ಪಂಜಾಬಿನ ಪ್ರಸಿದ್ಧ ಜಾನಪದ ವಿದ್ವಾಂಸರು. ಪಾಟಿಯಾಲ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತಿ ವಿಭಾಗದ ಪ್ರಾಧ್ಯಪಕರಾಗಿದ್ದಾರೆ. ಇವರು ಜಾನಪದದಲ್ಲಿ ಜನಪದ ಜೀವನಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಅಧ್ಯಯನ ಮಾಡಿದ್ದಾರೆ. Myth And Rituals Of Sakti ಎಂಬ ವಿಷಯವಾಗಿ ಮಹಾ ಪ್ರಬಂಧವನ್ನು ಬರೆದು ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಈ ಅಧ್ಯಯನ ಪಂಜಾಬ್, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಪ್ರಚಲಿತವಾಗಿರುವ ಫಲಶಕ್ತಿ ದೇವತೆಯನ್ನು ಕುರಿತ ಅಧ್ಯಯನ ಪ್ರೊ.ಸುರ್ಜಿತ್ ಸಿಂಗ್ ಅವರು ಪಂಜಾಬೀ ಜಾನಪನನ್ನು ರಾಚನಿಕ ಸಿದ್ಧಾಂತ ಮತ್ತು ಸಂಕೇತ ವಿಜ್ಞಾನ ಈ ಹಿನ್ನಲೆಗಳಲ್ಲಿ ವಿಶೇಷವಾಗಿ ಅಭ್ಯಾಸ ಮಾಡುವುದರ ಮೂಲಕ ಭಾರತದ ಜಾನಪದ ಅಧ್ಯಯನಕ್ಕೆ ಹೊಸ ಆಯಾಮವನ್ನು ತಂದು ಕೊಟ್ಟಿದ್ದಾರೆ.