ಸುಕ್ಕು
ಸುಕ್ಕು ಎಂದರೆ ಚರ್ಮ ಅಥವಾ ಬಟ್ಟೆಯಂತಹ, ಇತರ ವಿಷಯಗಳಲ್ಲಿ ನಯವಾಗಿರುವ ಮೇಲ್ಮೈಯಲ್ಲಿ ಕಾಣುವ ಮಡಿಕೆ, ಏಣುಗೆರೆ ಅಥವಾ ನಿರಿಗೆ. ಚರ್ಮದ ಸುಕ್ಕುಗಳು ಸಾಮಾನ್ಯವಾಗಿ ಗ್ಲೈಕೇಶನ್, ಅಭ್ಯಾಸವಾಗಿರುವ ಮಲಗುವ ಭಂಗಿಗಳು,[೧] ದೇಹರಾಶಿಯ ಕಳೆತ, ಸೂರ್ಯ ಹಾನಿಯಂತಹ ವಯಸ್ಸಾಗುವಿಕೆಯ ಪ್ರಕ್ರಿಯೆಗಳ ಪರಿಣಾಮವಾಗಿ, ಅಥವಾ ತಾತ್ಕಾಲಿಕವಾಗಿ, ನೀರಿನಲ್ಲಿ ದೀರ್ಘಕಾಲ ಮುಳುಗಿಸಿದ ಪರಿಣಾಮವಾಗಿ ಕಾಣಿಸಿಕೊಳ್ಳುತ್ತವೆ. ಚರ್ಮದಲ್ಲಿ ವಯಸ್ಸಿನ ಸುಕ್ಕಾಗುವಿಕೆಯು ಅಭ್ಯಾಸವಾಗಿರುವ ಮುಖಭಾವಗಳು, ವಯಸ್ಸಾಗುವಿಕೆ, ಸೂರ್ಯ ಹಾನಿ, ಧೂಮಪಾನ, ಕಳಪೆ ಜಲಸಂಚಯ, ಮತ್ತು ವಿವಿಧ ಇತರ ಅಂಶಗಳಿಂದ ಪ್ರೋತ್ಸಾಹಿತವಾಗುತ್ತದೆ.[೨] ಮಾನವರಲ್ಲಿ, ಇದನ್ನು ಸ್ವಲ್ಪ ಮಟ್ಟಿಗೆ ವಿಪರೀತವಾಗಿ ಸೂರ್ಯನಿಗೆ ಚರ್ಮವನ್ನು ಒಡ್ಡುವುದನ್ನು ತಪ್ಪಿಸಿ ಹಾಗೂ ಆಹಾರದ ಮೂಲಕವೂ ತಡೆಯಬಹುದು.
ಉಲ್ಲೇಖಗಳು
ಬದಲಾಯಿಸಿ- ↑ American Academy of Dermatology. "Causes of Aging". AgingSkinNet. American Academy of Dermatology. Retrieved 5 March 2013.
- ↑ Anderson, Laurence. 2006. Looking Good, the Australian guide to skin care, cosmetic medicine and cosmetic surgery. AMPCo. Sydney. ISBN 0-85557-044-X.