ಹೊಸ ರಾಜ್ಯದ ಉದಯ

ಬದಲಾಯಿಸಿ

ಸೀಮಾಂಧ್ರವು ಆಂಧ್ರ ಪ್ರದೇಶರಾಜ್ಯದ ಒಂದು ಭಾಗಭಾಗವಾಗಿತ್ತು .ಈಗ ಅದೇ ಆಂಧ್ರ ಪ್ರದೇಶವೆಂದು ಕರೆಯಲ್ಪಡುತ್ತದೆ.

  • ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ) ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).

ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು 294 ಸದಸ್ಯರುಳ್ಳ ಆಂಧ್ರ ವಿಧಾನಸಭೆಯಲ್ಲಿ ತೆಲಂಗಾಣದ 119 ಶಾಸಕರಿದ್ದಾರೆ. ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ . ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ.

ಸೀಮಾಂಧ್ರಕ್ಕೆ ಹೊಸ ರಾಜಧಾನಿ

ಬದಲಾಯಿಸಿ
 
ಆಂಧ್ರ ಪ್ರದೇಶರಾಜ್ಯದಲ್ಲಿ ಪ್ರತ್ಯೇಕಗೊಂಡ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ; ಹಳದಿ ಬಣ್ಣದಲ್ಲಿರುವುದು ಹೊಸದಾಗಿ ಉದಯವಾದ ಆಂಧ್ರ ಪ್ರದೇಶ

2 Dec, 2016

 
ಆಂಧ್ರ ಪ್ರದೇಶದ ರಾಜಧಾನಿ ಪ್ರದೇಶ ಅಮರಾವತಿ ತೋರಿಸುವ ನಕ್ಷೆ, ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಮಧ್ಯದಲ್ಲಿದೆ-ಬಣ್ಣದಗೆರೆ ಕೃಷ್ಣಾನದಿ
  • ದಿ. ಜೂನ್ 2, 2014, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).[]
  • ಮೂಲ ಆಂಧ್ರ ಪ್ರದೇಶ ಇಬ್ಭಾಗವಾಗಿ ತೆಲಂಗಾಣ ಆಂಧ್ರ ಎಂದುಎರಡು ರಾಜ್ಯಗಳಾದಾಗ ಹೈದರಾಭಾದು ತೆಲಂಗಾಣಕ್ಕೆ ರಾಜಧಾನಿಯಾಯಿತು. ಹೊಸ ಆಂಧ್ರವು ಅಮರಾವತಿ ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು.
  • ಅಮರಾವತಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು.[]

ಆಂಧ್ರ ಪ್ರದೇಶ ಚುನಾವಣೆ -2014

ಬದಲಾಯಿಸಿ
  • ಆಂಧ್ರ ಪ್ರದೇಶ ಸರ್ಕಾರ (ಹೊಸ ಆಂಧ್ರ )
  • ಶ್ರೀ ನಾರಾ ಚಂದ್ರಬಾಬು ನಾಯಿಡು -ಮಾನ್ಯ ಮುಖ್ಯ ಮಂತ್ರಿ
  • ಟಿಡಿಪಿ (ತೆಲಗು ದೇಶಂ ಪಾರ್ಟಿ) --= 101
  • ವೈಎಸ್ಆರ್ ಪಾರ್ಟಿ(ವೈಎಸ್ಆರ್ ಕಾಂಗ್ರೆಸ್ ಪಾರ್ಟಿ)= 66
  • ಬಿಜೆಪಿ (ಭಾರತೀಯ ಜನತಾ ಪಾರ್ಟಿ)--= 4
  • ಎನ್ ಪಿ.(ನವೋದಯ ಪಾರ್ಟಿ) --= 1
  • ಪಕ್ಷೇತರ ---------------=1
  • ಖಾಲಿ -------- =2
  • ಓಟ್ಟು -------Total= 175

ಉಲ್ಲೇಖಗಳು

ಬದಲಾಯಿಸಿ
  1. (ವಿಜಯ ಕರ್ನಾಟಕ ದಿ. ಜೂನ್ 2, 2014)
  2. ಅಮರಾವತಿಗೆ ಆಡಳಿತ ಸ್ಥಳಾಂತರ