ್ದ ಮಕ್ಕಳಿಲ್ಲದ ಮಲ್ಲಸರ್ಜನು ಕಿತ್ತೂರು ಚೆನ್ನಮ್ಮಳನ್ನು ರಾಣಿಯನ್ನಾಗಿ ಮಾಡಿದನು. [೩] ಮಲ್ಲಸರ್ಜನು ೧೮೨೪ ರಲ್ಲಿ ನಿಧನನಾದನು, ಮತ್ತು ಸಾಯುವ ಮೊದಲು ಅವನು ಒಬ್ಬ ಹುಡುಗನನ್ನು ದತ್ತು ಪಡೆದನು. ಇದು ಸೈಂಟ್ ಜಾನ್ ಥ್ಯಾಕರೆ ಒಪ್ಪದಿದ್ದ ಸತ್ಯ. [೩] ದತ್ತು ಸ್ವೀಕಾರವು ಸುಳ್ಳು ಅಥವಾ ನಕಲಿ ಎಂಬ ವಾದವನ್ನು ಹಿಡಿದುಕೊಂಡು, ಥ್ಯಾಕರೆ ಕಿತ್ತೂರಿಗೆ ಬಂದನು. ಆಗಮಿಸಿದ ನಂತರ, ಥ್ಯಾಕರೆ ಕಿತ್ತೂರು ಪ್ರದೇಶವನ್ನು ಆಳಲು ಪ್ರಯತ್ನಿಸಿದನು. ಅದರ ಒಡವೆ ಮತ್ತು ಆಭರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನದಲ್ಲಿ ಅವನು ಖಜಾನೆಗೆ ಮೊಹರು ಹಾಕಿದನು. [೩] ಕಿತ್ತೂರು ಚೆನ್ನಮ್ಮ ಅದನ್ನು ಪ್ರತಿಭಟಿಸಿ ಕೋಟೆ ಬಾಗಿಲು ಮುಚ್ಚಿದಳು. ಥ್ಯಾಕರೆ ಬಾಗಿಲನ್ನು ಸ್ಫೋಟಿಸುವ ಆದೇಶವನ್ನು ನೀಡಿದನು. ಈ ಮಧ್ಯೆ, ಚೆನ್ನಮ್ಮನ ಸೈನಿಕರೊಬ್ಬನು ಥ್ಯಾಕರೆಗೆ ಗುಂಡು ಹಾರಿಸಿದನು.[೩]
ಸಾವು
ಬದಲಾಯಿಸಿಸೈಂಟ್ ಜಾನ್ ಥ್ಯಾಕರೆ ೨೩ ಅಕ್ಟೋಬರ್ ೧೮೨೪ ರಂದು [೨] ಕರ್ನಾಟಕದ ಕಿತ್ತೂರಿನಲ್ಲಿ ಕಿತ್ತೂರಿನ ರಾಣಿ ಕಿತ್ತೂರು ಚೆನ್ನಮ್ಮನ ವಿರುದ್ಧ ಯುದ್ಧ ಮಾಡುವಾಗ ಕೊಲ್ಲಲ್ಪಟ್ಟನು. [೪] ಅವನು ಇತರ ಪಡೆಗಳೊಂದಿಗೆ ಅಸಮರ್ಪಕ ವಿಧಾನಗಳೊಂದಿಗೆ ಕಿತ್ತೂರಿನ ಕೋಟೆಯ ಪಟ್ಟಣವನ್ನು ಪ್ರವೇಶಿಸಲು ಪ್ರಯತ್ನಿಸಿದನು. [೨] ಮೊದಲು ಕೋಟೆಯತ್ತ ಸವಾರಿ ಮಾಡುತ್ತಿದ್ದ ಆತನ ಹೊಟ್ಟೆಗೆ ಗುಂಡು ತಗುಲಿ ನಂತರ ಕಿತ್ತೂರಿನ ಸೈನಿಕನು ಕತ್ತಿವರಸೆಯಿಂದ ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. [೨] ಕಿತ್ತೂರು ಚೆನ್ನಮ್ಮನ ಲೆಫ್ಟಿನೆಂಟ್‌ಗಳಲ್ಲಿ ಒಬ್ಬರಾದ ಬಾಳಪ್ಪ ಥ್ಯಾಕರೆಯ ಹತ್ಯೆಯಲ್ಲಿ ಭಾಗಿಯಾಗಿದ್ದನು. [೫]
ಸ್ಮಾರಕ
ಬದಲಾಯಿಸಿಥ್ಯಾಕರೆಯ ಸ್ಮರಣಾರ್ಥ ಧಾರವಾಡದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. [೧]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "Thackeray's Monument, Dharwar". British Library. Archived from the original on 4 ಮಾರ್ಚ್ 2016. Retrieved 28 November 2012.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ೨.೦ ೨.೧ ೨.೨ ೨.೩ Asiatic Journal Vol 3. London: Parbury, Allen, and Co. 1830. pp. 218–222.
- ↑ ೩.೦ ೩.೧ ೩.೨ ೩.೩ P, V (16 July 2010). "The legend lives on". The Hindu. Retrieved 29 November 2012.
- ↑ O'Malley, Lewis Sydney Steward (1985). Indian civil service, 1601-1930. London: Frank Cass. p. 76. ISBN 9780714620237.
- ↑ "Restore Kittur Monuments". The Hindu. 1 October 2011. Retrieved 29 November 2012.