ಸುಹಾಸ್ ಗೋಪಿನಾಥ್

ಸುಹಾಸ್ ಗೋಪಿನಾಥ್ (ಜನನ: ನವೆಂಬರ್ ೪, ೧೯೮೬ ಬೆಂಗಳೂರು) ಒಬ್ಬ ಭಾರತದ ಯುವ ಉದ್ಯಮಿ. ಇವರು ಬಹುರಾಷ್ಟ್ರೀಯ ಕಂಪನಿಯಯಾದ ಗ್ಲೋಬಲ್ಸ್ ಇಂಕ್ ನ ಸಂಸ್ಥಾಪಕ ಅಧ್ಯಕ್ಷರು, ಸಿ ಇ ಓ ಹಾಗು ಛೇರ್ಮನ್. ತಮ್ಮ ೧೪ನೆ ವಯಸ್ಸಿನಲ್ಲಿಯೇ ಮಾಹಿತಿ ತಂತ್ರಜ್ಞಾನ ಕಂಪನಿಯೊಂದನ್ನು ಸ್ಥಾಪಿಸಿ ಅವರಿಗೆ ಹದಿನೇಳು ವರ್ಷವಾಗುವಷ್ಟರಲ್ಲಿ ಕಂಪನಿಯ ಮುಖ್ಯಾಧಿಕಾರಿ ಸ್ಥಾನ ಅಲಂಕರಿಸಿ ಪ್ರಪಂಚದ ಅತೀ ಕಿರಿಯ ಸಿ ಇ ಓ ಆಗಿ ದಾಖಲೆ ಬರೆದರು.

ಸುಹಾಸ್ ಗೋಪಿನಾಥ್
Suhas gopinath1 full-2.jpg
ಯುವ ಉದ್ಯಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಹಾಸ್ ಗೋಪಿನಾಥ್.
ಜನನನವೆಂಬರ್, ೦೪, ೧೯೮೬
ಬೆಂಗಳೂರು
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆಜಾನ್ ಎಫ್. ಕೆನಡಿ ಸರ್ಕಾರಿ ಶಾಲೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಜಾಗತೀಕ ನಾಯಕತ್ವ ಹಾಗು ಸಾರ್ವಜನಿಕ ನಿಯಮಾವಳಿಗಳ ವಿಚಾರದಲ್ಲಿ ಡಿಪ್ಲೋಮ ಪದವಿ
ಉದ್ಯೋಗಗ್ಲೋಬಲ್ಸ್ ಇಂಕ್ ನ ಸಂಸ್ಥಾಪಕ ಹಾಗು ಸಿ ಇ ಓ
Known forಯುವ ಉದ್ಯಮಿ, ೨೦೦೫ನೆ ಸಾಲಿನ ಪ್ರಪಚದ ಅತಿ ಕಿರಿಯ ಸಿ ಇ ಓ ಹೆಗ್ಗಳಿಕೆ

ವೈಯಕ್ತಿಕ ಹಿನ್ನೆಲೆಸಂಪಾದಿಸಿ

ಗೋಪಿನಾಥ್ ಜನಿಸಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ನವೆಂಬರ್ ೪ ೧೯೮೬ ರಲ್ಲಿ. ಇವರ ತಂದೆ ಭಾರತೀಯ ಸೇನೆಗೆ ವಿಜ್ಞಾನಿಯಾಗಿದ್ದರು ಹಾಗು ತಾಯಿ ಗೃಹಿಣಿ[೧]. ಇವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ಜಾಲತಾಣಗಳನ್ನು ರಚಿಸುವ ಬಗೆಯನ್ನು ತಾವೇ ಸ್ವತಃ ಕಲಿತು ತಮ್ಮದೇ ಆದ ಜಾಲ ತಾಣ www.coolhindustan.com ರಚಿಸಿದರು. ಅದೇ ವರ್ಷ ಗ್ಲೋಬಲ್ಸ್ ಇಂಕ್ ಎನ್ನುವ ಕಂಪನಿಯನ್ನು ಆರಂಭಿಸಿದರು. ಮುಂದೆ ಅವರಿಗೆ ಹದಿನೇಳು ವರ್ಷವಾದಾಗ ಅದೇ ಕಂಪನಿ ಗೆ ಸಿ ಇ ಓ ಆಗಿ ಉನ್ನತಾಧಿಕಾರಕ್ಕೇರಿದರು. ಆ ಸಮಯದಲ್ಲಿ ಪ್ರಪಂಚದಲ್ಲಿಯೇ ಅತೀ ಕಿರಿಯ ಸಿ ಇ ಓ ಎಂಬ ಕೀರ್ತಿಗೆ ಭಾಜನರಾಗಿದ್ದರು ಸುಹಾಸ್ ಗೋಪಿನಾಥ್.

ಗೌರವಗಳುಸಂಪಾದಿಸಿ

  • ೨೦೦೫ ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಸಾಧಕರಲ್ಲಿ ಅತಿ ಕಿರಿಯರು ಸುಹಾಸ್ ಗೋಪಿನಾಥ್[೨].
  • ಡಿಸೆಂಬರ್ ೨, ೨೦೦೨ ರಂದು ಯುರೋಪ್ ಸಂಸತ್ತು ಹಾಗು ಅಂತರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಘವು ಬ್ರಸ್ಸೆಲ್ಸ್ ನ ಯುರೋಪೀಯನ್ ಸಂಸತ್ತಿನಲ್ಲಿ "ಯುವ ಸಾಧಕರ ಪ್ರಶಸ್ತಿ"ಯನ್ನು ನೀಡಿ ಗೌರವಿಸಿದೆ[೩].
  • ೨೦೦೮ರ ನವೆಂಬರ್ ನಲ್ಲಿ ನಡೆದ ವಿಶ್ವ ಬ್ಯಾಂಕ್ ನ ಮಾಹಿತಿ ಹಾಗು ಸಂವಹನ ತಂತ್ರಜ್ಞಾನದ ದುಂಡು ಮೇಜಿನ ಸಭೆಗೆ ಆಹ್ವಾನಿತರಾಗಿದ್ದವರಲ್ಲಿ ಇವರೂ ಒಬ್ಬರಾಗಿದ್ದರು. ನವೀನ ಮಾಹಿತಿ ಹಾಗು ಸಂವಹನ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಆಫ್ರಿಕಾ ದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗು ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕೌಶಲ್ಯ ವೃದ್ಧಿ ಕುರಿತಾಗಿತ್ತು ಆ ದುಂಡು ಮೇಜಿನ ಸಭೆ.
  • ದಾವೋಸ್ ನ "ವರ್ಲ್ಡ್ ಎಕನಾಮಿಕ್ ಫೋರಮ್" ೨೦೦೮-೦೯ ನೇ ಸಾಲಿನ "ವಿಶ್ವ ಯುವ ನಾಯಕ" ಎಂದು ಘೋಷಿಸಿತು. ಆ ಬಿರುದು ಪಡೆದವರು ಪ್ರಪಂಚದಾದ್ಯಂತ ಹಲವಾರು ತಾಂತ್ರಿಕ ವಿಚಾರಗಳ ಅಭಿವೃದ್ಧಿಗೆ ಪಾಲ್ಗೊಳ್ಳುವ ಮುಕ್ತ ಅವಕಾಶವಿರುತ್ತದೆ. ಸುಹಾಸ್ ಗೋಪಿನಾಥ್ ಜಾನ್ ಎಫ್. ಕೆನಡಿ ಸರ್ಕಾರಿ ಶಾಲೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಜಾಗತೀಕ ನಾಯಕತ್ವ ಹಾಗು ಸಾರ್ವಜನಿಕ ನಿಯಮಾವಳಿಗಳ ವಿಚಾರದಲ್ಲಿ ಡಿಪ್ಲೋಮ ಪದವಿ ಪಡೆದಿದ್ದಾರೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. "ಭಾರತದ ಹದಿಹರೆಯ ಯುವಕನ ಸಾಹಸಗಾಥೆ". Retrieved 24 April 2014.
  2. "ಹನುಮಂತನ ಬಾಲವನ್ನೂ ಮೀರಿಸಿದ ಪ್ರಶಸ್ತಿ ವಿಜೇತರ ಪಟ್ಟಿ". ಟೈಮ್ಸ್ ಆಫ್ ಇಂಡಿಯಾ. 2005-11-01. Archived from the original on 2011-08-11. Retrieved 2007-07-07.
  3. "ಕಿರಿಯ ಸಾಧಕ ಪ್ರಶಸ್ತಿ". EICC. 2007-12-04. Retrieved 2008-03-18.[permanent dead link]