ಸೆಕಂಡ್ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ

ಪರಮವೀರ ಚಕ್ರ ಪಡೆದ ಮೊದಲ ಕನ್ನಡಿಗ ರಾಮ ರಾಘೋಬ ರಾಣೆ, ಕಾರವಾರದ ಚೆಂಡಿಯಾ ತಾಲ್ಲೂಕಿನಲ್ಲಿ (ನಾಗರಮಡಿ ಜಲಪಾತಕ್ಕೆ ಹೆಸರುವಾಸಿ) ೨೬ ಜೂನ್ ೧೯೧೮ರಂದು ಜನಿಸಿದರು. ಭಾರತೀಯ ಸೇನೆಯ ಇಂಜಿನಿಯರ್ಸ್ ಕಾರ್ಪ್ಸ್ ದಲಕ್ಕೆ ೧೫ ಡಿಸೆಂಬರ್ ೧೯೪೭ರಂದು ನೇಮಕವಾದರು. ೨೧ ವರ್ಷ, ಸೇನೆಯ ವಿವಿಧ ಹುದ್ದೆ ನಿರ್ವಹಿಸಿ, ೫ ಬಾರಿ ಎಂ-ಇನ್-ಡಿ(ಸೇನಾ ವರದಿಯಲ್ಲಿ ಮೆಚ್ಚುಗೆಗೆ ಪಾತ್ರರಾದ ಸೈನಿಕ) ಹೆಗ್ಗಳಿಕೆ ಪಡೆದು, ೧೯೬೮ರಲ್ಲಿ ಮೇಜರ್ ಆಗಿ ನಿವೃತ್ತರಾದರು.

ಮೇಜರ್ ರಾಮ ರಘೋಬಾ ರಾಣೆ
ಚಿತ್ರ:Rama Raghoba Rane.jpg
ಮೇಜರ್, PVC
ಜನನಟೆಂಪ್ಲೇಟು:ಜನನ
ಚೆಂಡಿಯಾ, ಕಾರವಾರ, ಕರ್ನಾಟಕ
ಮರಣಟೆಂಪ್ಲೇಟು:ಮರಣ ಮತ್ತು ವಯಸ್ಸು[೧]
ವ್ಯಾಪ್ತಿಪ್ರದೇಶಭಾರತ
ಶಾಖೆಭಾರತೀಯ ಸೇನೆ
ಸೇವಾವಧಿ1947-1968
ಶ್ರೇಣಿ(ದರ್ಜೆ)ಮೇಜರ್
ಭಾಗವಹಿಸಿದ ಯುದ್ಧ(ಗಳು)Indo-Pakistani War of 1947
ಪ್ರಶಸ್ತಿ(ಗಳು) Param Vir Chakra

೧೯೪೮ರ ಮಾರ್ಚ್‌ನಿಂದ ಏಪ್ರಿಲ್‌ವರೆಗೆ ರಂದು, ಜಮ್ಮುವಿನ ರಾಜೌರಿಯಲ್ಲಿ ನೆಲಬಾಂಬುಗಳನ್ನು ಕಿತ್ತೊಗೆದು, ಭಾರತೀಯ ಸೇನೆಯ ಫಿರಂಗಿಗಳು ಯುದ್ಧಭೂಮಿಗೆ ನುಗ್ಗಲು ಅನುವು ಮಾಡಿಕೊಟ್ಟ ತಂಡದ ನಾಯಕರಾಗಿದ್ದರು. ಚಿಂಗಾಸ್, ರಾಜೌರಿ ಯನ್ನು ಭಾರತೀಯ ಸೇನೆ ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ೨ ಲೆಫ಼್ಟಿನೆಂಟ್ ರಾಮ ರಾಣೆಯವರ ಪಾತ್ರ ನಿರ್ಣಾಯಕವಾಗಿತ್ತು. ಈ ಕಾರ್ಯಕ್ಕಾಗಿ ರಾಣೆಯವರಿಗೆ ಯುದ್ಧ ಕಾಲದ ಉನ್ನತ ಸೇನಾಪದಕವಾದ ಪರಮ_ವೀರ_ಚಕ್ರ ನೀಡಿ ಗೌರವಿಸಲಾಯಿತು.

ನಿವೃತ್ತಿಯ ನಂತರ ಪುಣೆಯಲ್ಲಿ ನೆಲೆಸಿದ ರಾಣೆ ೧೯೯೪ರ ಜುಲೈ ೧೧ರಂದು ನಿಧನರಾದರು.


References ಬದಲಾಯಿಸಿ


External links ಬದಲಾಯಿಸಿ

  1. Sainik Samachar: The Pictorial Weekly of the Armed Forces - Volume 41. 1994. p. 2.