ಸುವ್ಯಕ್ತ ಭೋಗ ಅಂದರೆ ಸಾರ್ವಜನಿಕವಾಗಿ ಆದಾಯದ ಆರ್ಥಿಕ ಶಕ್ತಿ ಅಥವಾ ಖರೀದಿದಾರನ ಸಂಪಾದಿಸಿದ ಆಸ್ತಿಯ ಶಕ್ತಿಯನ್ನು ತೋರಿಸಿಕೊಳ್ಳಲು ಐಷಾರಾಮಿ ಸರಕುಗಳು ಮತ್ತು ಸೇವೆಗಳ ಮೇಲೆ ಮತ್ತು ಅವನ್ನು ಪಡೆಯಲು ಹಣವನ್ನು ಖರ್ಚುಮಾಡುವುದು. ಗಮನ ಸೆಳೆವ ಗ್ರಾಹಕನಿಗೆ, ವಿವೇಚನಾ ಆರ್ಥಿಕ ಶಕ್ತಿಯ ಅಂತಹ ಸಾರ್ವಜನಿಕ ಪ್ರದರ್ಶನವು ನಿರ್ದಿಷ್ಟ ಸಾಮಾಜಿಕ ಅಂತಸ್ತನ್ನು ಹೊಂದುವ ಒಂದು ವಿಧಾನವಾಗಿದೆ.[][]

ಸಮಾಜಶಾಸ್ತ್ರಜ್ಞ ಮತ್ತು ಅರ್ಥಶಾಸ್ತ್ರಜ್ಞ ಥಾರ್‍ಸ್ಟೈನ್ ವೆಬ್ಲನ್ "ಸುವ್ಯಕ್ತ ಭೋಗ" ಪದವನ್ನು ರಚಿಸಿದರು

೧೯ನೇ ಶತಮಾನದಲ್ಲಿ, ಎರಡನೇ ಕೈಗಾರಿಕಾ ಕ್ರಾಂತಿಯ ಅವಧಿಯಲ್ಲಿ ಬಂಡವಾಳ ಶೇಖರಣೆಯ ಪರಿಣಾಮವಾಗಿ ಬೆಳಕಿಗೆ ಬಂದ ನ್ಯೂವೊ ರೀಶ್ (ನವಶ್ರೀಮಂತರು) ಸಾಮಾಜಿಕ ವರ್ಗದ ವರ್ತನೆಯ ಗುಣಲಕ್ಷಣಗಳನ್ನು ವರ್ಣಿಸಲು ಅರ್ಥಶಾಸ್ತ್ರಜ್ಞ ಮತ್ತು ಸಮಾಜಶಾಸ್ತ್ರಜ್ಞ ಥಾರ್‍ಸ್ಟೈನ್ ವೆಬ್ಲನ್ (೧೮೫೭-೧೯೨೯) ಸುವ್ಯಕ್ತ ಭೋಗ ಪದವನ್ನು ಪರಿಚಯಿಸಿದರು. ಆ ೧೯ನೇ ಶತಮಾನದ ಸಾಮಾಜಿಕ ಮತ್ತು ಐತಿಹಾಸಿಕ ಸಂದರ್ಭದಲ್ಲಿ, ತಮ್ಮ ವಾಸ್ತವ ಅಥವಾ ಗ್ರಹಿತ ಸಾಮಾಜಿಕ ಅಧಿಕಾರ ಮತ್ತು ಪ್ರತಿಷ್ಠೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ವಿಧಾನವಾಗಿ ತಮ್ಮ ಭಾರೀ ಸಂಪತ್ತನ್ನು ಬಳಸಿದ ಮೇಲ್ವರ್ಗದ ಪುರುಷರು, ಮಹಿಳೆಯರು, ಮತ್ತು ಕುಟುಂಬಗಳನ್ನು ವರ್ಣಿಸಲು "ಸುವ್ಯಕ್ತ ಭೋಗ" ಪದವನ್ನು ಸೂಕ್ಷ್ಮವಾಗಿ ಅನ್ವಯಿಸಲಾಗಿತ್ತು.

ಸುವ್ಯಕ್ತ ಭೋಗವು (ತಮ್ಮ ಸ್ವಂತಕ್ಕಾಗಿ ಸರಕು ಮತ್ತು ಸೇವೆಗಳನ್ನು ಖರೀದಿಸಲು ಹಣ ಖರ್ಚುಮಾಡುವುದು) ಗ್ರಾಹಕ ಸಮಾಜದ ಮಾನಸಿಕ ಕಾರ್ಯಾಚರಣೆಯನ್ನು, ಮತ್ತು ಅಭಿವೃದ್ಧಿಹೊಂದಿದ ಅರ್ಥವ್ಯವಸ್ಥೆಯಲ್ಲಿ ತಮ್ಮ ಜೀವನಗಳಿಗೆ ಅಗತ್ಯವೆಂದು ಜನರು ಪರಿಗಣಿಸುವ ಸರಕುಗಳು ಹಾಗೂ ಸೇವೆಗಳ ಸಂಖ್ಯೆ ಹಾಗೂ ಪ್ರಕಾರಗಳಲ್ಲಿ ಹೆಚ್ಚಳವನ್ನು ವಿವರಿಸುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Veblen, Thorstein (1899). The Theory of the Leisure Class. Project Gutenberg.
  2. The New Fontana Dictionary of Modern Thought, Third Edition, Alan Bullock, Stephen Trombley, Eds., 1993, p. 162.