ಸೂರ್ಯನಾರಾಯಣ ಚಡಗ
ಸೂರ್ಯನಾರಾಯಣ ಚಡಗ(ಜನನ:೧೩.೦೪.೧೯೩೨-ನಿಧನ:೧೪.೧೧.೨೦೦೬) ಇವರು ೧೯೩೨ ಎಪ್ರಿಲ ೧೩ರಂದು ಉಡುಪಿ ತಾಲೂಕಿನ ಪಾಂಡೇಶ್ವರ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಶೇಷಮ್ಮ; ತಂದೆ ನಾರಾಯಣ.೧೯೫೪ರಲ್ಲಿ ತಮ್ಮ ಪ್ರಥಮ ಕಾದಂಬರಿ ರತ್ನ ಪಡೆದ ಭಾಗ್ಯದೊಂದಿಗೆ ಕನ್ನಡ ಸಾಹಿತ್ಯಲೋಕವನ್ನು ಪ್ರವೇಶಿಸಿದರು.೨೦೦೧ರವರೆಗೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಇವರ ಕೊನೆಯ ಕೃತಿ ನಾಟ್ಯರಶ್ಮಿ.ಕನ್ನಡದಲ್ಲಿ ನಾಟಕಗಳು,ಸಣ್ಣಕತೆಗಳಲ್ಲದೆ ೩೦ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.[೧].ಇವರ ಕೆಲವು ಕೃತಿಗಳು ಇಂತಿವೆ:
ಕಥಾ ಸಂಕಲನ
ಬದಲಾಯಿಸಿ- ಜರತಾರಿ ಕುಪ್ಪಸ
- ನಮ್ಮೂರಿನ ಕತೆಗಳು
ಕಾದಂಬರಿ
ಬದಲಾಯಿಸಿ- ಅಮರ ಸರಸ್ವತಿ
- ಅರಿಶಿನ ಕುಂಕುಮ
- ಗಂಗಾ ಭವಾನಿ
- ಬತ್ತದ ಕಣ್ಣೀರು
- ಮಧುರ ಮೈತ್ರಿ
- ಮನೆ ತುಂಬಿದ ಮಡದಿ
- ಮನೆ ನಿನ್ನದು ಮನ ನನ್ನದು[೨]
- ಮನೆಗೆ ಬಂದ ಸೊಸೆ
- ಮನೆತನ
- ಮಾಂಗಲ್ಯ ದೇವರು
- ಸೀಮಂತಿನಿ
- ಸ್ವರ್ಗದ ಬಾಗಿಲು
- ಹೆಣ್ಣು, ಹೊನ್ನು,ಮಣ್ಣು
ಸಂಪಾದನೆ
ಬದಲಾಯಿಸಿ- ಜಯದೇವಿ ತಾಯಿ
- ದಕ್ಷಿಣ ಕನ್ನಡದ ಬರಹಗಾರರು
- ನಗೆ ನಂದನ
ಹಾಸ್ಯ ಪ್ರಬಂಧಗಳ ಸಂಕಲನ
ಬದಲಾಯಿಸಿ- ಸುಹಾಸ
ಪ್ರಶಸ್ತಿಗಳು
ಬದಲಾಯಿಸಿಇವರ ಹೆಣ್ಣು-ಹೊನ್ನು-ಮಣ್ಣು ಹಾಗೂ ಮನೆತನ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.