ಸುಭಾಷ್ ಘಾಯ್
ಸುಭಾಷ್ ಘಾಯ್ (1945 ರ ಜನವರಿ 24 ರಂದು ಭಾರತದ ಲೂಧಿಯಾನದಲ್ಲಿ ಜನಿಸಿದರು) ಎಂಬುವವರು ಭಾರತೀಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕತೆಗಾರರಾಗಿದ್ದಾರೆ. ಇವರ ಅತ್ಯುತ್ತಮ ಚಲನಚಿತ್ರಗಳು ಈ ಕೆಳಕಂಡಂತಿವೆ: ಕಾಲಿಚರಣ್ (1976),ಕರ್ಜ್ (1980), ಹೀರೊ (1983), ಮೇರಿ ಜಂಗ್ (1985), ಕರ್ಮ (1986),ರಾಮ್ ಲಖನ್ (1989),ಸೌದಾಗರ್ (1991), ಖಳ್ ನಾಯಕ್ (1993), ಪರ್ ದೇಸ್ (1997) ಮತ್ತು ತಾಲ್ (1999). ಅವರು 'ಮುಕ್ತಾ ಆರ್ಟ್ಸ್' ಎಂಬ ಚಲನಚಿತ್ರ ನಿರ್ಮಾಣ ಕಂಪನಿಯನ್ನು 1982ರಲ್ಲಿ ಆರಂಭಿಸಿದರು. ಅಲ್ಲದೇ ಇವರನ್ನು ಬಾಲಿವುಡ್ ನ "ಪ್ರದರ್ಶಕ" ಎಂದು ಕರೆಯಲಾಗುತ್ತದೆ. ಏಕೆಂದರೆ ಇವರು ಅತ್ಯುತ್ತಮ ಮತ್ತು ಮಹತ್ವಪೂರ್ಣವಾದ ವಿಷಯವನ್ನು ಚಿತ್ರಿಸುವಂತಹ ಪೌರಾಣಿಕ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.
Shubhash Ghai | |
---|---|
Ghai in 2007 | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
Ludhiana, Punjab[೧] | ೨೪ ಜನವರಿ ೧೯೪೫
ವೃತ್ತಿ | Film director, producer, Actor, screenwriter |
ವರ್ಷಗಳು ಸಕ್ರಿಯ | 1970 - present |
ಪತಿ/ಪತ್ನಿ | Mukta Ghai |
Official website |
ಆರಂಭಿಕ ಜೀವನ
ಬದಲಾಯಿಸಿಸುಭಾಷ್ ಘಾಯ್ ರವರು ಪಂಜಾಬಿ ಕುಟುಂಬಕ್ಕೆ ಸೇರಿದ್ದು, ನಾಗ್ಪುರ್ ನಲ್ಲಿ ಜನಿಸಿದರು. ಇವರ ತಂದೆ ದಂತ ವೈದ್ಯರಾಗಿದ್ದು ,ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸುಭಾಷ್ ರವರು ದೆಹಲಿಯಲ್ಲಿ ಅವರ ಮಾಧ್ಯಮಿಕ(ಪ್ರೌಢ) ಶಿಕ್ಷಣ ಪಡೆದರು. ಅನಂತರ ಹರಿಯಾಣದ ರೋತಕ್ ನಲ್ಲಿ ವಾಣಿಜ್ಯ ಪದವಿ ಪಡೆದರು.[೧] ತರುವಾಯ ಅವರು ಫಿಲ್ಮ್ ಅಂಡ್ ಟೆಲಿವಿಷನ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (FTII)ವನ್ನು ಸೇರಲು ಮಹಾರಾಷ್ಟ್ರ ದ ಪುಣೆಗೆ ತೆರಳಿದರು. ಡಿಪ್ಲೋಮವನ್ನು ಪಡೆದ ನಂತರ ಅವರು 1970 ರಲ್ಲಿ ಭಾರತೀಯ ಚಲನಚಿತ್ರೋದ್ಯಮದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು.
ವೃತ್ತಿಜೀವನ
ಬದಲಾಯಿಸಿವಾಸ್ತವವಾಗಿ ಅವರ ವೃತ್ತಿಜೀವನವನ್ನು 1970ರ ಉಮಂಗ್ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಆರಂಭಿಸಿದರು. ಇದು ಗಲ್ಲಾ ಪೆಟ್ಟಿಗೆಯಲ್ಲಿ ಸೋತಿತು.
ಅವರು ಹಿಂದಿ ಚಲನಚಿತ್ರದಲ್ಲಿ ನಟನಾಗಿ ಅವರ ವೃತ್ತಿ ಜೀವನ ಪ್ರಾರಂಭಿಸಿದರು. ತಕ್ದೀರ್ (1967), ನಂತರ ಆರಾಧನ (1969)ದಂತಹ ಆರು ಚಲನಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.[೧] ಕಾಲಿಚರಣ್ (1976), ಅವರ ನಿರ್ದೇಶನದ ಮೊದಲ ಚಲನಚಿತ್ರವಾಗಿದೆ. ಈ ಅವಕಾಶವನ್ನು ಅವರು ಶತ್ರುಘ್ನ ಸಿನ್ಹಾರವರ ಶಿಫಾರಸ್ಸಿನ ಮೇರೆಗೆ ಪಡೆದಿದ್ದರು. ಕಾಲಿಚರಣ್ , ಆ ಸಮಯದಲ್ಲಿ ಅತ್ಯಂತ ಜನಪ್ರಿಯತೆ ಕಂಡ ಚಲನಚಿತ್ರಗಳಲ್ಲಿ ಒಂದಾಗಿದೆ. 2005ರ ಹೊತ್ತಿಗೆ, ಅವರು 15 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು ಚಿತ್ರಕತೆ ಬರೆದಿದ್ದಾರೆ. ಈ ಚಲನಚಿತ್ರಗಳಲ್ಲಿ 13 ಚಲನಚಿತ್ರಗಳು ಅತ್ಯಂತ ಯಶಸ್ವಿಯಾಗಿವೆ. 1982 ರಲ್ಲಿ, ಅವರು ಮುಕ್ತಾ ಆರ್ಟ್ಸ್ ಪ್ರೈವೆಟ್ ಲಿಮಿಟೆಡ್ಅನ್ನು ಪ್ರಾರಂಭಿಸಿದರು. ಇದು 2000 ದ ಇಸವಿಯಲ್ಲಿ ಸಾರ್ವಜನಿಕ ಕಂಪನಿಯಾಯಿತು. ಸುಭಾಷ್ ಘಾಯ್ ಇದರ ಅಧ್ಯಕ್ಷ ಮತ್ತು ಮಹಾನಿರ್ದೇಶಕರಾದರು.
ಕರ್ಜ್ (1980), ವಿಧಾತಾ (1982), ಹೀರೊ (1983), ಕರ್ಮ (1986) ಮತ್ತು ರಾಮ್ ಲಖನ್ (1989) , 1980ರ ಹೊತ್ತಿನಲ್ಲಿ ಬಿಡುಗಡೆಯಾದ ಇವರ ಪ್ರಮುಖ ಚಲನಚಿತ್ರಗಳಾಗಿವೆ. ಇವರು ಸೌದಾಗರ್ (1991) ಚಲನಚಿತ್ರಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಚಲನಚಿತ್ರದಲ್ಲಿ ಪ್ರಸಿದ್ಧ ನಟರಾದ ದಿಲೀಪ್ ಕುಮಾರ್ ಮತ್ತು ರಾಜ್ ಕುಮಾರ್ ರವರನ್ನು ಪರಸ್ಪರ ವೈರುಧ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 1993 ರಲ್ಲಿ ಬಿಡುಗಡೆಯಾದ ಅವರ ಖಳ್ ನಾಯಕ್ ಚಲನಚಿತ್ರವು, ಚೋಲಿ ಕೆ ಪೀಚೆ ಕ್ಯಾ ಹೆ ಎಂಬ ಹಾಡನ್ನು ಒಳಗೊಂಡಿದ್ದಕ್ಕಾಗಿ ಮತ್ತು ಪ್ರಖ್ಯಾತ ನಟರಾದ ಸಂಜಯ್ ದತ್ತ್ ರವರ ಅತ್ಯುತ್ತಮ ಅಭಿನಯಕ್ಕಾಗಿ ಜನಪ್ರಿಯವಾಗಿತ್ತು.
1990ರ ಹೊತ್ತಿನ ಅವರ ಎರಡು ಚಲನಚಿತ್ರಗಳು, ಪರ್ ದೇಸ್ (1997)(ವಿದೇಶ) ಮತ್ತು ತಾಲ್ (1999)(ತಾಳ) ಅನ್ನು ಅಂತರಾಷ್ಟ್ರೀಯವಾಗಿ ಬಿಡುಗಡೆಮಾಡಲಾಯಿತು. ಅಲ್ಲದೇ ಅನೇಕ ವಾರಗಳ ವರೆಗೆ ಈ ಚಲನಚಿತ್ರಗಳನ್ನು U.S. ಗಲ್ಲಾ ಪೆಟ್ಟಿಗೆ ಪಟ್ಟಿಯ ಅಗ್ರ 20 ಚಲನಚಿತ್ರಗಳಲ್ಲಿ ಪ್ರದರ್ಶಿಸಲಾಯಿತು. ಇವರ ಅನಂತರದ , ಯಾದೇ (2001) ಮತ್ತು ಕಿಸ್ನ (2005) ಎಂಬ ಚಲನಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ತೀವ್ರವಾಗಿ ಸೋಲನ್ನನುಭವಿಸಿದವು.
ನಂತರ ಅವರು ನಿರ್ದೇಶನದಿಂದ ವಿರಾಮ ಪಡೆದು, ನಿರ್ಮಾಪಕರಾದರು. ಐತ್ರಾಜ್ (2004), 36 ಚೀನಾ ಟೌನ್ (2006) ಮತ್ತು ಅಪ್ನ ಸಪ್ನ ಮನಿ ಮನಿ (2006) ಯಂತಹ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಂಡ ಚಲನಚಿತ್ರಗಳನ್ನು ಬಿಡುಗಡೆ ಮಾಡಿ ನಿರ್ಮಾಪಕರಾಗಿಯೂ ಯಶ್ವಸ್ವಿಯಾದರು.
ನಿರ್ಮಾಪಕರಾಗಿ, ಇಕ್ಬಾಲ್ (2005) ಚಲನಚಿತ್ರವನ್ನು ಹೊರತುಪಡಿಸಿದರೆ ಇವರ ಬಹುಪಾಲು ಚಲನಚಿತ್ರಗಳು ಸಾಧಾರಣವಾಗಿದ್ದವು. ಇಕ್ಬಾಲ್ ಚಲನಚಿತ್ರವನ್ನು ವಿಪುಲ್ ಕೆ ರಾವಲ್ ರವರು ಅತ್ಯುತ್ತಮವಾಗಿ ಬರೆದಿದ್ದಾರೆ. 2006 ರಲ್ಲಿ, ವಿಸ್ಲಿಂಗ್ ವುಡ್ಸ್ ಇಂಟರ್ ನ್ಯಾಷನಲ್ ಎಂಬ ಕಲಾತ್ಮಕ ಚಲನಚಿತ್ರ ಸಂಸ್ಥೆಯನ್ನು ಮುಂಬೈನಲ್ಲಿ ನಿರ್ಮಿಸಿದರು[೨]. ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಚಲನಚಿತ್ರ ನಿರ್ಮಾಣದ ಅನೇಕ ರೀತಿಗಳ ಬಗ್ಗೆ ತರಬೇತಿ ನೀಡುತ್ತದೆ - ತಯಾರಿಕೆ, ನಿರ್ದೇಶನ, ಚಲನಚಿತ್ರ ಕಲೆ, ನಟನೆ, ಚಲನೆಯ ರೇಖಾಚಿತ್ರ ರಚನಾಕ್ರಮ(ಅನಿಮೇಷನ್) ಇತ್ಯಾದಿ. ಆಲ್ಫರ್ಡ್ ಹಿಚ್ ಕಾಕ್ ನಂತೆ ಇವರು ಕೂಡ ಅವರದೇ ನಿರ್ದೇಶನ ಸಾಹಸಗಳ ಮೂಲಕ ಸಂಕ್ಷಿಪ್ತ ಸಾಹಿತ್ಯಕ ಚಿತ್ರವನ್ನು ನೀಡುವುದಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ನಿರ್ದೇಶನದಿಂದ ಮೂರು ವರ್ಷಗಳ ಕಾಲ ವಿರಾಮ ಪಡೆದ ನಂತರ 2008 ರಲ್ಲಿ ನಿರ್ದೇಶನದತ್ತ ಮರಳಿದರು. ಇವರು ನಿರ್ದೇಶಿಸಿದ ಬ್ಲ್ಯಾಕ್ ಅಂಡ್ ವೈಟ್ 2008 ರ ಮಾರ್ಚ್ 7 ರಂದು ಬಿಡುಗಡೆಯಾಯಿತು. ಅನಂತರ ಯುವರಾಜ್ ಕೂಡ 2008ರಲ್ಲಿ ಬಿಡುಗಡೆಯಾಯಿತು. ಇದು ಗಲ್ಲಾ ಪೆಟ್ಟಿಗೆಯಲ್ಲಿ ಸೋತಿತು; ಪ್ರಾಸಂಗಿಕವಾಗಿ ಜೈ ಹೋ ಹಾಡು ಈ ಚಲನಚಿತ್ರದ ಭಾಗವಾಗಿತ್ತು. ಆದರೆ ಇದನ್ನು ತೆರೆಯ ಮೇಲೆ ಪ್ರದರ್ಶಿಸಲು ನಟ ಜಾಯಿದ್ ಖಾನ್ ಗೆ ಈ ಹಾಡು ಒಪ್ಪುವುದಿಲ್ಲ ಎಂದು ಘಾಯ್ ಭಾವಿಸಿದರು.[೩], ತರುವಾಯ ಈ ಹಾಡನ್ನು ಸ್ಲಂಡಾಗ್ ಮಿಲಿಯನೇರ್ ಚಿತ್ರದಲ್ಲಿ ಬಳಸಲಾಯಿತು. A. R. ರೆಹಮಾನ್ ಆಸ್ಕರ್ ಪ್ರಶಸ್ತಿ ಗೆದ್ದ ನಂತರ, ಒಂದು ಸಂದರ್ಶನದಲ್ಲಿ ಈ ಹಾಡಿನಲ್ಲಿ ಜೈ ಹೋ ಪದಗಳನ್ನು ಬಳಸಲು ಹೇಳಿದವರು ಘಾಯ್ ಎಂಬುದನ್ನು ಬಹಿರಂಗಪಡಿಸಿದರು[೪].
ವೈಯಕ್ತಿಕ ಜೀವನ
ಬದಲಾಯಿಸಿಘಾಯ್ (ರೆಹಾನ ಫಾರೂಕಿ) ಮುಕ್ತಾ ಘಾಯ್ ರವರನ್ನು ಮದುವೆಯಾದರು. ಅವರನ್ನು ಮದುವೆಯಾದ ನಂತರವೇ ಅವರ ಕಂಪನಿಗೆ 'ಮುಕ್ತಾ ಆರ್ಟ್ಸ್' ಎಂಬ ಹೆಸರನ್ನಿಟ್ಟರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಪುತ್ರಿ ಮೇಘನಾ ಘಾಯ್, ಅವರ ಕನಸಿನ ಯೋಜನೆಯಾದ ವಿಸ್ಲಿಂಗ್ ವುಡ್ಸ್ ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಫಾರ್ ಫಿಲ್ಮ್ಸ್, ಮೀಡಿಯ, ಅನಿಮೇಷನ್ ಅಂಡ್ ಮೀಡಿಯಾ ಆರ್ಟ್ಸ್ಅನ್ನು ನೋಡಿಕೊಳ್ಳುತ್ತಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿ- 1992: ಅತ್ಯುತ್ತಮ ನಿರ್ದೇಶಕ: ಸೌದಾಗರ್
- 1998: ಅತ್ಯುತ್ತಮ ಚಿತ್ರಕಥೆ: ಪರ್ ದೇಸ್ [೫]
ಚಲನಚಿತ್ರಗಳ ಪಟ್ಟಿ
ಬದಲಾಯಿಸಿ- ಯುವರಾಜ್ (2008)- ಸಂಗೀತದ ಅಸಮಾನ್ಯ ಸಂಯೋಜನೆ
- ಬ್ಲ್ಯಾಕ್ ಅಂಡ್ ವೈಟ್ (2008)
- ಓಂ ಶಾಂತಿ ಓಂ (2007) ಕರ್ಜ್ ನ ಓಂ ಶಾಂತಿ ಓಂ ಹಾಡಿನಲ್ಲಿ
- ಗುಡ್ ಬಾಯ್, ಬ್ಯಾಡ್ ಬಾಯ್ (2007) (ನಿರ್ಮಾಪಕ)
- ಅಪ್ನ ಸಪ್ನ ಮನಿ ಮನಿ (2006) (ನಿರ್ಮಾಪಕ)
- ಶಾದಿ ಸೆ ಪೆಹ್ಲೆ (2006) (ಕಾರ್ಯನಿರ್ವಹಣಾ ನಿರ್ಮಾಪಕ)
- 36 ಚೀನಾ ಟೌನ್ (2006) (ನಿರ್ಮಾಪಕ)
- ಇಕ್ಬಾಲ್ (2005) (ನಿರ್ಮಾಪಕ)
- Kisna: The Warrior Poet (2005)
- ಐತ್ರಾಜ್ (2004) (ನಿರ್ಮಾಪಕ)
- ಜಾಗರ್ಸ್ ಪಾರ್ಕ್ (2003) (ನಿರ್ಮಾಪಕ)
- ಯಾದೇ (2001)
- ತಾಲ್ (1999)
- ಪರ್ ದೇಸ್ (1997)
- ತ್ರಿಮೂರ್ತಿ (1995) (ನಿರ್ಮಾಪಕ)
- ಖಳ್ ನಾಯಕ್ (1993)
- ಸೌದಾಗರ್ (1991)
- ರಾಮ್ ಲಖನ್ (1989)
- ಕರ್ಮ (1986)
- ಮೇರಿ ಜಂಗ್ (1985)
- ಹೀರೊ (1983/II)
- ವಿಧಾತಾ (1982)
- ಕ್ರೋಧಿ (1981)
- ಕರ್ಜ್ (1980)
- ಗೌತಮ್ ಗೋವಿಂದ (1979)
- ವಿಶ್ವನಾಥ್ (1978)
- ಕಾಲಿಚರಣ್ (1976)
- ಆರಾಧನ (1969) ದಲ್ಲಿ ಸೂರಜ್ (ರಾಜೇಶ್ ಖನ್ನಾ) ನ ಸ್ನೇಹಿತ ಪ್ರಕಾಶ್
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ ಪ್ರೊಫೈಲ್ Archived 2008-02-14 ವೇಬ್ಯಾಕ್ ಮೆಷಿನ್ ನಲ್ಲಿ. ಮುಕ್ತಾ ಆರ್ಟ್ಸ್ .
- ↑ ಸುಭಾಷ್ ಘಾಯ್ ಅನ್ ವೇಲ್ಸ್ ಡ್ರೀಮ್ ಪ್ರಾಜೆಕ್ಟ್ IndiaFM, ಸೋಮವಾರ, 2006 ಮಾರ್ಚ್ 27.
- ↑ "Slumdog's 'Jai Ho' was composed for Yuvvraaj". OneIndia. 25 February 2009. Archived from the original on 2 ಮಾರ್ಚ್ 2009. Retrieved 3 ನವೆಂಬರ್ 2010.
- ↑ “ಸುಭಾಷ್ ಘಾಯ್ ಈಸ್ ದಿ ಒನ್ ಹು ಆಸ್ಕಡ್ ಮಿ... ದಿ ಟೈಮ್ಸ್ ಆಫ್ ಇಂಡಿಯ , 2009 ರ ಫೆಬ್ರವರಿ 24.
- ↑ ಪ್ರಶಸ್ತಿಗಳು ಇಂಟರ್ ನೆಟ್ ಮೂವೀ ಡೇಟಾಬೇಸ್ .