ಸಿ.ಎಸ್.ನಾಡಗೌಡ(ಅಪ್ಪಾಜಿ: ಚನ್ನಬಸವರಾಜ ಶಂಕರರಾವ ನಾಡಗೌಡ)ಯವರು ಮಾಜಿ ಶಾಸಕರು, ಮಂತ್ರಿಗಳು ಹಾಗೂ ರಾಜಕೀಯ ಧುರೀಣರು.

ಸಿ.ಎಸ್.ನಾಡಗೌಡ
ಜನನ21ನೇ ನವೆಂಬರ್, 1933
ಬಲದಿನ್ನಿ, ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

ನಾಡಗೌಡರು 21ನೇ ನವೆಂಬರ್, 1960ರಂದು ವಿಜಯಪುರ ಜಿಲ್ಲೆಮುದ್ದೇಬಿಹಾಳ ತಾಲ್ಲೂಕಿನ ಬಲದಿನ್ನಿ ಗ್ರಾಮದಲ್ಲಿ ಜನಿಸಿದರು.

ಶಿಕ್ಷಣ

ಬದಲಾಯಿಸಿ

ಧಾರವಾಡದ ಸೆಂಟ್ ಜೋಸೆಫ್ ಪ್ರೌಢ ಶಾಲೆಯಿಂದ ಎಸ್.ಎಸ್.ಎಲ್.ಸಿ ಉತ್ತಿರ್ಣರಾಗಿ ರಾಯಚೂರಿನ ಎಲ್.ವಿ.ಡಿ ಕಾಲೇಜಿನಿಂದ ಬಿ.ಎ. ಪದವಿ ಪಡೆದಿದ್ದಾರೆ.

ರಾಜಕೀಯ

ಬದಲಾಯಿಸಿ
  • ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಸದಸ್ಯ ಹಾಗೂ ಕೆ.ಪಿ.ಸಿ.ಸಿ. ಸದಸ್ಯರಾಗಿದ್ದರು.

ನಿರ್ವಹಿಸಿದ ಖಾತೆಗಳು

ಬದಲಾಯಿಸಿ
  • 1989ರಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸಿ.ಎಸ್.ನಾಡಗೌಡರು ಹ್ಯಾಟಿಕ್ ಸಾಧಿಸಿದ ಜಗದೇವರಾವ್ ದೇಶಮುಖರನ್ನು ಸೋಲಿಸಿ ಕಾಂಗ್ರೆಸ್‌ ಪಕ್ಷದಿಂದ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ದರು.
  • 1999, 2004, 2008 ಹಾಗೂ 2013 ನಾಲ್ಕು ಬಾರಿ ಸತತ ಕಾಂಗ್ರೆಸ್‌ ಪಕ್ಷದಿಂದ ಗೆಲುವು.
  • 2018ರಲ್ಲಿ ಬಿಜೆಪಿಯ ಎ.ಎಸ್.ಪಾಟೀಲ(ನಡಹಳ್ಳಿ)ಯವರ ವಿರುದ್ಧ ಸೋಲು.
  • 2013 - ಕರ್ನಾಟಕ ಸರ್ಕಾರದ ಸಿದ್ದರಾಮಯ್ಯ ಸಂಪುಟದಲ್ಲಿ ದೆಹಲಿ ವಿಶೇಷ ಪ್ರತಿನಿಧಿಯಾಗಿದ್ದರು.
  • ಕಾರ್ಮಿಕ ಸಚಿವ ಮತ್ತು ಸರ್ಕಾರದ ಮುಖ್ಯ ಸಚೇತಕರಾಗಿದ್ದರು.
  • 2013 - ಕರ್ನಾಟಕ ಸರ್ಕಾರದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ ರಾಜ್ ಸಮಿತಿಯ ಅಧ್ಯಕ್ಷರಾಗಿದ್ದರು.

ವೈಯಕ್ತಿಕ ಜೀವನ

ಬದಲಾಯಿಸಿ

ನಾಡಗೌಡರು ವಿವಾಹಿತರಾಗಿದ್ದು ಪತ್ನಿಯ ಹೆಸರು ಸುವರ್ಣಾ ಮತ್ತು ಏಕೈಕ ಮಗಳು-ನಿಯಾತಿ.

ಉಲ್ಲೇಖಗಳು

ಬದಲಾಯಿಸಿ