ಸುಶೀಲಾ ಪಿ. ಉಪಾಧ್ಯಾಯ

ಸಾಧನೆಯ ಹಾದಿಯಲ್ಲಿ ಮುಂದುವರೆದವರು ಸುಶೀಲ. ಸಾಂಸಾರಿಕ ಕರ್ತವ್ಯದೊಂದಿಗೆ ಅನೇಕ ಪ್ರವೃತ್ತಿಗಳನ್ನು ಸಮಾನವಾಗಿ ನಿರ್ವಹಿಸಿದ ಪ್ರತಿಭಾಶೀಲೆ ಇವರು. ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಮನೆಯಲ್ಲಿನ ಕಷ್ಟಗಳನಡುವೆಯೂ ದೊರಕಿದ ಅವಕಾಶಗಳನ್ನು ಬಳಸಿಕೊಂದು ವಿಧ್ಯಾಭ್ಯಾಸಮುಂದುವರೆಸಿದರು. ತನ್ನ ಜಾಣ್ಮೆ, ನೈಪುಣ್ಯ, ಸ್ಮರಣಶಕ್ತಿ, ಸಹನೆ, ಸಹಾನುಭೂತಿ, ಸಮಯಸ್ಪೂರ್ತಿ, ಏಕಾಗ್ರತೆಗಳನ್ನು ಸರಿಯಾಗಿ ಬಳಸಿಕೊಂಡರು. ಇವರ ಪತಿಯಾದ ಪದ್ಮನಾಭ ಉಪಾಧ್ಯಾಯರೊಂದಿಗೆ ಸಹಕರಿಸಿ ಸಾಧನೆಯ ಹಾದಿಯತ್ತ ನಡೆದವರು. ಇವರು ಜನವರಿ ೧೪,೨೦೧೪ ರಂದು ನಿಧನರಾದರು.[]

ಶ್ರೀಮಂತ ಮನೆತನದ ಇವರು ಜನಿಸಿದ್ದು ೧೯೩೭ರಲ್ಲಿ. ಉಡುಪಿ ತಾಲೂಕಿನ ಮಜೂರು ಗ್ರಾಮದಲ್ಲಿ. ಇವರ ತಂದೆ ಪದ್ಮನಾಭ ಮತ್ತು ತಾಯಿ ಲಕ್ಷ್ಮೀ. ಇವರ ತಂದೆ ಕೇರಳದ ತಿರುವನಂತಪುರದಲ್ಲಿ ದೇವಸ್ಥಾನದ ಅರ್ಚಕರಾಗಿ ಕೆಲಸಮಾದುತ್ತಿದ್ದರು.

ಶಿಕ್ಷಣ

ಬದಲಾಯಿಸಿ
  • ಪ್ರಾರ್ಥಮಿಕ ಹಾಗು ಪ್ರೌಢಶಿಕ್ಷಣ ಮುಗಿಸಿದ್ದು ಮಲೆಯಾಳದಲ್ಲಿ.
  • ಪೂನಾದಲ್ಲಿ ಉನ್ನತ ಶಿಕ್ಷಣ ಪದೆದರು.
  • ಮಾಪಿಳ್ಳ ಬ್ಯಾರಿ ಭಾಷೆ ಹಾಗು ಸಂಸ್ಕ್ರುತಿಯಲ್ಲಿ ಡಾಕ್ಟರೇಟ್ ಪಡೆದರು.
  • ಹಿಂದಿಯಲ್ಲಿ ಎಂ.ಎ ಮಾಡಿದ್ದಾರೆ.
  • ರಷ್ಯನ್ ಭಾಷೆಯಲ್ಲಿ ಡಿಪ್ಲೋಮಾ ಮಾಡಿದ್ದಾರೆ.
  • ಸಂಸ್ಕ್ರತವನ್ನು ಎಂ.ಎ ಯಲ್ಲಿ ಉಪಭಾಷೆಯನ್ನಾಗಿ ಕಲಿತಿದ್ದಾರೆ.
  • 'ಬ್ಯಾರಿ ಭಾಷೆಯ ವರ್ಣನಾತ್ಮಕ ಹಾಗೂ ತೌಲನಿಕ ಅಧ್ಯಯನ' ಎಂಬ ಸಂಶೋಧನಾ ಪ್ರಬಂಧ ರಚಿಸಿ ಡಾಕ್ಟರೇಟ್ ಪದವಿಪೆಡೆದರು.
  • ಮಲಯಾಳಂ, ತುಳು, ತಮಿಳು,ಕನ್ನಡ, ಮರಾಠಿ, ಬ್ಯಾರಿ, ಸಂಸ್ಕ್ರುತ, ಹಿಂದಿ, ರಷ್ಯನ್, ಫ್ರೆಂಚ್, ಒಲೊಫ್, ಇಂಗ್ಲೀಷ್ ಹೀಗೆ ಅವರು ಹಲವಾರು ಭಾಷೆ ಬಲ್ಲವರಾಗಿದ್ದರು.

ಸಂಗೀತ, ವೀಣಾವಾದನ, ಸಂಪ್ರದಾಯದ ಹಾಡು, ರಂಗವಲ್ಲಿ, ನಾಟಕಅಭಿನಯ, ಕೃತಿ-ಕಾದಂಬರಿ ರಚನೆ, ಭರತನಾಟ್ಯ, ಪಾಡ್ದನಗಲನ್ನು ಹಾಡುವುದು, ಸಂಶೋಧನೆ ಮಾಡುವುದು.

ವೃತ್ತಿ

ಬದಲಾಯಿಸಿ
  • ಉಡುಪಿಯ ಎಂ.ಜಿ.ಎಂ. ಕಾಲೇಜಿನ ಹಿಂದಿ ಭಾಷಾ ವಿಭಾಗದಲ್ಲಿ 'ಟ್ಯೂಟರ್' ಆಗಿ ಕೆಲವು ಕಾಲ ಕೆಲಸ ಮಾಡಿದ್ದರು.
  • ಸೆಕ್ರೆಡ್ ಹಾರ್ಟ್ ಯುರೋಪಿಯನ್ ಹೈಸ್ಕೂಲಿನಲ್ಲಿ ಅಧ್ಯಾಪಕಿಯಾಗಿದ್ದರು
  • ಬೆಂಗಳೂರಿನ ಬಿ.ಎಂ.ಸ್. ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು.
  • ೧೯೬೯ರಲ್ಲಿ ಕೇಂದ್ರೀಯ ಭಾಷಾ ಸಂಸ್ಥಾನದ ಮುಖ್ಯ ಕಛೇರಿಯಲ್ಲಿ ಸಂಶೋಧನಾಧಿಕಾರಿಯಅಗಿ ಸೇರಿಕೋಂಡರು.
  • ಉತ್ತರಭಾರತದ ಪೌಢಶಾಲೆಗಳಿಂದ ದಕ್ಷಿಣ ಭಾರತ ಕೇಂದ್ರಕ್ಕೆ ಡೆಪ್ಯುಟೇಶನ್ ಆಧಾರದಲ್ಲಿ ಕಲಿಯಲುಬರುವ ಅಧ್ಯಾಪಕರಿಗೆ ದಕ್ಷಿಣದ ಭಾಷೆಗಳನ್ನು ಕಲಿಸಿ, ಆ ಭಾಷಾ ಬೋಧನೆಯಲ್ಲಿ ಅವರನ್ನು ಪರಿಣತರನ್ನಾಗಿಸುವ ಕಠಿಣವಾದ ಕಾರ್ಯದಲ್ಲಿ ಡಾ.ಸುಶೀಲರ ಪರಿಶ್ರಮ ಅಪಾರವಾದುದು.
  • ಸಿದ್ಧ ಸಮಾಧಿ ಯೋಗ ಶಿಬಿರಗಳಲ್ಲಿ ಪಾಲ್ಗೊಂಡು, ತರಬೇತಿಪಡೆದು,ಯೋಗ ಶಿಕ್ಷಕಿಯಾಗಿಯೂ ತರಬೇತಿ ಪಡೆದು ಬಹಳಷ್ಟು ಮಂದಿಗೆ ಗುರುವಾದರು.
  • 'ರೇಕಿ ಚಿಕಿತ್ಸೆ', ಪ್ರಾಣ ಚೈತನ್ಯ ಚಿಕಿತ್ಸೆ','ಪ್ರಕೃತಿ ಚಿಕಿತ್ಸೆ','ಸ್ಪಟಿಕ ಚಿಕಿತ್ಸೆ'ಗಳಲ್ಲಿ ತರಬೇತಿ ಪಡೆದು ಸಮಾಜ ಹಿತಕ್ಕಾಗಿ ಬಳಸಿಕೊಂಡರು.

ಯೋಗ & ಆರ್ಟ್ ಆಫ್ ಲಿವಿಂಗ್

  • ಡಾಕ್ಟರೇಟ್ ಪದವಿಪಡೆದರು.
  • ಗೊರೂರು ರಾಮಸ್ವಾಮಿ ಅಯ್ಯಂಗಾರರ 'ನಮ್ಮೂರ ರಸಿಕರು' ಎಂಬ ಕನ್ನಡ ಕೃತಿಯನ್ನು ಮಲೆಯಾಳಕ್ಕೆ ಬಾಷಾಂತರಿಸಿದ್ದಾರೆ.
  • ಸೆನೆಗಲ್ ನಲ್ಲಿರುವಾಗ ಆಸಕ್ತ ಆಫ್ರಿಕನ್ನರಿಗೆ ಹಿಂದಿ ಬಾಷೆಯನ್ನು ಕಲಿಸಿದ್ದಾರೆ.
  • ಆಫ್ರಿಕನ್ನ ಭಾರತೀಯ ಉಡುಗೆ-ತೊಡುಗೆ, ಆಹಾರ ಪಧ್ದತಿಯ ಬಗ್ಗೆ ಪರಿಚಯಿಸಿದರು.
  • ತುಳು ನಿಘಂಟು ರಚನೆಯ ಹೊಣೆವಹಿಸಿಕೊಂಡರು. ೧೮ ವರ್ಷಗಳಕಾಲ ಅವಿರತವಾಗಿ ನಿಘಂಟು ರಚನೆ ಕಾರ್ಯದಲ್ಲಿ ಮಗ್ನರಾದ್ದರು.

ಕೆಲವು ಕೃತಿಗಳು

ಬದಲಾಯಿಸಿ
  1. 'ಕುವಿ ಫೊನೆಟಿಕ್ ರೀಡರ್'.
  2. 'ಮಲೆಯಾಳ ಭಾಷೆ ಮತ್ತು ಸಾಹಿತ್ಯ'.
  3. 'ದಕ್ಷಿಣ ಭಾರತ ಜನಪದ'.
  4. 'ಆಫ್ರಿಕಾ ಖಂಡದ ಜಾನಪದ'.

ಪ್ರಶಸ್ತಿಗಳು

ಬದಲಾಯಿಸಿ

ಹಾನರ್ಸ್ & ಅವಾರ್ಡ್ಸ್

  1. 'ಗಾರ್ಗಿ'
  2. 'ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ'
  3. ಕರ್ನಾಟಕ ತುಳು ಅಕಾಡೆಮಿಯ ಗೌರವ ಪ್ರಶಸ್ತಿ..
  4. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ.

ಉಲ್ಲೇಖ

  1. http://www.bellevision.com/belle/index.php?action=topnews&type=8269