ಸುಶೀಲಾ ಆಚಾರ್ಯ
ಸುಶೀಲಾ ಆಚಾರ್ಯರು, (ನಿಧನ: ೧೦,ಜನವರಿ, ೨೦೨೨) ದಕ್ಷಿಣ ಕನ್ನಡ ಜಿಲ್ಲೆಯ 'ಕಾರ್ಕಳ'ದವರು. ವಿದ್ಯಾರ್ಥಿದೆಸೆಯಲ್ಲೇ ಸಂಗೀತದ ಪ್ರತಿಭೆಯನ್ನು ಗುರುತಿಸಲಾಯಿತು. ಮುಂದೆ ಅವರು ಮುಂಬಯಿನಗರಕ್ಕೆ ಬಂದಮೇಲೆ ನಗರದ ಹಲವಾರು 'ಹವ್ಯಾಸೀ ನಾಟಕ ತಂಡ'ಗಳ ನಾಟಕಗಳಲ್ಲಿ ಪಾತ್ರವಹಿಸಿ ಸಹೃದಯರ ಗಮನಕ್ಕೆ ಬಂದರು.'ಸುಶೀಲಾ ಆಚಾರ್ಯ'ರು ಅಭಿನಯಿಸಿದ ಕೆಲವು ನಾಟಕಗಳ ವಿವರಗಳು ಹೀಗಿವೆ.
- 'ಧರ್ಮ ದುರಂತ',
- 'ಸತ್ಯಂ ವದ ಧರ್ಮಂ ಚರ',
- 'ರಾಧೇಯ'
- 'ತೊಟ್ಟಿಲು ತೂಗಿದ ಕೈ',
ಸುಶೀಲಾ ಆಚಾರ್ಯ | |
---|---|
Born | 'ಸುಶೀಲಾ ಆಚಾರ್ಯ', ದಕ್ಷಿಣ ಕನ್ನಡ ಜಿಲ್ಲೆಯ 'ಕಾರ್ಕಳ'ದವರು |
Nationality | ಭಾರತೀಯ |
Occupation(s) | ಮುಂಬಯಿನಗರದ ಹಲವಾರು 'ಹವ್ಯಾಸೀ ನಾಟಕ ತಂಡ'ಗಳ ನಾಟಕಗಳಲ್ಲಿ ಪಾತ್ರವಹಿಸಿದ'ಸುಶೀಲಾ ಆಚಾರ್ಯ'ರು ಅಭಿನಯಿಸಿದ ಕೆಲವು ನಾಟಕಗಳ ವಿವರಗಳು ಹೀಗಿವೆ : 'ಧರ್ಮ ದುರಂತ','ಸತ್ಯಂ ವದ ಧರ್ಮಂ ಚರ','ರಾಧೇಯತೊಟ್ಟಿಲು ತೂಗಿದ ಕೈ', |
Known for | ಹಿಂದೂಸ್ತಾನೀ ಸಂಗೀತದಲ್ಲಿ ಪರಿಣತಿಗಳಿಸಿದ್ದಾರೆ. ಸುಶೀಲಾ ಆಚಾರ್ಯರವರು, 'ಹಾರ್ಮೋನಿಯಂ' ಬಾರಿಸಲು ಬಹಳ ಇಷ್ಟಪಡುತ್ತಾರೆ. ' ಹಲವಾರು ಸಮೂಹ ಗಾಯನ ಕಾರ್ಯಕ್ರಮಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವುಗಳು : 'ರಸಮಂಜರಿ,ಸಗಮ ಸಂಗೀತ', ಮುಂತಾದವುಗಳು. |
Awards | ಮುಂಬಯಿನಗರದ ಕರ್ನಾಟಕ ಸಂಘವು ಪ್ರದಾನಮಾಡುವ ಸಾಧನ ಶಿಖರ ಪ್ರಶಸ್ತಿಯ ೨೦೧೧ ರ ಸರಣಿಯ ೩ಜನ ಸಾಧಕರ ಜೊತೆಯಲ್ಲಿ ಒಬ್ಬರಾಗಿ ಗಳಿಸಿದ್ದಾರೆ. |
ಹಿಂದೂಸ್ತಾನಿ ಸಂಗೀತಾಸಕ್ತರು
ಬದಲಾಯಿಸಿಹಿಂದೂಸ್ತಾನೀ ಸಂಗೀತವನ್ನು ಅರಗಿಸಿಕೊಂಡಿರುವ ಸುಶೀಲಾ ಆಚಾರ್ಯರವರು,'ಹಾರ್ಮೋನಿಯಂ' ಬಾರಿಸಲು ಬಹಳ ಇಷ್ಟಪಡುತ್ತಾರೆ.'ಸುಶೀಲಾ ಆಚಾರ್ಯ'ರು ಹಲವಾರು ಸಮೂಹ ಗಾಯನ ಕಾರ್ಯಕ್ರಮಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
- 'ರಸಮಂಜರಿ,'
- 'ಸುಗಮ ಸಂಗೀತ', ಮುಂತಾದವುಗಳು.
'ಮುಂಬಯಿನ ಚಿನ್ಮಯ ಮಿಶನ್ ಸಂಸ್ಥೆ'
ಬದಲಾಯಿಸಿ'ಸುಶೀಲಾ ಆಚಾರ್ಯ'ರ ಪ್ರತಿಭೆ ಮತ್ತು ಸಂಗೀತಾಸಕ್ತಿಗಳನ್ನು ಗುರುತಿಸಿ, ಗೌರವಿಸಿದೆ. ಹಾಗಾಗಿ ಚಿನ್ಮಯ ಮಿಶನ್ ನ ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿ ಸುಶೀಲಾ ಆಚಾರ್ಯರವರು, ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿಸಾಧನ ಶಿಖರ ಪ್ರಶಸ್ತಿ
ಬದಲಾಯಿಸಿಪ್ರತಿವರ್ಷವೂ ಮುಂಬಯಿ ಕರ್ನಾಟಕ ಸಂಘ,ನಾಡು,ನುಡಿ,ಸಾಹಿತ್ಯ,ಸಂಸ್ಕೃತಿ,ಸಂಘಟನೆ,ಶಿಕ್ಷಣ,ರಂಗಭೂಮಿ ಚಟುವಟಿಕೆ,ಪತ್ರಿಕೋದ್ಯಮ,ಇತ್ಯಾದಿ ಕ್ಷೇತ್ರಗಳಲ್ಲಿ ಗಮನೀಯ ಸೇಗೆಗೈದ ಮೂವರು ಸಾಧಕರಿಗೆ,'ಸಾಧನ ಶಿಖರ ಗೌರವ ಪುರಸ್ಕಾರ'ವನ್ನು ನೀಡುತ್ತಾ ಬಂದಿದೆ. ಈ ಪುರಸ್ಕಾರವು, ತಲಾ 'ಐದುಸಾವಿರ ರುಪಾಯಿಗಳ ನಗದು ಹಣ','ಸ್ಮರಣಿಕೆ', ಹಾಗೂ 'ಸನ್ಮಾನಪತ್ರ'ಗಳನ್ನು ಒಳಗೊಂಡಿದೆ. ಸನ್,೨೦೧೧ ರ ಸರಣಿಯ ಪುರಸ್ಕಾರವನ್ನು 'ಸುಶೀಲಾ ಆಚಾರ್ಯರೂ', ತಮ್ಮ ಇನ್ನಿಬ್ಬರು ಸಾಧಕರ ಜೊತೆಯಲ್ಲಿ ಪಡೆದರು. ಶ್ರೀಮತಿ. ಪ್ರಮೋದಿನಿ ರಾವ್, [೧] ಸುಶೀಲಾ ಆಚಾರ್ಯರ ಮಗಳು, ಹಿಂದುಸ್ತಾನಿ ಸಂಗೀತದಲ್ಲಿ ಪರಿಣಿತರು. ಚಿನ್ಮಯ ಆಶ್ರಮದ ನಾದಬಿಂದು ವಿಭಾಗದಲ್ಲಿ ತಾಯಿ,ಮಗಳಿಬ್ಬರೂ, ಅಲ್ಲಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. [೨]
ನಿಧನ
ಬದಲಾಯಿಸಿಶ್ರೀಮತಿ ಸುಶೀಲಾ ಆಚಾರ್ಯ ಅವರು ೧೦, ಜನವರಿ, ೨೦೨೨ ರಂದು ನಿಧನರಾದರು. [೩]
ಉಲ್ಲೇಖಗಳು
ಬದಲಾಯಿಸಿ- ↑ ನಿರ್ದೇಶಕಿ ಪ್ರಮೋದಿನಿ ರಾವ್
- ↑ Ganasarswati Smt.Sushila acharya is no more
- ↑ "ಗೋಕುಲವಾಣಿ,ನುಡಿನಮನ,'ಅಸ್ತಂಗತವಾದ ಸಂಗೀತ ಸರಸ್ವತಿ-ಗೋಕುಲರತ್ನ, ಶ್ರೀಮತಿ.ಸುಶೀಲಾ ಆಚಾರ್ಯ',ಶ್ರೀಮತಿ. ಪ್ರೇಮಾ ಎಸ್.ರಾವ್,ಫೆಬ್ರವರಿ, ೨೦೨೨,ಪುಟ.೪೪" (PDF). Archived from the original on 2022-02-24. Retrieved 2022-02-24.