ಸೆರಾಮಿಕ್ಸ್ ಚೀನಾ ಪಾತ್ರೆ, ಪಿಂಗಾಣಿ, ಇಟ್ಟಿಗೆಯಂತಹ ಜೇಡಿಮಣ್ಣಿನ ವಸ್ತುಗಳನ್ನು ಸೆರಾಮಿಕ್ಸ್ ಎಂದು ಕರೆಯುತ್ತಾರೆ. ಸೆರಾಮಿಕ್ಸ್ ಪದವನ್ನು ಮಣ್ಣಿನ ಮಡಕೆ ಎಂಬರ್ಥದ ಸಿರಿಮೋಸ್ ಎಂಬ ಗ್ರೀಕ್ ಪದದಿಂದ ಪಡೆಯಲಾಗಿದೆ.

A Ming Dynasty porcelain vase dated to 1403–1424
Fire test furnace insulated with firebrick and ceramic fibre insulation.
Mid-16th century ceramic tilework on the Dome of the Rock, Jerusalem
Spherical Hanging Ornament, 1575-1585, Ottoman Period. Brooklyn Museum.
Fixed partial porcelain denture, or "bridge"

ಪಿಂಗಾಣಿ ಬದಲಾಯಿಸಿ

ಬಿಳಿ ಜೇಡಿಮಣ್ಣು, ಮರಳು ಮತ್ತು ಫೆಲ್ಡ್ ಸ್ಪಾರ್. ಇದು ಗಾಳಿ ನೀರು ಮತ್ತು ಕಾರ್ಬನ್ ಡೈ ಆಕ್ಸೈಡ್ ವರ್ತನೆಯಿಂದಾಗಿ ಸಿಲಿಕೇಟ್ ಬಂಡೆಗಳ ಸವೆತದಿಂದ ಉಂಟಾಗುತ್ತದೆ.ನಯವಾಗಿ ಪುಡಿಮಾಡಿದ ಕಚ್ಚಾವಸ್ತುಗಳೊಂದಿಗೆ ನೀರನ್ನು ಸೇರಿಸಿ ಪಡೆವ ಮಿಶ್ರಣ ಸ್ಲಿಪ್. ಇದನ್ನು ಸೋಸುವ ಕಾಗದದಿಂದ ಒತ್ತಿ ಹೆಚ್ಚುವರಿ ನೀರನ್ನು ತೆಗೆದ ನಂತರ ಬೇಕಾದ ಆಕಾರವನ್ನು ಕೊಟ್ಟು ಒಣಗಿಸಿ ಕುಲುಮೆಯಲ್ಲಿ ೧೮೭೩ k ಗೆ ಕಾಯಿಸಬೇಕು. ಕಾಯಿಸಿ ಪಡೆದ ವಸ್ತುಗಳು ರಂಧ್ರಯುಕ್ತವಾಗಿರುತ್ತವೆ.ಹೊಳಪು ನೀಡುವುದರಿಂದ ಈ ರಂಧ್ರಗಳನ್ನು ಮುಚ್ಚಬಹುದು. ಹೊಳಪು ಆಕರ್ಷಕ ನೋಟವನ್ನು ನೀಡುತ್ತದೆ. ಹೊಳಪು ಕೊಡಲು ಬೋರಾನ್, ಅಲ್ಯುಮಿನಿಯಮ್, ಸಿಲಿಕಾ ಬಳಸಲಾಗುತ್ತದೆ.ಹೊಳಪು ನೀಡುವಾಗ ಮೊದಲೇ ನಿರ್ಧರಿಸಿದ ಪ್ರಮಾಣದಲ್ಲಿ ಲೋಹದ ಆಕ್ಸೈಡ್ ಸೇರಿಸಿ ಪಿಂಗಾಣಿಗ ಬೇಕಾದ ಬಣ್ಣವನ್ನು ಕೊಡಬಹುದು. ಬಹುತೇಕ ಅಭಿವೃದ್ಧಿ ಹೊಂದಿದ ಎಲ್ಲಾ ಸಂಸ್ಕೃತಿಗಳಲ್ಲಿ ಸೆರಾಮಿಕ್ ಕಲೆಯ ಸುದೀರ್ಘ ಇತಿಹಾಸವಿದೆ ಮತ್ತು ೨೦೦೦ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ನೊಕ್ ನಂತಹ ಕಣ್ಮರೆಯಾದ ಸಂಸ್ಕೃತಿಯಿಂದ ಸಿರಾಮಿಕ್ ವಸ್ತುಗಳು ಎಲ್ಲ ಕಲಾತ್ಮಕ ಸಾಕ್ಷಿಗಳಾಗಿವೆ.

ಉಪಯೋಗ ಬದಲಾಯಿಸಿ

ಪಿಂಗಾಣಿಯನ್ನು ಬಹಳವಾಗಿ ಗೃಹ ಬಳಕೆ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಅಲಂಕಾರಿಕ ವಸ್ತುಗಳು, ವಿದ್ಯುತ್ ಉಪಕರಣಗಳು, ಸ್ಯಾನಿಟರಿ ವಸ್ತುಗಳು, ಮತ್ತು ಪ್ರಯೋಗಾಲಯಗಳ ಉಪಕರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ