ಸುಯೆಜ್ ಕಾಲುವೆ
ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆ. ಇದು ಈಜಿಪ್ಟ್ ದೇಶದಲ್ಲಿದೆ - ಸೈನಾಯಿ ಜಂಬೂದ್ವೀಪದ ಪಶ್ಚಿಮಕ್ಕಿದ್ದು ೧೬೩ ಕಿಮೀ ಉದ್ದವಿದೆ. ಇದರ ಅಗಲ ಅತ್ಯಂತ ಕಡಿಮೆ ಇರುವ ಸ್ಥಳದಲ್ಲಿ ೩೦೦ ಮೀ ಅಗಲವಿದೆ.
ಈ ಕಾಲುವೆಯಿಂದ ಏಷ್ಯಾ ಮತ್ತು ಯೂರೋಪ್ ಖಂಡಗಳ ನಡುವೆ ಪಯಣಿಸುವ ಹಡಗುಗಳು ಆಫ್ರಿಕಾ ಖಂಡದ ಸುತ್ತ ಹೋಗಬೇಕಾಗದೆ ನೇರವಾಗಿ ಹೋಗುವ ಅವಕಾಶವನ್ನು ಪಡೆದಿವೆ. ೧೮೬೯ ರಲ್ಲಿ ಈ ಕಾಲುವೆಯನ್ನು ತೆರವು ಮಾಡಲಾಯಿತು. ಇದಕ್ಕೆ ಮೊದಲು ಹಡಗುಗಳು ಸುಯೆಜ್ ವರೆಗೂ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿಂದ ಸಾಮಾನುಗಳನ್ನು ಸಯೀದ್ ಬಂದರಿನ ವರೆಗೆ ಭೂಮಾರ್ಗದಲ್ಲಿ ತೆಗೆದುಕೊಂಡು ಹೋಗಿ ಬೇರೊಂದು ಹಡಗಿನಲ್ಲಿ ಯೂರೋಪಿಗೆ ಒಯ್ಯಲಾಗುತ್ತಿತ್ತು.
ಇತಿಹಾಸ
ಬದಲಾಯಿಸಿನೈಲ್-ಕೆಂಪು ಸಮುದ್ರದ ಕಾಲುವೆಗಳು ಆಧುನಿಕ ವೆಸ್ಟ್-ಈಸ್ಟ್ ಕಾಲುವೆಗಳನ್ನು ನೈಲ್ ನದಿ ಹಾಗು ಕೆಂಪು ಸಮುದ್ರದ ಮಧ್ಯ ದಾರಿ ಕಲ್ಪಿಸಲು ನಿರ್ಮಾಣ ಮಾಡಿದ್ದರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |