ಸುಜಾತಾ ಸ್ತೂಪ
ಸುಜಾತಾ ಸ್ತೂಪ, ಅಥವಾ ಸುಜಾತಾ ಕುಟಿ ಸ್ತೂಪ ಅಥವಾ ಸುಜಾತಾ ಗಢ್ ಭಾರತದ ಬಿಹಾರ ರಾಜ್ಯದ ಬೋಧ್ ಗಯಾಕ್ಕೆ ಸ್ವಲ್ಪ ಪೂರ್ವದಲ್ಲಿರುವ ಸೇನಾನಿಗ್ರಾಮ ಹಳ್ಳಿಯಲ್ಲಿ ಸ್ಥಿತವಾಗಿರುವ ಒಂದು ಬೌದ್ಧ ಸ್ತೂಪವಾಗಿದೆ. ಬೋಧ್ ಗಯಾದಿಂದ ಸುಜಾತಾ ಸ್ತೂಪಕ್ಕೆ ಸುಮಾರು ೨೦ ನಿಮಿಷಗಳ ನಡಿಗೆಯಾಗಿದೆ. ಇದನ್ನು ಆರಂಭದಲ್ಲಿ ಕ್ರಿ.ಪೂ. ೨ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಇದು ಗಾಢ ಬೂದು ನಯಗೊಳಿಸಿದ ಸಾಮಾನುಗಳು ಮತ್ತು ಹತ್ತಿರದ ಮಠದಲ್ಲಿ ರಂಧ್ರದ ಗುರುತುಳ್ಳ ನಾಣ್ಯದ ಶೋಧನೆಗಳ ಮೂಲಕ ದೃಢಪಟ್ಟಿದೆ.[೧]
ಈ ಸ್ತೂಪವು ಬಾಕ್ರೌರ್ ಗ್ರಾಮದ ಕಾವಾಡಿಗಿತ್ತಿ ಸುಜಾತಾಳಿಗೆ ಸಮರ್ಪಿತವಾಗಿತ್ತು. ಇವಳು ಆಲದ ಮರದ ಕೆಳಗೆ ಕೂಡುತ್ತಿದ್ದ ಗೌತಮ ಬುದ್ಧನಿಗೆ ಈ ಸ್ಥಳದಲ್ಲಿ ಹಾಲು ಮತ್ತು ಅನ್ನವನ್ನು ನೀಡುತ್ತಿದ್ದಳೆಂದು ಹೇಳಲಾಗುತ್ತದೆ. ಹೀಗೆ ಉಣಿಸಿದ ಮೇಲೆ ಅವನ ಏಳು ವರ್ಷಗಳ ಉಪವಾಸ ತಪಸ್ಸು ಮುಗಿದು ಮಧ್ಯಮ ಮಾರ್ಗದ ಮೂಲಕ ಜ್ಞಾನೋದಯವನ್ನು ಪಡೆಯಲು ಸಾಧ್ಯವಾಯಿತು.[೨][೩][೪]
ಉಲ್ಲೇಖಗಳು
ಬದಲಾಯಿಸಿ- ↑ Geary, David; Sayers, Matthew R.; Amar, Abhishek Singh (2012). Cross-disciplinary Perspectives on a Contested Buddhist Site: Bodh Gaya Jataka (in ಇಂಗ್ಲಿಷ್). Routledge. pp. 35–36. ISBN 9781136320675.
- ↑ Prasoon, Shrikant (2007). Knowing Buddha : [life and teachings]. [Delhi]: Hindoology Books. ISBN 9788122309638.
- ↑ Planet, Lonely; Blasi, Abigail (2017). Lonely Planet India (in ಇಂಗ್ಲಿಷ್). Lonely Planet. ISBN 9781787011991.
- ↑ Dwivedi, Sunita; Lama, Dalai (foreword) (2006). Buddhist heritage sites of India. New Delhi: Rupa & Co. ISBN 8129107384.
- ↑ Geary, David (2017). The Rebirth of Bodh Gaya: Buddhism and the Making of a World Heritage Site (in ಇಂಗ್ಲಿಷ್). University of Washington Press. p. 209 Note 1. ISBN 9780295742380.