ಸಿ.ಎಫ್. ಆಂಡ್ರೂಸ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಆಂಡ್ರೂಸ್, ಸಿ ಎಫ್ 1871-1940). ಗಾಂಧೀಜಿ, ಠಾಕೂರರ ಸಮಕಾಲೀನ ದೇಶಭಕ್ತನು ದೇಶಬಂಧು ಎಂಬ ಜನಪ್ರಶಸ್ತಿಗೆ ಪಾತ್ರರಾದವರು. ಇಂಗ್ಲೆಂಡಿನ ಕಾರ್ಲೈಲ್‍ನಲ್ಲಿ ಜನನ. ಕೇಂಬ್ರಿಜ್‍ನಲ್ಲಿ ವಿಧ್ಯಾಭ್ಯಾಸ. ಭಾರತಕ್ಕೆ ಪ್ರಥಮಬಾರಿ ಕಾಲಿಟ್ಟದ್ದು 1904ನೆಯ ಇಸವಿ ಮಾರ್ಚ್ 20ರಂದು. ಈ ಸಂದರ್ಭವನ್ನು ಅವರು ತಮ್ಮ ಎರಡನೆಯ ಜನ್ಮ ಎಂದು ಕರೆದಿದ್ದಾರೆ.
ಚಾರ್ಲ್ಸ್ ಫ್ರಿರ್ ಆಂಡ್ರೀವಸ್ | |
---|---|
Born | ನಾರ್ಥಂಬರ್ಲ್ಯಾಂಡ್, ಇಂಗ್ಲೆಂಡ್ | ೧೨ ಫೆಬ್ರವರಿ ೧೮೭೧
Died | ಏಪ್ರಿಲ್ 2, 1940 ಕೊಲ್ಕತ್ತಾ, ಬೆಂಗಾಲ್ ಪ್ರಾವಿಡೆನ್ಸಿ, ಬ್ರಿಟಿಷ್ ಭಾರತ |
Alma mater | ಪೆಂಬ್ರೋಕ್ ಕಾಲೇಜು, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ |
Occupation(s) | ಆಂಗ್ಲಿಶಿಯನ್ ಪಾದ್ರಿ, ಮತಪ್ರಚಾರಕ, ಶಿಕ್ಷಣತಜ್ಞ, ಸಮಾಜ ಸುಧಾರಕ |
Known for |
|
ಆಂಡ್ರೂಸ್‍ರವರ ಜೀವನದ ಮೇಲೆ ಪ್ರಭಾವ ಬೀರಿದ ಭಾರತೀಯರಲ್ಲಿ ಗೋಪಾಲಕೃಷ್ಣ ಗೋಖಲೆಯವರು ಮೊದಲನೆಯವರೆಂದು ಹೇಳಬಹುದು. ಆಂಡ್ರೂಸರು ಗೋಖಲೆಯವರ ಆದೇಶ, ಆಶೀರ್ವಾದಗಳನ್ನು ಪಡೆದು ದಕ್ಷಿಣ ಆಫ್ರಿಕ, ಫಿಜಿ ದ್ವೀಪಗಳು, ಬ್ರಿಟಿಷ್ ಗಯಾನ ಮೊದಲಾದ ಪ್ರದೇಶಗಳಿಗೆ ಭೇಟಿ ಇತ್ತು ಆ ಪ್ರದೇಶಗಳಲ್ಲಿನ ರಬ್ಬರ್ ಮತ್ತಿತರ ಪ್ಲಾಂಟೇಷನ್‍ಗಳಲ್ಲಿ ಹೆಚ್ಚು ಕಡಿಮೆ ಗುಲಾಮಗಿರಿಯಲ್ಲಿ ನರಳುತ್ತಿದ್ದ ಭಾರತೀಯ ಕೂಲಿಗಾರರ ನೆರವಿಗೆ ಧಾವಿಸಿದರು. ಅನ್ಯಾಯ, ದಬ್ಬಾಳಿಕೆಗಳ ವಿರುದ್ಧವಾಗಿ ಯಶಸ್ವಿಯಾದ ಹೋರಾಟ ನಡೆಸಿದರು.
ಆಂಡ್ರೂಸರ ಜೀವನದಲ್ಲಿ ಹೆಚ್ಚು ಪರಣಾಮವನ್ನುಂಟುಮಾಡಿದ ಮತ್ತೊಬ್ಬ ಭಾರತೀಯರೆಂದರೆ ರವೀಂದ್ರನಾಥ ಠಾಕೂರ್ ಅವರು. ಠಾಕೂರರ ವಿಷಯದಲ್ಲಿ ಆಂಡ್ರೂಸರ ಗೌರವ ಅಪಾರವಾದ್ದರಿಂದ ಅವರನ್ನು ಗುರುದೇವ ಎಂದು ಕರೆದರು. ಆಂಡ್ರೂಸರ ಜೀವನದಲ್ಲಿ ಗಾಂಧೀಜಿಯವರ ಪಾತ್ರವೂ ಉಲ್ಲೇಖಾರ್ಹ ಅಹಿಂಸೆ ಮತ್ತು ಸತ್ಯಾಗ್ರಹ ಇವೆರಡರ ಇಬ್ಬರೂ ಒಪ್ಪಿದ ಮತ್ತು ಅನುಸರಿಸಿದ ತತ್ತ್ವಗಳು.
1934ರಲ್ಲಿ ತಲೆದೋರಿದ ಬಿಹಾರದ ಭೂಕಂಪ, ಅದರ ಬೆನ್ನು ಹತ್ತಿಬಂದ ಮಹಾಕ್ಷಾಮ ಇವುಗಳ ನಿವಾರಣೆಗೆ ಆಂಡ್ರೂಸರು ಕೈಗೊಂಡ ಕಾರ್ಯಕ್ರಮಗಳು ಅವರ ಮಾನವೀಯತೆಗೂ ನಿಸ್ವಾರ್ಥ ಸೇವಾಬುದ್ಧಿಗೂ ಅತ್ಯುತ್ಕøಷ್ಟ ಸಾಕ್ಷಿಗಳು. ಆದ್ದರಿಂದಲೇ ಗಾಂಧೀಜಿ ಆಂಡ್ರೂಸರನ್ನು ದೀನಬಂಧು ಎಂದು ಕರೆದರು. ಇಷ್ಟೇ ಅಲ್ಲದೆ, ಭಾರತೀಯರಲ್ಲಿ ತಲತಲಾಂತರದಿಂದ ಬೇರೂರಿದ್ದ ಅಸ್ಪøಶ್ಯತೆ, ಬಾಲ್ಯ ವಿವಾಹ ಮೊದಲಾದ ಸಾಮಾಜಿಕ ರೋಗಗಳ ವಿರುದ್ಧ ಒಂದು ಕಡೆ ಬಡತನದ ಶೋಷಣೆ ಮತ್ತು ದಾಸ್ಯದಲ್ಲಿ ನರಳುತ್ತಿದ್ದ ಭಾರತೀಯರ ಉನ್ನತಿಗಾಗಿ ಇನ್ನೊಂದು ಕಡೆ ಆಂಡ್ರೂಸರು ಸದಾ ದುಡಿದು ಭಾರತೀಯರಿಂದ ಭಾರತಮಿತ್ರ ಎಂಬ ಹೆಮ್ಮೆಯ ಬಿರುದನ್ನು ಸಂಪಾದಿಸಿದರು.
ಹೀಗೆ ಇಂಗ್ಲೆಂಡಿನಲ್ಲಿ ಜನಿಸಿದರೂ ಭಾರತದ ಜೀವನದಲ್ಲಿ ಸಂಪೂರ್ಣವಾಗಿ ಬೆರೆತು ಆಂಡ್ರೂಸರು ಇಂಗ್ಲೆಂಡಿನ ಉತ್ತಮ ರೀತಿನೀತಿಗಳನ್ನು ಭಾರತದ ವಾತಾವರಣದಲ್ಲಿ ಸಮಾವೇಶಗೊಳಿಸಿದರು. ಅವರ ಮೂವತ್ತಾರು ವರ್ಷಗಳ ತ್ಯಾಗಮಯ ಜೀವನ ಭಾರತದಲ್ಲಿ ಭಾರತಕ್ಕಾಗಿ ವಿನಿಯೋಗವಾಯಿತಲ್ಲದೆ ಅವರು ಭಾರತ ಭೂಮಿಯಲ್ಲೇ ಅಸು ನೀಗಿದರು.