ಸಿ.ವಿ.ಎಲ್.ಶಾಸ್ತ್ರಿ

'ಸಿ.ವಿ.ಎಲ್.ಶಾಸ್ತ್ರಿ,' ಕನ್ನಡ ಚಲನಚಿತ್ರಗಳ ದಕ್ಷಿಣ ಭಾರತದ ಹಂಚಿಕೆದಾರ, ಹಾಗೂ ಮಾಲ್ಗುಡಿ ಡೇಸ್ ಚಿತ್ರ ನಿರ್ಮಾಪಕ, ದೇಶದ ಒಬ್ಬ 'ಸುಪ್ರಸಿದ್ಧ ಚಲನಚಿತ್ರ ನಿರ್ಮಾಪಕರಲ್ಲೊಬ್ಬರು'. ಈ ಚಿತ್ರದ ನಿರ್ದೇಶನವನ್ನು ಶಂಕರ್ ನಾಗ್ ನೆರವೇರಿಸಿದ್ದರು.

ಜನನ ಮತ್ತು ಪರಿವಾರ

ಬದಲಾಯಿಸಿ

ಮೂಲತಃ ಬೆಂಗಳೂರಿನ ಬಳಿಯ ರಾಮನಗರದವಾಸಿ ಯಾದ ಶಾಸ್ತ್ರಿಯವರು ಐವತ್ತರ ದಶಕದಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. ಸಿ.ವಿ.ಎಲ್.ಶಾಸ್ತ್ರಿಯವರು ನಿರ್ಮಿಸಿದ ಕೆಲವು ಪ್ರಮುಖ ಚಿತ್ರಗಳು : ’ಕಳ್ಳ ಕುಳ್ಳ’ ’ಮಲಯ ಮಾರುತ’ ’ಪಕ್ಕಾ ಕಳ್ಳ’ ’ಹೆಣ್ಣು ಹುಲಿ’ ’ಆಸೆಯ ಬಲೆ,’ ಮುಂತಾದ ಚಿತ್ರಗಳು. ’ಆತಂಕ’ ಚಲನಚಿತ್ರಕ್ಕೆ ೬ ರಾಜ್ಯ ಪ್ರಶಸ್ತಿಗಳು ದೊರಕಿದ್ದವು.

ಹುದ್ದೆಗಳು

ಬದಲಾಯಿಸಿ
  • ’ಕರ್ನಾಟಕ ವಾಣಿಜ್ಯ ಮಂಡಲಿ(KFCC)ಯ ಅಧ್ಯಕ್ಷ'
  • ೧೯೯೩ ರಲ್ಲಿ ಬೆಂಗಳೂರಿನಲ್ಲಿ ಜರುಗಿದ 'ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ಕ್ಕೆ ಮುಂದೆ ನಿಂತು ನಡೆಸಿಕೊಟ್ಟರು.
  • 'ಶಾಸ್ತ್ರಿ ಮೂವೀಸ್'
  • 'ಶಾಸ್ತ್ರೀ ಸಿನಿ ಆರ್ಟ್ಸ್ ಪ್ರೊಡಕ್ಷನ್',
  • 'ಅಖಿಲ ಭಾರತ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರು'
  • 'ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸ್ಥಾಪಕ ಅಧ್ಯಕ್ಷ',
  • 'ಸ್ಕೈ ಟಾಪ್ ಬಿಲ್ಡರ್ಸ್ ಅಧ್ಯಕ್ಷ', 'ಬೆಂಗಳೂರು ಮತ್ತು ಮೈಸೂರಿನಲ್ಲಿ ಮನೆಗಳನ್ನು ನಿರ್ಮಾಣಮಾಡಿ ಮಾರಾಟಮಾಡುವ ಸಂಸ್ಥೆಯ ಮುಖ್ಯಸ್ಥ'

ಪ್ರಶಸ್ತಿಗಳು

ಬದಲಾಯಿಸಿ

ಪ್ರತಿವರ್ಷವೂ ಪ್ರದಾನಮಾಡುವ ’ಸನ್ ೨೦೦೮ ರ ಸಾಲಿನ 'ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿ’ಯನ್ನು ಹಿರಿಯ ನಿರ್ಮಾಪಕ 'ಸಿ.ವಿ.ಎಲ್.ಶಾಸ್ತ್ರಿ'ಯವರಿಗೆ, ಮುಂಬೈನಲ್ಲಿ, ಹೆಸರಾಂತ ಹಿಂದಿ ಚಿತ್ರರಂಗದ ನಟ, ರಾಜೇಶ್ ಖನ್ನರವರ ಹಸ್ತದಿಂದ ಪ್ರದಾನಮಾಡಲಾಯಿತು. 'ಪ್ರಶಸ್ತಿಪತ್ರ', 'ಫಲಕ', ಹಾಗೂ 'ನಗದು ಹಣ'ವೂ ಸೇರಿದೆ. ಈ ಸಂದರ್ಭದಲ್ಲಿ, ಅಕಾಡೆಮಿಯ ಅಧ್ಯಕ್ಷ, ಸಂತೋಷ್ ಸಿಂಗ್ ಜೈನ್, ಮತ್ತು ಅತಿಧಿ, ರಮೇಶ್ ಪ್ರಸಾದ್, ಉಪಸ್ಥಿತರಿದ್ದರು. ಈ ಪ್ರಶಸ್ತಿಯನ್ನು ಹಿಂದೆ, ಆರ್.ಕೆ.ಲಕ್ಷ್ಮಣ್ ಮತ್ತು ಪಾರ್ವತಮ್ಮ ರಾಜಕುಮಾರ್ ಗಳಿಸಿದ್ದರು.

ತಮ್ಮ ೮೨ ನೆಯ ವಯಸ್ಸಿನಲ್ಲಿ ಸಿ.ವಿ.ಎಲ್.ಶಾಸ್ತ್ರಿಯವರು, ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸುಮಾರು ೩ ತಿಂಗಳಿನಿಂದ ಚಿಕಿತ್ಸೆಪಡೆಯುತ್ತಿದ್ದರು. ಸ್ವಲ್ಪದಿನದಿಂದ ಪ್ರಜ್ಞಾಹೀನಾವಸ್ಥೆಯಲ್ಲಿದ್ದರು. ಸನ್, ೨೦೧೨ ರ, ಜನವರಿ, ೫, ಗುರುವಾರ ರಾತ್ರಿ, ’ವೈಕುಂಠೇಕಾದಶಿಯ ದಿನ’ದಂದು 'ಸಿ.ವಿ.ಎಲ್.ಶಾಸ್ತ್ರಿ'ಯವರು ಕೊನೆಯುಸಿರೆಳೆದರು. ಮೃತರು, ಪತ್ನಿ, ಇಬ್ಬರು ಪುತ್ರರು, ಮತ್ತು ಅಪಾರ ಬಂಧು ಬಳಗ, ಮತ್ತು ಮಿತ್ರರನ್ನು ಅಗಲಿದ್ದಾರೆ. ’ಸದಾಶಿವನಗರದ ಅವರ ಮನೆ’ಯಲ್ಲಿ ೬, ಶುಕ್ರವಾರದ ಮಧ್ಯಾನ್ಹದವರೆಗೆ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

[೧] Archived 2011-07-31 ವೇಬ್ಯಾಕ್ ಮೆಷಿನ್ ನಲ್ಲಿ.